Advertisements

ಖ್ಯಾತ ನಟಿ ಸುಧಾರಾಣಿ ಅವರು ಕಟ್ಟಿಸಿದ ಐಶಾರಾಮಿ ಮನೆ ಹೇಗಿದೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ನಟಿ ಸುಧಾರಾಣಿ 80 ಮತ್ತು 90 ರ ದಶಕದಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ರಾಣಿಯಾಗಿ ಮೆರೆದ ಇವರು ಈಗಲೂ ಕೂಡ ವಿಭಿನ್ನ ಪಾತ್ರಗಳನ್ನ ಮಾಡುತ್ತಾ ರಾಣಿಯಾಗಿದ್ದಾರೆ.. ಸಿನಿಮಾದಲ್ಲಿ ಬಾಲ ನಟಿಯಾಗಿ ಕಿಲಾಡಿ ಕಿಟ್ಟು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಂತರ ಶಿವರಾಜ್ ಕುಮಾರ್ ಅಭಿನಯಿಸಿದ ಆನಂದ್ ಸಿನಿಮಾದ ಮೂಲಕ ಕನ್ನಡದಲ್ಲಿ ನಾಯಕಿಯಾಗಿ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿದ ನಟಿ ಸುಧಾರಾಣಿ ಅವರಿಗೆ ಕನ್ನಡ ಸಿನಿ ಪ್ರೇಕ್ಷಕರ ಹೃದಯದಲ್ಲಿ ವಿಶೇಷವಾದ ಸ್ಥಾನವನ್ನ ನೀಡಿದ್ದಾರೆ.. ತೆರೆಯ ಮೇಲೆ ಅಲ್ಲದೆ ನಿಜ ಜೀವನದಲ್ಲೂ ಇತರರಿಗೆ ಮಾದರಿಯಾಗಿ ಬದುಕುತ್ತಿರುವ ನಟಿ ಸಾಧಾರಾಣಿ ಅವರು ಕಟ್ಟಿಸಿದ ಮನೆ ಹೇಗಿದೆ ಎಂದು ನೋಡೋಣ ಬನ್ನಿ.. ಸುಧಾರಾಣಿ ಅವರು ಸುಂದರ ಹಾಗು ಪ್ರೀತಿಯ ಕುಟುಂಬವನ್ನ ಹೊಂದಿದ್ದಾರೆ. ಹಾಗೆಯೇ ತಮ್ಮ ಮನೆಯನ್ನ ಬೃಂದಾವನದ ಹಾಗೆ ಕಟ್ಟಿಸಿದ್ದಾರೆ ಇವರ ಮನೆ ಹೇಗಿದೆ ಎಂದು ‌ಈ ಪೋಟೋದಲ್ಲಿ ನೋಡಬಹುದು..

Advertisements
Advertisements

ಇನ್ನೂ ಸುಧಾರಾಣಿ ಅವರು ಹಲವಾರು ಸಿನಿಮಾಗಳಲ್ಲಿ ಇಂದಿಗೂ ಸಕ್ರಿಯರಾಗಿದ್ದಾರೆ. ಸಿನಿಮಾದಲ್ಲಿ ಉತ್ತಮ ಪಾತ್ರಗಳು ಸಿಕ್ಕರೆ ಮಾತ್ರ ಸಿನಿಮಾದಲ್ಲಿ ನಟನೆ ಮಾಡಲು ಒಪ್ಪಿಗೆ ನೀಡುತ್ತಿದ್ದರು ಸುಧಾರಾಣಿ ಅವರು..‌ ಈಗ ಕಿರುತೆರೆಯಲ್ಲಿ ನಟನೆ ಮಾಡುತ್ತಿರುವ ಸುಧಾರಾಣಿ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನರ ನೆಚ್ಚಿನ ಧಾರಾವಾಹಿ ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದಾರೆ.. ಇನ್ನೂ ಹಲವಾರು ಸಿನಿಮಾಗಳಿಗೆ‌ ಸುಧಾರಾಣಿ ಅವರು ಸಹಿ ಹಾಕಿದ್ದಾರೆ.. ಇನ್ನೂ ಸುಧಾರಾಣಿ ಅವರು ಎಷ್ಟೇ ಬಿಸಿಯಾಗಿದ್ದರು ತಮ್ಮ ಕುಟುಂಬಕ್ಕೆ ಎಂದು ಸ್ವಲ್ಪ ಸಮಯವನ್ನ ಮೀಸಲಿಡುತ್ತಾರೆ..

ಪತಿ ಗೋವರ್ಧನ್ ಹಾಗು ಮಗಳು ನಿಧಿ ಜೊತೆ ತಮ್ಮ‌ ಅಮೂಲ್ಯವಾದ ಕ್ಷಣಗಳನ್ನ ಕಳೆಯುವ ಮೂಲಕ‌ ತಮ್ಮ‌ ಕುಟುಂಬಕ್ಕೆ ತುಂಬಾ ಪ್ರಾಮುಖ್ಯತೆ ಕೊಡುತ್ತಾರೆ.. ಇನ್ನೂ ಮಗಳು ನಿಧಿ ಎರಡನೇ ವರ್ಷದ LLB ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.. ಮಗಳು ಮನೆಯನ್ನ ನಿಭಾಯಿಸುವಷ್ಟು ಬುಧಿವಂತೆ, ಪ್ರಭುದೆ‌ ಹಾಗು ಮನೆಯಲ್ಲಿ ಪ್ರತಿಯೊಬ್ಬರಿಗೂ ಅಡುಗೆ ಮಾಡುವಷ್ಟು ಜವಾಬ್ದಾರಿಯುತ ಮಗಳು ಎಂದು ಮಗಳ ಬಗ್ಗೆ ಹೆಚ್ಚು ಹೆಮ್ಮೆ ಪಡುತ್ತಾರೆ ನಟಿ‌ ಸುಧಾರಾಣಿ ಅವರು.. ಇನ್ನೂ ಸುಧಾರಾಣಿ ಮಗಳು ಭರತನಾಟ್ಯ ಮತ್ತು ಕರ್ನಾಟಕ ಸಂಗೀತವನ್ನ ಕಲಿಸುತ್ತಿದ್ದಾರೆ ಆದರೆ‌ ನಿಧಿ ಅವರಿಗೆ ಚಿತ್ರರಂಗಕ್ಕೆ ಬರುವ ಯಾವುದೇ ಆಸೆ ಸದ್ಯಕ್ಕೆ ಇಲ್ಲ ಎನ್ನುವ ವಿಚಾರ ತಿಳಿದು ಬಂದಿದೆ..