ನಮಸ್ತೆ ಸ್ನೇಹಿತರೆ, ಜೀವನದಲ್ಲಿ ಗುರಿಯನ್ನು ಇಟ್ಟುಕೊಂಡು ಅದರಲ್ಲಿ ಸತತ ಪ್ರಯತ್ನ ಮಾಡಿದ್ದರೆ ಖಂಡಿತ ಗುರಿ ಮುಟ್ಟಬಹುದು ಎಂದು ಮತ್ತೊಬ್ಬರಿಗೆ ತೋರಿಸಿ ಕೊಟ್ಟಿದ್ದಾರೆ ಈ ಖ್ಯಾತ ನಟಿ.. ಏಲೋ ಮುಂಬೈಗೆ ಹೋಗಿ ಅವರ ಟೀಚರ್ ಆಗಿ ಕೆಲಸ ಮಾಡುತ್ತಿದ್ದ ಈ ಹುಡುಗಿ ಮತ್ತೆ ಕನ್ನಡ ಸೀರಿಯಲ್ ನಲ್ಲಿ ನಟನೆ ಮಾಡುವ ಅವಕಾಶ ಪಡೆಯುತ್ತಾರೆ ಅಂದರೆ ಆದರ ಹಿಂದೆ ಎಷ್ಟು ಪರಿಶ್ರಮ ಇದೇ ಅಂತ ಒಂದು ಕ್ಷಣ ನೀವೇ ಆಲೋಚನೆ ಮಾಡಿ ನೋಡಿ.. ಅಷ್ಟಕ್ಕೂ ಆ ನಟಿ ಯಾರು ಅಂತ ನೋಡೋಣ ಬನ್ನಿ.. ಹೌದು ಮೈಸೂರಿನಲ್ಲಿ ಹುಟ್ಟಿ ಬೆಳೆದ ಇವರು ಇಂಗ್ಲಿಷ್ ವಿಭಾಗದಲ್ಲಿ ಎಮ್.ಎ ಪದವಿ ಮುಗಿಸಿದ ಬಳಿಕ ಒಂದು ಇಂಟರ್ವ್ಯೂನಲ್ಲಿ ಆಯ್ಕೆಯಾಗಿ ಮುಂಬೈನಲ್ಲಿ ಇರುವ ಅಂಬಾನಿ ಇಂಟರ್ನ್ಯಾಷನಲ್ ಶಾಲೆಗೆ ಸಚಿನ್ ತೆಂಡೂಲ್ಕರ್, ಶಾರುಖಾನ್

ಮತ್ತು ಅಂಬಾನಿ ಅವರಿಂದ ಹಿಡಿದು ಬಾಲಿವುಡ್ ನ ಟಾಪ್ ನಟರ ಮಕ್ಕಳು ಈ ನಟಿಯ ವಿದ್ಯಾರ್ಥಿಗಳಾಗಿದ್ದರು.. ಅವರಿಗೆ ಇಂಗ್ಲಿಷ್ ಪಾಠ ಹೇಳಿಕೊಡುತ್ತಿದ್ದ ಇವರು ನಂತರ ಸೀರಿಯಲ್ ಗೆ ಬಂದಿದ್ದು ಹೇಗೆ ಗೊತ್ತಾ? ಸಿಲ್ಲಿ ಲಲ್ಲಿ ಸೀರಿಯಲ್ ನಲ್ಲಿ ಸಮಾಜ ಸೇವಕಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿಯ ಲಲಿತಾಂಬಾ ಅಲಿಯಾಸ್ ಲಲ್ಲಿ ಇವರ ನಿಜವಾದ ಹೆಸರು ಅಕ್ಷತ ಗಣೇಶ ಅಂತ.. ಇಂಗ್ಲಿಷ್ ಪಾಠ ಹೇಳಿಕೊಡುತ್ತಿದ್ದ ಅಕ್ಷತ ಅವರ ಬಳಿ ಮೇಡಂ ನಮ್ಮ ಮಕ್ಕಳು ಹೇಗೆ ಓದುತ್ತಿದ್ದಾರೆ ಎಂದು ಬಾಲಿವುಡ್ ನ ಟಾಪ್ ನಟರು ಬಂದು ಕೇಳುತ್ತಿದ್ದರು.. ಹತ್ತು ವರ್ಷಗಳ ಕಾಲ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದ ಅಕ್ಷತಾ ಅವರು ಫೇಮಸ್ ಟೀಚರ್ ಆಗಿದ್ದರು. ಆದರೆ ಇವರು ಟೀಚರ್ ಆಗಿದ್ದರು ಕೂಡ ನಟನೆಯ ಬಗ್ಗೆ ಆಸಕ್ತಿ ಹೊಂದಿದ್ದ ಅಕ್ಷತ ಅವರು ರಂಗಭೂಮಿ ಹಾಗು ನಾಟಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಟನೆಯನ್ನ ಕರಗದ ಮಾಡಿಕೊಂಡಿದ್ದರು..

ಹಾಗಾದರೆ ಇವರು ಸಿಲ್ಲಿ ಲಲ್ಲಿ ಸೀರಿಯಲ್ ಗೆ ಆಯ್ಕೆಯಾಗಿದ್ದು ಹೇಗೆ ಅಂತ ಹೇಳುವುದಾದರೆ! ಸಿಲ್ಲಿ ಲಲ್ಲಿ ಸೀರಿಯಲ್ ಗೆ ಆಡಿಶನ್ ನಡೆಯುತ್ತಿದ್ದೆ ಎಂದು ತಿಳಿದು ಬೆಂಗಳೂರಿಗೆ ಬಂದ ಅಕ್ಷತ ಅವರು ತಮ್ಮ ಪ್ರತಿಭೆಯ ಮೂಲಕ ಲಲ್ಲಿ ಪಾತ್ರವನ್ನ ತುಂಬಾ ಕಷ್ಟಪಟ್ಟು ಗಿಟ್ಟಿಸಿಕೊಂಡರು ಹಾಗೆಯೇ ತಮ್ಮ ಅಮೋಘ ನಟನೆಯ ಮೂಲಕ ಈಗ ಎಲ್ಲರ ಮನೆಮಾತಾಗಿದ್ದಾರೆ ನಟಿ ಲಲ್ಲಿ ಅಕ್ಷತ ಅವರು.. ಒಂದು ಪ್ರಸಿದ್ಧ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಕಾರಣ ಕೈ ತುಂಬಾ ಹಣ ಸಿಗುತ್ತಿದೆ ಇಷ್ಟೇ ಸಾಕು ಅಂತ ಅಂದುಕೊಂಡಿದ್ದರೆ ಇವರು ಇಷ್ಟು ಫೇಮಸ್ ನಟಿ ಆಗಲು ಸಾದ್ಯಾವಾಗುತ್ತಿರಲಿಲ್ಲ.. ಜೀವನದಲ್ಲಿ ಕನಸಿನ ಬೇನೆರಿ ಆ ಕನಸನ್ನ ನನಸು ಮಾಡಿಕೊಂಡಿರುವ ನಟಿ ಲಲ್ಲಿ ಅಕ್ಷತಾ ಅವರ ಪರಿಶ್ರಮ ಹಾಗು ಅವರ ಪ್ರಯತ್ನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..