Advertisements

10 ವರ್ಷ ಪೋಲಿಸ್ ಸ್ಟೇಷನ್ ಮುಂದೆ ಜ್ಯೂಸ್ ಮಾರಟ ಮಾಡುತ್ತಿದ್ದ ಈ ಹುಡುಗಿ ಈಗ ಅದೇ ಪೋಲಿಸ್ ಠಾಣೆಯಲ್ಲಿ ಸೆಲ್ಯೂಟ್ ಮಾಡುತ್ತಿದ್ದಾರೆ..

Kannada Mahiti

ನಮಸ್ತೆ ಸ್ನೇಹಿತರೆ, ಮಗನೊಂದಿಗೆ ನಿಂಬೂ ಪಾನಿ ಮಾರುತ್ತಿದ್ದ ಮಹಿಳೆ ಆ್ಯನಿ ಶಿವಾ ಇಂದು ಹೆಮ್ಮೆಯ ಪೊಲೀಸ್ ಅಧಿಕಾರಿ ಹೌದು 18 ವರ್ಷ ವಯಸ್ಸಿನ ಯುವತಿಗೆ ನಿಂಬೂಪಾನಿ ಮಾರಟ ಮಾಡಿ ಜೀವನ ನಿರ್ವಹಣೆ ಮಾಡುವ ಅನಿವಾರ್ಯತೆ ಜೀವನದಲ್ಲಿ ಎದುರಾಗಿತ್ತು ಆದರೆ ಆಕೆ ತನ್ನ ಜೀವನವನ್ನ ಅಷ್ಟಕ್ಕೇ ಸೀಮಿತ ಗೊಳಿಸಲಿಲ್ಲ ಮುಂದೆ ಮುಂದೆ ದೊಡ್ಡ ಸಾಹಸಕ್ಕೆ ಮುಂದಾಗಿ ಜೀವನದಲ್ಲಿ ಮುಂದೆ ಬರುವ ಸಮಯದಲ್ಲಿ ಆಕೆಗೆ 31 ವರ್ಷ ವಯಸ್ಸಾಗಿತ್ತು ಅಷ್ಟರಲ್ಲಿ ಆಕೆ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಆಗಿದ್ದರು ಆ ಸಾಹಸಿ ಯವತಿಗೆ ಪೊಲಿಸ್ ಇಲಾಖೆಯಿಂದ ಈಗ ಸೆಲ್ಯೂಟ್.. ಹೌದು 18‌ ವರ್ಷದ ಹಿಂದೆ ಯಾವ‌ ಪೋಲಿಸ್ ಠಾಣೆ ಎದುರಾಗಿ ಆಕೆ ದಿಕ್ಕು ತೋಚದೆ ಏಕಾಂಗಿಯಾಗಿ ನಿಂತಿದ್ದಳೋ ಈಗ ಆದೆ ಠಾಣೆಯಲ್ಲಿ ಆಕೆಗೆ ಎಲ್ಲೆಡೆಯಿಂದ ಸೆಲ್ಯೂಟ್.. ನೆರೆಯ ಕೇರಳದಲ್ಲಿ ತಿರುವನಂತಪುರಂದ ವಾರ್ಕಳ ಪೋಲಿಸ್ ಠಾಣೆಯಲ್ಲಿ

Advertisements
Advertisements

ಈಗ‌ ಸಬ್ ಇನ್ಸ್ಪೆಕ್ಟರ್ ಆಗಿರುವ ಆ್ಯನಿಶಿವಾ ಮಹಿಳೆಯ ಜೀವನದ ಕಥೆ ಇದು 18‌ ವರ್ಷ ವಯಸ್ಸಿನಲ್ಲಿ ಇದ್ದಾಗ ಅವಳ ಕೈಗೊಂದು ಮಗುವನ್ನು ಕೊಟ್ಟು ಗಂಡನಾದವನ್ನು ಆಕೆಯನ್ನು ನಡ ಬೀದಿಯಲ್ಲಿ ಬಿಟ್ಟು ಹೊರಟು ಹೋಗಿದ್ದ ಮಗನನ್ನು ಮಡಿಲಲ್ಲಿ ಹಿಡಿದು ಕಾಣದ ಗುರಿಯ ಕಡೆ ಹೆಜ್ಜೆ ಹಾಕುತ್ತಾ 12 ವರ್ಷ ಸಾಗಿ ಜಂದ ಆ್ಯನಿಶಿವಾಳ ಸಾಧನೆ ಇತರರಿಗೂ ಪ್ರೇರಣಾದಾಯಕ ಆಗಿದ್ದಾರೆ.. 12 ವರ್ಷಗಳ ಹಿಂದೆ ಅಂದು ವಾರ್ಕಳ ಶಿವಗಿರಿ ಆಶ್ರಮದಲ್ಲಿ ನಿಂಬೂ ಪಾನಿ, ಐಸ್​ಕ್ರೀಮ್​, ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಶಿವಾಗೆ ಒಬ್ಬರು ದಾರಿ ತೋರಿದರು.. ಆಗ ಆಕೆಗೆ ಒಂದಷ್ಟು ಹಣದ ಸಹಾಯವನ್ನ ಮಾಡಿದರು. ನಂತರ ಆಕೆಗೆ ಒಂದಷ್ಟು ಹಣ ನೀಡುತ್ತಾ..

ಶಿವಾನಿ ನೀನು ಪೊಲೀಸ್​ ಸಬ್​ ಇನ್ಸ್​​ಪೆಕ್ಟರ್ ಪರೀಕ್ಷೆ ಬರೆಯಬೇಕಮ್ಮಾ ಎಂದು ಹೇಳಿದರು. ನಿನ್ನ ಜೀವನವನ್ನು ದಿಟ್ಟವಾಗಿ ಎದುರಿಸಬೇಕು ಎಂದ್ರೆ ನೀನೊಬ್ಬ ದಕ್ಷ ಪೊಲೀಸ್​ ಅಧಿಕಾರಿ ಆಗಬೇಕಮ್ಮಾ ಎಂದಿದ್ದರು! ಅಷ್ಟೇ ಆಗ ಶಿವಾ ಹಿದಿರುಗಿ ನೋಡಲಿಲ್ಲ.. ಏಕೆಂದ್ರೆ ಎದುರಿಗೆ ಗುರು ಮತ್ತು ಗುರಿ ಸ್ಪಷ್ಟವಾಗಿ ಕಾಣುತ್ತಿತ್ತು. ಆದರೂ ಶಿವಾಗೆ IPS ಆಗಬೇಕು ಎಂಬ ಆಸೆಯಿತ್ತಂತೆ. ಆದರೆ ಆಕೆಯ ಜೀವನ ಈ ಸಾಧನೆಗೆ ತೃಪ್ತಿಪಡಿಸಿದೆ. ಸ್ನೇಹಿತರೆ ತನ್ನ ಮಗನೊಂದಿಗೆ ನಿಂಬೂ ಪಾನಿ ಮಾರುತ್ತಿದ್ದ ಮಹಿಳೆ ಆ್ಯನಿ ಶಿವಾ, ಇಂದು ಹೆಮ್ಮೆಯ ಪೊಲೀಸ್ ಅಧಿಕಾರಿ!