Advertisements

ವೈರಲ್ ಆಯಿತು ಈ ರೈತನ ವಿದ್ಯುತ್ ಉತ್ಪಾದನೆಯ ಐಡಿಯಾ.! ಅಷ್ಟಕ್ಕೂ ಈ ರೈತ ತನ್ನ ಮನೆಗೆ ವಿದ್ಯುತ್ ಕನೆಕ್ಷನ್ ಮಾಡಿಕೊಂಡಿದ್ದು ಹೇಗೆ ಗೊತ್ತಾ? ನೀವೇ ನೋಡಿ..

Inspire

ನಮಸ್ತೆ ಸ್ನೇಹಿತರೆ, ಜೀವನದಲ್ಲಿ ಪರಿಶ್ರಮ ಆಲೋಚನೆ ವಿಭಿನ್ನ ಛಲ ಇದ್ದರೆ, ಇಡೀ ಪ್ರಪಂಚವನ್ನೇ ನಮ್ಮ ಕಡೆ ತಿರುಗಿ ನೋಡುವಂತೆ ಮಾಡಬಹುದು ಎಂದು ತೋರಿಸಿ ಕೊಟ್ಟಿದ್ದಾರೆ ಕರ್ನಾಟಕದ ಈ ರೈತ.. ಹೌದು ಸ್ನೇಹಿತರೆ ತನ್ನ ಮನೆಗೆ ವಿದ್ಯುತ್ ಪೂರೈಕೆ ಮಾಡಿಸಿಕೊಳ್ಳಲು ಅಲ್ಲಿನ ಅಧಿಕಾರಿಗಳು ಕರೆಂಟ್ ಕನೆಕ್ಷನ್ ನೀಡಲು ನಿರಾಕರಿಸಿದ ಕಾರಣ ವಿದ್ಯುತ್ ಇಲಾಖೆಗೆಯವರೆ ಆಶ್ಚರ್ಯ ಪಡುವಂತೆ ಮಾಡಿದ್ದಾರೆ ಈ ರೈತ, ತನಗೆ ಬೇಕಾದಷ್ಟು ವಿದ್ಯುತ್ ಅನ್ನು ತಾನೇ ತಾಯರು ಮಾಡಿಕೊಂಡು ಸ್ವಾವಲಂಬಿಯಾಗಿ ಬದುಕನ್ನು ಸಾಗಿಸುವ ಮೂಲಕ ಈಗ ಇಡೀ ಪ್ರಪಂಚದ ಜನರು ತನ್ನ ಕಡೆ ನೋಡುವಂತೆ ಮಾಡಿದ್ದಾರೆ, ಅಷ್ಟಕ್ಕೂ ಆ ರೈತ ಯಾರು! ಅವರು ವಿದ್ಯುತ್ ಗಾಗಿ ಮಾಡಿದ‌ ಉಪಾಯವಾದರು ಏನು ಗೊತ್ತಾ? ನೋಡೋಣ ಬನ್ನಿ..

Advertisements
Advertisements

ಗದಗ ಜಿಲ್ಲೆಯ ಸೋಮಪುರ ಹಳ್ಳಿಯವರಾದ ಈ ರೈತನ ಹೆಸರು ಸಿದ್ದಪ್ಪ, ತೀರಾ‌ ಕುಗ್ರಾಮದವರು, ಇಬರು ತಮ್ಮ ಮನೆಗೆ ವಿದ್ಯುತ್ ಪೂರೈಸಲು ಕೆಲವು ಕಾರಣಗಳಿಂದ ಬೆಸ್ಕಾಂ ಅವರು ನಿರಾಕರಿಸಿದರು, ನಂತರ ಸಿದ್ದಪ್ಪ ಇದನ್ನೇ ಚಾಲೆಂಜ್ ಹಾಗಿ ತೆಗೆದುಕೊಂಡು ಹೇಗಾದರು ಮಾಡಿ ತನ್ನ ಮನೆಗೆ ವಿದ್ಯುತ್ ಉತ್ಪಾದನೆ ಮಾಡಿ ಕತ್ತಲೆಯಗಿರುವ ತನ್ನ ಮನೆಗೆ ಬೆಳಕನ್ನು ಪುರೈಕೆ ಮಾಡಬೇಕು ಎಂದು ದೃಢ ನಿರ್ಧಾರ ಮಾಡಿದರು, ನಂತರ ಬೇರೆಯವರ ಬಳಿ ಇದರ ಬಗ್ಗೆ ಸಲಹೆಗಳನ್ನು ಪಡೆದು ಗಾಳಿ ಯಂತ್ರದ ಮೂಲಕ ವಿದ್ಯುತ್ ಉತ್ಪಾದನೆಗೆ ಮುದ್ದಾದ ಸಿದ್ದಪ್ಪ, ಇದಕ್ಕಾಗಿ ಹತ್ತು ಬಲ್ಪ್ ಹಾಗು‌ ಎರಡು ಟಿವಿ ಸೆಟ್ಂಗೆ ಬೇಕಾಗುವ‌ 60 ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ ಅದರಿಂದ ಯಶಸ್ಸು ಸಾಧಿಸಿದರು..

