Advertisements

ಒಂದು ಟೆಕ್ನಿಕ್ ನಿಂದಾಗಿ ತಿಂಗಳಿಗೆ ಲಕ್ಷ ಲಕ್ಷ ಕಳಿಸುತ್ತಿರುವ ಬೆಳಗಾವಿಯ ಈ ರೈತ ! ಈ ರೈತನ‌‌ ಟೆಕ್ನಿಕ್ ನೋಡಿ ಇಡೀ ದೇಶವೇ ಅಚ್ಚರಿ ಪಟ್ಟಿದ್ದಾರೆ..

Kannada Mahiti

ನಮಸ್ತೆ ಸ್ನೇಹಿತರೆ, ಹಳ್ಳಿ ಜನರಲ್ಲಿ ಒಂದು ಮನಸ್ಥಿತಿ ಬೆಳದು ಕೊಂಡಿದೆ ಅಂದರೆ ಅವರಿಗೆ ತಮ್ಮ‌ ಮಕ್ಕಳು ವ್ಯವಸಾಯ ಮಾಡುವುದು ಬೇಕಾಗಿಲ್ಲ.. ಬೆಂಗಳೂರಿನಲ್ಲಿ ಯಾವುದಾದರೂ ಕೆಲಸ ಮಾಡಬೇಕು ಎಂಬ ನಿರೀಕ್ಷೆ ಇದೆ ಇರುತ್ತದೆ.. ಆದರೆ ಬೆಂಗಳೂರಿಗೆ ಕೆಲಸಕ್ಕಾಗಿ ಬರುವ ಮಕ್ಕಳ ಪರಿಸ್ಥಿತಿ ಮಾತಿನಲ್ಲಿ ಹೇಳಲು ಸಾಧ್ಯವಾಗುವುದಿಲ್ಲ.. ತಂದೆ ತಾಯಿ ಹಾಗು ಹುಟ್ಟಿ ಬೆಳೆದ ಊರಿನಿಂದ ದೂರ ಇರಬೇಕು ಮುಂಜಾನೆ ಎದ್ದು ಅಚ್ಚ ಹಸಿರು ನೋಡುವ ಬದಲಿಗೆ ನಗರದಲ್ಲಿ ದೂಳು ಕರ್ಕಷ ಶಬ್ದ ಕೇಳಬೇಕು.. ತಾಯಿ ಮಾಡುವ ರುಚಿಕರವಾದ ಅಡುಗೆ ಆರೋಗ್ಯಕರವಾದ ಊಟ ತಿನ್ನುವ ಬದಲಿಗೆ ರಸ್ತೆಯ ಪಕ್ಕದಲ್ಲಿ ಪಾಮ್ ಆಯಿಲ್ ನಿಂದ ಮಾಡಿದ ಊಟ ತಿಂದು ಬೊಜ್ಜು ಬೆಳೆಸಿಕೊಳ್ಳಬೇಕು. ಕೊನೆಗೆ ಒಂದು ದಿನ ನನ್ನ ಜೀವನ ಇದ್ದೇನಾ ಅನಿಸಿಬಿಡುತ್ತದೆ.. ಆದರೆ‌ ಈ ವ್ಯಕ್ತಿ ಮಾತ್ರ ಆ ರೀತಿ ಮಾಡಲಿಲ್ಲ ಕೆಲಸವನ್ನು ತಿರಸ್ಕರಿಸಿ ಕಂಪನಿಯ CEO ಗಳಿಸುವಷ್ಡು ಹಣವನ್ನು ಕಳಿಸುತ್ತಿದ್ದಾರೆ ಅದು ಆರೋಗ್ಯದಿಂದ..

[widget id=”custom_html-2″]

Advertisements
Advertisements

ಇವರ ಹೆಸರು ಸತೀಶ್ ಅಂತ ಬೆಳಗಾವಿ ಜಿಲ್ಲೆಯ ಉಕ್ಕೇರಿ ತಾಲ್ಲೂಕಿನ ಚೀರೂರು ಗ್ರಾಮದವರು ಡಬಲ್ ಡಿಗ್ರಿ ಮಾಡಿರುವ ಸತೀಶ್ ಅವರಿಗೆ ಒಂದು ಕೆಲಸ ಸಿಕ್ಕಿತು ಆದರೆ ಆ ಕೆಲಸಕ್ಕೆ 16 ಲಕ್ಷ ಲಂಚ ಕೊಡಬೇಕಿತ್ತು.. ಸಾಲ ಮಾಡಿ‌ ಹಣಕೊಟ್ಟು ಮಗನನ್ನು ಕೆಲಸಕ್ಕೆ ಸೇರಿಸಲು ಸತೀಶ್ ಅವರ ತಂದೆ ಸಿದ್ದರಾಗಿದ್ದರು.. ಆದರೆ ಹಣ ಕೊಟ್ಟು ಜೀವನದ ಮಾಡುವಂತಹ ಕೆಲಸ ನನಗೆ ಬೇಡ ಎಂದ ಸತೀಶ್ ಅವರು ತಮ್ಮ 1.5 ಎಕರೆ ಜಮೀನಿನಲ್ಲಿ‌ ರೈತರ ಹಾಗೆ ವ್ಯವಸಾಯ ಮಾಡಲು ಮುಂದಾದರು..‌ ಇನ್ನೂ ಸತೀಶ್ ಅವರ ತಂದೆ 15‌ ವರ್ಷದಿಂದ ತಮ್ಮ‌ ಬಳಿ ಇದ್ದ ಜಮೀನಿನಲ್ಲಿ ತರಕಾರಿ ಬೆಳೆಯುತ್ತಿದ್ದರು‌ ಆದರೆ ಇಳುವರಿ ಗುಣಮಟ್ಟ ಕಡಿಮೆಯಾಗಿದ್ದರಿಂದ ಆದಾಯ ಅಷ್ಟೇನೂ ಬರುತ್ತಿರಲಿಲ್ಲ.. ತಮ್ಮ ತಂದೆಯ ಹಾಗೆ ವ್ಯವಸಾಯ ಮಾಡಲು ಮುಂದಾದ ಸತೀಶ್ ಅವರು..

