Advertisements

ಕಾಲೇಜ್ ವಾಚ್ ಮ್ಯಾನ್ ಆಗಿದ್ದ ಈ ವ್ಯಕ್ತಿ ಅದೇ ಕಾಲೇಜ್‌ಗೆ ಪ್ರಿನ್ಸಿಪಾಲ್ ಆಗಿದ್ದು ಹೇಗೆ ಗೊತ್ತಾ!

Inspire

ನಮಸ್ತೆ ಸ್ನೇಹಿತರೆ, ಜೀವನದಲ್ಲಿ ಏನಾದರೂ ಸಾಧನೆ ಮಾಡುವ ಹಠ ಛಲ ಇದ್ರೆ ಸಾಕು ಬೆಟ್ಟವನ್ನು ನೀರಿನ ಹರಿಸಬಹುದು ಅನ್ನೋ ಮಾತಿದೆ.. ಈ ಮಾತನ್ನ ನಾವು ಹೇಳುತ್ತಿರುವ ಒಬ್ಬ ವ್ಯಕ್ತಿಯು ಜೀವನದಲ್ಲಿ ಅಕ್ಷರಸಃ ಸತ್ಯವಾಗಿದೆ.. ಪಟ್ಟು ಹಿಡಿದು ಸಾಧಿಸಿದ ವ್ಯಕ್ತಿ ಸಾವಿರಾರು ವಿದ್ಯಾರ್ಥಿಗಳ ದಾರಿ ದೀಪ ಆಗಿದ್ದಾರೆ.. ಹೌದು ಈ ವ್ಯಕ್ತಿಯ ಹೆಸರು ಈಶ್ವರ್ ಸಿಂಗ್ ಪಾಟೀಲ್.. ಛತ್ತೀಸ್ಗಡದ ಬೈತಲ್‌ ಪೂರದ ಕುಟಿಲ ಗ್ರಾಮದವರು.. ಕಾಲೇಜು ಒಂದರಲ್ಲಿ ಮಾಲಿಯಾಗಿ ಕೆಲಸ ಮಾಡುತ್ತಿದ್ದ ಇವರು ತಮ್ಮ ಪರಿಶ್ರಮದಿಂದ ಹಾಗು ಕಷ್ಟ ಪಟ್ಟು ಹಿಡಿದ ಕೆಲಸವನ್ನ ಸಾಧನೆ ಮಾಡುವ ಹಠದಿಂದ ಇಂದು ಯಾವ ಕಾಲೇಜಿನಲ್ಲಿ ಮಾಲಿಯಾಗಿ ಕೆಲಸವನ್ನ ಮಾಡ್ತೀದ್ರೊ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ..

Advertisements
Advertisements

ಹೌದು ಈಶ್ವರ್ ಸಿಂಗ್ ಅವರಿಗೆ ಬಾಲ್ಯದಿಂದಲೂ ಉನ್ನತವಾದ ಶಿಕ್ಷಣ ಪಡೆಯಬೇಕು ಎನ್ನುವ ಕನಸನ್ನ ಕಂಡಿದ್ದರು.. ಆದ್ರೆ ಮನೆಯ ಕಡು ಬಡತನ ಅವರನ್ನ ಕೇವಲ 19‌ನೇ ವಯಸ್ಸಿಗೆ ತೋಟದಲ್ಲಿ ಮಾಲಿ ಕೆಲಸ ಮಾಡುವಂತೆ ಮಾಡಿತ್ತು.. ಅದ್ರೂ ಇಷ್ಟು ಈಶ್ವರ್ ಸಿಂಗ್ ಅವರು ತಮ್ಮ ಹಠವನ್ನು ಬಿಡಲಿಲ್ಲ.. ಇದಕ್ಕಾಗಿ ಛತ್ತೀಸ್ಗಡದ ಕಲ್ಯಾಣ್ ಕಾಲೇಜಿನಲ್ಲಿ ಮಾಲಿಯಾಗಿ ವಾಚ್ ಮ್ಯಾನ್ ಆಗಿ, ಸೂಪರ್ವೈಸರ್ ಆಗಿ, ಕೆಲಸವನ್ನ ಮಾಡುತ್ತಲೇ ಡಿಗ್ರಿಯನ್ನ ಪಡೆದರು ನಂತರ B.ED ಪರೀಕ್ಷೆಗೆ ಹಣವಿಲ್ಲದ ಕಾರಣ ಕಾವಲು ಕಾರನಾಗಿ ಕೆಲಸವನ್ನ ಮಾಡಿದ್ರು.. ಇದನ್ನೆಲ್ಲಾ ಗಮನಿಸುತ್ತಿದ್ದ ಕಲ್ಯಾಣ್ ಕಾಲೇಜಿನವರು ಅವರನ್ನ ಕ್ರಾಪ್ ಟೀಚರ್ ಆಗಿ ನೇಮಕ ಮಾಡಿದ್ರೂ.. ಕೆಲಸದಲ್ಲಿ ಅವರ ನೈಪುಣ್ಯತೆಯನ್ನು ಗುರುತಿಸಿ ಅಸಿಸ್ಟೆಂಟ್ ಪ್ರೊಫೆಸರ್ ಬಡ್ತಿ ಕೊಟ್ರು..

ಇದರ ಜೊತೆ ಜೊತೆಗೆ B.ED, M.ED, ಪದವಿಯನ್ನ ಪಡೆದರು.. ಇದರಿಂದ ಬಹಳ ಆಶ್ಚರ್ಯ ಹಾಗು ಸಂತೋಷದಿಂದಲ್ಲೇ ಕಲ್ಯಾಣ್ ಕಾಲೇಜಿನ ಆಡಳಿತ ಮಂಡಳಿ ಆ ಏರಿಯದಲ್ಲಿ ನಿರ್ಮಾಣ ಆಗಿರುವಂತಹ ಹೊಸ ಕಾಲೇಜಿಗೆ ಈಶ್ವರ್ ಸಿಂಗ್ ಅವರನ್ನ ಪ್ರಾಂಶುಪಾಲರಾಗಿ ನೇಮಕ ಮಾಡಲಾಗಿದೆ.. ಛಲ ಬಿಡದೆ ಸಾಧನೆ ಮಾಡಬೇಕು ಅಂತ ಮುನ್ನುಗ್ಗಿದ್ರೆ ಯಾವ ಕಷ್ಟ ಹಣದ ಸಮಸ್ಯೆ ಕೂಡ ಸಮಸ್ಯೆಯೇ ಆಗೋದಿಲ್ಲ ಅನ್ನೋದಕ್ಕೆ ಈಶ್ವರ್ ಸಿಂಗ್ ಅವರೆ ಪ್ರತ್ಯೇಕ ಉದಾಹರಣೆ.. ಈಶ್ವರ್ ಸಿಂಗ್ ಅವರ ಸಾಧನೆಯ ಪರಿಶ್ರಮಕ್ಕೆ ಲೈಕ್ ಕೊಟ್ಟು ಶೇರ್ ಮಾಡಿ… ಹಾಗೇಯೇ ಇವರ ಸಾಧನೆ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…