ನಮಸ್ತೆ ಸ್ನೇಹಿತರೆ, ಈಗಿನ ಪ್ರಪಂಚದಲ್ಲಿ ಹಣ ಸಂಪಾದನೆ ಮಾಡುವುದು ತುಂಬಾ ಸುಲಭ ಆದರೆ ಹಣ ಸಂಪಾದನೆ ಮಾಡೋಕೆ ಕೇವಲ ವಿದ್ಯೆ ಇದ್ರೆ ಸಾಲದು ಬುದ್ದಿಯು ಇರಬೇಕು.. ಯಾಕೆಂದರೆ ಎಷ್ಟೋ ಜನ ಪದವಿಯನ್ನು ಮುಗಿಸಿ ಕೆಲಸಕ್ಕೆ ನಾನಾ ರೀತಿಯ ಪ್ರಯತ್ನಗಳನ್ನ ಮಾಡುತ್ತಾರೆ.. ಅದ್ರು ಅಂತಹವರಿಗೆ ಕೆಲಸ ಅನ್ನೋದು ಸಿಗುವುದಿಲ್ಲ.. ಆ ಸಮಯದಲ್ಲಿ ಸರ್ಕಾರವನ್ನು ಕಂಪನಿಗಳನ್ನು ಹಾಗು ಈ ಸಮಾಜವನ್ನು ದ್ವೇಷಿಸುತ್ತೇವೆ.. ಆದರೆ ನಮ್ಮ ಜೀವನದಲ್ಲಿ ನಮಗೆ ಬೇಕಾದಂತಹ ಉದ್ಯೋಗವನ್ನು ಸೃಷ್ಟಿಸಿ ಕೊಳ್ಳುವ ಶಕ್ತಿ ನಮ್ಮಗಿದೆ, ಆದರೆ ಅದನ್ನು ಅಪಹಾಸ್ಯ ಮಾಡಿ ನಮ್ಮಷ್ಟಕ್ಕೆ ನಾವೇ ನಮ್ಮ ಜೀವನವನ್ನು ಕತ್ತಲೆಯ ಲೋಕಕ್ಕೆ ತಳ್ಳುತ್ತೇವೆ..
[widget id=”custom_html-2″]

ಈ ಪ್ರಪಂಚದಲ್ಲಿ ಹುಟ್ಟುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ವಿಭಿನ್ನ, ಹಾಗೆಯೇ ಅಂತಹವರಿಗೆ ವಿಭಿನ್ನ ರೀತಿಯ ಪ್ರತಿಭೆ ಇರುತ್ತದೆ ಅನ್ನೋದು ಎಂದಿಗೂ ಮರೆಯಬಾರದು.. ಈಗೆ ತನ್ನ ಆಸಕ್ತಿ ಹಾಗು ಬುದ್ಧಿವಂತಿಕೆಯನ್ನು ಬಂಡವಾಳವಾಗಿ ಮಾಡಿಕೊಂಡು, ಈ ಮಹಿಯ ಪ್ರತಿ ತಿಂಗಳಿಗೆ ಸುಮಾರು ೮ ಲಕ್ಷದಷ್ಟು ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ, ಸ್ನೇಹಿತರೆ ತಿಂಗಳಿಗೆ ಇಷ್ಟು ಹಣವನ್ನು ಸಂಪಾದನೆ ಮಾಡಲು ಈ ಮಹಿಳೆ ಮಾಡಿದ್ದೇನು ಗೊತ್ತಾ! ಪೂರ್ತಿಯಾಗಿ ನೋಡೋಣ.. ಈ ಮಹಿಳೆಯ ಹೆಸರು ರಿತು ಕೌಷಿಕ್ ಇವರ ವಯಸ್ಸು ೩೧ ವರ್ಷ ಹರಿಯಾಣ ರಾಜ್ಯದ ಒಂದು ಗ್ರಾಮದಲ್ಲಿ ಹುಟ್ಟಿದರು, ಇವರಿಗೆ ೧೬ ವರ್ಷದಲ್ಲೇ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದರು.. ಆದರೆ ರಿತು ಕೌಷಿಕ್ ಅವರ ಗಂಡ ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದರು..
[widget id=”custom_html-2″]

