Advertisements

ಕನ್ನಡದ ಖ್ಯಾತ ನಟಿ ಪವಿತ್ರ ಲೋಕೇಶ್ ಅವರ ಗಂಡ ಯಾರು! ಇವರ ಇಬ್ಬರು ಮಕ್ಕಳು ಹೇಗಿದ್ದಾರೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಪವಿತ್ರ ಲೋಕೇಶ್ ಇವರು ಭಾರತೀಯ ಕನ್ನಡ ಚಲನಚಿತ್ರರಂಗ ಮತ್ತು ಕಿರುತೆರೆಯಲ್ಲಿ ಹೆಸರಾಂತ ನಟಿ ಕೂಡ ಹೌದು.. ಪವಿತ್ರ ಲೋಕೇಶ್ ಅವರು ಕನ್ನಡದ ಖ್ಯಾತ ಪೋಷಕ ನಟಿಯಾಗಿ ಮಿಂಚಿದರು ಅನಂತರ ಕನ್ನಡ‌ ಹಾಗು ತೆಲುಗು ಚಿತ್ರ ಸಿನಿಮಾಗಳಲ್ಲಿ ಬಹು ಬೇಡಿಕೆಯ ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ.. ಇವರು ಕನ್ನಡದ ಖ್ಯಾತ ಹಾಸ್ಯ ನಟ ಹಾಗು ರಂಗಭೂಮಿ ನಟರಾಗಿದ್ದ ಮೈಸೂರು ಲೋಕೇಶ್ ಅವರ‌ ಮಗಳು ಕೂಡ ಹೌದು. ಇವರ ತಮ್ಮ ಅಧಿಲೋಕೇಶ್ ಅವರು ಕೂಡ ಕನ್ನಡ ಚಿತ್ರ ರಂಗದಲ್ಲಿ ಒಬ್ಬ ಖ್ಯಾತ ನಟರಾಗಿ ಗುರುತಿಸಿಕೊಂಡಿದ್ದಾರೆ ಇನ್ನೂ‌ ಪವಿತ್ರ ಲೋಕೇಶ್ ಅವರು ಮಿಸ್ಟರ್ ಅಭಿಷೇಕ್ ಎನ್ನುವ ಒಂದು ಸಣ್ಣ ಪಾತ್ರವನ್ನು ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರು..

Advertisements
Advertisements

ಇನ್ನೂ ಪವಿತ್ರ ಲೋಕೇಶ್ ಇವರಿಗೆ ತುಂಬಾನೇ ಹೆಸರು ತಂದು ಕೊಟ್ಟ ಸಿನಿಮಾ ಯಾವುದೆಂದರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿನಯದ ಜನುಮದ ಜೋಡಿ ಸಿನಿಮಾ ‌ಈ‌ ಸಿನಿಮಾದಲ್ಲಿ ಪವಿತ್ರ ಲೋಕೇಶ್ ಅವರು ಮಣಿ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದರು ಇದರ ಜೊತೆಗೆ ರಮೇಶ್ ಅರವಿಂದ್ ಅವರ ಉಲ್ಟಾ ಪಲ್ಟಾ ಸಿನಿಮಾ ಕೂಡ ಇವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತು. ಪವಿತ್ರ ಲೋಕೇಶ್ ಅವರು ಕನ್ನಡದಲ್ಲಿ ಸುಮಾರು 150 ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ.. ಇವರು 2006ರಲ್ಲಿ ಗಿರೀಶ್ ಕಾಸರವಳ್ಳಿ ಅವರು ಕನ್ನಡದಲ್ಲಿ ನಿರ್ದೇಶಕ ಮಾಡಿರುವ ನಾಯಿ ನೆರಳು ಸಿನಿಮಾದಲ್ಲಿ ಪವಿತ್ರ ಅವರ ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ..

ಈಗ ಪವಿತ್ರ ಲೋಕೇಶ್ ಅವರು ಕಿರುತೆರೆಯಲ್ಲಿ ಸಕ್ರಿಯರಾಗಿದ್ದು ಇವರು ಜೀವನ್ಮುಖಿ, ಗುಪ್ತಗಾಮಿನಿ, ಸೇರಿದಂತೆ ಹಲವಾರು ಧಾರಾವಾಹಿಯಲ್ಲಿ ಕೂಡ ಅಭಿನಯಿಸಿದ್ದಾರೆ.‌‌ ಇವರು 2007 ನಟ ಮತ್ತು ರಂಗಭೂಮಿ ನಿರ್ದೇಶಕ ಸುಚೇಂದ್ರ ಪ್ರಸಾದ್ ಅವರನ್ನು ಮದುವೆಯಾಗಿದ್ದಾರೆ. ಈ‌ ಸುಂದರ ದಂಪತಿಗಳಿಗೆ ಇಬ್ಬರು ಮುದ್ದಾದ ಇಬ್ಬರು ಮಕ್ಕಳು ಕೂಡ ಇದ್ದಾರೆ ಸುಚೇಂದ್ರ ಪ್ರಸಾದ್ ಅವರು ಕಾನೂರು ಹೆಗ್ಗಡತಿ, ಬೇರು, ಭೀಮಾ ತೀರದಲ್ಲಿ, ಅವ್ವ, ಡ್ರಾಮಾ, ಅಟ್ಟಹಾಸ, ದೃಶ್ಯ ಸೇರಿದಂತೆ‌ ಸುಮಾರು 47ಕ್ಕೂ ಹೆಚ್ಚು ಕನ್ನಡ ಸಿನಿಮಾದಲ್ಲಿ ಇವರು ನಟಿಸಿದ್ದಾರೆ.. ಸ್ನೇಹಿತರೆ ನಟಿ ಪವಿತ್ರ ಲೋಕೇಶ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..