Advertisements

ನಟ ಶಂಕರ್ ನಾಗ್ ಸಿನಿಮಾಗಳಲ್ಲಿ ಬಾಲ ನಟನಾಗಿ ಮಿಂಚಿದ ಮಾಸ್ಟರ್ ಮಂಜುನಾಥ್ ಅವರು ಈಗ ಮಾಡ್ತಿರೋ ಕೆಲಸ ಏನು‌ ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ನಟ‌ ಶಂಕರ್ ಅವರು ಜೊತೆ ಬಾಲನಟನಾಗಿ ನಟಿಸುತ್ತಿದ್ದ ಮಾಸ್ಟರ್ ಮಂಜುನಾಥ್ ಅವರ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ.. ಇವರು ಹೆಚ್ಚಾಗಿ ಶಂಕರ್ ನಾಗ್ ಅಭಿನಯಿಸಿದ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ ಅಲ್ಲದೆ ಇವರು ಸಿನಿಮಾಗಳಲ್ಲಿ ಬಾಲ ನಟನಾಗಿಯೇ ನಟಿಸಿದ್ದಾರೆ.. ಕನ್ನಡ ಚಿತ್ರರಂಗದ ಬಾಲ ನಟರಲ್ಲಿ ಮಾಸ್ಟರ್ ಮಂಜುನಾಥ್ ಅವರು ಅಪ್ರತಿಮ ಪ್ರತಿಭಾವಂತ ನಟ ಎಂದು ಹೇಳಬಹುದು.. ಇನ್ನೂ ಇವರ ನಟನೆ ಸಿನಿಮಾದ ಹಲವಾರು ಬಾಲ ನಟರಿಗೆ ಸ್ಪೂರ್ತಿಯಾಗಿತ್ತು.. ಅಮೋಘ ನಟನೆ ಅವರ ಮುಗ್ದ ಮಾತುಗಳು ಎಲ್ಲರಿಗೂ ತುಂಬಾನೇ ಇಷ್ಟವಾಗಿತ್ತು.. ಇನ್ನೂ ಆಗಿನ ಕಾಲದ ಹೀರೋಗಳು ಪಡೆಯುವ ಸಂಭಾವನೆಯನ್ನು ಮಾಸ್ಟರ್ ಮಂಜುನಾಥ್ ಅವರು ಪಡೆಯುತ್ತಿದ್ದರು..

[widget id=”custom_html-2″]

Advertisements
Advertisements

ಆದರೆ ನಿಮಗೆ ಒಂದು ಪ್ರಶ್ನೆ ಬಂದಿರಬಹುದು, ಮಾಸ್ಟರ್ ಮಂಜುನಾಥ್ ಅವರು ಯಾಕೆ ಸಿನಿಮಾದಲ್ಲಿ ನಟಿಸುತ್ತಿಲ್ಲ ಅಂತ.. ಇನ್ನೂ  ಮಾಸ್ಟರ್ ಅವರು ಈಗ ಮಾಡುತ್ತಿರುವ ಕೆಲಸ ಏನು ಗೊತ್ತಾ? ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ತನ್ನ‌ ಮೂರು ವರ್ಷ ವಯಸ್ಸಿನಲ್ಲೇ ಚಿತ್ರರಂಗದಲ್ಲಿ ನಟಿಸಿದ ಮಾಸ್ಟರ್ ಮಂಜು ಅವರು ಸುಮಾರು 68‌ ಸಿನಿಮಾಗಳಲ್ಲಿ ಬಾಲನಟನಗಿ ನಟಿಸಿದ್ದಾರೆ, ನಂತರ ಬೆಳೆದು ದೊಡ್ಡವರಾದ‌ ಮೇಲೆ‌ ಕೆಲವು ಚಿತ್ರಗಳಲ್ಲಿ ನಟಿಸಿದ್ದರು ಆದರೆ ಆ‌ ಸಿನಿಮಾಗಳು ಮಾಸ್ಟರ್ ಮಂಜುನಾಥ್ ಅವರು ಕೈಹಿಡಿಯಲಿಲ್ಲ ಆಗಾಗಿ ತನ್ನ ಜೀವನದಲ್ಲಿ ಪಯಣವನ್ನು ಬದಲಾವಣೆ ಮಾಡಿಕೊಂಡ ಮಾಸ್ಟರ್ ಮಂಜುನಾಥ್ ಅವರು ಮತ್ತೆ ವಿದ್ಯಾಭ್ಯಾಸ ಮಾಡಲು ಶುರುಮಾಡಿದರು..

