Advertisements

ನಟ ಶ್ರೀ ಮುರಳಿ ಕುಟುಂಬ ಹಾಗು ಅವರ ಮಕ್ಕಳು ಹೇಗಿದ್ದಾರೆ ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಶ್ರೀ ಮುರಳಿ ಕೂಡ ಒಬ್ಬರು.. ಇವರು ಕನ್ನಡದ ಪ್ರಖ್ಯಾತ ನಿರ್ಮಾಪಕರಾದ ಎಸ್.ಎ.ಚಿನ್ನೇಗೌಡರವರ ಮಗ ಹಾಗೂ ವಿಜಯ ರಾಘವೇಂದ್ರ ರವರ ಕಿರಿಯ ಸಹೋದರ ಹೌದು.. ಕನ್ನಡ ಚಿತ್ರರಂಗದಲ್ಲಿ ರೋರಿಂಗ್ ಸ್ಟಾರ್ ಎಂದು  ಹೆಸರು ಪಡೆದಿರುವ ನಟ ಶ್ರೀ ಮುರಳಿ ಅವರು ಸಿನಿಮಾಗಳಲ್ಲಿ ವಿಭಿನ್ನ ರೀತಿಯ ಪಾತ್ರಗಳ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಮಿಂಚಿದ್ದಾರೆ.. ಇವರು ಚಂದ್ರ ಚಕೋರಿ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಇವರು, ನಂತರದಲ್ಲಿ ಹಲವಾರು ಪಾತ್ರಗಳಲ್ಲಿ ವಿಭಿನ್ನವಾಗಿ ನಟಿಸುವ ಮೂಲಕ ಸಿನಿಮಾದಲ್ಲಿ ಹೆಚ್ಚು ಹೆಸರು ಪಡೆದಿದ್ದಾರೆ..

[widget id=”custom_html-2″]

Advertisements
Advertisements

ಕಳೆದ ವರ್ಷದ ಶ್ರೀ ಮುರಳಿ ಅವರು ನಟಿಸಿದ ಉಗ್ರಂ ಸಿನಿಮಾ ಕನ್ನಡ ಚಿತ್ರ ರಂಗದಲ್ಲಿ ಸಾಕಷ್ಟು ಹೆಸರು ಪಡೆದಿತ್ತು.. ಇನ್ನೂ ಉಗ್ರಂ ಸಿನಿಮಾವನ್ನು ಕೆಜಿಎಫ್ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಅವರು ಉಗ್ರಂ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.. ಶ್ರೀ ಮುರಳಿ ಅವರು ಉಗ್ರಂ ಸಿನಿಮಾದ ಮೂಲಕ ತಮ್ಮ ಟ್ಯಾಲೆಂಟ್ ಏನೆಂಬುದನ್ನು ಕನ್ನಡ ಚಿತ್ರರಂಗಕ್ಕೆ ತೋರಿಸಿದ್ದಾರೆ.. ಒಂದು ಉತ್ತಮವಾದ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸುವ ಮೂಲಕ ತಮ್ಮ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.. ಇನ್ನೂ ಶ್ರೀ ಮುರಳಿ ಅವರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು.. ಅವರ ತಂದೆ ತಾಯಿ ಹಾಗು ಡಾ ರಾಜ್‍ಕುಮಾರ್ ಅವರ‌ ಕುಟುಂಬ,

[widget id=”custom_html-2″]

ಇನ್ನೂ ಇವರ ಅಣ್ಣ ವಿಜಯ್ ರಾಘವೇಂದ್ರ ಅವರು ಕೂಡ ತಮ್ಮನಿಗೆ ಉತ್ತಮವಾದ ಸಲಹೆಗಳನ್ನು ನೀಡಿ ಪ್ರೋತ್ಸಾಹಿಸುತ್ತಾರೆ.. ಇನ್ನೂ ಶ್ರೀ ಮುರಳಿ ಪತ್ನಿ ವಿದ್ಯಾ ಅವರು ಕೂಡ ಸುಖ ದುಃಖದಲ್ಲಿ‌ ತಮ್ಮ ಪತಿಯ ಜೊತೆ ನಿಂತು ಅವರಿಗೆ ಸ್ಪೂರ್ತಿ ತುಂಬುತ್ತಾರೆ.. ಇವರು ಇತ್ತೀಚೆಗಷ್ಟೇ ನಾಯಕ ನಟರಾಗಿ ನಟಿಸಿದ ಮದಗಜ ಸಿನಿಮಾ ಸದ್ಯದಲ್ಲೇ ತೆರೆಯಮೇಲೆ ಬರಲು ಸಿದ್ಧವಾಗಿದೆ.. ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲ್ಲಿದೆ, ಸ್ನೇಹಿತರೆ ನಟ ಶ್ರೀ ಮುರಳಿ ಅವರ ಬಗ್ಗೆ ನಿನ್ನ ಅನಿಸಿಕೆ ತಿಳಿಸಿ..