Advertisements

ಸಿನಿಮಾದಲ್ಲಿ ಪೈಟರ್ ಆಗಿದ್ದ ಮಾಸ್ಟರ್ ಥ್ರಿಲ್ಲರ್ ಮಂಜು ಅವರ ಹೆಂಡತಿ ನಿಜಕ್ಕೂ ಯಾರು! ಹೇಗಿದ್ದಾರೆ ಗೊತ್ತಾ? ಪತ್ನಿಯ ಬಗ್ಗೆ ಥ್ರೀಲರ್ ಮಂಜು ಹೇಳಿದ್ದೇನು ಅಂತ ನೀವೇ ನೋಡಿ…

Cinema

ನಮಸ್ತೆ ಸ್ನೇಹಿತರೆ, ತಮಗೆಲ್ಲರಿಗೂ ತಿಳಿದಿರುವ ಹಾಗೆ ಒಂದು ಸಿನಿಮಾ ಯಶಸ್ವಿಯಾಗಬೇಕು ಅಂದ್ರೆ ನಟ, ನಟಿ ನಿರ್ದೇಶಕ ಹಾಗೂ ಇನ್ನಿತರ ಕಲಾವಿದರ ಜೊತೆ ಸಾಹಸ ಕಲಾವಿದರು ಕೂಡ ಪ್ರಮುಖ ಕಾರಣವಾಗುತ್ತಾರೆ ಅಂತ ಹೇಳಬಹುದು.. ಅದರಲ್ಲೂ ಥ್ರೀಲರ್ ಮಂಜು ಕೂಡ ಒಬ್ಬರು. ಇವರು ಭಾರತೀಯ ಚಲನಚಿತ್ರದ ಹೆಸರಾಂತ ನಟ, ಸಮರ ಕಲಾವಿದ, ನಿರ್ದೇಶಕ, ಚಿತ್ರಕಥೆಗಾರ, ಸಾಹಸ ಸಂಯೋಜಕ, ನೃತ್ಯ ನಿರ್ದೇಶಕ ಹಾಗಿರುವ ಥ್ರಿಲ್ಲರ್ ಮಂಜು ಅವರು, ಕನ್ನಡ ಸಿನಿಮಾದಲ್ಲಿ ರಂಗದಲ್ಲಿ ಮುಖ್ಯವಾಗಿ ದೊಡ್ಡ ಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ.‌. ಥ್ರಿಲ್ಲರ್ ಮಂಜು ಕನ್ನಡ ಮಾತ್ರವಲ್ಲದೆ ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲೂ ಕೂಡ ಕೆಲಸ ಮಾಡಿದ್ದಾರ.. ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿನ ಬ್ಲಾಕ್ಬಸ್ಟರ್ ಪೋಲಿಸ್ ಕಥಾ ಟ್ರೈಲಾಜಿ ಚಿತ್ರದ ನಿರ್ದೇಶನ ಮಾಡಿದ್ದರು..

Advertisements
Advertisements

ಇವರು ಸಾಹಸ ಕಲಾವಿದರಾಗಿ ಪಾದಾರ್ಪಣೆ ಮಾಡಿ ಮುಂದೆ ಫೈಟ್ ಮಾಸ್ಟರ್ ಆಗಿ ಸುಮಾರು 376 ಚಿತ್ರಗಳಿಗೆ ಥ್ರಿಲ್ಲರ್ ಮಂಜು ಅವರೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.. ಇನ್ನೂ ಥ್ರಿಲ್ಲರ್ ಮಂಜು ಅವರ ಪತ್ನಿ ಯಾರು ಈಗ ಅವರು ಹೇಗಿದ್ದಾರೆ ಎನ್ನುವ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು 1972 ರಲ್ಲಿ ಮೈಸೂರಿನಲ್ಲಿ ಜನಿಸಿದ ಮಂಜು ಅವರಿಗೆ 49 ವರ್ಷ ವಯಸ್ಸಾಗಿದೆ. ಥ್ರಿಲ್ಲರ್ ಮಂಜು ಅವರು 1993 ರಲ್ಲಿ‌ ರೀಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶನ ಮಾಡಿದ ‘ಶ್’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಾಹಸ ನಿರ್ದೇಶಕರಾಗಿ ತಮ್ಮನ್ನು ತಾವು ಗುರುತಿಸಿಕೊಂಡರು.. ನಂತರ ‌1994 ರಲ್ಲಿ ಲಾ’ಕಪ್ ಡೆ’ತ್ ಚಿತ್ರಕ್ಕೆ ಅಮೋಘವಾದ ಸಾಹಸಮಯ ದೃಶ್ಯಗಳನ್ನ ಅಳವಡಿಸಿ ಕನ್ನಡ ಸಿನಿಮಾ ರಂಗದಲ್ಲಿ ಖ್ಯಾತ ಸಾಹಸ ನಿರ್ದೇಶಕರಾಗಿ ಚಿರಪರಿಚಿತರಾದರು.

ಇನ್ನೂ 1996 ರಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ನಟನೆ ಮಾಡಿದ ಪೊಲೀಸ್ ಸ್ಟೋರಿ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಸಿನಿಮಾ ನಿರ್ದೇಶಕರಾಗಿ ಕೂಡ ಚಿರಪರಿಚಿತರಾದರು. ತಮ್ಮ ನಿರ್ದೇಶನದ ಮೊದಲ ಚಿತ್ರದಲ್ಲಿಯೇ ಸಿನಿಮಾ ನಿರ್ದೇಶಕರಾಗಿ ಯಶಸ್ಸು ಸಾಧಿಸಿದ್ದ ಇವರು ಕನ್ನಡ ಸಿನಿಮಾ ರಂಗದಲ್ಲಿ ಪೋಲಿಸ್ ಸ್ಟೋರಿ ಸಿನಿಮಾ ಒಂದು ದೊಡ್ಡ ಪ್ರಮಾಣದಲ್ಲಿ ದಾಖಲೆಯನ್ನು ಸೃಷ್ಟಿಸಿತು.. ಕನ್ನಡ ಸಿನಿಮಾ‌ ರಂಗದ ಹೆಸರಾಂತ ನಟರಾಗಿರುವ ಡಾ// ರಾಜ್ ಕುಮಾರ್, ಸಾಹಸ ಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ಕರಾಟೆ ಕಿಂಗ್ ಶಂಕರ್ ನಾಗ್, ಕ್ರೇಜಿ ಸ್ಟಾರ್ ರವಿಚಂದ್ರನ್, ಸೇರಿದಂತೆ ಹಾಗು ಈಗಿನ ಬಹುತೇಕ ನಾಯಕ ನಟರ ಸಿನಿಮಾಗಳಿಗೂ ಕೂಡ ಸಹಸ ನಿರ್ದೇಶನವನ್ನ ಥ್ರೀಲರ್ ಮಂಜು ಮಾಡಿದ್ದಾರೆ.. ಕನ್ನಡ ತೆಲುಗು ತಮಿಳು ಸೇರಿದಂತೆ ಸುಮಾರು 509 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಹಸ ನಿರ್ದೇಶಕರಾಗಿ ನಾಯಕ ನಟರಾಗಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ..

ಥ್ರೀಲರ್ ಮಂಜು ಅವರಿಗೆ 1994-95 ರಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ರಂಗದ ಅತ್ಯುತ್ತಮ ಸಾಹಸ ನಿರ್ದೇಶಕ ಎನ್ನುವ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು.. ಇನ್ನೂ 1992 ರಲ್ಲಿ ಗೀತಾ ಎಂಬುವವರನ್ನ ಮದುವೆ ಆಗಿರುವ ಥ್ರೀಲರ್ ಮಂಜು ಅವರಿಗೆ ಇಬ್ಬರು ಹೆಣ್ಣು ಮಕ್ಕಳೂ ಇದ್ದು ಸುಖಿ ಕುಟುಂಬ ಇವರದ್ದಾಗಿದೆ. ಮಂಜು ಅವರ ಮೊದಲ ಮಗಳು ಹೆಸರು ರಕ್ಷಿತ, ಎರಡನೇ ಪುತ್ರಿ ಹೆಸರು ರಜತ ಅಂತ. ಇನ್ನೂ ಮಂಜು ಅವರು ತಮ್ಮ ಪತ್ನಿ ಬಗ್ಗೆ ಈ ರೀತಿ ಹೇಳಿಕೊಂಡಿದ್ದಾರೆ ಅದೇನೆಂದರೆ ನನ್ನ ಪತ್ನಿ ಬಹಳ ಕ್ಲೀನ್, ನಾವು ಮನೆಯನ್ನು ನೀಟ್ ಇಡದಿದ್ದರೆ ಪತ್ನಿ ನಮ್ಮನ್ನು ಬೈಯ್ಯುತ್ತಾರೆ. ಆಗ ನಮ್ಮ ನಡುವೆ ಜಗಳ ಆರಂಭವಾದರೂ ನಾನೇ ಕೊನೆಗೆ ಕಾಂಪ್ರಮೈಸ್ ಆಗುತ್ತೀನಿ ಎಂದು ತಮ್ಮ‌ ಪ್ರೀತಿಯ ಪತ್ನಿಯ ಬಗ್ಗೆ ಮಾದ್ಯಮ ಒಂದರಲ್ಲಿ ಹೇಳಿಕೊಂಡಿದ್ದಾರೆ.. ಸಿನಿಮಾದಲ್ಲಿ ಹೆಚ್ಚಾಗಿ ನೆಗೆಟಿವ್ ಪಾತ್ರ ಮಾಡುತ್ತಿದ್ದ ಮಂಜು ಅವರು ನಿಜ ಜೀವನದಲ್ಲಿ ಬಹಳ ಮೃದು ಸ್ವಭಾವದವರು ಅಂತಾನೇ ಹೇಳಬಹುದು.. ಸ್ನೇಹಿತರೆ ಸಿನಿಮಾದಲ್ಲಿ ಥ್ರೀಲರ್ ಮಂಜು ಅವರ ನಟನೆಯ ಬಗ್ಗೆ ನಿಮ್ಮ ಅನಿಸಿಕೆ ಏನು?