[widget id=”custom_html-2″]

ಮೊದಲ ಒಂದಷ್ಟು ದಿನ ಬೆಳೆ ಮತ್ತು ಮಾರುಕಟ್ಟೆಯ ಬಗ್ಗೆ ಸಂಶೋಧನೆ ಮಾಡಿ ಯಾವ ಬೆಳೆಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ‌ ಇದೆ ಎಂದು ತಿಳಿದು ಕೊಂಡರು.. ಅದರಂತೆ ಹಾಗಲಕಾಯಿ ಬೆಳೆಯನ್ನು ಬೆಳೆಯಲು ಮುಂದಾದರು.. ನಂತರ ತಮ್ಮ 1.5‌ ಎಕರೆ ಜಮೀನನ್ನು ವಿಭಾಗವಾಗಿ ಮಾಡಿಕೊಂಡು ವರ್ಷ ವಿಡೀ ಬೆಳೆಯನ್ನು ಬೆಳೆಯಲು ಮುಂದಾದರು.. ಕೊನೆಗೂ ಹಾಗಲಕಾಯಿ ಬೆಳೆಯನ್ನು ಬೆಳೆಯುವಲ್ಲಿ ಯಶಸ್ಸು ಸಾಧಿಸಿದ ಸತೀಶ್ ಅವರು ಋತುವಿನಲ್ಲಿ‌ 50 ಕ್ವೀಂಟಾಲ್ ಬೆಳೆಯನ್ನು ಬೆಳೆಯುತ್ತಿದ್ದರು.. ಕಳೆದ ವರ್ಷ 48 ಸಾವಿರಕ್ಕೆ ಒಂದು ಕ್ವೀಂಟಾಲ್ ಲೆಕ್ಕದಲ್ಲಿ ಮಾರಾಟ ಮಾಡಿದರು.. ಇನ್ನೂ ಋತುಮಾನದಲ್ಲಿ ದಿನಕ್ಕೆ 35‌ ಸಾವಿರದ ವರೆಗೂ ಹಣವನ್ನು ಗಳಿಸುತ್ತಿದ್ದಾರೆ ಸತೀಶ್ ಅವರು.. ಈ‌ ಹಾಗಲಕಾಯಿ ಹಲವಾರು ರೋಗಗಳಿಗೆ ರಾಮಾಬಾಣ ಇದ್ದಂತೆ..

[widget id=”custom_html-2″]

ಇತ್ತಿಚೀನ ದಿನಗಳಲ್ಲಿ ಜನರು ಹೆಚ್ಚಾಗಿ ಈ ಹಾಗಲಕಾಯಿಯನ್ನ ಸೇವನೆ ಮಾಡುತ್ತಿದ್ದಾರೆ ಅಲ್ಲದೆ ಈ‌ ಕಾಯಿಯನ್ನು ಹೆಚ್ಚಾಗಿ ಔಷಧಿಗಳಿಗೆ ಹೆಚ್ಚಾಗಿ ಬಳಸುತ್ತಾರೆ.. ಸಸಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಸತೀಶ್ ಅವರು ಅವುಗಳನ್ನು ಮಗುವಿನಂತೆ ನೋಡಿಕೊಳ್ಳುತ್ತಾರೆ ಹಾಗಾಗಿ ಉತ್ತಮ ಗುಣಮಟ್ಟದ ಇಳುವರಿ ಸಿಗುತ್ತದೆ.. ವ್ಯವಸ್ಥೆಯದಿಂದ ಉತ್ತಮ ಹಾಗು ಸಂತೋಷದ ಜೀವನ ಮಾಡುತ್ತಿರುವ ಸತೀಶ್ ಅವರು ವಯಸ್ಸಾದ ಪೋಷಕರನ್ನು‌ ನೋಡಿಕೊಳ್ಳುತ್ತಾ ಅರ್ಥಿಕವಾಗಿ ಮನೆಯಲ್ಲೇ ಸ್ಟೇಬಲ್ ಆಗಿದ್ದಾರೆ.. ವ್ಯವಸಾಯವನ್ನು ಇಷ್ಟಪಟ್ಟು ಅದರಲ್ಲಿ ಯಶಸ್ಸು ಸಾಧಿಸಿದ ಸತೀಶ್ ಅವರ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..