Advertisements

ಕರಾಟೆ ಕಿಂಗ್ ಶಂಕರ್ ನಾಗ್ ರವರ ಮಗಳು ಹೇಗಿದ್ದಾರೆ! ಈಗ ಅವರು ಮಾಡ್ತಿರೋ ಕೆಲಸವಾದರೂ ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಶಂಕರ್ ನಾಗ್ ಕನ್ನಡ ಚಿತ್ರರಂಗ ಕಂಡ ಅತ್ಯಂತ ಚಾಣಾಕ್ಷ, ಹಾಗು ನಿರ್ದೇಶಕ, ನಿರ್ಮಾಪಕ ಚುರುಕಾದ ವ್ಯಕ್ತಿ, ಹಾಗು ಪ್ರತಿಕ್ಷಣ ಹೊಸದನ್ನು ಯೋಚನೆ ಮಾಡುತ್ತಿದ್ದ ನಟ ಶಂಕರ್ ನಾಗ್ ಇಲ್ಲಿಯವರೆಗೆ ಇದ್ದಿದ್ದರೆ ಕನ್ನಡ ಚಿತ್ರರಂಗ ಬೇರೊಂದು ಮಟ್ಟಿಗೆ ಹೋಗುತ್ತಿತ್ತು.. ಶಂಕರ್ ನಾಗ್ ಈಗಲೂ ಸಹಾ ಕನ್ನಡಿಗರ ಮನದಲ್ಲಿ ಕಿಂಗ್ ಹಾಗಿ ಮರೆಯುತ್ತಿದ್ದಾರೆ.. ‌ ಇನ್ನು ಶಂಕರ್ ನಾಗ್ ಅವರ ಮಗಳು‌ ಕಾವ್ಯ ನಾಗ್ ರವರು ಎಲ್ಲಿದ್ದಾರೆ ಈಗ ಎನ್ನು ಮಾಡುತ್ತಿದ್ದಾರೆ ಅನ್ನೋದನ್ನು ಇಲ್ಲಿ ಪೂರ್ತಿಯಾಗಿ ತಿಳಿಯೋಣ..

[widget id=”custom_html-2″]

Advertisements
Advertisements

ಅಂದು ಸೆಪ್ಟೆಂಬರ್ ೩೦- ೧೯೯೦ ರಂದು ರಾತ್ರಿ ಸಿನಿಮಾ ಶೂಟಿಂಗ್ ಮುಗಿಸಿ ಪತ್ನಿ ಅರುಂಧತಿ ನಾಗ್ ಹಾಗು ಐದು ವರ್ಷದ ಮಗು ಕಾವ್ಯ ರವರ ಜೊತೆ‌ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಬರುತ್ತಿರುವಾಗ.. ಒಂದು ಟ್ರಕ್ ಆ ಸುಂದರ ಕುಟುಂಬವನ್ನು ಛಿದ್ರ ಛಿದ್ರ ಮಾಡಿತ್ತು.. ಆ ಅಪಘಾತದಲ್ಲಿ ಕನ್ನಡಿಗರ ಕರಾಟೆ ಕಿಂಗ್ ಶಂಕರ್ ನಾಗ್ ಅವರು ಇಹಲೋಕವನ್ನು ತ್ಯಜಿಸಿದರು.. ಇನ್ನು ಅದೆ ಕಾರಿನಲ್ಲಿಂದ ಅರುಂಧತಿ ನಾಗ್ ರವರಿಗೆ ಭೀಕರ ಗಾಯಗಳಾದವು.. ಅದೃಷ್ಟ ವರ್ಷ ಎಂದರೆ ಐದು ವರ್ಷದ ಮಗು ಕಾವ್ಯ ನಾಗ್ ಅವರಿಗೆ ಸಣ್ಣಪುಟ್ಟ ಗಾಯಗಳು ಆಗಿದ್ದವು..

