Advertisements

ಕೃಷಿಯಲ್ಲಿ ಈ ರೈತ ಮಾಡಿದ ಐಡಿಯಾ ನೋಡಿ ಆಶ್ಚರ್ಯ ಪಟ್ಟ ಅಲ್ಲಿನ ಜನ.! ಕೃಷಿಗೆ ಈ ರೈತ ಮಾಡಿದಾದ್ರೂ ಏನು ಗೊತ್ತಾ.? ನೀವೇ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಕರ್ನಾಟಕದ ಸುತ್ತಮುತ್ತಲಿನ ರೈತರ ಭೂಮಿಗೆ ಬಂಗಾರ ಬೆಲೆ ಮಾತ್ರ ಅಲ್ಲ ಆದರಿಂದ ಬಂಗಾರದ ಬೆಳೆಯನ್ನು ಕೂಡ ಬೆಳೆಯಬಹುದು ಅನ್ನೋದಕ್ಕೆ ದೇವನಹಳ್ಳಿಯಲ್ಲಿ ವಾಸಿಸುವ ಈ ರೈತನೆ‌ ಸಾಕ್ಷಿ.. ಹೌದು ಚಿಕ್ಕಬಳ್ಳಾಪುರ, ದೇವನಹಳ್ಳಿ, ಕೋಲಾರದ, ಸತ್ತಮುತ್ತಲಿನ ಭೂಮಿಗಳು ಬಂಗಾರಕ್ಕಿಂತ ಹೆಚ್ಚಾಗಿ ಉತ್ತಮ ಬೆಳೆಯನ್ನು ಕೊಡುತ್ತಿದ್ದೆ, ಆದರೆ ತುಂಬಾ ಕಷ್ಟ ಪಟ್ಟು ಕೆಲಸ ಮಾಡುವ ಇಲ್ಲಿನ ರೈತರಿಗೆ ದೇವರ ಶಾಪವೇನೋ ಗೊತ್ತಿಲ್ಲ, ಇವರಿಗೆ ನೀರಿನ ಸೌಲಭ್ಯ ಮಾತ್ರ ಸಿಗುತ್ತಿಲ್ಲ.. ಪ್ರತಿನಿತ್ಯ ನೀರಿಗಾಗಿ ಕಷ್ಟ ಪಡುವ ರೈತರು, ಕೊಳವೆ ಬಾವಿಯಿಂದ. ಸ್ವಲ್ಪ ನೀರು ಸಿಕ್ಕರೆ ಸಾಕು, ಕಷ್ಟದ ಸಮಯದಲ್ಲಿ ಬಂಗಾರ ಸಿಕ್ಕಿದ ಹಾಗೆ ಸಂತೋಷ ಪಡುತ್ತಾರೆ.. ಅಲ್ಲದೇ ತಮ್ಮಗೆ ಸಿಕ್ಕಿ ನೀರಿನಲ್ಲಿ ಬಂಗಾರದಂತಹ ಬೆಳೆಯನ್ನು ಬೆಳೆಯುತ್ತಾರೆ..‌ ಆದರೆ ಬರಗಾಲ ಇಲ್ಲಿನ ರೈತರ ಮ‌ನೆ ಬಾಗಿಲಲ್ಲಿ ಬಂದಿರುತ್ತದೆ, ಈ ಬರಗಾಲದಲ್ಲಿ ರೈತರು ತುಂಬಾನೇ ಕಷ್ಟ ಪಡುತ್ತಾರೆ..

[widget id=”custom_html-2″]

Advertisements
Advertisements

ಆದರೆ ದೇವನಹಳ್ಳಿ ಈ ರೈತ ಮಾತ್ರ ತನ್ನ ಛಲದಿಂದ ಹಾಗು ಬುದ್ದಿವಂತಿಕ್ಕೆಯಿಂದ ಒಂದು ಉಪಾಯ ಮಾಡಿ‌ ಕೃಷಿಯಿಂದ ಒಳ್ಳೆಯ ಲಾಭವನ್ನು ಪಡೆಯುತ್ತಿದ್ದಾರೆ.. ಹೌದು ಸ್ನೇಹಿತರೆ ದೇವನಹಳ್ಳಿ ತಾಲ್ಲೂಕು ಕೆ ಹೊಸೂರು ಗ್ರಾಮದ ಮುನಿನಂಜಪ್ಪ ಎನ್ನುವವರು ನೀರಿಗಾಗಿ ತುಂಬಾ ಕಷ್ಟ ಪಡುತ್ತಿದ್ದರು, ಆದರೆ ಇವರು ಬೇರೆ‌ ರೈತರಿಗಿಂತ ಸ್ವಲ್ಪ ಬುದ್ಧಿವಂತಿಕೆಯಿಂದ ಆಲೋಚನೆ ಮಾಡಿ, ಒಂದು ಉಪಾಯ ಮಾಡಿದ ಈ ರೈತ, ತನ್ನ ಬಳಿ ಇರುವ ಅಲ್ಪ ಸಲ್ಪ ನೀರಿನಲ್ಲಿ.. ಒಂದು ವಿಭಿನ್ನ ರೀತಿಯ ಬೆಳೆ ಬೆಳೆಯಲು ಆಲೋಚನೆ ಮಾಡಿದರು.. ಅದೇ ರೀತಿ ತನ್ನ ಜಮೀನಿನಲ್ಲಿ, ತೈವಾನ್ ಮೂಲದ ಬ್ರೋಕಲಿ ಮತ್ತು ಜುಕ್ಚಿನ್ನಿ.. ಅಂದರೆ ಹಸಿರು ಹಾಗು ಹಳದಿ ಬಣ್ಣದ ಕುಂಬಳಕಾಯಿ ಬೆಳೆಯನ್ನು ತಮ್ಮ ಜಮೀನಿನಲ್ಲಿ ಬೆಳೆಯುತ್ತಿದ್ದರು.. ಹಾಗೆಯೇ ಈ ಬೆಳೆಯನ್ನು ಯಾವ ರೀತಿ ಬೆಳೆಯಬೇಕು ಎನ್ನುವ ಮಾಹಿತಿಯನ್ನು ತಿಳಿದುಕೊಂಡಿದ್ದರು..

[widget id=”custom_html-2″]

ಇನ್ನು ತೈವಾನ್ ಮೂಲದ ಬ್ರೋಕಲಿ ಬೆಳೆ ಮತ್ತು ಹಸಿರು ಹಳದಿ ಕುಂಬಳಕಾಯಿ ಬೆಳೆಗೆ, ಕೀಟಗಳು ಹಾಗು ಅದಕ್ಕೆ ಬರುವಂತ ರೋಗಗಳು ಕೂಡ ತೀರಾ ಕಡಿಮೆ, ಹಾಗೆಯೇ ಬೆಳೆಯ ರಕ್ಷಣೆಗಾಗಿ ಮತ್ತೊಂದು ಉಪಾಯ ಮಾಡಿದ ಮುನಿನಂಜಪ್ಪ.. ನೀರಿನಲ್ಲಿ ಬೆಲ್ಲವನ್ನು ಮಿಶ್ರಣ ಮಾಡಿ ಪ್ರತಿ ಮೂರು ದಿನಕ್ಕೆ ಒಮ್ಮೆ ಬೆಳೆಗೆ ಸಿಂಪಡಿಸುತ್ತಿದ್ದರು.. ಈ ರೀತಿ ಮಾಡುವುದರಿಂದ ಜೇನು ಹುಳುಗಳು ಹತ್ತಿ ಹೆಚ್ಚಾಗಿ ಬಂದು, ಪರಾಗಸ್ಪರ್ಶ ಮಾಡುವುದರಿಂದ ಬೆಳೆಯ ಇಳುವರಿ ಪ್ರಮಾಣ ಹೆಚ್ಚಾಗುತ್ತಿತ್ತು, ಅಲ್ಲದೇ ಕುಂಬಳಕಾಯಿಯಿಂದ ಪ್ರತಿ ಕೆಜಿಗೆ 50 ರಿಂದ 60 ರೂಪಾಯಿ ಹಣ ಸಿಗುತ್ತಿತ್ತು.. ಇನ್ನು ಬ್ರೋಕನ್ ಗೆ ಪ್ರತಿ ಕೆಜಿಗೆ 70 ರಿಂದ 80 ‌ರೂಪಾಯಿ ಸಿಗುತ್ತಿತ್ತು.. ಇನ್ನು ಈ ರೀತಿಯ ಬೆಳೆಗಳನ್ನು ವಿದೇಶದಲ್ಲಿ ರಪ್ತು ಮಾಡುವ ಹಲವಾರು ಖಾಸಗಿ ಕಂಪನಿಗಳು, ರೈತರ ಬಳಿ ಬಂದು ಬೆಳೆಯನ್ನು ತೂಕ ಹಾಕಿ ತೆಗೆದುಕೊಂಡು ಹೋಗುತ್ತಿದ್ದರು..

ಇದರಿಂದ ರೈತರಿಗೆ ಒಳ್ಳೆಯ ಬೆಲೆ ಹಾಗು ಲಾಭ ಮತ್ತು ಶೇಕಡಾ 40 ರಷ್ಟು ಹಣ ಉಳಿತಾಯವಾಗುತ್ತಿತ್ತು,‌ ಆದರೆ ಇದೆ ಬೆಳೆಯನ್ನು ಬೇರೆ ಕಡೆ ತೆಗೆದುಕೊಂಡು ಹೋಗಿ ಮಾರಾಟ ಮಾಡಬೇಕು ಎಂದರೆ, ತುಂಬಾನೇ ಕಷ್ಟ ಅಲ್ಲದೇ ಬೆಳೆಯಲ್ಲಿ ಬರುವ ಲಾಭವನ್ನು ಟ್ರಾನ್ಸ್ ಪೋರ್ಟ್ ಚಾರ್ಜ್, ಕಮಿಷನ್, ಈಗೆ ಅನೇಕ ರೀತಿಯ ಚಾರ್ಜ್ ಗೆ ಬಂದ ಹಣದಲ್ಲಿ 40 ರಷ್ಟು ಖರ್ಚಾಗುತ್ತಿತ್ತು..‌ ಆದರೆ ಸುಮಾರು 1.5 ಲಕ್ಷ ಬಂಡವಾಳ ಹಾಗಿರುವ ಮುನಿನಂಜಪ್ಪ, ಅದರಿಂದ ನಾಲ್ಕು ಪಟ್ಟು ಅಂದರೆ ಎಂಟು ಲಕ್ಷದ ಲಾಭದ ನಿರೀಕ್ಷೆಯಲ್ಲಿ ಇದ್ದಾರೆ, ಇನ್ನು ಇಂತಹ ಈ ಹೊಸ ಪ್ರಯತ್ನ ಮಾಡಿರುವ ನಂಜಪ್ಪ ಅವರ ಧೈರ್ಯವನ್ನು ಮೆಚ್ಚಲೇಬೇಕು.. ಸ್ನೇಹಿತರೆ ಕೃಷಿಯಲ್ಲಿ ಈ ರೀತಿ ಕೂಡ ಬೆಳೆಯಲ್ಲಿ ಲಾಭವನ್ನು ಪಡೆಯಬಹುದು ಎಂದು ತೋರಿಸಿ ಕೊಟ್ಟ ಮುನಿನಂಜಪ್ಪ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ…