Advertisements

ಒಂದು ಕಾಲದಲ್ಲಿ ಮನೆ ಮನೆಗೂ ಹೋಗಿ ಹಾಲು ಮಾರಟ ಮಾಡುತ್ತಿದ್ದ ಈ ಹುಡುಗ ಇಂದು ಕನ್ನಡದ ದೊಡ್ಡ ಸ್ಟಾರ್ ನಟ.! ಈ ನಟ ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್ ಮತ್ತು ಮೀನ ತೂಗುದೀಪ ದಂಪತಿಗಳ ಹಿರಿಯ ಮಗನಾಗಿ, ಫೆಬ್ರುವರಿ 16/1977 ರಂದು ದರ್ಶನ್ ಹುಟ್ಟಿದರು.. ಇಂದು ಕನ್ನಡ ಚಿತ್ರರಂಗದ ಚಿತ್ರ ನಿರ್ಮಾಪಕರೊಲ್ಲಬ್ಬರಾಗಿದ್ದಾರೆ. ಹಲವು ಸಿನಿಮಾಗಳನ್ನ ತೂಗುದೀಪ ಪ್ರೂಡಕ್ಷನ್ಸ್ ಅಡಿಯಲ್ಲಿ ಕನ್ನಡ ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ.. ತೂಗುದೀಪ ಡಿಸ್ಟ್ರಿಬ್ಯೂಟರ್ಸ್ಸೋ ಅಡಿಯಲ್ಲಿ ಚಿತ್ರ ವಿತರಕರಾಗಿದ್ದಾರೆ. ತಮ್ಮದಿನಕರ್ ತೂಗುದೀಪ್ ಅವರು ಸಿನಿಮಾ ನಿರ್ದೇಶಕರಾಗಿದ್ದಾರೆ. ಇನ್ನೂ ಒಂದು ಕಾಲದಲ್ಲಿ ಮನೆ ಮನೆಗೂ ಹೋಗಿ ಹಾಲಿನ ವ್ಯಾಪಾರ ಮಾಡುತ್ತಿದ್ದ ಈ ಹುಡುಗ ಇಂದು ಕನ್ನಡ ಸಿನಿಮಾ ರಂಗದಲ್ಲಿ ದರ್ಶನ್ ಅವರು ನಂಬರ್‌ ಒನ್‌ ಸ್ಟಾರ್ ನಟರಾಗಿ ಬೆಳೆದು ನಿಂತಿದ್ದಾರೆ.. ಅಭಿಮಾನಿಗಳು ದರ್ಶನ್ ಅವರನ್ನ ಪ್ರೀತಿಯಿಂದ ‌ಡಿ ಬಾಸ್‌ ಎಂದೇ ಕರೆಯುತ್ತಾರೆ..

