Advertisements

ಮದುವೆಗು ಮೊದಲೇ ಒಂದು ಹೆಣ್ಣು ಮಗುವಿಗೆ ತಂದೆಯಾದ ಕನ್ನಡದ ಈ‌ ಖ್ಯಾತ ನಟ! ಈ ನಟ ಯಾರು ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ಮದುವೆಯಾಗದೆ ಹೆಣ್ಣು ಮಗುವಿಗೆ ತಂದೆಯಾದ ಕನ್ನಡದ ಈ ಖ್ಯಾತ ನಟ ಹೌದು ಈ ನಟ ಇಡೀ ವಿಶ್ವವೇ ಭಾರತೀಯ ಚಿತ್ರರಂಗದ ಕಡೆ ಒಮ್ಮೆ ತಿರುಗಿ ನೋಡುವಂತೆ ಮಾಡಿದ ಮೇರು ನಟ ಅಂತಾನೇ ಹೇಳಬಹುದು.. ತನ್ನ ಅಭಿನಯ ಮತ್ತು ನಿರ್ದೇಶನದಿಂದ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನ ಪಡೆದುಕೊಂಡಿದ್ದಾರೆ ಅಷ್ಟಕ್ಕೂ ಆ ನಟ ಯಾರು ಮದುವೆಗು ಮೊದಲೇ ಗರ್ಭಿಣಿಯಾದ ಮಹಿಳೆ ಯಾರು ಎಂಬುದನ್ನು ನೋಡೋಣ ಬನ್ನಿ.. ಹೌದು ಈ ನಟ ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿ‌ ಸೇರಿದಂತೆ ಸುಮಾರು 220 ಸಿನಿಮಾಗಳಲ್ಲಿ ನಾಯಕ ನಟನಾಗಿ ಮಿಂಚಿದ ಪ್ರಸಿದ್ಧ ನಟ ಕಮಲ್ ಹಾಸನ್.. ನಟ ಕಮಲ್ ಹಾಸನ್ ಅವರು ಮಾಡದ ಪಾತ್ರಗಳು ಉಳಿದಿಲ್ಲ ಎಂಬಂತೆ ಹಲವು ವಿಭಿನ್ನ ಪಾತ್ರಗಳಿಗೆ ಕಮಲ್ ಹಾಸನ್ ಅವರು ನಟನೆ ಮಾಡಿದ್ದಾರೆ

Advertisements
Advertisements

ಅಲ್ಲದೆ ನಿರ್ದೇಶಕರಾಗಿ ಕೂಡ ಯಶಸ್ಸು ಗಳಿಸಿದ್ದಾರೆ.. ಇನ್ನೂ ಸಿನಿಮಾ ರಂಗದಲ್ಲಿ ಹಣ ಪ್ರಶಸ್ತಿ ಬಿರುದು ಪ್ರಶಂಸೆಗಳನ್ನು ಪಡೆದ ಈ ನಟ ತಮ್ಮ ವೈವಾಹಿಕ ಜೀವನದಲ್ಲಿ ಹಲವು ಏಳುಬಿಳುಗಳನ್ನು ಕಂಡಿದ್ದಾರೆ.. ಇನ್ನೂ ಕಮಲ್ ಹಾಸನ್ ಅವರು 1978 ರಲ್ಲಿ ಭರತನಾಟ್ಯ ನೃತ್ಯಗಾರ್ತಿ ವಾಣಿಗಣಪತಿ ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಇನ್ನೂ ಹಲವು ವರ್ಷಗಳ ನಂತರ ಇಬ್ಬರು ನಡುವೆ ಮನಸ್ತಾಪ ಉಂಟಾಗಿ ಇಬ್ಬರು ವಿಚ್ಛೇದನ ನೀಡಿ ನಂತರ ನಟಿ ಸಾರಿಕಾ ಅವರೊಂದಿಗೆ ಸಹಜೀವನ ನಡೆಸಿದರು.‌ ಈ ಸಮಯದಲ್ಲಿ ಈಗಿನ ಹೆಸರಾಂತ ನಟಿ ಶೃತಿ ಹಾಸನ್ ಜನಿಸಿದರು ಶೃತಿ ಹಾಸನ್ ಜನಿಸಿದ ಕೆಲವು ತಿಂಗಳುಗಳ ಕಮಲ್ ಹಾಸನ್ ಹಾಗು ಸಾರಿಕಾ ಮದುವೆ ಆದರೂ ಮದುವೆಯ ನಂತರ ಮತ್ತೊಬ್ಬ ಮಗಳು ಅಕ್ಷರ ಹಾಸನ್ ಜನಿಸಿದರು ಸುಮಾರು 16 ವರ್ಷಗಳ ಕಾಲ ಜೊತೆಯಾಗಿದ್ದ ಸಾರಿಕಾ ಹಾಗು ಕಮಲ್ ಹಾಸನ್ ಅವರು 2004 ಮತ್ತೆ ವಿಚ್ಛೇದನ ಪಡೆದರು..

ಇನ್ನೂ ನಂತರದ ದಿನಗಳಲ್ಲಿ ನಟಿ ಗೌತಮಿ ಅವರೊಂದಿಗೆ ಸುಮಾರು 11 ವರ್ಷಗಳ ಕಾಲ ಸಹಜೀವನ ನಡೆಸಿದರು. ನಂತರದ ದಿನಗಳಲ್ಲಿ ಅಂದರೆ 2016 ರಲ್ಲಿ ಮತ್ತೆ ಗೌತಮಿ ಅವರೊಂದಿಗೆ ಬೇರಾದರೂ, ಇನ್ನೂ ಕಮಲ್ ಹಾಸನ್ ಅವರು ಸಿನಿಮಾ ರಂಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ ಫೇರ್ ಪ್ರಶಸ್ತಿ ಗಳನ್ನೊಳಗೊಂಡ ಹಲವಾರು ಭಾರತೀಯ ಚಲನಚಿತ್ರ ಪ್ರಶಸ್ತಿಗಳನ್ನು ಗಳಿಸುವುದರ ಮೂಲಕ ಅವರ ಅಭಿಮಾನಿಗಳಿಗೆ ಚಿರಪರಿಚಿತರು. ಉತ್ತಮ ವಿದೇಶಿ ಚಿತ್ರಕ್ಕಾಗಿ ನೀಡುವ ಅಕಾಡೆಮಿ ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾಗುವ ಚಿತ್ರಗಳಲ್ಲಿ ಹೆಚ್ಚಿನವು ಕಮಲ್ ಹಾಸನ್ ನಟಿಸಿದ ಚಿತ್ರಗಳಾಗಿರುವುದು ವಿಶೇಷ. ನಟನೆ ಹಾಗೂ ನಿರ್ದೇಶನದ ಜೊತೆಗೆ, ಅವರು ಚಿತ್ರಕಥೆಗಾರ, ಸಾಹಿತ್ಯ ರಚನೆಕಾರ, ಹಿನ್ನೆಲೆ ಗಾಯಕ ಮತ್ತು ನೃತ್ಯ ನಿರ್ದೇಶಕ ರೂ ಆಗಿದ್ದಾರೆ. ಕಮಲ್ ಹಾಸನ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..