ನಮಸ್ತೆ ಸ್ನೇಹಿತರೆ, ರೈತ ಮನಸ್ಸು ಮಾಡಿದ್ದರೆ ಈಡೀ ದೇಶವೇ ತನ್ನತ್ತ ನೋಡುವಂತೆ ಮಾಡುತ್ತಾರೆ, ಯಾಕೆಂದರೆ ಇಂಜನಿಯರಿಂಗ್ ಓದಿ ಎಷ್ಟೇ ಹೊಸ ತಂತ್ರಜ್ಞಾನ ಕಂಡು ಹಿಡಿದರು ನಮ್ಮ ರೈತರು ಮಾಡುವ ಪ್ರಯೋಗದ ಮುಂದೆ ಯಾವ ಇಂಜನಿಯರಿಂಗ್ ವಿದ್ಯಾಭ್ಯಾಸ ಕೂಡ ಬೇಕಾಗಿಲ್ಲ, ತನ್ನ ಸ್ವಂತ ಬುದ್ದಿ ಹಾಗು ಆಲೋಚನೆಯಿಂದ ಕೃಷಿಗೆ ಈ ರೈತ ಮಾಡಿದ ಐಡಿಯಾ ಇಡೀ ದೇಶವೇ ತನ್ನತ ತಿರುಗಿ ನೋಡುವಂತೆ ಮಾಡಿದ್ದಾರೆ.. ಈ ರೈತ ಕೃಷಿಗೆ ಐಡಿಯಾ ಏನೆಂಬುದು ನೋಡೋಣ ಬನ್ನಿ.. ಹೌದು ಸ್ನೇಹಿತರೆ, ಯಾವುದೇ ಒಂದು ಪ್ರಯೋಗ ಅಥವಾ ಆಲೋಚನೆಯನ್ನು ಬೇರೆಯವರನ್ನು ನೋಡಿ ಅವರಂತೆ ಅನುಸರಿಸುವುದು ಅಥವಾ ನಾವೇ ಅದನ್ನು ವಿಭಿನ್ನ ರೀತಿಯಲ್ಲಿ ಪ್ರಯೋಗ ಮಾಡೋದಕ್ಕೆ ತುಂಬಾನೇ ವ್ಯತ್ಯಾಸವಿದೆ.. ಎಲ್ಲರಂತೆ ಆಲೋಚನೆ ಮಾಡುವವರು ಅವರ ಹಿಂದೆಯೇ ಇರುತ್ತಾರೆ..
[widget id=”custom_html-2″]

ಆದರೆ ತನ್ನ ಬುದ್ಧಿವಂತಿಕೆಯಿಂದ ಬೇರೆಯವರಿಗಿಂತ ಒಂದು ಪಟ್ಟು ಮುಂದೆ ಹೋಗಿ ಆಲೋಚನೆ ಮಾಡುವವರು ಅವರಿಗೆ ಒಂದು ಹೆಜ್ಜೆ ಮುಂದೆ ಸಾಗುತ್ತಾರೆ.. ತನಗೆ ಇರುವುದು ಕಡಿಮೆ ಜಮೀನು ಆ ಭೂಮಿಗೆ ಸರಿಯಾದ ನೀರಿನ ವ್ಯವಸ್ಥೆ ಇಲ್ಲ ಎಂದು ಚಿಂತೆ ಪಡುವ ರೈತರು ಆ ಸಮಯದಲ್ಲಿ ತಮ್ಮ ವ್ಯವಸಾಯವನ್ನು ಕೈ ಬಿಡುತ್ತಾರೆ.. ಆದರೆ ಈ ಒಂದು ಪ್ರಯೋಗ ಮಾತ್ರ ಕಡಿಮೆ ಭೂಮಿಯಲ್ಲಿ ಹಾಗು ಇರುವಷ್ಟು ನೀರಿನಲ್ಲಿ ಹೆಚ್ಚು ಹೆಚ್ಚು ಲಾಭ ಗಳಿಸಬಹುದು.. ನಮ್ಮ ಭಾರತದಲ್ಲಿ ಹೆಚ್ಚಿನ ರೈತರು 1 ರಿಂದ 5 ಎಕರೆ ಭೂಮಿ ಮಾತ್ರವೇ ಹೊಂದಿರುತ್ತಾರೆ.. ಅದೇರೀತಿ ಮಹಾರಾಷ್ಟ್ರದ ವಿಶ್ವನಾಥ್ ಎನ್ನುವ ರೈತನಿಗೆ ಕೇವಲ ಒಂದು ಎಕರೆ ಭೂಮಿ ಮಾತ್ರವೇ ಹೊಂದಿದ್ದರು, ಅದರ ಜೊತೆಗೆ ಸ್ವಲ್ಪ ಮಟ್ಟಿಗೆ ನೀರಿನ ವ್ಯವಸ್ಥೆ ಕೂಡ ಇತ್ತು.. ತನ್ನ ಜಮೀನಿನಲ್ಲಿ ಏನಾದರೂ ಮಾಡಿ ಒಳ್ಳೆಯ ಹಣ ಸಂಪಾದನೆ ಮಾಡಬೇಕು ಎಂದು ಆಲೋಚನೆ ಮಾಡಿದರು, ಅದೇರೀತಿ ವ್ಯವಸಾಯದಲ್ಲಿ ಒಂದು ಪದ್ದತಿ ವಿಶ್ವನಾಥ್ ಅವರನ್ನು ಆಕರ್ಷಣೆ ಮಾಡಿತ್ತು..
[widget id=”custom_html-2″]

