Advertisements

ಕನ್ನಡದ ಹಿರಿಯ ನಟಿ ಗೀತಾ ಅವರು ಈಗ ಹೇಗಿದ್ದಾರೆ? ಮಾಡುತ್ತಿದ್ದಾರೆ ಕೆಲಸ ಏನು ಗೊತ್ತಾ..

Cinema

ನಮಸ್ತೆ ಸ್ನೇಹಿತರೆ, ನಟಿ ಗೀತಾ ಇವರು ದಕ್ಷಿಣ ಭಾರತದ ಪ್ರಮುಖ ಚಿತ್ರನಟಿಯರಲ್ಲೊಬ್ಬರು..‌ ಸುಮಾರು 80‌ ಮತ್ತು90ರ ದಶಕದಲ್ಲಿ ತಮ್ಮ‌ ಅದ್ಭುತವಾದ ನಟನೆ ಹಾಗು ಸೌಂದರ್ಯದಿಂದ ಪ್ರೇಕ್ಷಕರನ್ನು ಮನರಂಜನೆ ಮಾಡಿದ್ದವರಲ್ಲಿ ನಟಿ‌ ಗೀತಾ ಕೂಡ ಒಬ್ಬರು.. ಇವರು ಕನ್ನಡ ಸಿನಿಮಾಗಳ ಡಾ ರಾಜ್ ಕುಮಾರ್, ಅನಂತ್ ನಾಗ್, ಅಂಬರೀಷ್ ಹೀಗೆ ಆಗಿನ ಖ್ಯಾತ ನಟರೊಂದಿಗೆ ಸಾಕಷ್ಟು ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ.. ನಟಿ ಗೀತಾ ಅವರು ಜುಲೈ 18/1962ರಲ್ಲಿ‌ ಬೆಂಗಳೂರಿನ ಜನಿಸಿದವರು.. ಗೀತಾ ಅವರಿಗೆ ಈಗ 57ವರ್ಷ ವಯಸ್ಸಾಗಿದೆ. ನಟಿ ಗೀತಾ ಅವರು ಭೈರವಿ ಎನ್ನುವ ತಮಿಳು ಸಿನಿಮಾ ಒಂದರ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು..‌

Advertisements
Advertisements

ಅನಂತರ ಕನ್ನಡದಲ್ಲಿ ಘರ್ಜನೆ ಎನ್ನುವ ಸಿನಿಮಾದ ಅದ್ಭುತವಾಗಿ ಅಭಿನಯಿಸಿ ಕನ್ನಡ ಚಿತ್ರರಂಗ‌ ಪ್ರವೇಶಿಸಿದರು ಇನ್ನೂ ಗೀತಾ ಅವರು ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿ ಈ‌ ಎಲ್ಲಾ ಭಾಷೆಯ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.. ಶೃತಿ ಸೇರಿದಾಗ, ಆಕಸ್ಮಿಕ, ದೃವತಾರೆ, ಎರಡು ರೇಖೆಗಳು, ದೇವತಾ ಮನುಷ್ಯ ಮಿಥಿಲೆಯ ಸೀತೆಯರು‌ ಗರುಡ ರೇಖೆ, ಇನ್ನೂ‌ ಮುಂತಾದ ಸಿನಿಮಾಗಳು ಡಾ ರಾಜ್ ಕುಮಾರ್ ಅವರ ಜೊತೆ ಅದ್ಭುತವಾಗಿ ಗೀತಾ ಅವರು ನಟಿಸಿದ್ದರು.. ನಟಿ ಗೀತಾ ಅವರು ಸಿನಿಮಾ ರಂಗದಲ್ಲಿ ಸುಮಾರು 200ಕ್ಕೂ‌ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ..

ಇನ್ನೂ ಗೀತಾ ಅವರು 1997‌ರಲ್ಲಿ ವಾಸನ್ ಎನ್ನುವವರನ್ನು ಮದುವೆ ಆದರೂ ಮದುವೆ ಆಗಿ ಅಮೇರಿಕಾದಲ್ಲಿ ನೆಲೆಸಿದರು.. ಇನ್ನೂ‌‌‌ ಗೀತಾ ಅವರು ಮದುವೆಯಾ ನಂತರ ಸಿನಿಮಾದಲ್ಲಿ ಅಷ್ಟೇನೂ ನಟಿಸಲಿಲ್ಲ‌‌ ಆದರೆ ನಂತರದ ಕೇವಲ ವರ್ಷಗಳಲ್ಲಿ ತಮಿಳು ಕಿರುತೆರೆಯ‌‌ ಧಾರಾವಾಹಿಯಲ್ಲಿ ನಟಿಸಿದ್ದರು.. ಇನ್ನೂ ಇತ್ತಿಚೀನ ದಿನಗಳಲ್ಲಿ ಕನ್ನಡದಲ್ಲಿ ಹಳ್ಳಿ ಪಂಚಾಯತಿ ಎನ್ನುವ ಕನ್ನಡ‌‌ ಸಿನಿಮಾದಲ್ಲಿ ನಟಿಸಿದ್ದರು ಇವರಿಗೆ ಕನ್ನಡದಲ್ಲಿ ಒಳ್ಳೆಯ ಪಾತ್ರಗಳು ಸಿಕ್ಕರೆ ಖಂಡಿತವಾಗಿಯೂ ಅಮೇರಿಕಾದಿಂದ ಬಂದು ಮತ್ತೆ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಹೇಳಿದ್ದಾರೆ.. ಸ್ನೇಹಿತರೆ ನಟಿ‌ ಗೀತಾ ಅವರ. ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..