Advertisements
Advertisements

ಇನ್ನೂ ದರ್ಶನ್ ಅವರ ತಂದೆ ಸಿನಿಮಾ ರಂಗದಲ್ಲಿ ಖ್ಯಾತ ಖಳನಟರಾಗಿದ್ದರು ಕೂಡ, ಸಿನಿಮಾ ರಂಗದಲ್ಲಿ ದರ್ಶನ್ ಅವರ ಪ್ರಯಾಣ ಅಷ್ಟೇನೂ ಸುಲಭವಾಗಿರಲಿಲ್ಲ.. ಅಸಲಿಗೆ ತೂಗುದೀಪ ಶ್ರೀನಿವಾಸ್ ಅವರಿಗೆ ತಮ್ಮ ಮಗ ದರ್ಶನ್ ಅವರು ಸಿನಿಮಾ ರಂಗದಲ್ಲಿ ನಟನೆ ಮಾಡುವುದು ಇಷ್ಟವಿರಲಿಲ್ಲ ಆದರೆ ಅದ್ಯಾಕೋ ದರ್ಶನ್ ಅವರಿಗೆ ಓದು ತಲೆಗೆ ಹತ್ತಲಿಲ್ಲ ಸಿನಿಮಾ ರಂಗದ ಮೇಲಿನ ವ್ಯಾಮೋಹ ಕಡಮೆ ಆಗಲಿಲ್ಲ ಉತ್ತಮ ನಟನಾಗಬೇಕು ಎನ್ನುವ ಆಸೆಯಿಂದ ನೀನಾಸಂ ನಲ್ಲಿ ಅಭಿನಯ ಮುಗಿಸಿ ಬಂದರು ಸಹ. ದರ್ಶನ್ ಅವರಿಗೆ ಒಂದು ಅವಕಾಶ ಕೂಡ ಸಿಗಲಿಲ್ಲ.. ಆದರೆ‌ ದರ್ಶನ್ ಅವರು ಅಪಾರ ಪರಿಶ್ರಮದಿಂದ ಇಂದು ಕನ್ನಡದ ನಂಬರ್‌ ಒನ್‌ ಸ್ಟಾರ್ ನಟರಾಗಿ ಬೆಳೆದು ನಿಂತಿದ್ದಾರೆ.. ಇನ್ನೂ ನಟ ದರ್ಶನ್ ಅವರು 2000‌ ಇಸವಿಯಲ್ಲಿ ವಿಜಯಲಕ್ಷ್ಮೀ ಅವರನ್ನು ಪ್ರೀತಿಸಿ ಮದುವೆಯಾದರು.

ಈಗ ಇವರಿಬ್ಬರಿಗೆ ‘ವಿನೇಶ್’ ಹೆಸರಿನ ಒಂದು ಗಂಡು ಮಗು ಇದ್ದಾನೆ.. ಸದ್ಯ ದರ್ಶನ್ ಅವರಿಗೆ ಕೋಟಿ ಕೋಟಿ ಕೊಟ್ಟರು ಸಹ ಇಂದು ದರ್ಶನ್ ಅವರ ಡೇಟ್ಸ್ ಗಾಗಿ ನಿರ್ಮಾಪಕ ನಿರ್ದೇಶಕರು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.. ದರ್ಶನ್ ಅವರಿಗೆ ಮೊದಲು ಬ್ರೇಕ್ ಕೊಟ್ಟ ಸಿನಿಮಾ ಎಂದರೆ ಅದು ಮೆಜೆಸ್ಟಿಕ್ ಸಿನಿಮಾ.. ಆದರೆ ನಂತರದಲ್ಲಿ ದರ್ಶನ್ ಅವರು ಕೆಲವು ಸಿನಿಮಾಗಳಲ್ಲಿ ನಟನೆ ಮಾಡಿದರು ಆದರೆ ಇವರಿಗೆ ಮತ್ತೊಂದು ಬ್ರೇಕ್ ಕೊಟ್ಟ ಸಿನಿಮಾ ಎಂದರೆ ಅದು ಕಿರಿಯ ಸಿನಿಮಾ.. ಪ್ರೇಮ್ ನಿರ್ದೇಶನ ಮಾಡಿದ ಈ ಸಿನಿಮಾ‌ ದರ್ಶನ್ ಅವರನ್ನ‌ ಸಿನಿಮಾ ರಂಗದಲ್ಲಿ ಸ್ಥಿರ ನೆಲೆ ಕಂಡುಕೊಳ್ಳುವಂತೆ ಮಾಡಿತ್ತು.. ನಂತರದ ದಿನಗಳಲ್ಲಿ ದರ್ಶನ್ ಅವರು ಕನ್ನಡದ ಟಾಪ್ ನಟರಾಗಿ ಬೆಳೆದು ನಿಂತರು.‌. ಅಂದು ಹಾಲಿನ ವ್ಯಾಪಾರ ಮಾಡುತ್ತಿದ್ದ ದರ್ಶನ್ ಅವರು ಕೋಟಿ ಕೋಟಿ ಹಣವನ್ನ ಸಂಭಾವನೆ ರೂಪದಲ್ಲಿ ಪಡೆಯ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.. ದರ್ಶನ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..