Advertisements

ವಿಷ್ಣುದೇವರು ಲಕ್ಷ್ಮೀ ದೇವಿಗೆ ತೋಟದ ಕೆಲಸ ಮಾಡುವ ಶಿಕ್ಷೆ ನೀಡಿದ್ಯಾಕೆ.? ಲಕ್ಷ್ಮೀದೇವಿ ಯಾರ ಮನೆಯಲ್ಲಿ ಕೆಲಸಕ್ಕೆ ಇದ್ದರು ಗೊತ್ತಾ..!

Adhyatma

ಸ್ನೇಹಿತರೆ ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆ ಮಲಗಿಕೊಂಡಿದ್ದ ವಿಷ್ಣುವಿಗೆ ಒಮ್ಮೆ ತುಂಬಾನೇ ಆಯಾಸವಾಗುತ್ತದೆ.. ಭೂಮಿಯ ಸ್ಥಿತಿಗತಿ ಕಂಡು ತುಂಬಾ ದಿನವಾಗಿರುತ್ತೆ. ಹೀಗಾಗಿ ವಿಷ್ಣು ಭೂಮಿಗೆ ಪಯಣಿಸುವ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಾನೆ.. ಇದನ್ನು ಕಂಡು ಲಕ್ಷ್ಮೀ ದೇವಿ ಸ್ವಾಮಿ ಬೆಳಗಿನ ಜಾವ ಯಾವಕಡೆ ಹೊರಟಿದ್ದೀರಿ ಅಂತ ಕೇಳಿದಾಗ ಲಕ್ಷ್ಮೀ ಮಾತಿಗೆ ಉತ್ತರಿಸಿದ ವಿಷ್ಣು ನಾನು ಭೂಮಿಯ ಸುತ್ತಾಟಕ್ಕೆ ಹೋಗ್ತಾಯಿದ್ದೀನಿ ಅಂತಾರೆ..

Advertisements
Advertisements

ಇದರಿಂದ ಸಂತೋಷಗೊಂಡ ಲಕ್ಷ್ಮೀ ಹಾಗಾದರೆ ನಾನು ನಿಮ್ಮ ಜೊತೆ ಬರುತ್ತೇನೆ ಅಂತ ಕೇಳ್ತಾರೆ ಆಗ ಸ್ವಲ್ಪ ಯೋಚನೆ ಮಾಡಿದ ವಿಷ್ಣು ಹೇ ಲಕ್ಷ್ಮಿ ನೀನು ಭೂಮಿಯ ಸುತ್ತಾಟಕ್ಕೆ ನನ್ನೊಂದಿಗೆ ಬರಬಹುದು ಆದರೆ ಒಂದು ಶರತ್ತಿನ ಮೇಲೆ ಮಾತ್ರ.. ಹಾಗ ದೇವಿ ಲಕ್ಷ್ಮೀ ಯೋಚನೆ ಮಾಡಿ ಒಂದು ಶರತ್ತಿಗೆ ಒಪ್ಪಿಕೊಂಡರೆ ವಿಷ್ಣು ಜೊತೆ ಹೋಗುವ ಅವಕಾಶ ಸಿಗುತ್ತೆ ಅಂದ್ರೆ ಮಾತೆ ಲಕ್ಷ್ಮೀ ಬೇಡ ಅಂತಾರ! ನಿಮ್ಮ ಜೊತೆ ಬರೋದಕ್ಕೆ ಅವಕಾಶ ಸಿಕ್ರೆ ಯಾವ ಷರತ್ತು ಆದರೂ ಪರವಾಗಿಲ್ಲ ಅಂತಾರೆ.. ತನ್ನ ಷರತ್ತಿನ ಬಗ್ಗೆ ತಿಳಿದ ವಿಷ್ಣು ನೀನು ನನ್ನೊಂದಿಗೆ ಭೂಮಿಗೆ ಬಂದರೆ ಉತ್ತರ ದಿಕ್ಕಿನ ಕಡೆಗೆ ನೋಡಬಾರದು ಅದೇ ನನ್ನ ಷರತ್ತು ಎಂದು ಹೇಳುತ್ತಾರೆ.. ಅದಕ್ಕೆ ಲಕ್ಷ್ಮೀದೇವಿ ಆಯ್ತು ಬಿಡಿ ನಾನು ಉತ್ತರ ದಿಕ್ಕಿನ ಕಡೆ ನೋಡೋದಿಲ್ಲ ಎಂದು ಲಕ್ಷ್ಮೀ ದೇವಿ ಷರತ್ತು ಒಪ್ಪಿಕೊಂಡ ಬಳಿಕ ಇಬ್ಬರೂ ಭೂಮಿ ಕಡೆ ಹೊರಡುತ್ತಾರೆ ಭೂಮಿಯಲ್ಲಿ ಸೂರ್ಯೋದಯವಾಗಿತ್ತು ಮಳೆ ಬಂದಿದ್ದರಿಂದ ಸುಂದರವಾದ ಹಚ್ಚಹಸಿರಿನ ವಾತಾವರಣ ನಿರ್ಮಾಣವಾಗಿತ್ತು..

