Advertisements

ಪ್ರತಿನಿತ್ಯ ಕಾರ್ ಡ್ರೈವರ್ ಭಿಕ್ಷುಕರಿಗೆ ಊಟ ಕೊಡುವಾಗ ಅಲ್ಲಿಂದ ಮಹಿಳಾ ಭಿಕ್ಷುಕಿಗೆ ಮಾಡಿದ್ದೇನು ಗೊತ್ತಾ.? ಇಲ್ಲಿದೆ ನೋಡಿ ಈ ಡ್ರೈವರ್ ನ ಇಂಟರೆಸ್ಟಿಂಗ್ ಸ್ಟೋರಿ..

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಕಾಲದಲ್ಲಿ ಪ್ರೀತಿ ಅನ್ನೋದು ಆಟದ ರೀತಿಯಾಗಿದೆ ಹೇಗೆಂದರೆ ‘ ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಇದ್ದಾಗೆ ಈ ಪ್ರೀತಿಯಾಗಿದ ಅಂದ್ರೆ ಪ್ರೀತಿಸಿದ ಹುಡುಗಿ ನಮ್ಮಗೆ ಸಿಗಲಿಲ್ಲ ಅಂತ ಒಬ್ಬರು, ಪ್ರೀತಿಸಿದ ಹುಡುಗಿಯ ಜೊತೆ ಜೀವನ ನಡೆಸೋಕೆ ಆಗುತ್ತಿಲ್ಲ ಅಂತ ಇನ್ನೊಬ್ಬರು, ಯಾಕೆ ಈ ರೀತಿ ಹೇಳುತ್ತಿದ್ದೇವೆ ಅಂದರೆ, ಪ್ರೀತಿ ಯಾರ ಜೊತೆ ಹೇಗೆ ಬೇಕಾದರೂ ಆಗಬಹುದು, ಅದಕ್ಕೆ ಉದಾಹರಣೆ ಎಂದರೆ, ಇಲ್ಲಿ ಒಬ್ಬ ವ್ಯಕ್ತಿ ರಸ್ತೆಯ ಪಕ್ಕದಲ್ಲಿ ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯನ್ನೇ ಮದುವೆಯಾಗಿದ್ದಾನೆ, ಹೌದು ಸ್ನೇಹಿತರೆ ಅಷ್ಟಕ್ಕೂ ಆ ವ್ಯಕ್ತಿ ಯಾರು ಆ ಹುಡುಗಿಯನ್ನು ಮದುವೆಯಾಗಲು ಕಾರಣ ಏನು‌ ಗೊತ್ತಾ.! ನೋಡೋಣ ಬನ್ನಿ.. ಸ್ನೇಹಿತರೆ ಕಳೆದ ವರ್ಷ ಪ್ರತಿಯೊಬ್ಬರ ಜೀವನದಲ್ಲಿ ಕೋರೋನ ಕಾರಣದಿಂದ ಹಲವಾರು ತೊಂದರೆಗಳನ್ನ ಅನುಭವಿಸಬೇಕಾಯಿತು,

[widget id=”custom_html-2″]

Advertisements
Advertisements

ಆ ಸಮಯದಲ್ಲಿ ಒಂದು ತುತ್ತು ಊಟಕ್ಕೂ ಕೆಲವರು ಕಷ್ಟ ಪಟ್ಟಿದ್ದಾರೆ ಅದರಲ್ಲಿ ಈ ಮಹಿಳೆ ಕೂಡ ಒಬ್ಬರು, ಈ‌ ಘಟನೆ ನಡೆದಿರೊಂದು ಕಾನ್ಪುರದಲ್ಲಿ, ಅನಿಲ್ ಎನ್ನುವ ವ್ಯಕ್ತಿ ಕಾರ್ ಡೈವಿಂಗ್ ಕೆಲಸ ಮಾಡುತ್ತಿದ್ದರು, ಚಿನ್ನದ ಕೋರೋನ ದಿಂದ ಇಡೀ ದೇಶವೇ ಲಾಕ್ ಡೌನ್ ಸಮಯದಲ್ಲಿ ಅನಿಲ್ ತನ್ನ ಮಾಲೀಕ ಹೇಳಿದ ಹಾಗೆ ರಸ್ತೆಯ ಪಕ್ಕದಲ್ಲಿ ಊಟ ಇಲ್ಲದೆ ತೊಂದರೆ ಅನುಭವಿಸುತ್ತಿರುವ ಜನಗಳಿಗೆ ಪ್ರತಿನಿತ್ಯ ಊಟ ನೀಡುತ್ತಿದ್ದರು, ಇನ್ನು ಒಂದು ದಿನ ರಸ್ತೆಯಲ್ಲಿ ಊಟಕ್ಕಾಗಿ ಕಾಯುತ್ತಿದ್ದ ಜನರಿಗೆ ಊಟ ನೀಡುವ ಸಮಯದಲ್ಲಿ ನೀಲಂ ಎನ್ನುವ ಭಿಕ್ಷುಕಿ ಅನಿಲ್ ಗೆ ಪರಿಚಯವಾದರು.. ಪ್ರತಿದಿನ ಎಲ್ಲರಿಗೂ ಊಟ ಕೊಡುವ ಹಾಗೆ ಈ ಮಹಿಳೆಗೂ ಅನಿಲ್ ಊಟ ಕೊಡುತ್ತಿದ್ದರು.. ನಂತರ ಇವರಿಬ್ಬರಿಗೂ ನಡುವೆ ಪರಿಚಯವಾಯಿತು,

