Advertisements

ರೈತನ ಟೆಕ್ನಿಕ್ ನೋಡಿ ಎದ್ವೊ ಬಿದ್ವೊ ಎಂದು ಓಡಿ ಹೋದ ಕೋತಿಗಳು.! ಕೋತಿಗಳನ್ನ ಓಡಿಸಲು ಈ ರೈತರು ಮಾಡಿದ ಐಡಿಯಾ ಏನು ಗೊತ್ತಾ.? ನೀವೇ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ ‌,‌ ಒಬ್ಬ ರೈತ ಬೆಳೆಯನ್ನು ತೆಗೆಯಬೇಕು ಎಂದರೆ ಹಲವಾರು ಅಂತಗಳಲ್ಲಿ ಹಾಗು ಹಲವಾರು ತಿಂಗಳುಗಳ ಕಾಲ ಕಷ್ಟ ಪಡಬೇಕು.. ಇನ್ನೇನು ಬೆಳೆ ಬಂದು ಅಂದಾಗ ಸಡನ್ನಾಗಿ ಬರುವ ಕೋತಿಗಳು ಕಾಡು ಪ್ರಾಣಿಗಳು ಹಕ್ಕಿಗಳು ಇನ್ನಿತರ ಪ್ರಾಣಿಗಳು ಬಂದು ಬೆಳೆಯನ್ನು ನಾ’ಶ ಮಾಡುತ್ತವೆ.. ತಾನು ಬೆಳೆದ‌ ಬೆಳೆಯಲ್ಲಿ ಪ್ರಾಣಿ ಗಳಿಗಾಗಿ ಒಂದಷ್ಟು ಕೋಡಲು ರೈತ ಹಿಂದೆ ಸರಿಯುವುದಿಲ್ಲ. ಆದರೆ ಗುಂಪು ಗುಂಪಾಗಿ ಬರುವ ಕೋತಿಗಳು ಕಾಡು ಪ್ರಾಣಿಗಳು ತಾನು‌ ತಿನ್ನುವುದಕ್ಕಿಂತ ಹತ್ತು ಪಟ್ಟು ಬೆಳೆಯನ್ನು ನಾಶ ಮಾಡಿ ಹೋಗುತ್ತವೆ. ಆಗಾಗಿ ಇದರಿಂದ ರೈತ ಪಾರಾಗಲು ಹಲವಾರು ದಾರಿಗಳನ್ನ ಹುಡುಕುತ್ತಾನೆ.. ಅದರಲ್ಲಿ ಈ ರೈತರು ಮಾಡಿದ ಹಲವಾರು ಐಡಿಯಾಗಳ ಬಗ್ಗೆ ಇಲ್ಲಿ ನೋಡೋಣ ಬನ್ನಿ.. ಹೌದು ಏಕಾಏಕಿ ರೈತರ ಜಮೀನಿಗೆ ಬಂದು ಬೆಳೆಯನ್ನು ನಾ’ಶ ಮಾಡುತ್ತಿದ್ದ ಕೋತ್ತಿಗಳ ಬಗ್ಗೆ ಕೋಪಗೊಂಡ ತಮಿಳು ನಾಡಿನ ಈರೈತ ಒಂದು ಉಪಾಯ ಮಾಡಿದ..

[widget id=”custom_html-2″]

Advertisements
Advertisements

ಅದರಂತೆ ಹತ್ತಿರದಲ್ಲಿ ಇದ್ದ ಟೌನ್ ಗೆ ಹೋಗಿ ಕಡಿಮೆ ಬೆಲೆಗೆ ಸಿಗುವ ಮೀನಿನ ಬಲೆಯಲ್ಲಿ ತಂದು ತನ್ನ ತೋಟದ ಸುತ್ತಲೂ ಕಟ್ಟಿದ‌. ಅಷ್ಟೇ ನಮ್ಮನ್ನು ಹಿಡಿಯಲು ಬಲೆ ಹಾಕಿದ್ದಾರೆ ಎಂದು ಭಾವಿಸಿದ ಕೋತಿಗಳು ಈ ರೈತನ ತೋಟದ ಕಡೆ ಬರೋದಿರಲ್ಲಿ ಕಣ್ಣೆತ್ತಿ ಸಹಾ ನೋಡಲಿಲ್ಲ.. ಕೋತಿಗಳಿಗೆ ಯಾವುದೇ ತೊಂದರೆ ನೀಡದೆ ಆದರ ವೀಕ್ನೆಸ್ ಅನ್ನು ಕಂಡುಹಿಡಿದ ಈ ರೈತ ಅದರಲ್ಲಿ ಯಶಸ್ಸು ಸಾಧಿಸಿದ.. ಒಂದು ಕೆಜಿ ಸೆಕೆಂಡ್ ಹ್ಯಾಂಡ್ ಮೀನಿನ ಬಲೆ ಕೇವಲ 80 ರೂಪಾಯಿ ಅಷ್ಟೇ, ಇನ್ನೂ ಕಡಿಮೆ ಬೆಲೆಯಲ್ಲಿ ಹೆಚ್ಚು ಪರಿಣಾಮಕಾರಿ ಐಡಿಯಾ ಆಯಿತು.. ಕಾಡಿನಿಂದ ಬಂದು ಬೆಳೆಯನ್ನು ನಾಶ ಮಾಡುತ್ತಿದ್ದ ಕೋತಿಗಳು, ಕರಡಿಗಳು, ಕಾಡು ಹಂದಿ, ಮೊಲಗಳ, ಅವಳಿ ನೋಡಿ ಬೇಸತ್ತಾ ಪುಣೆಯ ಈ ರೈತ ಕೂಡ ಹೊಸ ತಂತ್ರಜ್ಞಾನ ಬಳಸಿಕೊಂಡು ಪ್ರಾಣಿಗಳನ್ನು

[widget id=”custom_html-2″]

ನಿಯಂತ್ರಣ ಮಾಡಲು ಒಂದು ಐಡಿಯಾ ಮಾಡಿದ ಅದರಂತೆ ಮೋಷನ್ ಸೆನ್ಸರ್ ಅನ್ನು ತಂದು ತನ್ನ ತೋಟದ ನಾಲ್ಕು ಭಾಗಗಳಲ್ಲಿ ನಾಲ್ಕು ಮೋಷನ್ ಸೆನ್ಸರ್ ಅನ್ನು ಅಳವಡಿಸಿದ.. ಪ್ರಾಣಿಗಳು ತುಂಬಾ ದೂರದಿಂದಲೇ ಬರುತ್ತಿರುವಾಗಲೇ ಅದನ್ನು ಡಿಟೆಕ್ಟರ್ ಮಾಡುವ ಸೆನ್ಸರ್ ತಕ್ಷಣವೇ ಫ್ಲಾಶ್ ಲೈಟ್ ಆನ್ ಮಾಡುತ್ತದೆ.. ಹಾಗೆಯೇ ದೊಡ್ಡದಾಗಿ ಶಬ್ದ ಕೂಡ ಮಾಡುತ್ತದೆ. ಇದರಿಂದ ಭಯ ಪಡುವಂತ ಕೋತಿಗಳು ಕಾಡು ಪ್ರಾಣಿಗಳು ಎದ್ದು ಬಿದ್ದು ಓಡಿ ಹೋಗುತ್ತಿದ್ದವು ಮತ್ತೆ ಆ ತೋಟದ ಕಡೆ ಬರುವ ಧೈರ್ಯ ಕೂಡ ಮಾಡುತ್ತಿರಲಿಲ್ಲ.. ಈಗೆ ತಂತ್ರಜ್ಞಾನವನ್ನು ಬಳಸಿಕೊಂಡು ವಿಭಿನ್ನ ರೀತಿಯ ಮೋಷನ್ ಸೆನ್ಸರ್ ಡಿಟೆಕ್ಟರ್ ಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಕೆಲವೊಂದು ಮೋಷನ್ ಸೆನ್ಸರ್ ಫ್ಲಾಶ್‌ ಲೈಟ್ ಆನ್ ಮಾಡಿದರೆ ಕೆಲವೊಂದು ಶಬ್ದ ಮಾಡುತ್ತವೆ..

ಇನ್ನೂ ಕೆಲವು ಪ್ರಾಣಿಗಳು ಸೆನ್ಸರ್ ಪರದೆಯ ಬಳಗೆ ಬಂದ ತಕ್ಷಣವೇ ಆ ಪ್ರಾಣಿಗಳ ಮೇಲೆ ನೀರನ್ನು ಸ್ಪ್ರೇ ಮಾಡುತ್ತವೆ.. ತೋಟದ ಸುತ್ತಲೂ ಇಂತಹ ಮೋಷನ್ ಸೆನ್ಸರ್ ಅನ್ನು ಬಳಸುವುದರಿಂದ ಪ್ರಾಣಿಗಳನ್ನು ಅಷ್ಟೇ ಅಲ್ಲದೆ ಕಳ್ಳರನ್ನು ಕೂಡ ಭಯ ಪಡಿಸಬಹುದು.. ಆಗೆಯೇ ಕರೆಂಟ್ ಬೇಲಿ ಹಾಕಿ ಮೂಕ ಪ್ರಾಣಿಗಳ ಪ್ರಾಣ ತೆಗೆಯುವುದಕ್ಕಿಂತ ಸುಲಭವಾಗಿ ಪ್ರಾಣಿಗಳನ್ನು ಓಡಿಸುವ ಇಂತಹ ವಿಧಾನ ಬಳಸುವುದು ತುಂಬಾನೇ ಉಪಯುಕ್ತಕಾರಿ ಅಲ್ಲವೇ.. ಇದರ ಜೊತೆಗೆ ಪ್ರಾಣಿಗಳು ಹಾಗು ಕಳ್ಳರ ಚಿಂತೆ ಬಿಟ್ಟು ರೈತ ನೆಮ್ಮದಿಯಿಂದ ನಿದ್ರೆ ಮಾಡಬಹುದು.. ಕೋತಿಗಳನ್ನು ಓಡಿಸಲು ಈ ರೈತರು ಮಾಡಿದ ಈ ಸೂಪರ್ ಐಡಿಯಾ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..