ಭೂಮಿಯ ಸೌಂದರ್ಯ ನೋಡಿ ಲಕ್ಷ್ಮೀದೇವಿಗೆ ತುಂಬಾನೇ ಸಂತೋಷ ಆಗುತ್ತೆ ಸುತ್ತಮುತ್ತ ನೋಡೋಕೆ ಶುರು ಮಾಡ್ತಾರೆ ಭೂಮಿಯ ವಾತಾವರಣ ನೋಡಿ ವಿಷ್ಣು ಹಾಕಿದ್ದ ಷರತ್ತನ್ನು ಮರೆತು ಹೋಗುತ್ತಾರೆ.. ಅಲ್ಲದೆ ತಮಗೆ ಗೊತ್ತಿಲ್ಲದಂತೆ ಉತ್ತರ ದಿಕ್ಕಿನ ಕಡೆಗೆ ನೋಡಲು ಶುರು ಮಾಡಿದರು ಹೀಗೆ ತೋಟವನ್ನ ನೋಡುತ್ತಿದ್ದ ಲಕ್ಷ್ಮೀ ದೇವಿ ಕಣ್ಣಿಗೆ ಒಂದು ಸುಂದರವಾದ ಹೂವಿನ ತೋಟ ಕಾಣಿಸುತ್ತದೆ ಅಲ್ಲಿಂದ ಅದ್ಭುತವಾದ ಸುಗಂಧ ಕೂಡ ಬರ್ತಾ ಇರುತ್ತದೆ ಲಕ್ಷ್ಮೀದೇವಿ ಏನು ಯೋಚಿಸದೆ ತೋಟಕ್ಕೆ ಹೋಗಿ ಒಂದು ಹೂವನ್ನು ಕಿತ್ತುಕೊಂಡು ವಿಷ್ಣುನ ಬಳಿಗೆ ಬರ್ತಾರೆ ಲಕ್ಷ್ಮೀ ಕೈಯಲ್ಲಿ ಹೂವು ಕಂಡ ವಿಷ್ಣುವಿಗೆ ಬೇಸರವಾಗುತ್ತೆ.. ಈ ವೇಳೆ ಲಕ್ಷ್ಮೀಗೆ ತಿಳಿಹೇಳುವ ವಿಷ್ಣು ಹೇಳ್ದೆ ಕೇಳ್ದೆ ಯಾರ ವಸ್ತುವನ್ನು ಕೂಡ ತೆಗೆದುಕೊಳ್ಳಬಾರದು ಎಂದು ಹೇಳಿ.. ಅಲ್ಲದೆ ನಾನು ಹಾಕಿದ್ದ ಷರತ್ತನ್ನು ಕೂಡ ಮರೆತು ಬಿಟ್ಟಿದ್ದೀಯಾ ಅಂತಾರೆ ಷರತ್ತನ್ನು ನೆನಪಿಸಿಕೊಂಡ ಲಕ್ಷ್ಮಿ ಹೇ ಸ್ವಾಮಿ ನನ್ನಿಂದ ತಪ್ಪಾಯ್ತು ಕ್ಷಮಿಸಿ ಬಿಡಿ ಅಂತ ಹೇಳ್ತಾರೆ..

