Advertisements

ಕರ್ಣ ಹುಟ್ಟಿದ ತಕ್ಷಣವೇ ಕುಂತಿ ಯಮುನಾ ನದಿಯಲ್ಲಿ ತೇಲಿಬಿಟ್ಟಿದ್ದು ಯಾಕೆ ಗೊತ್ತಾ! ಯಾವ ಕಾರಣಕ್ಕೆ ಕರ್ಣ ಸೂತಪುತ್ರನಾಗಿ ಬೆಳೆದನ್ನು ಗೊತ್ತಾ?

Adhyatma

ನಮಸ್ತೆ ಸ್ನೇಹಿತರೆ, ಮಹಾಭಾರತದಲ್ಲಿ ಕರ್ಣನ ಹೆಸರು ಕೇವಲ ಚಿರಪರಿಚಿತ ಅಂತಾನೇ ಹೇಳಬಹುದು. ಆದರೆ ದಾನ, ವೀರ, ಶೂರ, ಎಂದರೆ ಅದು ಕರ್ಣ ಮಾತ್ರ, ಕರ್ಣನ ಹೆಸರು ಕೇಳಿದ ಕೂಡಲೇ ಮೈ ರೋಮಾಂಚನ ಆಗುತ್ತದೆ.. ಆದರೆ ಅತಿ ಧೈರ್ಯವಂತ ಸರ್ವಗುಣ ಸಂಪನ್ನನಾದ ಕರ್ಣನ ಜನನ ಹೇಗಾಯಿತು ಹಾಗೂ ಕುಂತಿಯ ಈ ವರ್ತನೆಗೆ ಸೂರ್ಯದೇವ ಮಾಡಿದ್ದಾದರೂ ಏನು. ನದಿಯಲ್ಲಿ ತೇಲಿ ಬರುತ್ತಿದ್ದ ಕರ್ಣನನ್ನು ಕಾಪಾಡಿದ್ದು ಯಾರು ಎನ್ನುವುದರ ಬಗ್ಗೆ ಸಂಪೂರ್ಣ ತಿಳಿಯೋಣ ಬನ್ನಿ.. ಹೌದು ಒಮ್ಮೆ ರಾಣಿ ಕುಂತಿದೇವಿ ತನ್ನ ಆಸ್ಥಾನದ ಸೇವಕಿಯೊಂದಿಗೆ ಯಮುನಾ ನದಿ ತೀರಕ್ಕೆ ಬಂದು ತನಗೆ ಜನಿಸಿದ ಮಗುವನ್ನು ಮರದ ಬುಟ್ಟಿಯಲ್ಲಿ ಮಲಗಿಸಿ ಮನಸ್ಸಿನಲ್ಲಿ ತನ್ನ ನೋವಿನೊಂದಿಗೆ ಯಾರಿಗೂ ತಿಳಿಯದ ಹಾಗೆ ಯಮುನಾ ನದಿಯಲ್ಲಿ ಮಗುವನ್ನು ತೇಲಿ ಬಿಡುವ ಸಮಯದಲ್ಲಿ ಆ ಎಳೆ ಕಂದಮ್ಮನನ್ನು ನೋಡಿ ಕಂದಮ್ಮ ನನ್ನನ್ನು ಕ್ಷಮಿಸು ಬೀಡು ಎಂದು ಹೇಳಿ ಕುಂತಿ ದೇವಿ ಸೂರ್ಯದೇವನನ್ನು ನೆನೆಯುತ್ತಾ ಸ್ವಾಮಿ, ನೀವೇ ಈ ಮಗುವನ್ನು ಕಾಪಾಡಬೇಕು ಎಂದು ಸೂರ್ಯನಲ್ಲಿ ಪ್ರಾರ್ಥನೆ ಮಾಡಿ ಕಂದಮ್ಮನನ್ನು ಯಮುನಾ ನದಿಯಲ್ಲಿ ತೇಲಿಬಿಟ್ಟಳು..

