Advertisements

ಬಾವಿ ತೋಡಿಲ್ಲ ಬೋರ್ವೆಲ್ ಕೊರೆದಿಲ್ಲ ಆದರೂ ಬಂಗಾರದ ಬೆಳೆ ಬೆಳೆದ ಕೋಲಾರದ ಯುವ ರೈತ.! ನೀರಿಗಾಗಿ ಈ‌ ರೈತ ಮಾಡಿದ ಮಾಸ್ಟರ್ ಪ್ಲಾನ್ ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಕ’ಸದಿಂದ ರಸ ತೆಗೆಯಬಹುದು ಎನ್ನುವ ಗಾದೆ ಮಾತಿದೆ.. ಆದರೆ ಈ ರೈತ ಅನುಪಯುಕ್ತ ಕೊ’ಳಚೆ ನೀರನ್ನು ಬಳಕೆ ಮಾಡಿಕೊಂಡು ಬಂಗಾರದಂತಹ ಬೆಳೆಯನ್ನ ಬೆಳೆದು ಅದರಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ.. ಆದರೆ ಅದು ಹೇಗೆ ಸಾಧ್ಯ ಅಂತ ಯೋಚಿಸುತ್ತಿರಬಹುದು, ಹೌದು ಖಂಡಿತ ನೀವು ಕೂಡ ಶಾಕ್ ಆಗ್ತೀರಾ ಕಾರಣ ಎನೆಂದರೆ ಈ ರೈತ ಅ’ನುಪಯುಕ್ತ ನೀರಿನಿಂದ ಬೆಳೆಯುತ್ತಿರುವ ಬೆಳೆ ಅಂತಿಂಥ ಬೆಳೆ ಅಲ್ಲ.. ಹೌದು ಸ್ನೇಹಿತರೆ ಈ ರೈತನ ಹೆಸರು ಅಂಬರೀಶ್, ಇವರು ಕೋಲಾರದ ಬಂಗಾರಪೇಟೆ ತಾಲೂಕಿನ ಜೋತೇನಹಳ್ಳಿ ಗ್ರಾಮದ ಯುವ ರೈತ.. ಹೇಳಿ ಕೇಳಿ ಕೋಲಾರ ಬರದ ನಾಡು ಮಳೆಯನ್ನು ನಂಬಿ ಬೆಳೆಯನ್ನ ಬೆಳೆಯುವುದು ತುಂಬಾ ಕಷ್ಟ.. ಅಲ್ಲಿ‌ ಅಂತರ್ಜಾಲ ಕೂಡ ಪಾತಾಳ ಸೇರಿಕೊಂಡಿದೆ ನದಿ‌ ಮೂಲ ಕೂಡ ಇಲ್ಲವೇ ಇಲ್ಲ ಅದರೂ ಅಲ್ಲಿನ ರೈತರು ತಮ್ಮ ದೃಢ

