Advertisements

ಕನ್ನಡ ಸಿನಿಮಾದ ಹಾಸ್ಯ ನಟ ಸಾಧು ಕೋಕಿಲ ಅವರ ಮಗ ಯಾರು ಗೊತ್ತಾ? ಇವರ ಮಗ ಕೂಡ ತುಂಬಾನೇ ಫೇಮಸ್..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಬಹಳ ಬೇಡಿಕೆಯುಳ್ಳ ಹಾಗೂ ಖ್ಯಾತ ಹಾಸ್ಯ ನಟನಾಗಿ ಮಿಂಚುತ್ತಿರುವ ಸಾಧು ಕೋಕಿಲಾ ಅಲಿಯಾಸ್ ಸಾಧು ಮಹಾರಾಜ್ ಇವರು ನತೇಶ್ ಹಾಗು ಮಂಗಲ ದಂಪತಿಗಳ ಮಗನಾಗಿ 24 ಮಾರ್ಚ್ 1966 ರಲ್ಲಿ ಜನಿಸಿದರು.. ಇವರ ತಾಯಿ ಮತ್ತು ಅಕ್ಕ ಹಿನ್ನಲೆ ಗಾಯಕರಗಿದ್ದರು.. ಸಾಧು ಅವರಿಗೆ ಸಂಗೀತದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು, ಅಲ್ಲದೆ ಭಾರತದಲ್ಲಿ ಅತಿ ವೇಗವಾಗಿ ಕೀ ಬೋರ್ಡ್ ವಾದಿಸುವವರಲ್ಲಿ ಒಬ್ಬರಾಗಿದ್ದರು.. ಇವರು ಕನ್ನಡ ಚಿತ್ರರಂಗದಲ್ಲಿ ತಮ್ಮ ಅದ್ಭುತವಾದ ನಟನೆ ಸಿನಿಮಾದಲ್ಲಿ ಇವರ ಕಾಮಿಡಿ ಪಂಚಿಗ್ ಡೈಲಾಗ್, ವಿಶಿಷ್ಠ ಅಭಿನಯ ಮತ್ತು ಸಂಗೀತದ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದವರು.. ಕನ್ನಡ ಚಿತ್ರರಂಗದ ಹಾಸ್ಯ ದಿಗ್ವಿಜ ನಟ ಸಾಧು ಕೋಕಿಲ ಅವರು..

[widget id=”custom_html-2″]

Advertisements
Advertisements

ಸಿನಿಮಾ ರಂಗಕ್ಕೆ ಉತ್ತಮವಾದ ಸಂಗೀತವನ್ನು ನೀಡುವ ಮೂಲಕ ದಶಕಗಳಿಂದ ಸಿನಿ ಪ್ರೇಕ್ಷಕರಿಗೆ ನಗುವಿನ ಮನರಂಜನೆ ನೀಡುತ್ತಿರುವ ನಟ ಸಾಧು ಕೋಕಿಲ ಅವರು ಅತ್ಯಂತ ಜನಪ್ರಿಯತೆಯನ್ನು ಪಡೆದಿದ್ದಾರೆ.. ಅವರ ವಿಶೇಷ ಮ್ಯಾನರಿಸಂ ಹಾಗು ಬೆಳ್ಳಿ ತೆರೆಯಮೇಲೆ ಕಾಣಿಸಿಕೊಂಡರೆ ಸಾಕು ಚಿತ್ರ ಮಂದಿರಗಳಲ್ಲಿ ಸಿನಿಮಾ ನೋಡುತ್ತಿರುವ ಪ್ರೇಕ್ಷಕರಿಗೆ ಸಾಧು ಅವರ ಹಾಸ್ಯವನ್ನು ನೋಡಿ ಎದ್ದು ನಿಂತು ವಿಜಲ್ ಹೊಡೆಯುತ್ತಾರೆ.. ಸಾಧು ಕೋಕಿಲರವರು ಕರ್ನಾಟಕ ಚಿತ್ರ ರಂಗದಲ್ಲಿ ನಟ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ ಕೂಡ ಹೌದು.. ಇನ್ನೂ ಸಾಧು ಕೋಕಿಲ ಅವರ ಮೂಲ ಹೆಸರು ಸಹಾಯ ಶೀಲನ್ ಎಂದು ಸಿನಿಮಾಗಳಲ್ಲಿ ಇವರನ್ನು ಸಾಧುಕೋಕಿಲ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದರು,

[widget id=”custom_html-2″]

ಇವರು ಸಿನಿಮಾದಲ್ಲಿ ಹಾಸ್ಯ ಪಾತ್ರಗಳಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.. ಕನ್ನಡದ ಕೆಲವು ಸಿನಿಮಾಗಳನ್ನು ಇವರು ನಿರ್ದೇಶನ ಮಾಡಿದ್ದಾರೆ.. ಈಗಲೂ ಸಾಧು ಕೋಕಿಲ ಅವರ ಕಾಲ್‌ ಶಿಟ್ ಗಾಗಿ ಇಂದಿಗೂ ಸಿನಿಮಾ ನಿರ್ದೇಶಕರು ಕಾಯುತ್ತಿದ್ದಾರೆ.. ಇನ್ನೂ ಸಾಧು ಕೋಕಿಲ ಅವರ ಮಗ ಕೂಡ‌‌ ತುಂಬಾನೇ ಫೇಮಸ್, ಅವರು ಯಾರು ಎಂಬುದು ನೋಡೋಣ ಬನ್ನಿ.. ಸಾಧು ಕೋಕಿಲ ಅವರ ಮಗನ ಹೆಸರು‌ ಸುರಾಗ್, ಇವರು ಮಾಡುತ್ತಿರುವ ಕೆಲಸವೇನ್ನು ಎಂಬುದು ಹಲವು ಜನರ ಪ್ರಶ್ನೆಯಾಗಿರಬಹುದು.. ಅದರೆ ಸಾಧು ಕೋಕಿಲ ಅವರ ಮಗ ಸುರಾಗ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ತನ್ನ ಅಪ್ಪನ ಹಾಗೆಯೇ

ಜನಪ್ರಿಯತೆ ಗಳಿಸಲು ಸಂಗೀತ ನಿರ್ದೇಶಕ ಆಗುವ ಕನಸನ್ನು ಕಂಡಿದ್ದಾರಂತೆ.. ಈಗಾಗಲೇ ಜುನಿಯಾರ್ ಸಾಧು ಕೋಕಿಲ ಅವರು ಎರಡು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದು.. ಚಿತ್ರರಂಗದವರು ಸುರಾಗ್ ಅವರು ಯಾರ‌ ರೀತಿ ಸಂಗೀತ ಸಂಯೋಜನೆ ಮಾಡಿದ್ದಾರೆ ಎಂಬುದನ್ನ ನೋಡಲು ಕಾದು ಕುಳಿತಿದ್ದಾರೆ.. ಸ್ನೇಹಿತರೆ ನಟ ಸಾಧು ಕೋಕಿಲ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..