ಇನ್ನು ಆ ಪದ್ದತಿಯ ಹೆಸರು ‘ಮಲ್ಟಿ ಲೇಯರ್ ಫಾರ್ಮಿಂಗ್’ ಅಂದರೆ ಮಿಶ್ರ ಬೆಳೆ ಪದ್ದತಿ.. ಈ ಒಂದು ಪದ್ದತಿಯನ್ನು ಅನುಸರಿಸಿಕೊಂಡ ವಿಶ್ವನಾಥ್ ಅವರು, ತಮ್ಮ ಬಳಿ ಇದ್ದ ಜಮೀನಿಗೆ ಮಾಡಿದ ಐಡಿಯಾ ಏನು ಗೊತ್ತಾ.. ವಿಶ್ವನಾಥ್ ಅವರು ಬಳಸಿದ ಐಡಿಯಾದಿಂದ ಮೊದಲು ಭೂಮಿಯ ಒಳಗೆ ಬೆಳೆಯುವ ತರಕಾರಿಯನ್ನು ಹಾಕುವುದು ಆನಂತರ ಭೂಮಿಗೆ ಅಂಟಿಕೊಳ್ಳುವ ಬೆಳೆ, ಭೂಮಿಯಿಂದ ಮೂರು ಅಡಿ ಉದ್ದ ಬೆಳೆಯುವ ಬೆಳೆ, ನಂತರ ಆರು ಅಡಿ ಎತ್ತರ ಬೆಳೆಯುವ ಬೆಳೆ, ಹಾಗು ಕೊನೆಯದಾಗಿ ಮರದ ರೂಪಕ್ಕೆ ಬರುವ ಬೆಳೆ ಈಗೆ ಐದು ರೀತಿಯ ಬೆಳೆಯನ್ನು ವಿಶ್ವನಾಥ್ ಅವರು ತಮ್ಮ ಜಮೀನಿನಲ್ಲಿ ಹಾಕಿದರು, ಈ ರೀತಿಯ ಪದ್ದತಿಯಲ್ಲಿ ನೀರನ್ನು ಭೂಮಿಯನ್ನು ಸರಿಯಾದ ರೀತಿಯಲ್ಲಿ ಬಳಸಬಹುದು..

ಈ ಪದ್ದತಿಯಲ್ಲಿ ಬೆಳೆಗಳನ್ನು ಬೆಳೆದಾಗ, ಒಂದು ಬೆಳೆಯಲ್ಲಿ ನಷ್ಟವಾದರೆ ಮತ್ತೊಂದು ಬೆಳೆಯಲ್ಲಿ ಲಾಭ ಕಾಣಬಹುದು.. ಆಗ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ, ಇದರ ಜೊತೆಗೆ ರಾಸಾಯನಿಕ ಗೊಬ್ಬರ ಕೂಡ ಉಪಯೋಗಕ್ಕೆ ಬರುತ್ತದೆ.. ಈ ರೀತಿ ಮಾಡಿದ್ದರೆ ಇರುವ ಸಣ್ಣಪುಟ್ಟ ಜಮೀನಿನಲ್ಲಿ ಹೆಚ್ಚು ಲಾಭ ಪಡೆಯಬಹುದು.. ಈ ಮಿಶ್ರ ಪದ್ದತಿಯಲ್ಲಿ ತರಕಾರಿ ಹಾಗು ವಿಭಿನ್ನ ರೀತಿಯ ಬೆಳೆಗಳನ್ನು ತೆಗೆದ ಈ ರೈತ, ಈಗ ಕೇವಲ ಒಂದು ಎಕರೆ ಜಮೀನಿನಲ್ಲಿ ವರ್ಷಕ್ಕೆ ಸರಿಸುಮಾರು 10 ಲಕ್ಷ ಲಾಭ ಗಳಿಸುತ್ತಿದ್ದಾರೆ.. ಹಾಗೆಯೇ ವಿಶ್ವನಾಥ್ ಮಾಡಿದ ಈ ಐಡಿಯಾವನ್ನು ಬಳಕೆ ಮಾಡಿದ ಅಲ್ಲಿನ ರೈತರು ಕನಿಷ್ಠ ಅಂದ್ರೂ 4ರಿಂದ5 ಲಕ್ಷ ಲಾಭ ಪಡೆಯುತ್ತಿದ್ದಾರೆ.. ಕೃಷಿ ಮಾಡೋದಕ್ಕೆ ಒಂದೆ ಪದ್ದತಿ ಅಲ್ಲ ಅದಕ್ಕೆ ನಾನಾ ರೀತಿಯ ವ್ಯವಸಾಯ ಪದ್ದತಿಗಳು ಇದ್ದಾವೇ ಆದರೆ ಅದನ್ನು ನಾವು ಅಳವಡಿಸಿಕೊಳ್ಳಬೇಕು ಅಷ್ಟೇ.. ಸ್ನೇಹಿತರೆ ಕೃಷಿಯಲ್ಲಿ ಒಂದೆ ಬಾರಿಗೆ ಐದು ರೀತಿಯ ಬೆಳೆಗಳನ್ನು ತೆಗೆಯಬಹುದು ಎಂದು ತೋರಿಸಿದ ವಿಶ್ವನಾಥ್ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..