Advertisements

ವೈರಲ್ ಆಯಿತು ನೀರಿಗಾಗಿ ಈ ಹಾವೇರಿ ರೈತ ಮಾಡಿದ ಹೊಸ ಟೆಕ್ನಿಕ್ ! ರೈತನ ತೋಟ ನೋಡಲು ಬಂದ ವಿದೇಶಿಗರು.. ಯಾಕೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಈ ದೇಶದ ಬೆನ್ನೆಲುಬು ರೈತ, ಆದರೆ ಈ‌ ಒಂದು ವಿಷಯ ಯಾರಿಗೂ ತಿಳಿದಿಲ್ಲ, ನಮ್ಮ ರೈತರಿಗೆ ಗಂಗಾದೇವಿಯೇ ಅವರ ಜೀವನಕ್ಕೆ ಮುಖ್ಯ ಬೆನ್ನೆಲುಬು ಎಂದು, ಆದರೆ ದಿನನಿತ್ಯ ನೀರಿಗಾಗಿ ಪರದಾಡುವ ಈ ರೈತ ಲಕ್ಷ ಕಟ್ಟಲೇ ಸಾಲ ಮಾಡಿ ಬೋರ್ ವೆಲ್ ಹಾಕಿರುತ್ತಾರೆ, ಆದರೆ ಬೋರ್ ವೆಲ್ ನಿಂದ ಒಂದೆರಡು ತಿಂಗಳ ನೀರು ಬಂದ ನಂತರ ಬೋರ್ ವೆಲ್ ನಿಂದ ನೀರು ಕೂಡ ಕಮ್ಮಿಯಾಗುತ್ತಿತ್ತು, ನಂತರ ನೀರಿಗಾಗಿ ತುಂಬಾ ತೊಂದರೆ ಅನುಭವಿಸುವ ಸಾವಿರಾರು ರೈತರು ಕೆಲಸವನ್ನು ಹುಡುಕಿಕೊಂಡು ನಗರಗಳಂತ ಪಯಣ ಮಾಡುತ್ತಿದ್ದರು.. ಆದರೆ ಈ ರೈತ ಮಾತ್ರ ಒಂದು ಪ್ರಯೋಗ ಮಾಡಿ, ವರ್ಷ ಪೂರ್ತಿ ನೀರು ಸಿಗಲ್ಲಿ ಎಂದು ತಮ್ಮ ತೋಟದಲ್ಲಿ ಜಲಧಾರೆಯನ್ನು ಸೃಷ್ಟಿಸಿದ್ದಾರೆ.. ಅಷ್ಟಕ್ಕೂ ಈ ರೈತ ನೀರಿಗಾಗಿ ಮಾಡಿದ ಪ್ರಯೋಗ ಏನು ಗೊತ್ತಾ.! ಬನ್ನಿ ನೋಡೋಣ.. ಹಾವೇರಿ ಜಿಲ್ಲೆಯ ಶಿಗಾವಿ ತಾಲ್ಲೂಕಿನ ಕೂನ್ನೂರು ಗ್ರಾಮದಲ್ಲಿ ವಾಸವಿರುವ ಶಂಕರ್ ಎನ್ನುವ ವ್ಯಕ್ತಿ..

[widget id=”custom_html-2″]

Advertisements
Advertisements

ತನ್ನಗಿದ್ದ ಸಣ್ಣಪುಟ್ಟ ಜಮೀನಿನಲ್ಲಿ ವ್ಯವಸಾಯ ಮಾಡೋದಕ್ಕೆ ಒಂದು ಬೋರ್ ವೆಲ್ ಅನ್ನು ತನ್ನ ಜಮೀನಿನಲ್ಲಿ ಕೋರೆಸಿದರು, ನಂತರ ಶಂಕರ್ ಅವರ ಜಮೀನಿನಲ್ಲಿ ಕೋರೆಸಿದ್ದ ಬೋರ್ ವೆಲ್ ನಿಂದ ಒಂದು ಇಂಚು ನೀರು ಬರುತ್ತಿತ್ತು.. ಅದರೆ ದಿನಗಳು ಕಳೆದಂತೆ ಬೋರ್ ವೆಲ್ ನಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಾ ಹೋಯಿತು, ಇರುವ ಸ್ವಲ್ಪ ಜಮೀನಿಗೂ ಕೂಡ ನೀರು ಬಿಡಲು ಸಾಕಾಗುತ್ತಿರಲಿಲ್ಲ.. ಈ ರೀತಿ ಆದರೆ ಜೀವನ ನಡೆಸುವುದು ತುಂಬಾ ಕಷ್ಟ ಎಂದ ತಿಳಿದಿದ್ದ ಶಂಕರ್, ಕೃಷಿ ಅಧಿಕಾರಿಗಳ ಬಿಳಿ ತನಗೆ ಬೇಕಾದ ಮಾಹಿತಿಯನ್ನು ತಿಳಿದುಕೊಂಡು, ಒಂದು ಪ್ರಯೋಗ ಮಾಡಲು ಮುಂದಾದರು, ಆದರ ಪ್ರಕಾರ ತನ್ನ ಬೋರ್ ವೆಲ್ ಪಕ್ಕದಲ್ಲಿ ಎರಡು ಮೀಟರ್ ಹಾಳಾ, ಎರಡು ಮೀಟರ್ ಉದ್ದ, ಇರುವ ಎರಡು ಇಂಗು ಗುಂಡಿಗಳನ್ನು ಶಂಕರ್ ನಿರ್ಮಿಸಿದರು..