[widget id=”custom_html-2″]

ಈ ಅಪಘಾತದಿಂದ ಅರುಂಧತಿ ನಾಗ್ ರವರು ಒಂದು ವರ್ಷ ವೀಲ್ ಚೇರ್ ನಲ್ಲಿ ಕೂರುವಂತೆ ಆಯಿತು.. ಇನ್ನು ಈ ದುರಂತ ಘಟನೆಯನ್ನು ದಾಟಿ ಬರುವ ಹೊತ್ತಿಗೆ.. ಅರುಂಧತಿ ರವರ ಬಳಿ ಇದ್ದಿದ್ದು ಕೇವಲ ಐದು ಸಾವಿರ ರೂಪಾಯಿ, ಆದರು ಯಾವುದೇ ಹಿಂಜರಿಕೆ ಇಲ್ಲದೆ ಅರುಂಧತಿ ನಾಗ್ ರವರು ತಂದೆ ಜೀವನವನ್ನು ರಂಗ ಭೂಮಿಯಲ್ಲಿ ತೊಡಗಿಸಿ ಕೊಂಡು.. ಎಲ್ಲವನ್ನೂ ಎದುರಿಸಿ ಪುಟ್ಟ ಮಗುವಿಗೆ ಯಾವುದೇ ತೊಂದರೆಯಾಗದಂತೆ ತುಂಬಾ ಮುದ್ದಾಗಿ ಬೆಳೆಸಿದರು.. ಇನ್ನು ವನ್ಯಜೀವಿ ವಿಭಾಗದಲ್ಲಿ ಎಂಎ ಪದವಿಯನ್ನು ಪಡೆದ ಕಾವ್ಯನಾಗ್ ರವರು.. ಮದುವೆಯಾಗಿ‌ ತನ್ನ ಗಂಡನ ಜೊತೆ‌ ವಿಯೆಟ್ನಾಂಗೆ ಹೋಗಿ ಮತ್ತೆ ಬೆಂಗಳೂರಿಗೆ ಬಂದು ಈಗ ತನ್ನದೇಯಾದ ಒಂದು ಸ್ವಂತ ಕಂಪನಿಯನ್ನು ತೆರೆದಿದ್ದಾರೆ..

ಮೈಸೂರಿನಲ್ಲಿರುವ ತಂದೆಯ ಜಮೀನಿನಲ್ಲಿ ಕೆಮಿಕಲ್ ಮುಕ್ತ ಸೋಪ್ ಹಾಗೂ ಆಯಿಲ್ ತಯಾರಿಸುವ ಕೋಕನಿಸ್ ಎಂಬ ಕಂಪನಿಯನ್ನು ತೆರೆದಿರುವ ಕಾವ್ಯನಾಗ್ ರವರು ನೈಸರ್ಗಿಕ ಸೋಪ್ ಹಾಗು ಆಯಿಲ್ ಉತ್ಪಾದನೆಯನ್ನು ಮಾಡುತ್ತಿದ್ದಾರೆ.. ಇನ್ನು ಹೊಸ ಆಲೋಚನೆ ಯೊಂದಿಗೆ ಮುನ್ನಡೆಯುತ್ತಿದ್ದಾರೆ.. ಇನ್ನು ತಂದೆ ಆಲೋಚನೆಗಳನ್ನು ಮರೆಯದ ಕಾವ್ಯ ರವರು ಜೀವನದಲ್ಲಿ ನೊಂದ ಮಹಿಳೆಯರಿಗೆ ಉದ್ಯೋಗವನ್ನು ನೀಡಿದ್ದಾರೆ.. ಹಾಗೆಯೇ ಕಾವ್ಯ ನಾಗ್ ರವರ ಈ‌ ಕೆಲಸಕ್ಕೆ ನಿಮ್ಮದೊಂದು ಶುಭಾಶಯ ಇರಲಿ.. ನೀವು ಶಂಕರನಾಗ್ ಅಭಿಮಾನಿಯಾಗಿದ್ದರೆ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ..