Advertisements

ಲವ್ಲಿ ಸ್ಟಾರ್ ಪ್ರೇಮ್ ರವರ ಮಗಳು ಈಗ ಹೇಗಿದ್ದಾರೆ ಗೊತ್ತಾ.!

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ನೆನಪಿಲಿ ಸಿನಿಮಾದ ಮೂಲಕ ಲವ್ಲಿ ಸ್ಟಾರ್ ಎಂದು ಹೆಸರು ಪಡೆದಿರುವ ನಟ ಪ್ರೇಮ್ ರವರು ಯಾರಿಗೆ ತಾನೆ ಗೊತ್ತಿಲ್ಲ, ಇವರು ೧೯೭೬-೦೪-೧೮ ರಲ್ಲಿ ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿದರು, ಪ್ರೇಮ್ ರವರ ತಂದೆ ಮಗ್ಗದ ಕೆಲಸ ಮಾಡುತ್ತಿದ್ದರು, ನಟ ಪ್ರೇಮ್ ರವರು ೨೦೦೪ರಲ್ಲಿ ‘ಪ್ರಾಣ’ ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟರು, ನಂತರ ‘ನೆನಪಿರಲಿ’ ಸಿನಿಮಾದ ಮೂಲಕ ಪ್ರೇಮ್ ರವರು ಸ್ಟಾರ್‌ ಪಟ್ಟಕ್ಕೇರಿದರು..

Advertisements
Advertisements

ಪ್ರೇಮ್ ರವರು ಅಭಿನಯಿಸುತ್ತಿದ್ದ ಸಿನಿಮಾಗಳು ಪ್ರೀತಿಯ ಸಿನಿಮಾಗಳಾಗಿದ್ದವು ಇದರಿಂದ ಪ್ರೇಮ್ ರವರಿಗೆ ‘ಲವ್ಲಿ ಸ್ಟಾರ್ ಪ್ರೇಮ್’ ಎಂಬ ಬಿರುದು ಸಹಾ ನೀಡಲಾಯಿತು, ಈ ರೀತಿ ೨೫ ಹೆಚ್ಚು ಸಿನಿಮಾಗಳಲ್ಲಿ ನಟ ಪ್ರೇಮ್ ರವರು ಅಭಿನಯಿಸಿದ್ದಾರೆ.. ‌ನಟ ಪ್ರೇಮ್ ರವರು ಜ್ಯೋತಿರವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಜ್ಯೋತಿ ಮತ್ತು ಪ್ರೇಮ್ ಅವರದ್ದು ಲವ್ ಮ್ಯಾರೇಜ್ ಇವರು ತಮ್ಮ ಕುಟುಂಬದವರನ್ನು ಒಪ್ಪಿಸಿ ಮದುವೆಯಾಗಿದ್ದರು, ಪ್ರೇಮ್ ರವರಿಗೆ ಇಬ್ಬರೂ ಮಕ್ಕಳಿದ್ದಾರೆ ಇವರ ಮಗನ ಹೆಸರು ಏಕಾಂತ್, ಇವರು ಮಗ ಒಂಭತ್ತನೇ ತರಗತಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ..

ಇನ್ನು ನಟ ಪ್ರೇಮ್ ರವರ ಮುದ್ದು ಮಗಳ ಹೆಸರು ಅಮೃತ, ಇವರಿಗೆ ೧೯ ವರ್ಷ ಪ್ರೇಮ್ ರವರ ಮಗಳು ವರ್ಷದ ಹಿಂದೆ ಪಿಯುಸಿ ಮುಗಿಸಿದ್ದರು ಅದರಲ್ಲಿ ೯೧% ನಷ್ಟು ಅಂಕಗಳನ್ನು ಪಡೆದಿದ್ದರು, ಹಾಗೆಯೇ ಮಗಳ ವಿದ್ಯಾಭ್ಯಾಸ ನೋಡಿ ನಟ ಪ್ರೇಮ್ ತುಂಬಾನೇ ಸಂತೋಷ ಪಟ್ಟಿದ್ದರು, ಇನ್ನು ನಟ ಪ್ರೇಮ್ ರವರು ಸಿನಿಮಾ ರಂಗಕ್ಕೆ ಬರುವ ಮುನ್ನ ಜಾಹಿರಾತುಗಳಲ್ಲಿ ಕೆಲಸ ಮಾಡುತ್ತಿದ್ದರು, ಇವರಿಗೆ ಒಂದು ಎಪಿಸೋಡ್ ಗೆ ೩೦೦ ರೂಪಾಯಿ ಸಂಭಾವನೆ ಸಿಗುತ್ತಿತ್ತು, ನಟ ಪ್ರೇಮ್ ರವರು ಗಾಂಧಿ ನಗರದಲ್ಲಿ ಯಾವುದೇ ಸಿನಿಮಾ ಆಡಿಶನ್ ನಡೆದರು ಮೊದಲೇ ಅಲ್ಲಿಗ ಹಾಜರಾಗುತ್ತಿದ್ದರು.. ಲವ್ಲಿ ಸ್ಟಾರ್ ಪ್ರೇಮ್ ರವರ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ..