Advertisements

20 ರೂಪಾಯಿ ನೀರಿನ ಬಾಟಲ್ ಮಾರುತ್ತಿದ್ದ ಹುಡುಗನ ಬಳಿ ಈ ಶ್ರೀಮಂತ ವ್ಯಕ್ತಿ ಕೇಳಿದ್ದೇನು ಗೊತ್ತಾ.? ಆ ಹುಡುಗನ ಮಾತು ಕೇಳಿ ಆಶ್ಚರ್ಯ ಪಟ್ಟರು ಅಲ್ಲಿನ ಜನ..

Inspire

ನಮಸ್ತೆ ಸ್ನೇಹಿತರೆ, ಜೀವನದಲ್ಲಿ ಪ್ರತಿಯೊಬ್ಬರು ಕೂಡ ಒಂದಲ್ಲ ಒಂದು ರೀತಿಯಲ್ಲಿ ಹಣಕ್ಕಾಗಿ ತುಂಬಾನೇ ಕಷ್ಟ ಪಡುತ್ತಿರುತ್ತಾರೆ, ಅದರಲ್ಲೂ ಈಗಿನ ಪ್ರಪಂಚದಲ್ಲಿ ಒಂದು ದಿನದ ಸಂಪಾದನೆ ಆ ಒಂದು ದಿನಕ್ಕೆ ಖಾಲಿ ಮಾಡುವಂತಹ ಜನರನ್ನ ನೋಡಿದ್ದೇವೆ, ಆದರೆ ಅವರ ಒಂದು ದಿನದ ಸಂಪಾದನೆ ತನ್ನ ಕುಟುಂಬವನ್ನು ನಿಯಂತ್ರಣ ಮಾಡಲು ಸಹಾ ಆಗುವುದಿಲ್ಲ, ಅಲ್ಲದೆ ವ್ಯಾಪಾರ ಮಾಡುವ ಸಮಯದಲ್ಲಿ ಮಾರಾಟ ಮಾಡುವ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಕೇಳಿ ತೆಗೆದುಕೊಂಡು ಹೋಗುವ ಜನರನ್ನ ನೋಡಿದ್ದೇವೆ, ಅದೇರೀತಿ ಇಲ್ಲಿ ಕೂಡ ರೈಲ್ವೆ ಸ್ಟೇಷನ್ ನಲ್ಲಿ ಈ ಹುಡುಗನ ಬಳಿ 20 ರೂಪಾಯಿ ನೀರಿನ ಬಾಟಲ್ ಗಳನ್ನು ವ್ಯಾಪಾರ ಮಾಡುತ್ತಿದ್ದ ಹುಡುಗನ ಬಳಿ ಗ್ರಾಹಕ ಕೇಳಿದ್ದೇನು ಗೊತ್ತಾ.? ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ, ಈ ಹುಡುಗ ರೈಲ್ವೆ ನಿಲ್ದಾಣದಲ್ಲಿ ಕುಡಿಯುವ ನೀರಿನ ಬಾಟಲ್ ಗಳನ್ನು ಮಾರಾಟ ಮಾಡುತ್ತಿದ್ದ, ಈ ಹುಡುಗನಿಗೆ 15 ವರ್ಷ ವಯಸ್ಸಾಗಿತ್ತು, ನೀರಿನ ಬಾಟಲ್ ಗಳನ್ನು ಮಾರಾಟ ಮಾಡಿದಾಗ ಬರುವ ಹಣದಿಂದ ತನ್ನ ಕುಟುಂಬದ ಜೊತೆ ಸಂತೋಷದಿಂದ ಇರುತ್ತಿದ್ದನು, ಆದರೆ ರೈಲ್ವೆ ನಿಲ್ದಾಣದಲ್ಲಿ ನಡೆದ ಆ ಒಂದು ಘ’ಟನೆಯನ್ನು ಅಲ್ಲಿನ ಜನರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿ ತುಂಬಾನೇ ವೈರಲ್ ಮಾಡಿದ್ದರು, ಹೌದು ಸಾಮಾನ್ಯವಾಗಿ ಯಾರಾದರೂ ದೂರದ ಊರುಗಳಿಗೆ ಪ್ರಯಾಣ ಮಾಡುವಾಗ ರೈಲಿನ ಮೂಲಕ ಪ್ರಯಾಣ ಮಾಡುತ್ತಾರೆ.. ರೈಲಿನಲ್ಲಿ ಪ್ರಯಾಣ ಮಾಡುವಾಗ ರೈಲ್ವೆ ಸ್ಟೇಷನ್ ನಲ್ಲಿ ತಮ್ಮ ಜೀವನಕ್ಕಾಗಿ ಮಾರಾಟ ಮಾಡುವಂತಹ ಅನೇಕ ಜನರನ್ನ ನೋಡಿದ್ದೇವೆ..