Advertisements
Advertisements

ನಿರ್ಧಾರ ಮತ್ತು ಛಲವನ್ನು ಬಿಡದೆ ಬಿಸಿಲಿನ ನಾಡಿನಲ್ಲಿ ಮುತ್ತಿನಂತಹ ಬೆಳೆಯನ್ನ ಬೆಳೆದು ನಮ್ಮ‌ ರಾಜ್ಯದ ರೈತರಿಗೆ ಮಾದರಿಯಾಗಿ ನಿಂತಿದ್ದಾರೆ.. ಹೌದು ಕೃಷಿಗೆ ನೀರಿನ ವ್ಯವಸ್ಥೆ ಇಲ್ಲದೆ ಬೇಸತ್ತ ಯುವ ರೈತ ಅಂಬರೀಶ್ ನೀರಿಗಾಗಿ ಒಂದು ಮಾಸ್ಟರ್ ಪ್ಲಾನ್ ಮಾಡಿದ್ದನು.. ಇದಕ್ಕಾಗಿ ಇವರು ಯಾವುದೇ ಕೊಳವೆ ಬಾವಿಯನ್ನು ಕೂಡ ಕೊರಿಸಲಿಲ್ಲ, ಮತ್ತು ಬಾವಿಯನ್ನು ಕೂಡ ತೋಡಿಲ್ಲ ಇದರ ಬದಲಿಗೆ ಕೃಷಿಗೆ ಬಳಸುತ್ತಿರುವುದು ತಮ್ಮ ಊರಿನ ಕೊ’ಳಚೆ ನೀರು ಅಂದ್ರ ಚ’_ರಂಡಿ ನೀರು.. ಹೌದು ಗ್ರಾಮ ಪಂಚಾಯತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಅಂಬರೀಶ್ ಅವರು ಕೆಲಸವನ್ನ ಮಾಡುತ್ತಿದ್ದರು ಆದರೆ ತಾತ್ಕಾಲಿಕ ಕೆಲಸವನ್ನ ನಂಬಿಕೊಂಡಿದ್ರೆ ಬದುಕು ಕಟ್ಟಿಕೊಳ್ಳುವುದು ತುಂಬಾ ಕಷ್ಟ ಅಂತ ತಮ್ಮ ಬಳಿ ಇದ್ದ ಅರ್ಥ ಎಕರೆ ಭೂಮಿಯಲ್ಲಿ ಶ್ರೀಗಂಧ ಬೆಳೆಯನ್ನು ಬೆಳೆಯಲು ತನ್ನ ಊರಿನಿಂದ ಬರುವ ಕೊ’ಳಚೆ ನೀರನ್ನು ಒಂದು ಗುಂಡಿ ಮಾಡಿ ಅದರಲ್ಲಿ

ಕೊ’ಳಚೆ ನೀರಿನ ಸಂಗ್ರಹಣೆ ಮಾಡುತ್ತಿದ್ದರು.. ‌ಈಗ ಅದೇ ನೀರನ್ನು ಬಳಕೆ ಮಾಡಿಕೊಂಡು ತಮ್ಮ ಜಮೀನಿನಲ್ಲಿ ಬಂಗಾರದಂತ ಬೆಳಯನ್ನ ಬೆಳೆಯುತ್ತಿದ್ದಾರೆ. ಇನ್ನೂ ತೋಟಕ್ಕೆ ಡ್ರಿಪ್ ಮೂಲಕ ಕೊ’ಳಚೆ ನೀರನ್ನು ಬಿಡುತ್ತಾ ತಮ್ಮ ಅರ್ಥ ಎಕರೆ ಜಮೀನಿನಲ್ಲಿ ಕರಿಬೇವು, ಶ್ರೀಗಂಧ ಸೇರಿದಂತೆ ಸುಮಾರು 600 ಜಾತಿಯ ವಿವಿಧ ಸಸಿಯನ್ನ ತಮ್ಮ ತೋಟದಲ್ಲಿ ಬೆಳೆಸುತ್ತಿದ್ದಾರೆ.. ಅಷ್ಟೇ ಅಲ್ಲದೆ 60 ಹೆಚ್ಚು ನಾಟಿ ಕೋಳಿಗಳನ್ನ ಕೂಡ ಸಾಗಣೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕೋಲಾರದಂತಹ ಬರದ ಜಿಲ್ಲೆಯಲ್ಲಿ ಹೊಸ ಹೊಸ ಐಡಿಯಾದ ಮೂಲಕ ಕೃಷಿಯಲ್ಲಿ ಯಶಸ್ಸು ಕಾಣುತ್ತಿರುವ ಇಂತಹ ರೈತರು ಅದೆಷ್ಟೋ ಯುವ‌ ರೈತರಿಗೆ ಮಾದರಿ ಅಂತ ತಪ್ಪಾಗಲಾರದು.. ಸ್ನೇಹಿತರೆ ನೀರಿಗಾಗಿ ಈ ರೈತ ಮಾಡಿದ ಮಾಸ್ಟರ್ ಪ್ಲಾನ್ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..