Advertisements
Advertisements

ಇನ್ನು ಕುಂತಿದೇವಿ ತನ್ನ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಅಲ್ಲಿಂದ ಹೊರಟು ಹೋಗುತ್ತಾಳೆ.. ಕುಂತಿ ಮಾಡಿದ ಸಣ್ಣ ತಪ್ಪಿನಿಂದ ಆ ದಿನ ಒಂದು ಚಿಕ್ಕ ಹಳ್ಳಿ ಸೂರ್ಯನ ಕೋಪಕ್ಕೆ ತುತ್ತಾಗಬೇಕಿತ್ತು ಇನ್ನು ಸೂರ್ಯನ ತಾಪಕ್ಕೆ ಅಲ್ಲಿನ ಜನರು ತುಂಬಾನೇ ಭ’ಯಭೀ’ತರಾಗಿದ್ದರು ಸೂರ್ಯದೇವ ತನ್ನ ಬೆಂ’ಕಿಯ ಉಂಡೆಗಳನ್ನು ಆ ಹಳ್ಳಿಯ ಮೇಲೆ ಬೀಳಲು ಶುರುವಾದಾಗ ಅಲ್ಲಿನ ಜನರು ತುಂಬಾ ಭ’ಯಪಟ್ಟು ಓಡಲು ಶುರುಮಾಡಿದರು. ಅದೇವೇಳೆ ಭೀಷ್ಮ ಪಿತಾಮಹರ ಸಾರಥಿಯಾಗಿದ್ದ ಅತಿರಥನ ಪತ್ನಿ ರಾಧಾ ಕೂಡ ಗರ್ಭವತಿಯಾಗಿ ಇರುತ್ತಾಳೆ ಆಕೆ ಕೂಡ ಸೂರ್ಯದೇವನ ತಾ’ಪಕ್ಕೆ ಕುಸಿದು ಬಿಳ್ತಾಳೆ. ಒಮ್ಮೆ ಅತಿರಥ ನದಿಯ ದಡದಲ್ಲಿ ನಿಂತು ಪ್ರಾರ್ಥಿಸುತ್ತಿದ್ದಾಗ ಅ ವೇಳೆ ನದಿಯಲ್ಲಿ ಮಗು ತೇಲಿ ಬರುತ್ತಿದ್ದನ್ನು ಕಂಡು ಕೂಡಲೇ ನೀರಿಗೆ ಜಿಗಿದು ಮಗುವನ್ನು ರಕ್ಷಿಸುತ್ತಾನೆ ಆ ಕೂಡಲೇ ಸೂರ್ಯ ದೇವನ ತಾ’ಪವು ಕೂಡ ಯಥಾಸ್ಥಿತಿಗೆ ಬರುತ್ತದೆ.

ಆ ನಂತರ ಕಂದಮ್ಮನನ್ನು ಅಧಿರಥ ರಕ್ಷಿಸಿ ಕೊಂಡು ಹಿಂದಿರುಗುವ ವೇಳೆ ಕುಂತಿಯ ಆಸ್ಥಾನದ ಸೇವಕಿ ಎದುರಾಗುತ್ತಾಳೆ. ಹಾಗ ಈ ಮಗುವನ್ನು ರಕ್ಷಿಸಲು ನನಗೇಕೆ ಹೇಳುತ್ತಿದ್ದಿರಿ ಎಂದು ಪ್ರಶ್ನೆ ಮಾಡುತ್ತಾನೆ.. ಹಾಗಾ ಸೇವಕಿ ಕೊಟ್ಟ ಉತ್ತರ ನೀನು ಮಹಾರಾಜನ ಸಾರಥಿ ಅದಕ್ಕಾಗಿ ಅಂತ ಹೇಳ್ತಾರೆ.. ನಂತರ ಕುಂತಿಯ ಸೇವಕಿ ನಡೆದ ಘ’ಟನೆಯನ್ನು ವಿವರಿಸುತ್ತಾಳೆ ಒಮ್ಮೆ ಕುಂತಿ ಭೋಜನ ಆಸ್ಥಾನಕ್ಕೆ ಋಷಿಮುನಿಗಳಾದ ದೂರ್ವಾಸ ಮುನಿಗಳು ಆಗಮಿಸಿತ್ತಾರೆ ಅವರಿಗೆ ಸೇವೆ ಸಲ್ಲಿಸುವಂತೆ ಬೋಜ ರಾಜನ ಮಗಳಾದ ಕುಂತಿದೇವಿಗೆ ಹೇಳ್ತಾರೆ.. ಅವರ ಹಣತೆಯಂತೆ ಕುಂತಿ ಕೂಡ ದೂರ್ವಾಸ ಋಷಿಮುನಿಗಳ ಸೇವೆಯನ್ನು ಮಾಡುತ್ತಾರೆ.. ಅವಳ ಸೇವೆಯನ್ನು ಮೆಚ್ಚಿದ ದೂರ್ವಾಸ ಮುನಿಗಳು ಅವಳಿಗೆ ಒಂದು ವರವನ್ನು ಕೊಡಲು ಹಿಚ್ಚಿಸುತ್ತಾರೆ ನಂತರ ದೂರ್ವಾಸ ಮುನಿಗಳು ಒಂದು ಮಂತ್ರವನ್ನು ಹೇಳಿಕೊಡುತ್ತಾರೆ.. ಆ ಮಂತ್ರದ ಮಹತ್ವವೇನು ಎಂಬುದನ್ನು ಕೂಡ ತಿಳಿಸಿಕೊಡುತ್ತಾರೆ..

