Advertisements

ಬಂಗಾರದಂತ ಬೆಳೆ ಬೆಳೆದ ಮಂಡ್ಯದ ಈ ರೈತ! ಈಗ ರೈತರನ ಐಡಿಯಾ ಇಡೀ ದೇಶದ ಎಲ್ಲಾ ಕಡೆ ಸಕ್ಕತ್ ವೈರಲ್ ಆಗಿದೆ?

Kannada Mahiti

ನಮಸ್ತೆ ಸ್ನೇಹಿತರೆ, ಕೃಷಿಗಾಗಿ ರೈತರು ಬಳಸುವ ಹೊಸ ಹೊಸ ಐಡಿಯಾಗಳು ಇಡೀ ಪ್ರಪಂಚವನ್ನೇ ತನ್ನತ್ತ ನೋಡುವಂತೆ ಮಾಡಿದ್ದೆ.. ಅಲ್ಲದೆ ರೈತರು ಬೆಳೆಯುವ ಬೆಳೆಗೆ ವಿದೇಶದಲ್ಲಿ ಕೂಡ ಉತ್ತಮ ಬೆಲೆ ಸಿಗುತ್ತಿದೆ, ಅದೇರೀತಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಹೇಶ್ ಕುಮಾರ್ ಮತ್ತು ಮಂಜು ಎಂಬುವವರು ಲಾಭದ ನಿರೀಕ್ಷೆಯಲ್ಲಿ ನಾಟಿ ಕನಕಾಂಬರ ಹೂವನ್ನು ತಮ್ಮ ಜಮೀನಿನಲ್ಲಿ ಬೆಳೆದಿದ್ರೂ ಆದರೆ ಆ ಬೆಳೆಯಿಂದ‌ ಲಾಭ ಬರೋದು‌ ಇರಲ್ಲಿ ಹಾಕಿದ ಬಂಡವಾಳ ಕೂಡ ಸಿಗದೆ ಕೈ ಸುಟ್ಟು ಕೊಂಡು ನಿರಾಶೆಯಲ್ಲಿದರು,‌ ಮುಖ್ಯವಾಗಿ ನಾಟಿ ಕನಕಾಂಬರಕ್ಕೆ ಬರುತ್ತಿದ್ದ‌ ಸುರುಗು ರೋಗದಿಂದ ಬರುತ್ತಿದ್ದ ಇಳುವರಿಯು ಕೂಡ ಕಡಿಮೆಯಾಗಿ ನಷ್ಟ ಆಗುತ್ತಿತ್ತು.. ಇದರಿಂದ ತೊಂದರೆ ಅನುಭವಿಸುತ್ತಿದ್ದ ಈ ರೈತರು, ಕೊನೆಗೆ ಬೆಂಗಳೂರಿನ ಹೆಸರುಘಟ ಬಳಿ ಇರುವ ಭಾರತೀಯ ತೋಟಗಾರಿಕ ಸಂಶೋಧನಾ ಸಂಸ್ಥೆಗೆ ಬೇಟೆ ಕೊಟ್ಟರು..

[widget id=”custom_html-2″]

Advertisements
Advertisements

ಆಗ ಅಲ್ಲಿನ ಕೃಷಿ ವಿಜ್ಞಾನಿ ಡಾ ಅಶ್ವಥ್ ಅವರು ಅಭಿವೃದ್ಧಿ ಪಡಿಸಿದ ಅರ್ಕಾಚೆನ್ನ ಕನಕಾಂಬರದ ಬಗ್ಗೆ ಮಾಹಿತಿ ಪಡೆದು ಈ ಬಾರಿ ಈ ಬೆಳೆಯನ್ನು‌ ಬೆಳೆಯೋಣ ಎಂದು ನಿರ್ಧಾರ ಮಾಡಿ, ನಂತರ ತಮ್ಮ ಜಮೀನಿನಲ್ಲಿ ಹೊಸದಾಗಿ ಅರ್ಕಚೆನ್ನ ಕನಕಾಂಬರ ಬೆಳೆಯನ್ನು ಬೆಳೆಯಲು ಶುರು ಮಾಡಿದರು.. ಈಗ ಇವರ ಜಮೀನಿನಲ್ಲಿ ಕನಕಾಂಬರದ ಮಳೆಯೇ ಸುರಿಯುತ್ತಿದ್ದು.‌. ಇವರ ಬದುಕು ಬಂಗಾರದಂತೆ ಹಾಗಿದೆ, ಸುಮಾರು ಎರಡು ವರ್ಷಗಳಿಂದ ಹೆಚ್ಚು ಲಾಭ ಪಡೆಯುತ್ತಿದ್ದಾರೆ ಮಂಡ್ಯದ‌ ಈ ರೈತರು, ಹಾಗಾದರೆ ಅರ್ಕಚೆನ್ನ ಈ ರೈತರಿಗೆ ಯಾವ ರೀತಿ ಲಾಭ ಸಿಗುವಂತೆ ಮಾಡುತ್ತಿದೆ ಗೊತ್ತಾ.. ಈ ಅರ್ಕಚೆನ್ನ ಗಿಡಕ್ಕೆ ಸುರುಗು ರೋಗವನ್ನ ಎದುರಿಸುವ ಶಕ್ತಿ ಒಂದಿದೆ.. ಒಂದು‌ ಬಾರಿ‌ ಈ ಸಸಿಯನ್ನು‌ ಬೆಳೆದರೆ ಸಾಕು ಸುಮಾರು ಆರು ವರ್ಷಗಳ ಕಾಲ‌ ಇಳುವರಿ ಕೊಡುತ್ತದೆ..