ಇದಾದ ನಂತರ ದೊಡ್ಡ ಮಟ್ಟದ ಉತ್ಪಾದನೆಗೆ ಮುದ್ದಾದ ಸಿದ್ದಪ್ಪನಿಗೆ ತನ್ನ ಮನೆಯ ಹತ್ತಿರ ಇರುವ ನಾಲೆಯನ್ನು ನೋಡಿ‌ ಒಂದು ಉಪಾಯ ಮಾಡಿದರು. ಅದೇನೆಂದರೆ ನಾಲೆಯಲ್ಲಿ ಬರುವ ರಭಸದ ನೀರಿನಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಮುದ್ದಾದರು, ಇನ್ನು ಈ ವಿದ್ಯುತ್ ಉತ್ಪಾದನೆಗೆ ಸುಮಾರು ಐದು ಸಾವಿರ ಖರ್ಚು ಮಾಡಿದ ಸಿದ್ದಪ್ಪ ಒಂದು ಯಂತ್ರವನ್ನು ತಯಾರಿಸಿ ಅದನ್ನು ನಾಲೆಯಲ್ಲಿ‌ ಜೋಡಿಸಿ ಅದರಿಂದ ಸುಮಾರು 150‌ ವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ಮಾಡುತ್ತಿದ್ದಾರೆ.. ಆದರೆ ನಾಲೆಯಲ್ಲಿ ಯಾವಾಗಲು ನೀರು‌‌ ಹರಿಯುವುದಿಲ್ಲ, ಯಾವಾಗಲೂ ನಾಲೆಯಲ್ಲಿ‌ ನೀರು ಹರಿದರೆ ತಮ್ಮ ಮನಗೆ ಅಲ್ಲದೇ ತನ್ನ ಊರಿಗೆ ಬೇಕಾದಷ್ಟು ವಿದ್ಯುತ್ ಅನ್ನು ಉತ್ಪಾದನೆ ಮಾಡಬಲ್ಲರು ಈ ಹಠವಾದಿ ಸಿದ್ದಪ್ಪ..

ಇನ್ನು ಸಿದ್ದಪ್ಪ ಅವರು ಮಾಡಿದ ಈ ಕೆಲಸವನ್ನು ನೋಡಿ ಬೇಶ್ ಎಂದಿರುವ ಭಾರತದ ಮಾಜಿ ಆಟಗಾರ‌ VVS ಲಕ್ಷ್ಮಣ, ಸಿದ್ದಪ್ಪ ಅವರು ಮಾಡಿದ ಅದ್ಭುತವಾದ ಕೆಲಸ ನೋಡಿ‌ ಹೆಮ್ಮೆಯಾಗುತ್ತಿದೆ‌ ಎಂದು ಟ್ವೀಟರ್ ನಲ್ಲಿ ‌ಸಿದ್ದಪ್ಪ ಅವರ‌ ಬಗ್ಗೆ ಟ್ವೀಟ್ ಮಾಡಿದ್ದಾರೆ..ಅಯೋ ಬೆಸ್ಕಾಂ ಅವರು‌ ಕರೆಂಟ್ ಕನೆಕ್ಷನ್ ಕೊಡಲಿಲ್ಲ ಸಿಮೇಎಣ್ಣೆ ದೀಪ ಇಟ್ಟುಕೊಂಡು ಜೀವನ ಸಾಗಿಸೋಣ ಎನ್ನುವ ಆಲೋಚನೆ ಮಾಡದೆ, ನಾನಾಗೆ ನಾನೇ ಸ್ವತಂತ್ರವಾಗಿ ಬದುಕಬಲ್ಲೇ ಎಂದು ತೋರಿಸಿ ಕೊಟ್ಟಿರುವ ಸಿದ್ದಪ್ಪ ಅವರ ಧೈರ್ಯವನ್ನು ಮೇಚಲೇ‌ ಬೇಕು.. ಸ್ನೇಹಿತರೆ ತನ್ಮ ಮನೆಗೆ ಕರೆಂಟ್ ಕನೆಕ್ಷನ್ ಗಾಗಿ ಸಿದ್ದಪ್ಪ ಮಾಡಿದ‌ ಉಪಾಯದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..