Advertisements

ವಿಕಲಚೇತನ ತಮ್ಮನನ್ನು ತಾಯಿಯ ರೀತಿ ನೋಡಿಕೊಳ್ಳುತ್ತಿರುವ ಪಾರು ಧಾರಾವಾಹಿಯ ನಟಿ ಮೋಕ್ಷಿತಾ ಪೈ!

Cinema

ನಮಸ್ತೆ ಸ್ನೇಹಿತರೆ, ಜೀ ಕನ್ನಡ ವಾಹಿನಿಯಲ್ಲಿ ಕಳೆದ ವರ್ಷ ಹಲವಾರು ಧಾರಾವಾಹಿಗಳು ಪ್ರಾರಂಭವಾದವು.. ಅದರಲ್ಲಿ ಪ್ರಮುಖವಾದ ಧಾರಾವಾಹಿಗಳಲ್ಲಿ ಪಾರು ಧಾರಾವಾಹಿ ಒಂದಾಗಿದೆ, ಅತ್ಯುತ್ತಮ ಕಥೆ ಇರುವ ಈ ಪಾರು ಧಾರಾವಾಹಿ ಕನ್ನಡ ಕಿರುತೆರೆಯ ಧಾರಾವಾಹಿಗಳಲ್ಲಿ ಪೈಕಿ ಟಿ.ಆರ್.ಪಿ‌ಯಲ್ಲಿ ಕೂಡ ಅಗ್ರ ಸ್ಥಾನ ಪಡೆದಿದೆ.. ಈಗ ಪಾರು ಧಾರಾವಾಹಿ ಕೂಡ ಕರ್ನಾಟಕದಾದ್ಯಂತ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.. ಈ ಪಾರು ಧಾರಾವಾಹಿ ಒಂದು ಹಳ್ಳಿ ಹುಡುಗಿಯ ಕಥೆಯಾಗಿದೆ.. ಅಖಿಲಾಂಡೇಶ್ವರಿ ಮನೆಗೆ ಮನೆ ಕೆಲಸದವಳ ರೀತಿ ಬರುವ ಪಾರುವಿನ ಮುಗ್ಧತೆ ಇತರ ಕಲಾವಿದರ ಅಭಿನಯ ಕೂಡ ವೀಕ್ಷಕರ ಮನ ಗೆದ್ದಿದ್ದಾರೆ..

[widget id=”custom_html-2″]

Advertisements
Advertisements

ಪಾರು ಧಾರಾವಾಹಿಯಲ್ಲಿ ತುಂಬಾ ಮುಗ್ಧತೆಯಾಗಿ ಅಭಿನಯಿಸುತ್ತಿರುವ ಕಥ ನಾಯಕಿ ಪಾರು ಪಾತ್ರವನ್ನು ನಿಭಾಯಿಸುತ್ತಿರುವ ನಟಿಯ ನಿಜವಾದ ಹೆಸರು ಮೋಕ್ಷೀತಾ ಪೈ ಎಂದು.. ಮೋಕ್ಷೀತಾ ಮೂಲತಃ ಮಂಗಳೂರಿನವರು ಇವರು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ್ದು ಮಂಗಳೂರಿನಲ್ಲೇ .. ಮೋಕ್ಷೀತಾ ಅವರದ್ದು ಸಣ್ಣ ಕುಟುಂಬ ಇವರ‌ ಕುಟುಂಬದಲ್ಲಿ ತಂದೆ ಮತ್ತು ತಮ್ಮ.. ಇನ್ನೂ ಮೋಕ್ಷೀತಾ ಅವರ ತಮ್ಮ ವಿಕಲಚೇತನ ಮಗು.. ತಮ್ಮನನ್ನು ತಾಯಿಯ ರೀತಿ ನೋಡಿಕೊಳ್ಳುವ ಮಾತೃ ಹೃದಯಿ ಮೋಕ್ಷೀತಾ ಅವರು..

[widget id=”custom_html-2″]

ತಮ್ಮ ಅಂದ್ರೆ ಮೋಕ್ಷೀತಾ ಅವರಿಗೆ ಪ್ರಪಂಚ, ಮೋಕ್ಷೀತಾ ಅವರ ಜೀವನದಲ್ಲಿ ಅವರ ತಮ್ಮ ತುಂಬಾನೇ ಸ್ಪೆಷಲ್.. ಧಾರಾವಾಹಿ ಚಿತ್ರೀಕರಣ ಇಲ್ಲದಿದ್ದಾಗ ಸಿಗುವ ಬಿಡುವಿನ ಸಮಯವನ್ನ ಸಂಪೂರ್ಣವಾಗಿ ತಮ್ಮನ ಜೊತೆಗೆ ಕುಟುಂಬದ ಜೊತೆ ಕಳೆಯುತ್ತಾರೆ ಮೋಕ್ಷೀತಾ ಅವರು.. ಇದೀಗ ಲಾಕ್ ಡೌನ್ ಇರುವ ಕಾರಣ ಮನೆಯಲ್ಲಿ ತಮ್ಮನ್ನ ಜೊತೆ ಸಂತೋಷದ ಸಮಯವನ್ನ ಕಳೆಯುತ್ತಿದ್ದಾರೆ.. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.. ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದು ನನ್ನ‌‌ ಮುದ್ದು ಕಂದನ ಜೊತೆಗೆ ಕಾಲ ಕಳೆಯುವ ಖುಷಿ

[widget id=”custom_html-2″]

ಅಮ್ಮನಿಗೆ ಮಾತ್ರ ನಮ್ಮಿಬ್ಬರನ್ನ ಒಂದೇ ಫ್ರೇಮಲ್ಲಿ ಹಿಡಿದಿಟ್ಟು ಕಣ್ತುಂಬಿಸಿಕೊಳ್ಳುವ ಖುಷಿ ಎಂದು ಬರೆದು ಮೋಕ್ಷೀತಾ ಅವರು ತಮ್ಮನೊಂದಿಗೆ ಇರುವ ಪೋಟೋವನ್ನ ಹಚ್ಚಿಕೊಂಡಿದ್ದಾರೆ.. ಇನ್ನೂ ಈ ಪೋಟೋಗೆ ಕಾಮೆಂಟ್ ಮಾಡುವ ಮೂಲಕ ಅಭಿಮಾನಿಗಳು ಮೆಚ್ಚುಗೆಯನ್ನ ಸೂಚಿಸಿದ್ದಾರೆ.. ಸ್ನೇಹಿತರೆ ಪಾರು ಧಾರಾವಾಹಿಯಲ್ಲಿ ಮೋಕ್ಷೀತಾ ಅವರ ಅಭಿನಯ ನಿಮಗೆ ಇಷ್ಟ ವಾಗಿದ್ದರೆ ನಿಮ್ಮ ಅನಿಸಿಕೆ ತಿಳಿಸಿ..