ನೀನು ಯಾವ ದೇವರನ್ನು ನೆನಪಿಸಿಕೊಂಡು ಈ ಮಂತ್ರವನ್ನ ಜಪಿಸಿದರೆ ಸಾಕು ಅವರಿಂದ ನಿನಗೆ ಮಗು ಪ್ರಾಪ್ತಿಯಾಗುತ್ತೆ ಎಂದು ಹೇಳುತ್ತಾರೆ.. ಇದು ನೆರವೇರುತ್ತದೆಯೋ ಇಲ್ಲವೋ ಎಂಬ ಅನುಮಾನ ಕುಂತಿ ದೇವಿಗೆ ಕಾಡಲಾರಂಭಿಸುತ್ತದೆ ಒಂದು ಬಾರಿ ಪ್ರಯತ್ನಿಸೋಣ ಎಂದು ತನಗೆ ಬಹಳ ಪ್ರಿಯವಾದ ಸೂರ್ಯದೇವನ ಬಳಿಗೆ ಬಂದು ಮಂತ್ರವನ್ನು ಪಠಿಸುತ್ತಾಳೆ ಕೂಡಲೇ ಪ್ರತ್ಯಕ್ಷವಾದ ಸೂರ್ಯದೇವ ಈ ಮಂತ್ರದ ಶಕ್ತಿ ಏನೆಂಬುದು ತಿಳಿದಿಲ್ಲವೇ ದೂರ್ವಾಸ ಮುನಿಗಳು ಹೇಳಿದಂತೆ ನಾನು ನಿನಗೆ ಮಗುವನ್ನು ಕರುಣಿಸುತ್ತೇನೆ ಹಾಗ ಸೂರ್ಯ ದೇವ ಈ ಮಗು ಕವಚ ಕುಂಡಲದೊಂದಿಗೆ ಜನಿಸುತ್ತದೆ ಎಂದು ಹೇಳುತ್ತಾನೆ.. ಕುಂತಿದೇವಿ ವಿವಾಹವಾಗದ್ದೆ ಕರ್ಣನಿಗೆ ಜನ್ಮ ನೀಡಿ ತಾಯಿ ಆಗುತ್ತಾಳೆ ಇನ್ನೂ ಈ ಸತ್ಯವನ್ನು ಯಾರ ಬಳಿಯೂ ಹೇಳಬಾರದೆಂದು ಸೇವಕಿ ಹೇಳುತ್ತಾಳೆ.. ತಕ್ಷಣವೇ ಅಧಿರಥ ಹೇಳಿದ್ದು ಹೇಗೆ ಸೇವಕಿ ಈ ಮಗು ದಿವ್ಯವಾದ ಮಗು ಕ್ಷತ್ರಿಯ ಕುಲದಲ್ಲಿ ಹುಟ್ಟಿದ ಮಗು ನಾನು ಸೂತ ಕೂಲದವನು ನೀಚ ಜಾತಿಯವನು ನಾನು ಹೇಗೆ ಈ ಮಗುವನ್ನು ಘೋಷಿಸಲಿ ಎಂದು ಸೇವಕಿಗೆ ಹೇಳುತ್ತಾನೆ..

ಹಾಗ ಸೇವಕಿ ಈ ಮಗುವನ್ನು ಸೂತಪುತ್ರ ನಾಗಿಯೇ ಬೆಳೆಸು ಎಂದು ಸೇವಕಿಯ ಅಧಿರಥನ ಬಳಿ ಭಾಷೆಯನ್ನು ಕೇಳ್ತಾಳೆ ನಾನು ಮಹಾರಾಜನಿ ಗೋಸ್ಕರ ನನ್ನ ಪ್ರಾ’ಣವನ್ನು ಕೊಡಲು ಸಿದ್ಧ. ನನಗೆ ಈ ಮಗುವಿನದೇ ಚಿಂತೆ ಸತ್ಯ ಎಂದು ಮರೆಮಾಚಲು ಸಾಧ್ಯವಿಲ್ಲ ಸೇವಕಿ ಎಂದಾಗ.. ಸೇವಕಿ ಹೇಳಿದ್ದು ಹೀಗೆ ಒಂದು ಸಣ್ಣ ಸುಳ್ಳಿನಿಂದ ಎಂತಹ ಸತ್ಯವನ್ನು ಕೂಡ ಅಸತ್ಯವಾಗಿಸಬಹುದು ಅದಕ್ಕಾಗಿಯೇ ಈ ವಿಷಯವನ್ನು ಗುಪ್ತವಾಗಿ ಹಿಡಿ ಎಂದು ಭಾಷೆ ಕೇಳಿದಾಗ ಸೇವಕಿ.. ಸಾರಥಿ ಅಧಿರಥ ಭಾಷೆಯನ್ನು ಕೊಡಲು ಮುಂದಾಗುತ್ತಾನೆ ನಂತರ ಅಧಿರಥ ಒಂದು ವಿಷಯವನ್ನ ಕುಂತಿ ಸೇವಕಿಗೆ ಹೇಳ್ತಾರೆ ಇಲ್ಲಿನ ಜನ ಬಲವಾದ ದಿವ್ಯ ಮನುಷ್ಯನಿಗೆ ನಮಸ್ಕಾರ ಮಾಡ್ತಾರೆ ಅದ್ರೆ ಈ ರೀತಿ ದುರ್ಬಲವಾದ ಮನುಷ್ಯನನ್ನು ಕಂಡರೆ ಅಪಮಾನವನ್ನು ಮಾಡಿ ದಂಡ ಕೊಡ್ತಾರೆ.‌‌. ಆಗ ಸೇವಕಿ ಹೇಳಿದ್ದು ಇಷ್ಟೇ ಮಗುವಿಗೆ ಶಕ್ತಿ ಮತ್ತು ಬಲದ ಪರಿಚಯ ಮಾಡಿಸಿ ಎಂದು ಹೇಳಿ ಅಲ್ಲಿಂದ ಹೊರಟು ಬಿಡುತ್ತಾರೆ..