[widget id=”custom_html-2″]

ಓದು ಮುಗಿಸಿದ ನಂತರ ಐಟಿಐ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಂಡರು, ಆದರೆ 9:00 ರಿಂದ 5:00 ಗಂಟೆಯ ವರೆಗೆ ಮಾಡುವ ಕೆಲಸ ಮಾಸ್ಟರ್ ಮಂಜು ಅವರಿಗೆ ಇಷ್ಟ ಆಗಲಿಲ್ಲ. ಆಗ ಒಂದು ಆಲೋಚನೆ ಮಾಡಿ‌ ಸ್ವತಃ ತನ್ನದೇ ಆದಾ ಪಬ್ಲಿಕ್ ರಿಲೇಷನ್ ಶಿಪ್ ಕನ್ಸಲ್ಟೆನ್ಸಿ ಕಂಪನಿಯನ್ನು ಪ್ರಾರಂಭಿಸಿದರು ಮಾಸ್ಟರ್ ಮಂಜುನಾಥ್ ಅವರು.. ಇನ್ನೂ‌ ಬೆಂಗಳೂರು ಮೈಸೂರು ಕಾರ್ಡರ್ ಪ್ರಾಜೆಕ್ಟ್ ಜೊತೆ ಸೇರಿ ಕೆಲಸ ಮಾಡುತ್ತಿದ್ದಾರೆ, ಜನರು ಮತ್ತು ಕಂಪನಿಯ ಮಧ್ಯೆ ಕೆಲಸ ಮಾಡುತ್ತಿರುವ ಮಂಜುನಾಥ್‌ ಜನರ ಜೊತೆಯಲ್ಲಿ ಬೆರೆತು ಕೆಲಸ ಮಾಡುವುದರಲ್ಲಿ ಸಂತೋಷವನ್ನು ಕಂಡುಕೊಂಡಿದ್ದಾರೆ..

ಇನ್ನೂ ಲಾಂಗ್ ಜಂಪ್ ಅಥ್ಲೆಟ್ ಆಗಿರುವ ಸ್ವರ್ಣ ರೇಖಾ ಅವರನ್ನು ಮದುವೆಯಾಗಿರುವ ಮಂಜುನಾಥ್ ಗೆ ಒಬ್ಬ ಮುದ್ದಾದ ಗಂಡು ಮಗ ಕೂಡ ಇದ್ದಾನೆ.. ಚಿತ್ರರಂಗ ಕೈ ಹಿಡಿಯದಿದ್ದರೆ ಜೀವನದಲ್ಲಿ ಎಲ್ಲಾ ಮುಗಿಯಿತು ಎಂದು ಅಂದುಕೊಳ್ಳುವವರೆ ಹೆಚ್ಚು, ಆದರೆ ಮಾಸ್ಟರ್ ಮಂಜುನಾಥ್ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ‌ ಈ ಕೆಲಸ ಮಾಡುತ್ತಾ ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಬೆಳೆಸಿಕೊಂಡಿದ್ದಾರೆ..  ಸ್ನೇಹಿತರೆ ಬಾಲ‌ ನಟನಾಗಿ ಮಿಂಚಿದ ಮಾಸ್ಟರ್ ಮಂಜುನಾಥ್ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..