ಯಾಕೆಂದರೆ ರಿತು ಕೌಷಿಕ್ ಅವರು ಗಂಡನ ಬಳಿ ನಾನು ಕಾಲೇಜಿಗೆ ಹೋಗಿ ಡಿಗ್ರಿ ಮಾಡುತ್ತೇನೆ ಎಂದು ಹೇಳಿದ್ದಾಗ, ಆಕ್ಕೆಯನ್ನು ಪ್ರೋತ್ಸಾಹಿದ ಗಂಡ ನಿನ್ನ ಇಷ್ಟದಂತೆ ಕಾಲೇಜಿಗೆ ಹೋಗಿ ಡಿಗ್ರಿ ಮಾಡು ಎಂದು ಹೇಳಿದರು… ರಿತು ಕೌಷಿಕ್ ಅವರು ಮೊದಲೇ ಇಬ್ಬರು ಮಕ್ಕಳ ತಾಯಿ ಆಗಿದ್ದರು, ರಿತು ಕೌಷಿಕ್ ಕಾಲೇಜಿಗೆ ಹೋಗುತ್ತಾ ತನ್ನ ಇಬ್ಬರು ಮಕ್ಕಳನ್ನು ಸಾಕುತ್ತಿದ್ದರು ನಂತರ ತನ್ನ ಆಸೆಯಂತೆ ಡಿಗ್ರಿ ಅನ್ನು ರಿತು ಪೂರ್ಣಗೊಳಿಸಿದರು.. ಆದರೆ ರಿತು ಅವರಿಗೆ ಹ್ಯಾಂಡ್ ಬ್ಯಾಗ್ ತಯಾರು ಮಾಡುವುದು ಅಂದರೆ ತುಂಬಾನೇ ಇಷ್ಟವಾಗಿತ್ತು.. ಅದೆ ಸಮಯದಲ್ಲಿ ಅಕ್ಕಪಕ್ಕದ ಮನೆಯವರು ತಮ್ಮಗೆ ಬೇಕಾದ ವಸ್ತುಗಳನ್ನು ಆನ್ ಲೈನ್ ನಲ್ಲಿ ಖರೀದಿ ಮಾಡುತ್ತಿರುವುದನ್ನು ನೋಡಿದ ರಿತು ಅವರು,
[widget id=”custom_html-2″]

ನಾನು ಯಾಕೆ ಹ್ಯಾಂಡ್ ಬ್ಯಾಗ್ ತಯಾರಿಸಿ ಆನ್ ಲೈನ್ ನಲ್ಲಿ ಮಾರಾಟ ಮಾಡಬಾರದು ಎನ್ನುವ ಆಲೋಚನೆ ರಿತುಕೌಷಿಕ್ ಅವರಿಗೆ ಬಂದಿತು.. ಇನ್ನು ಈ ವಿಷಯವನ್ನು ತನ್ನ ಗಂಡನಿಗೆ ತಿಳಿಸಿದ ರಿತು ಕೌಷಿಕ್ ಅವರು ತನ್ನ ಗಂಡನಿಂದ ಕಂಪ್ಯೂಟರ್ ಬಗ್ಗೆ ತಿಳಿದುಕೊಂಡು, ಕೆಲವೊಂದು ಹ್ಯಾಂಡ್ ಬ್ಯಾಗ್ ತಯಾರಿಸಿ ಫ್ಲಿಪ್ಕಾಟ್ ನಲ್ಲಿ ಮಾರಾಟ ಮಾಡಲು ಶುರುಮಾಡಿದರು, ರಿತು ಅವರು ತಯಾರಿಸಿದ ಬ್ಯಾಗ್ ಗುಣಮಟ್ಟ ತುಂಬಾ ಚನ್ನಾಗಿದ್ದು, ಅವರು ತಯಾರಿಸಿದ ಹ್ಯಾಂಡ್ ಬ್ಯಾಗ್ ನ ಬೇಡಿಕೆ ಹೆಚ್ಚಾಗುತ್ತಾ ಹೋಯಿತು.. ಮನೆ ಹಾಗು ತನ್ನ ಮಕ್ಕಳನ್ನು ನೋಡಿಕೊಳ್ಳುತ್ತಾ, ಆನ್ ಲೈನ್ ನಲ್ಲಿ ಹ್ಯಾಂಡ್ ಬ್ಯಾಗ್ ಮಾರಾಟ ಮಾಡುತ್ತಿರುವ ರಿತು ಅವರು ತಿಂಗಳಿಗೆ ಸುಮಾರು ೮ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ.. ಅಂದರೆ ವರ್ಷಕ್ಕೆ ಬರೋಬ್ಬರಿ ಒಂದು ಕೋಟಯಷ್ಟು ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ ರಿತು ಕೌಷಿಕ್ ಅವರು..

ಸ್ನೇಹಿತರೆ ತನ್ನ ಜೀವನವನ್ನು ನಡೆಸಲು ರಿತು ಅವರು ಮಾಡಿದ ಈ ಉಪಾಯ ಎಷ್ಟು ಒಳ್ಳೆಯದು ಅಲ್ವಾ.. ತನ್ನ ಇಷ್ಟದ ಕೆಲಸವನ್ನು ಫ್ಯಾಷನ್ ರೀತಿಯಲ್ಲಿ ಬಂಡವಾಳ ಮಾಡಿಕೊಂಡ ರಿತು ಕೌಷಿಕ್ ಅವರು ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.. ಹಣ ಸಂಪಾದನೆ ಮಾಡೋದಕ್ಕೆ ನೂರಾರು ದಾರಿಗಳಿವೆ ಅದರೆ ಅದನ್ನು ಹೇಗೆ ನಮ್ಮ ಬಳಿಗೆ ಬರುವಂತೆ ಮಾಡಬೇಕು ಎನ್ನುವುದು ಅವರವರ ಬುದ್ದಿವಂತಿಕೆಗೆ ಸೇರಿದ್ದು, ಸ್ನೇಹಿತರೆ ರಿತು ಅವರ ಈ ಸಾಧನೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..