[widget id=”custom_html-2″]

ಆದರೆ ಜಾರ್ಖಂಡ್ ನ ಜಮ್ಯೆಡ್ಪುರ ರೈಲ್ವೆ ಸ್ಟೇಷನ್ ನಲ್ಲಿ, 15 ವರ್ಷದ ಈ ಹುಡುಗ ಪ್ರತಿನಿತ್ಯ ಬೆಳಗಿನಿಂದ ಸಂಜೆಯವರೆಗೂ ಕುಡಿಯುವ ನೀರಿನ ಬಾಟಲ್ ಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ, ಪ್ರತಿನಿತ್ಯ ಸ್ಟೇಷನ್ ಗೆ ರೈಲು ಬಂದ ತಕ್ಷಣವೇ ನೀರಿನ ಬಾಟಲ್ ಗಳನ್ನ ಒಂದು ಸಣ್ಣ ಬಕೆಟ್ ನಲ್ಲಿ ಹಾಕಿಕೊಂಡು, ಜನರ ಬಳಿಗೆ ಹೋಗಿ ಬಾಟಲ್ ಅನ್ನು ಮಾರಾಟ ಮಾಡುತ್ತಿದ್ದ.. ಒಂದು ದಿನ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಒಬ್ಬ ಓರ್ವ ಸೇಠು, ಆ ಹುಡುಗನ ಬಳಿ ಒಂದು ನೀರಿನ ಬಾಟಲ್ ನ ಬೆಲೆ ಎಷ್ಟೆಂದು ಕೇಳಿದ, ಅದಕ್ಕೆ ಆ ಹುಡುಗ ಒಂದು ನೀರಿನ ಬಾಟಲ್ ನ ಬೆಲೆ 20 ರೂಪಾಯಿ ಸರ್ ಎಂದು ಹೇಳಿದ.. ಹಾಗ ಆ ಸೇಠು 15 ರೂಪಾಯಿಗೆ ನೀರಿನ ಬಾಟಲ್ ಅನ್ನು ಕೊಡುತ್ತೀಯಾ ಎಂದು ಕೇಳಿದ, ಅದಕ್ಕೆ ಹುಡುಗ ಈ ನೀರಿನ ಬಾಟಲ್ ನ ಬೆಲೆ 20 ರೂಪಾಯಿ 15 ರೂಪಾಯಿಗೆ ಕೊಡಲು ಆಗುವುದಿಲ್ಲ ಎಂದು ಸೇಠುಗೆ ಹೇಳಿದ..

[widget id=”custom_html-2″]

ನಂತರ ಆ ಸೇಠು ಆ ಹುಡುಗನಿಗೆ ಈ ನೀರು ಎಲ್ಲಿಂದ ತಂದಿದ್ದೀಯಾ, ಕಂಪನಿಯಾದರು ಯಾವುದು ಎಂದು ಬೇಡವಾದ ಪ್ರಶ್ನೆಗಳನ್ನು ಕೇಳಲು ಶುರುಮಾಡಿದ.. ಇದನ್ನು ಸುತ್ತಮುತ್ತಲಿನ ಜನ ಗಮನಿಸುತ್ತಿದ್ದರು, ಆಗ ಹುಡುಗ ಏನು‌ ಮಾತಾನಾಡದೆ ನಗು ನಗುತ್ತಾ ಅಲ್ಲಿಂದ‌ ಹೊರಟು ಬಿಟ್ಟ, ನಂತರ ಅಲ್ಲಿನ ಜನರು ಯಾಕೆ ಈ ಹುಡುಗ ಏನು ಮಾತಾನಾಡದೆ ಅಲ್ಲಿಂದ ಹೊರಟು ಹೋದ ಎಂದು ಅಂದು ಕೊಂಡರು.. ಇದನ್ನೆಲ್ಲಾ ನೋಡುತ್ತಿದ್ದ ಒಬ್ಬ ವ್ಯಕ್ತಿ‌ ನೀರಿನ ಬಾಟಲ್ ಅನ್ನು ಮಾರುತ್ತಿದ್ದ ಹುಡುಗನ ಬಳಿ ಹೋಗಿ, ಆ ಸೇಠು ಅಷ್ಟು ಮಾತನಾಡಿದ್ದರು ಏನು ಮಾತಾನಾಡದೆ ಹಾಗೆಯೇ ನಗು ನಗುತ್ತಾ ಬಂದು‌ ಬಿಟ್ಟೆಯಲ್ಲಾ ಎಂದು ಪ್ರಶ್ನೆ ಮಾಡಿದ.. ಆಗ ಆ ಹುಡುಗ ಈ ರೀತಿಯಾಗಿ ಹೇಳಿದ..

ಸರ್ ಆ ಸೇಠುಗೆ ನೀರಿನ ದಾಹ ಇರಲಿಲ್ಲ, ಯಾಕೆಂದರೆ ಕುಡಿಯಲು ನೀರಿನ ಅಗತ್ಯ ಇದ್ದವರು ಮೊದಲು ನೀರನ್ನು ಕುಡಿದು ಆನಂತರ ನೀರಿನ ಬೆಲೆ ಎಷ್ಟು ಎಂದು ಕೇಳುತ್ತಾರೆ, ಅಥವಾ ನೀರಿನ ಬೆಲೆ‌ ಎಷ್ಟೇ ಇದ್ದರೂ ಅಷ್ಟು ಹಣವನ್ನು ಕೊಟ್ಟು ತಮ್ಮ ನೀರಿನ ದಾಹವನ್ನ ಕಡಿಮೆ ಮಾಡಿಕೊಳ್ಳುತ್ತಾರೆ.. ಆದರೆ ಆ ಸೇಠುಗೆ ನೀರಿನ ದಾಹ ಇರಲಿಲ್ಲ ಅದಕ್ಕೆ ಬೇಡವಾದ ಪ್ರಶ್ನೆಗಳನ್ನ ಕೇಳುತ್ತಿದ್ದ.. ಇಂತಹ ವ್ಯಕ್ತಿಗಳಿಗೆ ರೈಲಿನಲ್ಲಿ ಪ್ರಯಾಣ ಮಾಡುವಾಗ ಟೈಮ್ ಪಾಸ್ ಗಾಗಿ ಯಾರಾದರೂ ಒಬ್ಬರು ಬೇಕು, ಆದರೆ ನಾವು ಬೆಳಗ್ಗೆಯಿಂದ ಸಂಜೆಯವರೆಗೂ ಕಷ್ಟ ಪಟ್ಟು ದುಡಿದರೆ, 100 ರಿಂದ200 ರೂಪಾಯಿ ಸಿಗುತ್ತದೆ, ಅದರಲ್ಲಿ ಪ್ರತಿನಿತ್ಯ ಇಂತಹ ವ್ಯಕ್ತಿಗಳು ಸಿಗುತ್ತಾರೆ, ಆದರೆ ಅವರ ಬಳಿ ನಾವು ಜಗಳವಾಡುತ್ತಾ ಕುಳಿತರೆ, ನಮ್ಮ ಸಮಯ ಹಾಗು ನಮ್ಮ ಕೆಲಸ ಕೂಡ ವ್ಯರ್ಥ ಹಾಗುತ್ತದೆ, ಅದಕ್ಕೆ ನಾನು ಅವರು ಏನೇ ಮಾತನಾಡಿದರು ನಗುನಗುತ್ತಾ ಬಂದು ಬಿಟ್ಟೆ ಸರ್ ಎಂದು ಆ ಹುಡುಗ ಹೇಳುತ್ತಾನೆ..

ಇನ್ನು ಈ ವಿಚಾರವನ್ನ ಆ ವ್ಯಕ್ತಿ ತನ್ನ ಪೇಸ್ ಬುಕ್ ಖಾತೆಯಲ್ಲಿ ರೈಲ್ವೆ ಸ್ಟೇಷನ್ ನಲ್ಲಿ ನಡೆದ ಆ ಒಂದು ಘ’ಟನೆ ಬಗ್ಗೆ ಬರೆದು ಪೋಸ್ಟ್ ಮಾಡಿದ್ದನ್ನು, ಆದರೆ ಸ್ನೇಹಿತರೆ ನಾವು ದೊಡ್ಡ ದೊಡ್ಡ ಮಾಲ್ಗಳಿಗೆ ಹೋದಾಗ ಅವರ ಬಳಿ ನಾವು ತೆಗೆದುಕೊಂಡ ವಸ್ತುಗಳಿಗೆ ಚೌಕಾಸಿ ಮಾಡೋದಿಲ್ಲ.. ಆದ್ರೆ ಸಣ್ಣಪುಟ್ಟ ಅಂಗಡಿಗಳ ಬಳಿ ಹಾಗೂ ಬಡವರ ಬಳಿ ಪಡೆಯುವ ವಸ್ತುಗಳಿಗೆ ಚೌಕಾಸಿ ಮಾಡುವುದು ತಪ್ಪು ಎನ್ನುವುದು ಪ್ರತಿಯೊಬ್ಬರ ಅಭಿಪ್ರಾಯ, ಸ್ನೇಹಿತರೆ ನಿಮ್ಮ ಪ್ರಕಾರ ಸಣ್ಣಪುಟ್ಟ ಅಂಗಡಿಯಲ್ಲಿ ಹಾಗು ಇಂತಹ ವ್ಯಾಪಾರಿಗಳ ಬಿಳಿ ಚೌಕಾಸಿ ಮಾಡುವುದು ಸರಿ ಅಥವಾ ತಪ್ಪಾ, ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..