[widget id=”custom_html-2″]

ಇನ್ನೂ ಈ ಗಿಡವನ್ನು ನಾಟಿ ಮಾಡಿದ ಮೂರು ತಿಂಗಳಲ್ಲಿ ಇದರಿಂದ ಇಳುವರಿ ಸಿಗುತ್ತದೆ.. ಅಲ್ಲದೆ ನಾಟಿ‌ ಕನಕಾಂಬರಕ್ಕಿಂತ ಹೆಚ್ಚು ಇಳುವರಿಯನ್ನು ಈ ಅರ್ಕಚೆನ್ನ ಕನಕಾಂಬರದಲ್ಲಿ ಸಿಗುತ್ತದೆ.. ಇದರಲ್ಲಿ ಹೂ ದಪ್ಪ ಮತ್ತು ಬಲಿಷ್ಟವಾಗಿ ಇರುತ್ತದೆ ಇನ್ನೂ ಅದರ ಕಾಂಡ ಮತ್ತು ಹೂವಿನ ಬಣ್ಣ ಚೆನ್ನಾಗಿರುತ್ತದೆ‌, ಗಿಡದಿಂದ ಹೂವನ್ನು ಕಿತ್ತ‌ ನಂತರ ನಾಲ್ಕು ದಿನಗಳ ಕಾಲ ಹಾಗೆಯೇ ಇರುತ್ತದೆ, ಈ ಸಸಿಯನ್ನು ಎಲ್ಲಾ ಬಗೆಯ‌ ಮಣ್ಣಿನಲ್ಲಿ ಕೂಡ ಬೆಳೆಯಬಹುದು.. ಇನ್ನೂ ಅರ್ಧ ಎಕರೆ ಜಮೀನಿನಲ್ಲಿ ಅರ್ಕಚೆನ್ನ ಬೆಳೆಯನ್ನು ಬೆಳೆದ ಮಹೇಶ್ ಅವರು ಇದರಿಂದ ವಾರಕ್ಕೆ 60 ಕೆಜಿ ಇಳುವರಿಯನ್ನ ಪಡೆಯುತ್ತಿದ್ದಾರೆ.. ನಾಟಿ ಕನಕಾಂಬರದಿಂದ ಕೆಜಿಗೆ 60 ರಿಂದ100 ರೂಪಾಯಿ ಪಡೆಯುತ್ತಿದ್ದ ಮಳವಳ್ಳಿ ರೈತರು.. ‌ಅರ್ಕಚೆನ್ನ ಕನಕಾಂಬರದಿಂದ ಒಂದು ಕೆಜಿಗೆ 300 ರಿಂದ600 ರೂಪಾಯಿ ಪಡೆಯುತ್ತಿದ್ದಾರೆ,

ಇದರ ಮಾಹಿತಿಯನ್ನು ತಿಳಿದ ಬೇರೆ ಬೇರೆ ರೈತರು ಕೂಡ‌ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಿಂದ ಅರ್ಕಚೆನ್ನ ಸಸಿಯನ್ನು ಖರೀದಿ ಮಾಡಲು ಮುಂದಾಗಿದ್ದಾರೆ.. ಬೇಡಿಕೆಗೆ ತಕ್ಕಂತೆ ಪೂರೈಸಲು ಈ ಸಂಸ್ಥೆಗೆ ಸಾಧ್ಯವಾಗ ಕಾರಣ, ಈಗ ಈ ಸಂಸ್ಥೆ ಮಳವಳ್ಳಿ ರೈತರಿಂದ ಅರ್ಕಚೆನ್ನ ಸಸಿಯನ್ನು ಖರೀದಿ ಮಾಡುತ್ತಿದ್ದಾರೆ.. ಇನ್ನೂ ಮಳವಳ್ಳಿಯ ರೈತರು ಒಂದು ಕಡೆ ಹೂವಿನ ತೊಟ್ಟ ಮತ್ತು ಇನ್ನೋಂದು ಕಡೆ ಸಸಿ ಮಾರಾಟ ಮಾಡುವ ಎರಡು ಕಡೆ ಒಳ್ಳೆಯ ಲಾಭವನ್ನು ಪಡೆಯುತ್ತಿದ್ದಾರೆ.. ಸ್ನೇಹಿತರೆ ನಿಮಗೂ ಸಹಾ ಇದರ ಬಗ್ಗೆ ಪೂರ್ಣ ಮಾಹಿತಿ ಬೇಕಾದರೆ IIHR ಅಂದರೆ ಭಾರತೀಯ ತೋಟಗಾರಿಕ ಸಂಶೋಧನಾ ಸಂಸ್ಥೆ ಯಲಹಂಕ ದೊಡ್ಡಬಳ್ಳಾಪುರ ಮಧ್ಯೆ ಇರುವ ಹೆಸರುಘಟದಲ್ಲಿ‌ ಇದರ‌ ಬಗ್ಗೆ ಪೂರ್ತಿ ಮಾಹಿತಿ ಪಡೆಯಬಹುದು.. ಸ್ನೇಹಿತರೆ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಯನ್ನು ಅಭಿಪ್ರಾಯ ತಿಳಿಸಿ..