ನಮಸ್ತೆ ಸ್ನೇಹಿತರೆ, ಅನಂತ್ ನಾಗ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ಹೆಸರಾಂತ ನಟರಲ್ಲಿ ಒಬ್ಬರು.. ಇವರು ಜನಿಸಿದ್ದು ಸೆಪ್ಟೆಂಬರ್ 04/1948 ರಲ್ಲಿ. ಕನ್ನಡ ಕೊಂಕಣಿ ಮರಾಠಿ ರಂಗಭೂಮಿಯಲ್ಲಿ ಎಂಟು ವರ್ಷಗಳ ಕಾಲ ತಮ್ಮನ್ನು ತಾವು ತೊಡಗಿಸಿಕೊಂಡರು.. ಅನಂತ್ ನಾಗ್ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು 1973 ಕನ್ನಡ ಭಾಷೆಯಲ್ಲಿ ಮುಡಿಬಂದ ಸಂಕಲ್ಪ ಎನ್ನುವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗವನ್ನ ಪಾದಾರ್ಪಣೆ ಮಾಡುತ್ತಾರೆ.. ನಂತರ ಹಂಸಗೀತೆ, ಬಯಲು ದಾರಿ, ಮಿಂಚಿನ ಹೊಟ್ಟಾ, ಬೆಂಕಿಯ ಬಲೆ, ಚಂದನದ ಗೊಂಬೆ, ಇಬ್ಬನಿ ಕರಗಿತು, ನಾನಿನ್ನ ಬಿಡಲಾರೆ, ಇನ್ನೂ ಅನೇಕ ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟನೆ ಮಾಡಿದ್ದು

ಅದರಲ್ಲಿ ಕೆಲವೊಂದು ಸಿನಿಮಾಗಳು ಅನಂತ್ ನಾಗ್ ಅವರಿಗೆ ತುಂಬಾನೇ ಹೆಸರು ತಂದು ಕೊಟ್ಟವು.. ಕಾಲಾಂತರದಲ್ಲಿ ಇವರು ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯ ಮಾಡಿ ಪ್ರೇಕ್ಷಕರನ್ನ ಮನರಂಜನೆ ಮಾಡಿದ್ದರು ಗಣೇಶನ ಮದುವೆ, ಗಣೇಶ ಸುಬ್ರಹ್ಮಣ್ಯ, ಗೌರಿ ಗಣೇಶ, ಯಾರಿಗೂ ಹೇಳಬೇಡಿ, ಇನ್ನೂ ಮುಂತಾದ ಹಾಸ್ಯ ಚಿತ್ರಗಳ ಮೂಲಕ ಪ್ರೇಕ್ಷಕರನ್ನ ಅನಂತ್ ನಾಗ್ ಅವರು ರಂಜಿಸಿದ್ದರು.. ಅಷ್ಟೇ ಅಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಇವರು ಬೆಂಗಳೂರಿನ ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರದಿಂದ ಚುನಾಯಿತರಾಗಿ ಶಾಸಕರಾಗಿ ಕೆಲಸ ಮಾಡಿದ್ರು.. ನಂತರ JH ಪಟೇಲ್

ಅವರ ಮಂತ್ರಿ ಮಂಡಲದಲ್ಲಿ ಮಂತ್ರಿಯಾದರು.. ಇನ್ನೂ ಅನಂತ್ ನಾಗ್ ಅವರು ಕನ್ನಡದ ಹೆಸರಾಂತ ನಟಿಯಾಗಿರುವ ಗಾಯತ್ರಿ ಅವರನ್ನ ಮದುವೆಯಾಗಿದ್ದಾರೆ. ಇವರಿಗೆ ಅದಿತಿ ಎಂಬ ಒಬ್ಬ ಹೆಣ್ಣು ಮಗಳಿದ್ದಾಳೆ ಇವರ ಮಗಳು ಈಗ ಪೋಸ್ಟ್ ಗ್ರಾಜುಯೇಟ್ ಮುಗಿಸಿದ್ದು ಖಾಸಗಿ ಕಂಪನಿ ಒಂದರಲ್ಲಿ ಕೆಲಸವನ್ನ ಮಾಡುತ್ತಿದ್ದಾರೆ. ಇನ್ನೂ ಅನಂತ್ ನಾಗ್ ಅವರ ಮಗಳು ವಿವೇಕ್ ಅವರನ್ನ ಪ್ರೀತಿಸಿ ಮದುವೆಯಾಗಿದ್ದಾರೆ ವಿವೇಕ್ ಅವರು ಕೂಡ ಒಂದು ಖಾಸಗಿ ಕಂಪನಿಯಲ್ಲಿ ಕೆಲಸವನ್ನ ಮಾಡುತ್ತಿದ್ದಾರೆ. ಈಗ ಇಬ್ಬರು ಕೂಡ ಬೆಂಗಳೂರಿನಲ್ಲಿ ಸೆಟ್ಟಲ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ..