Advertisements

ಕನ್ನಡದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರ ಮಗ ಹೇಗಿದ್ದಾರೆ ಗೊತ್ತಾ! ಇವರ ಮಗ ಕೂಡ ತುಂಬಾನೇ ಫೇಮಸ್..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಮುಖ್ಯಮಂತ್ರಿ ಚಂದ್ರು ಅವರನ್ನು ಬಹುಮುಖ ಪ್ರತಿಭೆ ಅಂತಾನೇ ಹೇಳಬಹುದು.. ಯಾಕೆಂದರೆ ಸಿನಿಮಾದಲ್ಲಿ ಇವರು ಖಳನಾಯಕನ ಪಾತ್ರದಿಂದ ಹಿಡಿದು ಹಾಸ್ಯ ಪೋಷಕ ಪಾತ್ರಗಳಲ್ಲಿ ಕೂಡ ತಮ್ಮದೇ ಆದ ಚಾಪು ಮೂಡಿಸಿರುವ ಚಂದ್ರು ಅವರು ‌ರಂಗಭೂಮಿಯ‌ ಹಿನ್ನೆಲೆಯಿಂದ ಕನ್ನಡ ಚಿತ್ರರಂಗಕ್ಕೆ ಬಂದರು ಇವರು ಕಲಾ ಗಂಗೋತ್ರಿ ತಂಡದ ನಾಟಕದಲ್ಲಿ ಮುಖ್ಯಮಂತ್ರಿ ಪಾತ್ರ ಮಾಡಿದ ಮೇಲೆ ಇವರ ಹೆಸರಿನಲ್ಲಿ ಮುಖ್ಯಮಂತ್ರಿ ಎನ್ನುವ ಹೆಸರು ಸೇರಿಕೊಂಡಿತು.. ಸುಮಾರು 40 ವರ್ಷಗಳ ನಂತರವೂ ಇನ್ನೂ ಆ ನಾಟಕದ ಜನಪ್ರಿಯತೆ ಕಡಿಮೆ ಆಗಲಿಲ್ಲ. ಈಗಲೂ ಚಂದ್ರು ಅವರು ಈ ನಾಟಕದಲ್ಲಿ ಮುಖ್ಯಮಂತ್ರಿ ಪಾತ್ರವನ್ನು ಮಾಡುತ್ತಾರೆ..

Advertisements
Advertisements

1983 ರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ನಟಿಸಿದ ಚಕ್ರವ್ಯೂಹ ಸಿನಿಮಾದಲ್ಲಿ ರಾಜಕಾರಣಿಯ ಪಾತ್ರದ ಮೂಲಕ ಚಿತ್ರ ರಂಗವನ್ನು ಪ್ರವೇಶಿಸಿದ ಇವರು ಸುಮಾರು 500 ರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.. ಕನ್ನಡಪರ ಹೋರಾಟಗಳಿಗೆ ಹೆಸರಾಗಿರುವ ಚಂದ್ರು ಅವರು ಕನ್ನಡದ ಅಭಿವೃದ್ಧಿ ಪ್ರಾಧಿಕಾರ ಅದ್ಯಕ್ಷ ಸ್ಥಾನವನ್ನು ವಹಿಸಿದ್ದರು.. ಇವರು 1953 ರಲ್ಲಿ ನೆಲಮಂಗಲದ ಹೊನ್ನಾಸಂದ್ರದ ರೈತರ ಕುಟುಂಬದಲ್ಲಿ ಜನಿಸಿದ ಚಂದ್ರು ಅವರು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶಿಕ್ಷಣವನ್ನು ಮುಗಿಸಿದರು.. ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ಗುಮಾಸ್ತ ಕೆಲಸ ಮಾಡುವ ಸಮಯದಲ್ಲಿ ನಾಟಕದ ಕಡೆ ಹೆಚ್ಚು ಆಸಕ್ತಿ ಹೊಂದಿದ್ದರು ಮುಖ್ಯಮಂತ್ರಿಚಂದ್ರು ಅವರು..

ಇನ್ನೂ‌ ಮುಖ್ಯಮಂತ್ರಿ ಚಂದ್ರು ಅವರು ಪದ್ಮ ಎನ್ನುವವರನ್ನು ಮದುವೆ ಆಗಿದ್ದಾರೆ.. ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ ಮೊದಲನೆಯ ಮಗ ಭರತ್ ಚಂದ್ರು, ಎರಡನೆಯ ಮಗ ಶರತ್ ಚಂದ್ರು ಅಂತ.. ಇನ್ನೂ ಮೊದಲ ಮಗ ಭಾರತ್ ಚಂದ್ರು ಅವರು ತಮ್ಮದೇ ಆದ ಸಾಫ್ಟವೇರ್ ಕಂಪನಿಯನ್ನು ನಡೆಸುತ್ತಿದ್ದಾರೆ ಇನ್ನೂ ಇವರ ಎರಡನೇ ಮಗ ಶರತ್ ಚಂದ್ರು ಅವರು ಕಿಚ್ಚ ಸುದೀಪ್ ಅವರ ರನ್ನ ಹಾಗು ದಿ ವಿಲನ್ ಸಿನಿಮಾದಲ್ಲಿ ನಟಿಸಿದ್ದಾರೆ.. ಮುಖ್ಯಮಂತ್ರಿ ಚಂದ್ರು ಅವರು ಮಗ ಶರತ್ ಚಂದ್ರು ಅವರು ಪೂರ್ಣ ಪ್ರಮಾಣದ ನಾಯಕರಾಗಿ ಸಿನಿಮಾದ ರಂಗಕ್ಕೆ ಬರುತ್ತಿದ್ದಾರೆ ಎನ್ನುವ ವಿಷಯ ಸದ್ಯ ತಿಳಿದು ಬಂದಿದೆ.. ಸ್ನೇಹಿತರೆ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..