[widget id=”custom_html-2″]

ಮಾರನೇ ದಿನ ಅನಿಲ್ ನೀಲಂಗೆ ಊಟ ಕೊಡುವಾಗ ನೀನು ಯಾಕೆ ಈ ರೀತಿ ಭಿಕ್ಷೆ ಬೇಡುತ್ತಿದ್ದೀರಾ ಎಂದು ಕೇಳಿದಾಗ ಆಗ ನೀಲಂ ತನ್ನ ಜೀವನದ ನೋ’ವನ್ನು ಅನಿಲ್ ಮುಂದೆ ಈ ರೀತಿ ಹೇಳಿದಳು, ನಮ್ಮ ತಂದೆ ತುಂಬಾ ವರ್ಷಗಳ ಹಿಂದೆ ತೀ’ರಿಕೊಂಡರು‌ ಆ ಸಮಯದಲ್ಲಿ ನನ್ನ ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಯಿತು ಆಗ ನನ್ನ ಅಣ್ಣನ ಮನೆಯಲ್ಲಿ ಸ್ವಲ್ಪ ದಿನ ವಾಸಿಸುತ್ತಿದ್ದೆ ಆದರೆ ಅಣ್ಣ ಅತ್ತಿಗೆಗೆ ಏನು ಅನಿಸಿತೋ ಗೊತ್ತಿಲ್ಲ ನಮ್ಮನ್ನು ಮನೆಯಿಂದ ಹೊರಗೆ ಹಾಕಿದರು, ಆ ಸಮಯದಲ್ಲಿ ನನಗೆ ಏನು ತೋಚದೆ ಈ ರೀತಿ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದೇನೆ ಎಂದು ನೀಲಂ ತನ್ನ ಕಷ್ಟವನ್ನು ಹೇಳಿಕೊಂಡರು.. ಇನ್ನು ನೀಲಂ ಜೀವನದ ಕಣ್ಣೀರಿನ ಕಥೆಯನ್ನು ಕೇಳಿದ ಅನಿಲ್ ಗೆ ಅವರ ಮೇಲೆ ಕರುಣೆ ಹಾಗೆ ಪ್ರೀತಿ ಹೆಚ್ಚಾಯಿತು, ಪ್ರತಿದಿನ ಅನಿಲ್ ಊಟ ಕೊಡುವಾಗ ಇವರಿಬ್ಬರೂ ಭೇಟಿಯಾಗುತ್ತಿದ್ದರು, ಈಗೆ ಇವರಿಬ್ಬರ ನಡುವೆ ಪ್ರೀತಿ ಹಾಗು ಸಲಿಗೆ ಹೆಚ್ಚಾಯಿತು,

ಅನಿಲ್ ನೀಲಂಗೆ ನೀನು ಭಿಕ್ಷೆ ಬೇಡುವುದನ್ನು ನಿಲ್ಲಿಸು ಎಂದು ಹೇಳಿದ್ದನ್ನು, ಅದಕ್ಕೆ ನೀಲಂ ನಾನು ಭಿಕ್ಷೆ ಬೇಡುವುದು ನಿಲ್ಲಿಸಿದರೆ ನನ್ನ ತಾಯಿ, ‌ತಮ್ಮನನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ಹೇಳಿದರು,‌ ಡೈವರ್ ಅನಿಲ್ ನಾನು ನಿನ್ನನ್ನು ಮದುವೆಯಾಗುತ್ತೆನೆ ಇನ್ನು ಮುಂದೆ ನಿನ್ನ ಕುಟುಂಬದ ಪೂರ್ತಿ ಜವಬ್ದಾರಿ ನನ್ನದು ಎಂದು ಹೇಳಿ ಭಿಕ್ಷುಕಿ ನೀಲಂ ಮುಂದೆ ಮದುವೆಯ ಪ್ರಪೋಸಲ್ ಕೇಳಿದನು, ಅನಿಲ್ ಮಾತು ಕೇಳಿ ನೀಲಂಗೆ ತುಂಬಾನೇ ಖುಷಿಯಾಯಿತ್ತು, ನಂತರ ಡೈವಿಂಗ್ ಅನಿಲ್ ಹಾಗು ಭಿಕ್ಷುಕಿ ನೀಲಂ ಗುರು ಹಿರಿಯ ಮುಂದೆ ಸಿಂಪಲ್ ಹಾಗಿ ಮದುವೆ ಮಾಡಿಕೊಂಡರು.. ಪ್ರೀತಿ ವ್ಯಕ್ತಿಯ ಮೇಲೆ ಹೇಗೆ ಬೇಕಾದರೂ ಆಗಬಹುದು ಆದರೆ ಅದನ್ನು ಕಡೆಯ ವರೆಗೂ ಉಳಿಸಿಕೊಳ್ಳಲು ಶಕ್ತಿ ಇರಬೇಕು ಅಷ್ಟೇ.. ಸ್ನೇಹಿತರೆ ಅನಿಲ್ ಮತ್ತು ನೀಲಂ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..