ಆಗ ವಿಷ್ಣು ಲಕ್ಷ್ಮಿಗೆ ದೇವಿಗೆ ಮೂರು ವರ್ಷಗಳ ಕಾಲ ಮನೆಕೆಲಸದ ಶಿಕ್ಷೆ ನೀಡುತ್ತಾನೆ.. ಬಡ ಹುಡುಗಿಯ ವೇಷಧರಿಸಿ ವಿಷ್ಣುಪ್ರಿಯೆ ಲಕ್ಷ್ಮೀ ಕ್ಷಮೆ ಕೇಳಿ ವಿಷ್ಣುವಿನ ಬಳಿಯಷ್ಟೇ ಎಷ್ಟು ಕ್ಷಮೆ ಕೇಳಿದರು ವಿಷ್ಣುವಿನ ಮನಸ್ಸು ಕರಗಲಿಲ್ಲ ಬದಲಾಗಿ ಈ ತಪ್ಪನ್ನು ಕ್ಷಮಿಸಲು ಸಾಧ್ಯವೇ ಇಲ್ಲ ಬದಲಾಗಿ ಆ ತೋಟದ ಮಾಲಿಕನ ಬಳಿ ಕೇಳದೆ ಹೂವನ್ನು ಕಿತ್ತಿದಿಯಾ ಅದಕ್ಕೆ ತಕ್ಕ ಶಿಕ್ಷೆ ಅನುಭವಿಸಲೇಬೇಕು.. ಆ ತೋಟದ ಮಾಲೀಕನ ಮನೆಯಲ್ಲಿ ಮೂರು ವರ್ಷ ಮನೆ ಕೆಲಸ ಮಾಡಬೇಕು ಅಂತಾರೆ ಲಕ್ಷ್ಮೀ ಮಾತೆ ನೋವಿನಿಂದಲೇ ವಿಷ್ಣುವಿನ ಮಾತಿಗೆ ಒಪ್ಪಿಗೆ ಸೂಚಿಸುತ್ತಾರೆ ವಿಷ್ಣು ವೈಕುಂಠಕ್ಕೆ ಮರಳಿದ ಬಳಿಕ ಲಕ್ಷ್ಮೀ ದೇವಿ ಬಡ ಹುಡುಗಿಯ ವೇಷಧರಿಸಿ ಆ ತೋಟದ ಮಾಲೀಕನ ಮನೆಗೆ ತೆರಳುತ್ತಾರೆ ಆ ಮಾಲೀಕನ ಹೆಸರು ಮಾಧವ್ ಆತನಿಗೊಂದು ಸಣ್ಣ ಗುಡಿಸಿಲಿನ ಪ್ರೀತಿಯ ಮನೆ ಇರುತ್ತೆ ಅಲ್ಲಿ ಇಲ್ಲಿ ಕೆಲಸ ಮಾಡಿ ತನ್ನ ಪತ್ನಿ ಹೆಣ್ಣು ಮಕ್ಕಳು ಇಬ್ಬರು ಗಂಡು ಮುಕ್ಕಳಿನೊಂದಿಗೆ ಜೀವನ ನಡೆಸುತ್ತಿರುತ್ತಾನೆ..