[widget id=”custom_html-2″]

ನಂತರ ಬೋರ್ ವೆಲ್ ಪಕ್ಕದಲ್ಲಿ ಮೂರು ಅಡಿಯವರೆಗೂ ಮರಳು, ಇದ್ದಿಲು, ದಪ್ಪದಾದಾ ಜಲ್ಲಿ ಕಲ್ಲುಗಳನ್ನು, ತುಂಬಿಸಿದರು, ಇನ್ನು ಮಳೆಗಾಲ ಸಮಯದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು, ಹಾಗು ಹೋಲದ ಸುತ್ತಮುತ್ತಲೂ ಶೇಖರಣೆ ಯಾಗುತ್ತಿದ್ದ ನೀರನ್ನು ಶಂಕರ್ ತಾನು ಮಾಡಿದ ಇಂಗು ಗುಂಡಿಗೆ ಬರುವ ಹಾಗೆ ಆಳ್ಳಗಳನ್ನು ಮಾಡಿ ಆ ನೀರನ್ನು ಬೋರ್ ವೆಲ್ ನಲ್ಲಿ ಇಂಗಿಸುತ್ತಿದ್ದರು, ಇದರ ಪ್ರತಿಫಲವಾಗಿ ಎರಡು ಇಂಚು ನೀರು ಬರದ ಕೊಳವೆ ಬಾವಿಯಿಂದ ನಾಲ್ಕು ಇಂಚು ನೀರು ಬರುವಂತೆ ಆಯಿತು, ಅಷ್ಟೇ ಅಲ್ಲದೆ ವರ್ಷದ ಪೂರ್ತಿ ಈ ಬೋರ್ ವೆಲ್ ನಿಂದ ನೀರು ಬರುತ್ತಿತ್ತು.. ಶಂಕರ್ ತಯಾರಿಸಿದ ಇಂಗು ಗುಂಡಿಯಲ್ಲಿ ವರ್ಷಕ್ಕೆ ಸುಮಾರು 90 ಲಕ್ಷ ಲೀಟರ್ ಗಿಂತ ಹೆಚ್ಚು ಮಳೆಯ ನೀರನ್ನು ಇಂಗಿಸುತ್ತಿದ್ದು, ಇದರಿಂದ ನೀರಿನ ತೊಂದರೆ ಇಲ್ಲದೆ ವರ್ಷಕ್ಕೆ ಮೂರು ಉತ್ತಮವಾದ ಬೆಳೆಯನ್ನು ತೆಗೆಯುತ್ತಿದ್ದಾರೆ ಶಂಕರ್ ಅವರು..

ಪ್ರತಿಯೊಬ್ಬರು ಕೂಡ ಇಸ್ರೇಲ್ ಪದ್ದತಿಯಲ್ಲಿ ಬೆಳೆಯನ್ನು ಬೆಳೆಯುವ ಸಮಯದಲ್ಲಿ ಶಂಕರ್ ಅವರು ಮಾಡಿದ ಈ ಹೊಸ ಪ್ರಯೋಗದ ಬಗ್ಗೆ ತಿಳಿದುಕೊಳ್ಳಲು‌ ಬೇರೆ ಬೇರೆ ದೇಶದ ರೈತ ಪ್ರತಿನಿಧಿಗಳು ಶಂಕರ್ ಅವರ ಜಮೀನಿಗೆ ಬೇಟೆ ನೀಡಿ ನೀರಿಗಾಗಿ ಶಂಕರ್ ಮಾಡಿದ ಕೆಲಸದ ಬಗ್ಗೆ ಮಾಹಿತಿಯನ್ನು ಪಡೆಯುತ್ತಿದ್ದರು.. ಈ ಒಂದು ಪ್ರಯೋಗ ಶಂಕರ್ ಅವರ ಜೀವನವನ್ನೇ ಬದಲಾಯಿಸಿದ್ದು, ತನಗೆ ಇದ್ದ ಸ್ವಲ್ಪ ಮಟ್ಟದ ಜಮೀನಿನಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆಯುತ್ತಾ, ವಿಶ್ವ ಮಟ್ಟದ ಜನರನ್ನು ತನ್ನತ್ತ ಸೆಳೆಯುತ್ತಿದ್ದಾರೆ, ಈಗ ಉತ್ತರ ಪ್ರದೇಶದ ಹಲವಾರು ಸಂಸ್ಥೆಗಳು ರೈತರಿಗೆ ನೀರಿನ ವ್ಯವಸ್ಥೆಗಾಗಿ ಈ ರೀತಿಯ ಕೆಲಸವನ್ನು ಮಾಡುತ್ತಿದ್ದಾರೆ.. ಸ್ನೇಹಿತರೆ ಈ ಸಣ್ಣ ರೈತ ನೀರಿಗಾಗಿ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..