Advertisements

ಕನ್ನಡ ಖ್ಯಾತ ನಿರ್ದೇಶಕ ಕಾಶೀನಾಥ್ ಅವರ ಇಬ್ಬರು ಮಕ್ಕಳು ಹಾಗು ಅವರ ಅಳಿಯ ಹೇಗಿದ್ದಾರೆ ಗೊತ್ತಾ.! ಇವರ ಮಗ ಕೂಡ ತುಂಬಾನೇ ಫೇಮಸ್..

Cinema

ನಮಸ್ತೆ ಸ್ನೇಹಿತರೆ, ಕಾಶಿನಾಥ್ ಒಬ್ಬ ಭಾರತೀಯ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದು, ಪ್ರಧಾನವಾಗಿ ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದರು ಇವರು ಕನ್ನಡ ಹಿಂದಿ ಮತ್ತು ಮಲಯಾಳಂ ಚಲನಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ 80ರ ದಶಕದಲ್ಲಿ ಕಾಶೀನಾಥ್ ಅವರು ಸ್ಯಾಂಡಲ್‍ವುಡ್‍ನ ಜನಪ್ರಿಯ ನಟ ಹಾಗೂ ನಿರ್ದೇಶಕರಾಗಿ ಮಿಂಚಿದರು.. ಇನ್ನೂ ಸಿನಿಮಾವನ್ನು ಈ ರೀತಿ ಕೂಡ ಮಾಡಬಹುದು ಎಂದು ತೋರಿಸಿ ಕೊಟ್ಟವರು ನಟ ನಿರ್ಮಾಪಕ ಕಾಶೀನಾಥ್ ಅವರು.. ಕಾಶೀನಾಥ್ ಅವರ ಸಿನಿಮಾಗಳಲ್ಲಿ ಕೆಲವು ದ್ವಂದ್ವ ಅರ್ಧಗಳಿದ್ದರು ಅದು ಖಂಡಿತ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಆಗಿರುತ್ತದೆ.. 1951 ರಲ್ಲಿ‌ ಕುಂದಾಪುರ ಸಮೀಪದ ಕೋಟೇಶ್ವರದ ಬ್ರಾಹ್ಮಣ ವರ್ಗದ ಕುಟುಂಬದಲ್ಲಿ ಕಾಶೀನಾಥ್ ಅವರು ಜನಿಸಿದರು..

Advertisements
Advertisements

ಇವರು ಓದಿದ್ದು ಬೆಳೆದಿದ್ದು ಬೆಂಗಳೂರಿನಲ್ಲಿ ಬಾಲ್ಯದಿಂದಲೂ ಕಾಶೀನಾಥ್ ಅವರಿಗೆ ವಿಜ್ಞಾನಿ ಆಗಬೇಕು ಎನ್ನುವ ಕನಸಿತ್ತು ಆದರೆ ಕಲಾದೇವಿ‌ ಕಾಶೀನಾಥ್ ಅವರನ್ನು ತನ್ನಂತ ಸೆಳೆಯಿತು.. ಕಾಶೀನಾಥ್ ಕನ್ನಡ ಚಿತ್ರರಂಗದ ಅದ್ಬುತ ನಟ ನಿರ್ದೇಶಕ ಹಾಗು ನಿರ್ಮಾಪಕ ಕೂಡ ಹೌದು. ಕಾಶೀನಾಥ್ ಅವರು ಮೊದಲು ನಿರ್ದೇಶನ ಮಾಡಿದ ಸಿನಿಮಾ ಅಪರೂಪದ ಅತಿಥಿಗಳು ಎನ್ನುವ ಸಿನಿಮಾ ಈ ಚಿತ್ರ 1976 ರಲ್ಲಿ ತೆರೆಕಂಡಿತು ಈ ಚಿತ್ರದ ಮೂಲಕ ಇವರ ಸಿನಿ ಜರ್ನಿ ಪ್ರಾರಂಭವಾಯಿತು ತಮ್ಮದೇ ರೀತಿಯ ಹೊಸ ಅಲೆಯ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಕೊಟ್ಟರು..