ಲಕ್ಷ್ಮೀ ಬಡ ಹುಡುಗಿಯ ವೇಷದಲ್ಲಿ ಮನೆಯ ಕೆಲಸಕ್ಕೆ ಬಂದಾಗ ಮಾಧವ್ ಮಗಳು ಯಾರು ನೀನು ಇಲ್ಲಿಗೆ ಏಕೆ ಬಂದಿದ್ದೀಯಾ ಅಂತ ಪ್ರಶ್ನೆ ಮಾಡುತ್ತಾರೆ.. ಹಾಗ ಕನ್ಯಾ ರೂಪದಲ್ಲಿದ್ದ ಲಕ್ಷ್ಮೀ ದೇವಿ ನಾನು ಓರ್ವ ಬಡ ಹುಡುಗಿ ನನ್ನನ್ನು ನೋಡಿಕೊಳ್ಳಲು ಯಾರೂ ಇಲ್ಲ ನಾನು ಹಲವು ದಿನಗಳಿಂದ ಏನು ತಿಂದೆ ಇಲ್ಲ ದಯಮಾಡಿ ನನಗೆ ಏನಾದರೂ ಕೆಲಸ ಕೊಡಿ ನಾನು ನಿಮ್ಮ ಮನೆ ಕೆಲಸ ಮಾಡಿಕೊಂಡು ಇದ್ದುಬಿಡ್ತೀನಿ ಅಂತಾರೆ ಮಾಧವ್ ಬಡವರಾಗಿದ್ದರು ಒಳ್ಳೆ ಮನುಷ್ಯನಾಗಿದ್ದ ಹುಡುಗಿ ಮಾತಿನಿಂದ ಪ್ರತಿಕ್ರಿಯಿಸಿದ ಮಾಧವ್ ಮಗಳೇ ನಾನು ಓರ್ವ ಬಡವ ನಾನು ತುಂಬಾನೇ ಕಷ್ಟಪಟ್ಟು ಮನೆ ಖರ್ಚು ನೋಡಿಕೊಂಡಿದ್ದೇನೆ ನಾನು ಮೂವರು ಹೆಣ್ಣುಮಕ್ಕಳು ನಾಲ್ವರೂ ಗಂಡು ಮಕ್ಕಳಿದ್ದರೂ ಇದೇ ಸಂಪಾದನೆಯಲ್ಲಿ ನೋಡಿಕೊಳ್ಳಬೇಕಾಗಿತ್ತು ಇದರಿಂದ ನೀನು ನಮ್ಮ ಮಗಳಾಗಿ ಮನೆಯಲ್ಲಿ ಇರ್ತಿಯ ಅಂದ್ರೆ ಇರಬಹುದು.. ನಾವು ಹೇಗೆ ತಿಂದು ಬದುಕುತ್ತಿದ್ದೇವೊ ಅದೇ ರೀತಿ ನೀನು ಇರೋದಾದ್ರೆ ಇರಬಹುದು ಅಂತಾರೆ.. ಅದಕ್ಕೆ ಲಕ್ಷ್ಮೀ ಖುಷಿಯಿಂದಲೇ ಒಪ್ಪಿಕೊಳ್ಳುತ್ತಾರೆ ಲಕ್ಷ್ಮೀ ಮನೆ ಒಳಗಡೆ ಬಂದ ಬಳಿಕ ಮಾದವ್ ಮುಟ್ಟಿದ್ದೆಲ್ಲ ಚಿನ್ನ ಹಾಗುತ್ತದೆ ವಿಷ್ಣು ನೀಡಿದ ಮೂರು ವರ್ಷದ ಶಿಕ್ಷೆ ಬಳಿಕ ಲಕ್ಷ್ಮೀ ದೇವಿ ವೈಕುಂಠಕ್ಕೆ ಪ್ರಯಾಣಿಸಿದಳು ಬಡ ಹುಡುಗಿಯ ವೇಷದಲ್ಲಿದ್ದ ಲಕ್ಷ್ಮೀ ಮನೆಯ ಮಗಳಾಗಿ ಇರಲು ಒಪ್ಪಿಕೊಂಡಾಗ ಮಾಧವಗೆ ತುಂಬಾನೇ ಖುಷಿಯಾಗುತ್ತದೆ.. ಲಕ್ಷ್ಮೀಯನ್ನು ಸೀದಾ ಮನೆಯೊಳಗೆ ಕರೆದುಕೊಂಡು ಹೋಗಿ ತನ್ನ ಕುಟುಂಬಕ್ಕೆ ಪರಿಚಯ ಮಾಡುತ್ತಾನೆ..

ಮನೆಯವರಿಗೂ ಅಷ್ಟ ಲಕ್ಷ್ಮೀ ಆಗಮನದಿಂದ ತುಂಬಾ ಖುಷಿಯಾಗುತ್ತದೆ ಲಕ್ಷ್ಮೀ ಮನೆಗೆ ಬಂದಿದ್ದೆ ಬಂದಿದ್ದು ಮರುದಿನವೇ ಮಾಧವಗೆ ಬಾರಿ ಹಣ ಸಂಪಾದನೆ ಆಯ್ತು ಅದೇ ರೀತಿ ದಿನೇದಿನೇ ಮಾಧವ್ ಮನೆಗೆ ಸಂಪತ್ತು ಹರಿದು ಬರಲು ಶುರುವಾಯಿತು.. ಇದರಿಂದ ತನ್ನ ಮನೆಗೆ ಬಂದಿರುವುದು ಬಡ ಹುಡುಗಿಯಲ್ಲ ಯಾರೋ ದೇವರೆ ಇರಬೇಕು ಅಂತ ಅನಿಸ ತೊಡಗಿತ್ತು ಇದೇ ರೀತಿ ಮೂರು ವರ್ಷಗಳು ಕಳೆದುಹೋದ ಬಳಿಕ ಒಂದು ದಿನ ಗದ್ದೆಯಲ್ಲಿ ಕೆಲಸ ಮಾಡಿ ಮಾಧವ್ ಮನೆಗೆ ಬರುವಾಗ ಮನೆಯ ಬಾಗಿಲಲ್ಲಿ ಯಾರೋ ಸೀರೆ ಹುಟ್ಟು ಮೈತುಂಬಾ ಒಡವೆ ತೊಟ್ಟು ನಿಂತಿರೋದು ಕಾಣಿಸುತ್ತೆ ಹತ್ತಿರ ಬಂದು ನೋಡಿದ್ರೆ ಅದು ಬೇರೆ ಯಾರು ಹಾಗಿರಲಿಲ್ಲ ತನ್ನ ಬಳಿ ಆಶ್ರಯ ಕೇಳಿಕೊಂಡು ಬಂದಿದ್ದ ಬಡ ಹುಡುಗಿಯೇ ಹಾಗಿದ್ದಳು.. ಆಗಾ ಮಾಧವ್ ಉದ್ದುದ್ದ ಬಿದ್ದು ಲಕ್ಷ್ಮೀ ದೇವಿಗೆ ನಮಸ್ಕರಿಸುತ್ತಾನೆ..

ನಂತರ ಮನೆಯವರನ್ನು ಹೊರಗಡೆ ಕರೆದುಕೊಂಡು ಬಂದು ಎಲ್ಲವನ್ನು ವಿವರಿಸುತ್ತಾನೆ.. ಲಕ್ಷ್ಮೀ ಬಳಿ ಕೆಲಸ ಮಾಡಿಸಿದ್ದಕ್ಕಾಗಿ ಅವರೆಲ್ಲರೂ ಕ್ಷಮೆ ಕೇಳ್ತಾರೆ ಲಕ್ಷ್ಮೀ ಮಾಧವ್ ಮನೆಗೆ ಕೆಲಸ ಮಾಡಬೇಕು ಅಂತಾನೇ ಬಂದಿದ್ದರಿಂದ ಅವರಿಗೆ ಬೇಸರವಿರಲಿಲ್ಲ ಹೀಗಾಗಿ ಮಾಧವ್ ಲಕ್ಷ್ಮಿಯ ಬಳಿ ಕ್ಷಮೆ ಕೇಳಿದಾಗ ಉತ್ತರಿಸು ಲಕ್ಷ್ಮಿ ಹೇ ಮಾದವ್ ನೀನು ತುಂಬಾ ಒಳ್ಳೆಯ ಮನುಷ್ಯ ನನಗೆ ಇಷ್ಟು ದಿನ ತಂದೆಯ ಪ್ರೀತಿಯ ತೋರಿಸಿದ್ದೀಯಾ ನಿನ್ನ ಒಳ್ಳೆಯ ಬುದ್ಧಿಗೆ ಒಳ್ಳೆಯ ಕೆಲಸವೇ ಆಗಲಿದೆ.. ನಾನು ನಿನಗೆ ಒಂದು ವರ ಕೊಡುತ್ತಿದ್ದೇನೆ.. ನಿನ್ನ ಮನೆಯಲ್ಲಿ ಹಣ ಮತ್ತು ಸಂತೋಷದ ಕೊರತೆ ಎಂದಿಗೂ ಕೂಡ ಕಡಿಮೆಯಾಗುವುದಿಲ್ಲ ಅಂತ ಹೇಳಿ ಲಕ್ಷ್ಮೀ ದೇವಿ ವಿಷ್ಣು ಕಳುಹಿಸಿದ್ದ ಗರುಡ ರಥವನ್ನೇರಿ ವೈಕುಂಟಕ್ಕೆ ತೆರಳುತ್ತಾರೆ.. ಈ ರೀತಿ ವಿಷ್ಣು ಲಕ್ಷ್ಮೀ ದೇವಿಗೆ ಶಿಕ್ಷೆಯನ್ನ ನೀಡುತ್ತಾನೆ..