ಮನೆಗೆ ಬಂದ ಕೂಡಲೇ ಅಧಿರಥ ಪತ್ನಿಯಾದ ರಾಧೆ ಹೆರಿಗೆ ನೋ’ವಿನಿಂದ ಬಳಲುತ್ತಿರುವುದನ್ನು ಕಂಡು ಹೇಗಾದರೂ ಮಾಡಿ ಈ ಮಗುವನ್ನು ನನ್ನ ಮಗುವೆಂದು ಒಪ್ಪಿಸಲು ಪ್ರಯತ್ನಿಸುತ್ತೆನೆಂದು.. ಹಿಂದಿನ ಬಾಗಿಲಿನಿಂದ ಬಂದು ಆ ಮಗುವನ್ನು ಕೈಗೆತ್ತಿಕೊಂಡು ಬಾಗಿಲನ್ನು ತೆರೆದಾಗ ಸೂಲಗಿತ್ತಿ ಅಧಿರಥ ಬಂದಕೂಡಲೇ ರಾಜ ಮೊದಲ ಗಂಡು ಮಗು ಜನಿಸಿದೆ ಎರಡನೇ ಮಗುವಿಗೆ ನೀವೇ ಹೆರಿಗೆ ಮಾಡಿಸಬೇಕು ಎಂದು ಹೇಳುತ್ತಾಳೆ.. ನಮಗೆ ದೇವರ ಅನುಗ್ರಹದಿಂದ ಎರಡು ಗಂಡು ಮಗುವಾಗಿದೆ ಮತ್ತು ಮೊದಲನೇಯ ಮಗುವಿಗೆ ಸೋನಿ ಮತ್ತು ಎರಡನೇಯ ಮಗುವನ್ನ ಕೈಗೆತ್ತಿಕೊಂಡ ಕೂಡಲೇ ಎಲ್ಲಿಂದಲೋ ಸೂರ್ಯದೇವ ಕಿಟಕಿಯಿಂದ ತನ್ನ ಪ್ರಕಾಶಮಾನವಾದ ಕಿರಣಗಳು ಆ ಮಗುವಿನ ಮೇಲೆ ಬೀಳುತ್ತದೆ ಆಗ ಅಧಿರಥ ಸೂರ್ಯದೇವನಿಗೆ ಮಗುವನ್ನು ತೋರಿಸಿ ಇದು ನಿನ್ನ ಪ್ರಸಾದದ ಮಗು ನಿನ್ನ ಪ್ರಕಾಶ ಈ ಮಗುವಿಗೆ ಕವಚ ಕುಂಡಲವಾಗಬೇಕು ನಿಮ್ಮ ತೇಜಸ್ಸು ನಿಮ್ಮ ಪರಿಚಯ ಮಾಡಿಕೊಡಬೇಕು ನಿಮ್ಮ ಅನುಮತಿಯಿಂದಲೇ ಹೆಸರನ್ನು ಇಡುತ್ತೇನೆ ಅದು ಕರ್ಣ ಸೂರ್ಯಪುತ್ರ ಕರ್ಣ ಎಂದು ಹೆಸರನ್ನು ಹೇಳುತ್ತಾರೆ.. ಈ ರೀತಿ ಕರ್ಣನ ಜನನ ಹಾಗೂ ಅವನ ಘೋಷಣೆ ಕೂಡ ಹಾಗುತ್ತದೆ…