ನಮಸ್ತೆ ಸ್ನೇಹಿತರೆ, ಮನುಷ್ಯನಿಗೆ ಕಷ್ಟ ಹೇಗೆ ಬರುತ್ತದೆ ಯಾವಾಗ ಬರುತ್ತದೆ ಅಂತ ಹೇಳಲು ಸಾಧ್ಯವಿಲ್ಲ ಕಷ್ಟಗಳು ಬಂದಾಗ ಪರಿಸ್ಥಿತಿಗೆ ಅನುಗುಣವಾಗಿ ನಾವು ಜೀವನ ನಡೆಸಬೇಕಾಗುತ್ತದೆ ಹೌದು ಕೊಡಗಿನ ಬೆಡಗಿ ಕೃಷಿ ತಾಪಂಡಾ ಹುಟ್ಟಿದ್ದು ಸೆಪ್ಟೆಂಬರ್ 23/1989 ರಂದು 29 ವರ್ಷ ವಯಸ್ಸಿನ ಈ ಬೆಡಗಿಗೆ ಮಿಸ್ ಕರ್ನಾಟಕ ಎಂಬ ಬಿರುದು ಸಿಕ್ಕಿತು ಎನ್ನುವ ಮಾತು ನೂರಕ್ಕೂ ನೂರು ಸತ್ಯ.. 2014 ರಲ್ಲಿ ತನ್ನ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತವರೂರಾಗಿರುವ ಕೊಡಗನ್ನು ಬಿಟ್ಟು ಬೆಂಗಳೂರಿಗೆ ಬಂದರು ಬೆಂಗಳೂರಿಗೆ ಬಂದ ಹೊಸತರಲ್ಲಿ ಕೃಷಿ ತಾಪಂಡಾ ಸ್ನೇಹಿತರೆ ಒಬ್ಬರು ಮಿಸ್ ಕರ್ನಾಟಕದ ಆಡಿಶನ್ ಗೆ ಕೊಡುವಂತೆ ಕೃಷಿಗೆ ಸಲಹೆ ನೀಡಿದರು ತನ್ನ ಸ್ನೇಹಿತೆಯ ಮಾತಿನಂತೆ ಕೃಷಿ ಆಡಿಶನ್ ಗೆ ಹೋಗುವುದು ಅಲ್ಲದೆ

2014ರ ಮಿಸ್ ಕರ್ನಾಟಕ ಕಿರೀಟವನ್ನ ತಮ್ಮದಾಗಿಸಿಕೊಂಡರು 2014 ರಲ್ಲಿ ಕೊಡಗಿನಿಂದ ಬೆಂಗಳೂರಿಗೆ ಬಂದಾಗ ಖಾಲಿ ಕೈಯಿನಲ್ಲಿ ಬಂದಿದ್ದ ಕೃಷಿ ಕೈಯಲ್ಲಿ ಒಂದು ರೂಪಾಯಿ ಹಣ ಕೂಡ ಇರಲಿಲ್ಲ ಆ ಸಮಯದಲ್ಲಿ ಕೃಷಿ ಪಿಜಿಯಲ್ಲಿ ವಾಸಿಸುತ್ತಿದ್ದರಂತೆ.. ಇನ್ನೂ ಪಿಜಿಯಲ್ಲಿ ಬಾಡಿಗೆ ಕಟ್ಟಲು ತನ್ನ ಬಳಿ ಹಣ ಕೂಡ ಇಲ್ಲದ ಪರಿಸ್ಥಿತಿ ಎದುರಾಗಿತ್ತು.. ಆಗ ತಮ್ಮ ಕಷ್ಟದ ದನಗಳನ್ನು ನೆನೆಯುತ್ತಾ ಆ ಸಮಯದಲ್ಲಿ ಕುಟುಂಬದಿಂದ ದೂರ ಉಳಿದಿದ್ದರು ಇನ್ನೂ ಕೃಷಿ ತಾಪಂಡಾ ಪಿಜಿಯಲ್ಲಿ ಬಾಡಿಗೆ ಕಟ್ಟಲು ಹಣ ಇಲ್ಲದೆ ಆಗ ಬೇರೆ ದಾರಿ ಇಲ್ಲದೆ ಪಿಜಿ ಮಾಲಿಕರ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದರು ಮನೆಯಲ್ಲಿ ಪಾತ್ರೆ ತೊಳೆಯುವ ಕೆಲಸದಿಂದ ಹಿಡಿದು ಮನೆಯ ಕೆಲಸದವಳಾಗಿ ಮಾಲೀಕರ ಮನೆಯಲ್ಲಿ ಎಲ್ಲಾ ಕೆಲಸವನ್ನ ಮಾಡುತ್ತಿದ್ದರಿಂದ

ಆಗ ಮಾಲೀಕರು ಕೃಷಿ ಬಳಿ ಬಾಡಿಗೆ ತೆಗೆದುಕೊಳ್ಳುತ್ತಿರಲಿಲ್ಲ. ಕೃಷಿ ತುಂಬಾ ಸ್ವಾಭಿಮಾನಿ ಇರುವ ಹುಡುಗಿಯಾಗಿದ್ದರು ತನ್ನ ತಂದೆ ತಾಯಿಯರ ಸಹಾಯವನ್ನ ಪಡೆಯದೇ ತನ್ನ ಸ್ವ ಸಾಮರ್ಥ್ಯದಿಂದ ಬದುಕಿ ಸಾಧನೆ ಮಾಡಿ ತೋರಿಸಿದ್ದಾರೆ.. ಅನಂತರ ಬಿಗ್ ಬಾಸ್ ಸ್ಪರ್ಧಿಯಾಗಿ ಕೂಡ ಆಯ್ಕೆಯಾಗಿದ್ದರು ತಾನು ಮನೆ ಕೆಲಸ ಮಾಡಿ ಇಷ್ಟೊಂದು ಕಷ್ಟ ಪಟ್ಟಿರುವುದು ತನ್ನ ಕುಟುಂಬದವರಿಗೆ ಇನ್ನೂ ಯಾವುದೇ ಮಾಹಿತಿ ತಿಳಿದಿಲ್ಲ. ಇದಕ್ಕೆ ನಾನು ಕ್ಷೇಮ ಕೇಳುತ್ತೇನೆ ಎಂದು ಮಾಧ್ಯಮದ ಮುಂದೆ ಕೃಷಿ ತಾಪಂಡಾ ಅವರು ತಮ್ಮ ನೋವು ಮತ್ತು ತಾನು ಪಟ್ಟ ಕಷ್ಟವನ್ನು ಹೇಳಿಕೊಂಡಿದ್ದಾರೆ.. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..