ನಮಸ್ತೆ ಸ್ನೇಹಿತರೆ, ಪ್ಯಾಶನ್ ಶೋ ಒಂದರಲ್ಲಿ ಭಾಗವಹಿಸಿ ವನಿತಾ ವಾಸು ಅವರಿಗೆ ಮಾಡ್ಲಿಂಗ್ ಮಾಡುವ ಅವಕಾಶ ಸಿಕ್ಕಿತು.. ಇನ್ನೂ ಮಾಡ್ಲಿಂಗ್ ಮಾಡುವ ಸಮಯದಲ್ಲಿ ನಟಿ ರಕ್ಷಿತ ಅವರ ತಾಯಿ ಮಮತಾ ಅವರನ್ನು ಭೇಟಿಯಾದರು.. ಇಬ್ಬರು ಜೊತೆಯಾಗಿ ಮಾಡ್ಲಿಂಗ್ ಕೆಲಸ ಮಾಡುತ್ತಿದ್ದರು ಇದೆ ಸಮಯದಲ್ಲಿ ನಟಿ ವನಿತಾ ವಾಸು ಅವರು ನಿರ್ದೇಶಕ ಹಾಗು ನಟ ಸುರೇಶ್ ಹೆಬ್ಳೀಕರ್ ಅವರ ಕಣ್ಣಿಗೆ ಬಿದ್ದರು ವನಿತಾ ವಾಸು ಅವರ ಸೌಂದರ್ಯ ಹಾಗು ಪ್ರತಿಭೆಯನ್ನು ಗಮನಿಸಿದ ಸುರೇಶ್ ಹೆಬ್ಳೀಕರ್ ಅವರು ತಮ್ಮ ಆಗುಂತಕ ಸಿನಿಮಾದಲ್ಲಿ ನಟನೆ ಮಾಡಲು ಅವಕಾಶ ನೀಡಿದರು.. ಮಲಯಾಳಿ ಭಾಷಿಕ ಕುಟುಂಬಕ್ಕೆ ಸೇರಿದ ವನಿತಾ ಅವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ..

1987 ರಲ್ಲಿ ತೆರೆಕಂಡ ಸುರೇಶ್ ಹೆಬ್ಳೀಕರ್ ಅವರ ನಿರ್ದೇಶನದ ಆಕುಂತಕ ಸಿನಿಮಾದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ನಂತರ ಕಾಡಿನ ಬೆಂಕಿ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದರು.. ನಂತರ ದನಗಳಲ್ಲಿ ಚಿರಂಜೀವಿ ಸುಧಾಕರ್, ತಾಯಿ ಕರುಳು, ಶಕ್ತಿ, ಕೃಷ್ಣ ರುಕ್ಮಿಣಿ, ಸಿನಿಮಾಗಳಲ್ಲಿ ಸಹ ನಟಿಯಾಗಿ ಪೋಷಕ ನಟಿಯಾಗಿ ಕಾಣಿಸಿಕೊಂಡರು ಮತ್ತೆ 1989ರಲ್ಲಿ ತೆರೆಕಂಡ ಕರಾಟೆ ಕಿಂಗ್ ಶಂಕರ್ ನಾಗ್, ಡೈನಾಮಿಕ್ಸ್ ಹೀರೋ ದೇವರಾಜ್ ಅವರ ತರ್ಕ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು ಈ ಚಿತ್ರ ಇವರಿಗೆ ಬಾರಿ ಯಶಸ್ಸು ತಂದು ಕೊಟ್ಟಿತು ನಂತರ ಇವರು ನಾಯಕಿಯಾಗಿ ನಟಿಸಿದ ಕ್ರೈಮ್ ಥ್ರಿಲ್ಲರ್ ಮತ್ತು ಉತ್ಕೃಷ್ಟ ಚಿತ್ರ ಇವರಿಗೆ ಬಾರಿ ಮಟ್ಟದಲ್ಲಿ ಜನ ಮೆಚ್ಚುಗೆ ತಂದು ಕೊಟ್ಟಿತು..

ಕನ್ನಡದ ಸೈಕಾಲಜಿಕಲ್ ಕ್ರೈಮ್ ಥ್ರಿಲ್ಲರ್ ಹಾಗು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಿಗೆ ನಟಿ ವನಿತಾ ವಾಸು ಅವರೆ ಅಂದಿನ ಕಾಲದಲ್ಲಿ ನಟಿಯಾಗಿ ಆಯ್ಕೆ ಆಗಿದ್ದರು.. ಆಗುಂತಕ, ತರ್ಕ, ಉತ್ಕೃಷ್ಟ, ಚಪಲ ಚೆನ್ನಿಗರಾಯ, ಪುಂಡ ಪ್ರಚಂಡ, ಮಣ್ಣಿನ ದೋಣಿ, ಬೆಳದಿಂಗಳ ಬಾಲೆ, ನಾಗಮಂಡಲ, ಇನ್ನೂ ಮುಂತಾದ ಸಿನಿಮಾಗಳ ನಟಿ ವನಿತಾ ವಾಸು ಅವರ ಯಶಸ್ಸಿ ಚಿತ್ರಗಳಾಗಿವೆ.. ಇನ್ನೂ ವನಿತಾ ವಾಸು ಅವರು ಸಾಹಸ ಸಿಂಹ ವಿಷ್ಣುವರ್ಧನ್, ಕರಾಟೆ ಕಿಂಗ್ ಶಂಕರ್ ನಾಗ್, ಅನಂತ್ ನಾಗ್, ರೆಬೆಲ್ ಸ್ಟಾರ್ ಅಂಬರೀಶ್, ಸುರೇಶ್ ಹೆಬ್ಳೀಕರ್, ಡೈನಾಮಿಕ್ಸ್ ಹೀರೋ ದೇವರಾಜ್, ಕಾಶೀನಾಥ್, ಸೇರಿದಂತೆ ಇನ್ನೂ ಮುಂದಾದವರ ಜೊತೆ ಸಿನಿಮಾದಲ್ಲಿ ತೆರೆಹಂಚಿಕೊಂಡಿದ್ದಾರೆ..

ಇನ್ನೂ ನಟಿ ವನಿತಾ ವಾಸು ಅವರು ಸುಮಾರು 75 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ಸಹ ನಟಿಯಾಗಿ ಪೋಷಕ ನಟಿಯಾಗಿ ನಟಿಸಿದ್ದಾರೆ.. ವನಿತಾ ವಾಸು ಅವರು ಇತ್ತಿಚೀನ ವರ್ಷಗಳಲ್ಲಿ ಕಿರುತೆರೆಯ ಹಲವಾರು ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದಾರೆ. ಇನ್ನೂ ವನಿತಾ ಅವರಿಗೆ ಒಬ್ಬ ಮುದ್ದಾದ ಮಗ ಕೂಡ ಇದ್ದಾನೆ. ಇವರ ಮಗ ಯಾವ ಹೀರೋಗಳಿಗು ಕಮ್ಮಿ ಇಲ್ಲ.. ಮುಂದಿನ ದಿನಗಳಲ್ಲಿ ಇವರ ಮಗ ಸಿನಿಮಾ ರಂಗಕ್ಕೆ ಬಂದರು ಆಶ್ಚರ್ಯವೇ ಇಲ್ಲ ಸ್ನೇಹಿತರೆ ನಟಿ ವನಿತಾ ವಾಸು ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..