Advertisements

ಕನ್ನಡ ಚಿತ್ರರಂಗದ ಖ್ಯಾತ ನಟಿ ರಕ್ಷಿತಾ ಪ್ರೇಮ್ ಅವರು ಕಟ್ಟಿಸಿದ ಐಶಾರಾಮಿ ಮನೆ ಹೇಗಿದೆ ಎಲ್ಲಿದೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ನಟಿ ರಕ್ಷಿತಾ ಒಂದು ಕಾಲದಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ರಾಣಿಯಾಗಿ ಮಿಂಚಿದ ನಟಿ ಅಂತ ಹೇಳಬಹುದು.. ರಕ್ಷಿತಾ ಕನ್ನಡ ಮಾತ್ರವಲ್ಲದೆ ತೆಲುಗು ಚಿತ್ರರಂಗದಲ್ಲಿ ಟಾಪ್ ನಟಿಯಾಗಿದ್ದರು. ನಂತರ ಇವರು ಮದುವೆಯಾದ ಮೇಲೆ ತಮ್ಮ ನೆಚ್ಚಿನ ಮನೆಯನ್ನ ನಟಿ ರಕ್ಷಿತಾ ಅವರು ಎಲ್ಲಿ ಕಟ್ಟಿದ್ದಾರೆ ತಮ್ಮ ಮನೆಗೆ‌ ಯಾವ ಹೆಸರು ಇಟ್ಟಿದ್ದಾರೆ ಗೊತ್ತಾ? 1983 ಮಾರ್ಚ್ 31 ರಲ್ಲಿ ಹುಟ್ಟಿದ ನಟಿ ರಕ್ಷಿತಾ ಅವರ‌ ನಿಜವಾದ ಹೆಸರು ಶ್ವೇತ ಅಂತ. ಇವರ ತಂದೆಯ ಹೆಸರು ಬಿ.ಸಿ ಗೌರಿಶಂಕರ್ ಅವರು ಖ್ಯಾತ ಛಾಯಾಗ್ರಾಹಕ ಆಗಿದ್ದರು ಇವರ ತಾಯಿ ಹೆಸರು ಮಮತಾರಾವ್ ಅವರು ಕೂಡ ಒಂದು ಕಾಲದಲ್ಲಿ ಖ್ಯಾತ ನಟಿ ಆಗಿದ್ದರು.. ಬೆಂಗಳೂರಿನ ಕಾಲೇಜಿನಲ್ಲಿ ಕಂಪ್ಯೂಟರ್ ಅಪ್ಲಿಕೇಶನ್ ಡಿಗ್ರಿ ಮಾಡಿದ ನಟಿ ರಕ್ಷಿತಾ ನಂತರ ನಟನೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು

Advertisements
Advertisements

ಸುಮಾರು ಒಂದು ತಿಂಗಳುಗಳ ಕಾಲ ನಟನೆಯ ತರಬೇತಿ ಪಡೆದುಕೊಂಡು ಪುನೀತ್ ರಾಜ್‍ಕುಮಾರ್ ಅಭಿನಯದ ಅಪ್ಪು ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು ತಮ್ಮ ಮೊದಲ ಸಿನಿಮಾದಲ್ಲೇ ಸಕ್ಕತ್ ಸೆನ್ಸೇಷನ್ ಕ್ರಿಯೇಟ್ ಮಾಡಿದರು.. ಇದ್ದಾದ ನಂತರ ಕನ್ನಡದಲ್ಲಿ ಸಿನಿಮಾಗಳಲ್ಲಿ ಪುನೀತ್ ರಾಜ್‍ಕುಮಾರ್, ದರ್ಶನ್, ಸುದೀಪ್, ಶಿವರಾಜಕುಮಾರ್, ಉಪೇಂದ್ರ, ಶ್ರೀಮುರಳಿ ಇನ್ನೂ ಮುಂತಾದ ನಟರೊಂದಿಗೆ ನಟಿಸಿದ ರಕ್ಷಿತಾ ತೆಲುಗಿನಲ್ಲಿ ಕೂಡ ಚಿರಂಜೀವಿ, ನಾಗಾರ್ಜುನ, ಮಹೇಶ್ ಬಾಬು, ರವಿತೇಜ, ಎನ್.ಟಿ.ಆರ್ ಮುಂತಾದ ನಟರೊಂದಿಗೆ ಸಿನಿಮಾದಲ್ಲಿ ತೆರೆ ಹಂಚಿಕೊಂಡರು. ಅಷ್ಟೇ ಅಲ್ಲದೆ ಕನ್ನಡದಲ್ಲಿ ಸಿನಿಮಾಗಳಲ್ಲಿ ದರ್ಶನ್ ಹಾಗು ರಕ್ಷಿತಾ ಅವರ ಜೋಡಿ ಸಾಕಷ್ಟು ಪ್ರಸಿದ್ಧಿಯಾಗಿತ್ತು..

ಇನ್ನೂ 2007 ರಲ್ಲಿ ನಿರ್ದೇಶಕ ಪ್ರೇಮ್ ಅವರನ್ನು ಮದುವೆಯಾದ ನಟಿ ರಕ್ಷಿತಾ‌ ಅವರಿಗೆ ಸೂರ್ಯ ಎನ್ನುವ ಒಬ್ಬ ಮಗ ಕೂಡ ಇದ್ದಾನೆ.‌. ಈ ಪೋಟೋದಲ್ಲಿ ನೋಡಬಹುದು ನಟಿ ರಕ್ಷತಾ ಅವರ ಮನೆ ಹೇಗಿದೆ ಎಂದು ಪ್ರೇಮ್ ಹಾಗು ರಕ್ಷಿತಾ ಅವರು ತಮ್ಮ‌ ಅಭಿರುಚಿಗೆ ತಕ್ಕಂತೆ ವಿಶಾಲ ಹಾಗು ಸುಂದರ ಮೂರು ಅಂತಸ್ತಿನ ಮನೆಯನ್ನ ಬೆಂಗಳೂರಿನ ಚಂದ್ರ ಲೇಔಟ್ ನಲ್ಲಿ ಕಟ್ಟಿದ್ದಾರೆ.. ಇನ್ನೂ‌‌ ರಕ್ಷಿತಾ ಪ್ರೇಮ್ ಅವರು ತಮ್ಮ ಮನೆಗೆ ಇಟ್ಟಿರುವ ಹೆಸರು ಏನೆಂದರೆ ಅದು ಸೂರ್ಯ ಅಂತ.. ಇವರು ತಮ್ಮ ಪ್ರೀತಿಯ ಮಗನ ಹೆಸರನ್ನ ಮನೆಗೆ ಇಟ್ಟಿದ್ದಾರೆ ಮದುವೆ ಆದ ಮೇಲೆ ಅಂತ ಅಂತವಾಗಿ ಸಿನಿಮಾ ರಂಗದಿಂದ ದೂರ ಉಳಿದ ನಟಿ ರಕ್ಷಿತಾ ಈಗ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ.. ಸ್ನೇಹಿತರೆ ನಟಿ ರಕ್ಷಿತಾ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..