Advertisements

ಅಂದಿನ ಕಾಲದ ಪ್ರಸಿದ್ಧ ನಟಿ ಜಯಪ್ರದಾ ಅವರು ಕಟ್ಟಿಸಿದ ಐಶಾರಾಮಿ ಮನೆ ಹೇಗಿದೆ ಎಂದು ನೋಡಿದ್ದೀರಾ? ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, 14 ವರ್ಷಗಳ ಕಾಲ ನಟಿ ಜಯಪ್ರದಾ ಅವರು ಒಂದು ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುವಾಗ ಒಬ್ಬ ನಿರ್ದೇಶಕರ ಕಣ್ಣಿಗೆ ಬಿದ್ದರು ಆನಂತರ ಹಿಂತಿರುಗಿ ನೀಡಲಿಲ್ಲ ಈ ನಟಿ.. ಕಾರಣ ಏನೆಂದರೆ ಒಂದು ಕಾಲದಲ್ಲಿ ಕನ್ನಡ ಹಾಗು ಭಾರತೀಯ ಚಿತ್ರರಂಗದಲ್ಲಿ ನಟಿ ಜಯಪ್ರದಾ ಅವರು ಮಿಂಚಿದರು.. ಯಾವುದೇ ನಿರ್ಮಾಪಕ ಹಾಗು ನಿರ್ದೇಶಕರು ಸಿನಿಮಾದಲ್ಲಿ ನಟನೆ ಮಾಡಲು ಮೊದಲ ಆಯ್ಕೆ ಮಾಡುತ್ತಿದ್ದ ನಟಿ ಜಯಪ್ರದಾ ಅವರು ಅಗಿದ್ದರು ನಟನೆಯಲ್ಲಿ ಎಲ್ಲರ ಮಧ್ಯೆ ಅಷ್ಟೇ ಒಂದಿಕೊಂಡು ಹೋಗುವಂತಹ ಗುಣ ಈ ನಟಿ ಒಂದಿದ್ದರು.. ಜಯಪ್ರದಾ ಅವರು ತಮ್ಮ ಜನಪ್ರಿಯ ದಿನಗಳಲ್ಲಿ ಕನ್ನಡದ ಪ್ರಸಿದ್ಧ ನಟರಾದ ಡಾ// ರಾಜ್‌ಕುಮಾರ್ ಜೊತೆ ಸನಾದಿ ಅಪ್ಪಣ್ಣ, ಕವಿರತ್ನ ಕಾಳಿದಾಸ, ಹುಲಿಯ ಹಾಲಿನ ಮೇವು, ನಂತರದ ದಿನಗಳಲ್ಲಿ ಶಬ್ಧವೇದಿ ಯಲ್ಲಿ ನಟಿಸಿದ್ದರು.

Advertisements
Advertisements

ಡಾ// ವಿಷ್ಣುವರ್ಧನ್ ಜೊತೆ ಹಬ್ಬ, ಹಿಮಪಾತ, ಈ ಬಂಧನ, ಅಲ್ಲದೆ ಇನ್ನೂ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಅಭಿನಯಿಸಿದ ಚಿತ್ರಗಳ, ಕರೆದರೂ ಕೇಳದೆ, ರಾಗ ಅನುರಾಗ, ಸದಾ ಕಣ್ಣಲಿ, ಓ ಪ್ರಿಯತಮಾ ಕರುಣೆಯಾ ತೋರೆಯಾ, ಜೇನಿನ ಗೂಡು ನಾವೆಲ್ಲಾ, ಅಯ್ಯೊ ಸುಮ್ಮನಿರ್ರಿ ಸುಮ್ಮನಿರ್ರಿ ನಾವು ಯಾರ್ಗೂ ಕಮ್ಮಿ ಇಲ್ಲ’ ಮುಂತಾದ ಹಾಡುಗಳು ಇಂದಿಗೂ ಜನಪ್ರಿಯತೆ ಪಡೆದಿವೆ.. ಕೇವಲ ನಾಟ್ಯ ಪಾತ್ರಗಳಲ್ಲಿ ಮಾತ್ರವಲ್ಲದೆ. ಭಾವುಕತೆ ತುಂಬಿದ ಪಾತ್ರಗಳಲ್ಲಿ ಕೂಡಾ ಜಯಪ್ರದಾ ಅವರ ಅಭಿನಯ ಜನರ ಮನಸೆಳೆಯುವಂತಿತ್ತು. ಅವರ ಅಭಿನಯಕ್ಕೆ ಶೋಭೆಯಿಟ್ಟಂತೆ ಇದ್ದುದು ಅವರ ಸೌಂಧರ್ಯ.ಶಶಿಕುಮಾರ್ ಜೊತೆ ಆತ್ಮಬಂಧನ ಮತ್ತು ಅಂಬರೀಶ್ ಜೊತೆಯೂ ನಟಿಸಿದ್ದಾರೆ..

ಇಷ್ಟೇ ಅಲ್ಲದೆ ಚಿತ್ರರಂಗದಲ್ಲಿ ಅಂದರೆ 1985 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಇವರಾಗಿದ್ದರು.. ಹಾಗಾದರೆ ನಟಿ ಜಯಪ್ರದಾ ಅವರು ಕಟ್ಟಿಸಿದ ಐಶಾರಾಮಿ ಮನೆ ಹೇಗಿದೆ ಎಂದು ಈ ಪೋಟೋದಲ್ಲಿ ನೋಡಬಹುದು.. ಹೌದು ನಟಿ ಜಯಪ್ರದಾ ಅವರು ನಟಿ ಶ್ರೀಕಾಂತ್ ಅವರನ್ನ‌ ಪ್ರೀತಿಸಿ ಮದುವೆಯಾಗಿದ್ದರು ಆದರೆ ಇಲ್ಲಿ ತಿಳಿಯಬೇಕಾದ ವಿಚಾರ ಎನೆಂದರೆ ಶ್ರೀಕಾಂತ್ ಅವರಿಗೆ ಆಗಾಗಲೇ ಮದುವೆಯಾಗಿ ಮೂರು ಜನ ಮಕ್ಕಳಿದ್ದರು ಆದರೆ ಇದೆಲ್ಲವನ್ನೂ ಲೆಕ್ಕಿಸದೆ ಜಯಪ್ರದಾ ಅವರು‌ 1986 ರಲ್ಲಿ ಏಕಾಏಕಿ ಶ್ರೀಕಾಂತ್ ಅವರ ಜೊತೆ ಮದುವೆಯಾದರು.. ಈಗ ಮುಂಬೈನಲ್ಲಿ ವಾಸವಿರುವ ನಟಿ ಜಯಪ್ರದ ಅವರು ತಮ್ಮ ಅಭಿರುಚಿಗೆ ತಕ್ಕಂತೆ ಒಂದು ಮನೆಯನ್ನು ಕಟ್ಟಿಕೊಂಡಿದ್ದು ಮನೆಯ ಒಳಗೆ ಅದ್ದೂರಿ ಹಾಗು ಲಗ್ಸೂರಿ ಒಳಾಂಗಣವನ್ನ ನಿರ್ಮಾಣ ಮಾಡಲಾಗಿದೆ..

ಸುಮಾರು 30 ಕೋಟಿಗೆ ಯಜಮಾನಿ ಆಗಿರುವ ನಟಿ ಜಯಪ್ರದಾ ಅವರು ರಾಜಕೀಯ ಕ್ಷೇತ್ರದಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.. ಜಯಪ್ರದಾ ಅವರು ರಾಜಕೀಯದಲ್ಲಿ ಮೊದಲು ಎನ್ ಟಿ ರಾಮರಾವ್ ಅವರ ತೆಲುಗು ದೇಶಂ, ಚಂದ್ರಬಾಬು ನಾಯ್ಡು ತೆಲುಗು ದೇಶಂ ಮತ್ತು ಇತ್ತೀಚಿನ ವರ್ಷಗಳಲ್ಲಿ ಉತ್ತರ ಪ್ರದೇಶದ ಸಮಾಜವಾದಿ ಪಕ್ಷ ಹೀಗೆ ತಮ್ಮ ರಾಜಕೀಯ ಜೀವನ ಸಾಗಿಸಿದ್ದಾರೆ. ಲೋಕಸಭಾ ಸದಸ್ಯೆಯೂ ಆಗಿದ್ದಾರೆ.. ಅಷ್ಟೇ ಅಲ್ಲದೆ ಇದೀಗ ತಮ್ಮ‌ ಸ್ವಂತ ತಂಗಿಯ ಮಗನನ್ನು ದತ್ತು ಪಡೆದ ಜಯಪ್ರದಾ ಅವರು ಆತನನ್ನು ತನ್ನ ಸ್ವಂತ ಮಗನ ಹಾಗೆಯೇ ಪ್ರೀತಿಯಿಂದ ಸಾಕುತ್ತಿದ್ದಾರೆ.. ಇನ್ನೂ ಚಿತ್ರಗಳಲ್ಲಿ ಅವರು ಅಭಿನಯಿಸಿರುವಂತೆಯೇ ಆ ಕಾಲದ ತಮ್ಮ ಸಮಕಾಲೀನ ಪ್ರಸಿದ್ಧ ನಟಿ ಶ್ರೀದೇವಿ ಅವರೊಂದಿಗೂ ಸಹಾ ಅವರು ಬಹಳಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ..