Advertisements

ಲಕ್ಷಣ ಧಾರಾವಾಹಿಯ ನಟಿ ನಕ್ಷತ್ರ ಅವರು ನಿಜ ಜೀವನದಲ್ಲಿ ಹೇಗಿದ್ದಾರೆ! ಇವರ ವಯಸ್ಸು ಎಷ್ಟು ಅಂತ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಸೀರಿಯಲ್ ಗಳು ಜನರ ಮನಸ್ಸನ್ನ ಗೆಲ್ಲುವಲ್ಲಿ ತುಂಬಾನೇ ಯಶಸ್ಸು ಕಾಣುತ್ತಿದೆ ಅಂತ ಹೇಳಿದ್ರು ತಪ್ಪಾಗಲಾರದು.. ಅದರಲ್ಲೂ ಕಲಸ್ಸ್ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಪ್ರಾರಂಭವಾಗಿರುವ ಲಕ್ಷಣ ಹೆಸರಿನ ಈ ಸೀರಿಯಲ್ ಪ್ರಾರಂಭದ ದಿನಗಳಲ್ಲಿ ಒಳ್ಳೆಯ ಟಿ.ಆರ್.ಪಿ‌‌ ಪಡೆಯುತ್ತಿದ್ದು ಈ‌‌‌ ಸೀರಿಯಲ್ ನಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ನಕ್ಷತ್ರ ಅವರು ಸೀರಿಯಲ್ ಪ್ರಾರಂಭದಲ್ಲಿ ಹೆಚ್ಚಿನ ಅಭಿಮಾನಿ ಬಳಗವನ್ನ ಸೃಷ್ಟಿ ಮಾಡಿಕೊಂಡಿದ್ದು ಇರುವ ಸೀರಿಯಲ್ ನಲ್ಲಿ ಮಾಡುವ ನಟನೆಗೆ ಎಲ್ಲರೂ ಫಿದಾ ಆಗಿದ್ದಾರೆ.. ಹಾಗಾದರೆ ನಟಿ ಲಕ್ಷಣ ಅವರು ನಿಜ ಜೀವನದಲ್ಲಿ ಹೇಗಿದ್ದಾರೆ ಅವರ ನಿಜವಾದ ಹೆಸರು ಹಾಗು ಇವರ ವಯಸ್ಸು ಎಷ್ಟು ಅಂತ ನೋಡೋಣ ಬನ್ನಿ.. ಜನಪ್ರಿಯ ಸೀರಿಯಲ್ ನ ಖ್ಯಾತ ನಟ ಜಗನ್ ಅವರ ನಿರ್ಮಾಣದಲ್ಲಿ

Advertisements
Advertisements

ಈ ಸೀರಿಯಲ್ ಮೂಡಿಬರುತ್ತಿದ್ದು ಸೀರಿಯಲ್ ಪ್ರಾರಂಭದಲ್ಲೇ ಸೀರಿಯಲ್‌ ಪ್ರೀಯರಲ್ಲಿ ಒಂದು ರೀತಿ ಕ್ರೆಸ್ ಹುಟ್ಟಿಸಿದೆ. ಇನ್ನೂ ಲಕ್ಷಣ ಸೀರಿಯಲ್ ನ ಪ್ರಮುಖ ಪಾತ್ರದಾರಿಯಾಗಿರುವ ನಟಿ ನಕ್ಷತ್ರ ಅವರ ‌ನಿಜ ಜೀವನದ ಬಗ್ಗೆ ತಿಳಿಯುವುದಾದರೆ ನಕ್ಷತ್ರ ಪಾತ್ರದಾರಿಯ ನಟಿಯ ನಿಜವಾದ ಹೆಸರು ವಿಜಯ ಲಕ್ಷ್ಮೀ ಕೃಷ್ಣನ್ ನಿಕ್ ನೇಮ್ ವಿಜಿ, ವಿಜಯ ಲಕ್ಷ್ಮೀ ಅವರು ಜೂನ್ 06/1997 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು, ಇವರಿಗೆ ಇನ್ನೂ 24 ವರ್ಷ ವಯಸ್ಸು, ಈಗಲೂ ಕೂಡ ಇವರು ಬೆಂಗಳೂರಿನಲ್ಲೇ ವಾಸಿಸುತ್ತಿದ್ದಾರೆ.. ಇವರು ಪದವಿ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ, ವೃತ್ತಿ ಜೀವನ ನಟಿ ಮತ್ತು ಮಾಡೆಲಿಂಗ್.. ಇನ್ನೂ ನಟಿ ವಿಜಯ್ ಅವರು ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಕ್ಷೇತ್ರದಲ್ಲಿ‌ ಹೆಚ್ಚು ಒಲವನ್ನ ಹೊಂದಿದ್ದರೂ ಕೂಡ ಇವರಿಗೆ ನಟನೆ ಹೊಸದು. ಆದರೂ ಕೂಡ‌ ಲಕ್ಷಣ ಸೀರಿಯಲ್ ನಲ್ಲಿ ನಕ್ಷತ್ರ ಪಾತ್ರವನ್ನ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿ‌ ಈಗ ಎಲ್ಲರ ಮನೆ ಮಾತಾಗಿರುವ ನಟಿ ವಿಜಯ ಅವರ ನಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..