ಇವರು ನಿರ್ದೇಶನ ಮಾಡಿ ಅಪರಿಚಿತ, ಅನುಭವ, ‌ಅವನೇ ನನ್ನ ಗಂಡ, ಹಲವಾರು ಸಿನಿಮಾಗಳು ಸ್ಯಾಂಡಲ್ವುಡ್ ನಲ್ಲಿ ಒಂದು ಹೊಸ ದಾಖಲೆಯನ್ನು ಬರೆದವು ಸುಧಾ ರಾಣಿ ಅವರ ಜೊತೆ ನಟಿಸಿದ ಅವನೇ ನನ್ನ ಗಂಡ ಚಿತ್ರ 1989ರಲ್ಲಿ ಹಲವು ಚಿತ್ರ ಮಂದಿರಗಳಲ್ಲಿ ವರ್ಷಗಳ ಕಾಲ ಪ್ರದರ್ಶನ ಕೊಂಡಿತು ಕಡಿಮೆ ಬಜೆಟ್ ನಲ್ಲಿ ಕಾಶೀನಾಥ್ ಅವರು ನಿರ್ಮಾಣ ಮಾಡುತ್ತಿದ್ದ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಗೆಲ್ಲುತ್ತಿದ್ದರು ಎನ್ನುವ ಮಾತಿತ್ತು.. ಇನ್ನೂ 2017ರಲ್ಲಿ ದ್ವಾರಕೀಶ್ ನಿರ್ಮಾಣದ ತರುಣ್ ಸುಧೀರ್ ನಿರ್ದೇಶನದ ಚೌಕ ಸಿನಿಮಾ ಕಾಶೀನಾಥ್ ಅವರ ಕೊನೆಯ ಚಿತ್ರವಾಗಿತ್ತು..ಕಾಶೀನಾಥ್ ಅವರು ತಮ್ಮ ಸಿನಿ ಪಯಣದಲ್ಲಿ 43 ಚಿತ್ರಗಳಲ್ಲಿ ನಟಿಸಿದ್ದಾರೆ 15 ಚಿತ್ರಗಳನ್ನು‌ ನಿರ್ದೇಶನ ಮಾಡಿದ್ದಾರೆ 11 ಚಿತ್ರಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ..

ನಟ ಉಪೇಂದ್ರ, ಸಂಗೀತ ನಿರ್ದೇಶನ ವಿ ಮನೋಹರ್, ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ, ನಟಿ ಅಭಿನಯ, ಉಮಾಶ್ರೀ ಸೇರಿದಂತೆ ಹಲವು ಕಲಾವಿದರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಹಿರಿಮೆ ಕಾಶೀನಾಥ್ ಅವರದ್ದು.. ಇನ್ನೂ ಕಾಶೀನಾಥ್ ಅವರು ಚಂದ್ರಪ್ರಭ ಎನ್ನುವವರನ್ನು ಮದುವೆ ಆಗಿದ್ದು ಮಗ ಅಲೋಕ್ ಕಾಶಿನಾಥ್ ಹಾಗು ಮಗಳು ಅಮೃತವರ್ಷಿಣಿ ಎಂಬ ಇಬ್ಬರು ಮಕ್ಕಳಿದ್ದಾರೆ.. ಮಗ ಅಲೋಕ್ ಕಾಶಿನಾಥ್ ಅವರು ಕನ್ನಡ ಚಿತ್ರ ಒಂದರಲ್ಲಿ ನಾಯಕರಾಗಿ ನಟನಾಗಿ ಕಾಣಿಸಿಕೊಂಡಿದ್ದಾರೆ‌. ಇನ್ನೂ ಕಾಶೀನಾಥ್ ಅವರು 2018 ಜನವರಿ 18 ರಂದು ವಿ’ಧಿವಶರಾದರು.. ಸ್ನೇಹಿತರೆ ನಟ‌ ಕಾಶೀನಾಥ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..