Advertisements

ಬಸ್ ನಲ್ಲಿ ದುಡ್ಡು ಕಳೆದುಕೊಂಡು ದುಃಖದಲ್ಲಿದ್ದ ಅಜ್ಜನಿಗೆ ಮಂಗಳಮುಖಿಯರು ಮಾಡಿದ ಕೆಲಸ ಗೊತ್ತಾದ್ರೆ ಅಚ್ಚರಿ ಪಡ್ತೀರಾ !

Kannada Mahiti

ಸ್ನೇಹಿತರೆ, ಮನುಷ್ಯರಲ್ಲಿ ಇರುವುದು ಎರಡೆ ಜಾತಿ ಅದು ಹೆಣ್ಣು ಮತ್ತು ಗಂಡು ಜಾತಿ, ಆದರೆ ಇವೆರಡಕ್ಕೂ ಸೇರದ ಮತ್ತೊಬ್ಬರು ಕೂಡ ಇದ್ದಾರೆ ಅವರೇ ಮಂಗಳಮುಖಿಯರು.. ಈ ಲೋಕದ ಕಣ್ಣಿಗೆ ಇವರು ವಿಚಿತ್ರವಾಗಿ ಕಾಣಬಹುದು, ಆದರೆ ಮಂಗಳಮುಖಿಯರು ಕೂಡ ಮನುಷ್ಯರೇ ಇವರಿಗೆ ನಾವು ಗೌರವವನ್ನು ಕೊಡಬೇಕು.. ಆದರೆ ಚೆನ್ನೈ ಬಸ್ನಲ್ಲಿ ಪರ್ಸ್ ಕಳೆದುಕೊಂಡ ಅಜ್ಜನಿಗೆ ಅಲ್ಲಿಗೆ ಬಂದಿದ್ದ ಮಂಗಳಮುಖಿಯರ ಗುಂಪೊಂದು ಅಜ್ಜನಿಗೆ ಮಾಡಿದ್ದೇನೆ ಗೊತ್ತಾ ಪೂರ್ತಿಯಾಗಿ ತಿಳಿಯೋಣ ಬನ್ನಿ..

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ, ಕರುಣಾಕರನ್ ಎಂಬ 80 ವರ್ಷದ ಅಜ್ಜ ಯಾವುದೋ ಕೆಲಸದ ಸಲುವಾಗಿ ಚೆನ್ನೈ ಬಸ್ ನಲ್ಲಿ ಮದುರೈಗೆ ಪ್ರಯಾಣಿಸುತ್ತಿದ್ದ.. ಕೆಲವು ಸಮಯದ ನಂತರ ಊಟಕ್ಕೆಂದು ಬಸ್ ಅನ್ನು ಹೋಟೆಲ್ ಪಕ್ಕದಲ್ಲಿ ನಿಲ್ಲಿಸಿದರು, ಆ ಬಸ್ ಕಂಡಕ್ಟರ್ ಬಸ್ 15 ನಿಮಿಷ ಇರುತ್ತದೆ ಊಟ ಮಾಡುವವರು ಬೇಗನೆ ಊಟ ಮಾಡಿ ಬರಬಹುದು ಎಂದು ಹೇಳುತ್ತಾರೆ.. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಕೆಲವು ಜನರು ಮಾತ್ರ ಊಟ ಮಾಡಲೆಂದು ಹೊರಡುತ್ತಾರೆ, ಇನ್ನು ಕರುಣಾಕರನ್ ಹಾಗೂ ಕೆಲ ಜನರು ಬಸ್ ನಲ್ಲಿ ಕುಳಿತಿದ್ದರು.. ಅದೇ ಸಮಯಕ್ಕೆ ಮಂಗಳಮುಖಿಯರ ಗುಂಪೊಂದು ಬಸ್ ಒಳಗೆ ಬಂದು ಜನರ ಮುಂದೆ ಕಾಸು ಕೊಡಿ ಎಂದು ಕೇಳುತ್ತಿದ್ದರು, ಈ ರೀತಿ ಬಸ್ ನಲ್ಲಿ ಕುಳಿತಿದ್ದ ಪ್ರತಿಯೊಬ್ಬರ ಬಳಿ ಕಾಸು ಕೇಳುತ್ತಿದ್ದ ಮಂಗಳಮುಖಿಯರು ಕರುಣಾಕರನ್ ಎಂಬ ಅಜ್ಜನ ಬಳಿ ಹೋಗಿ ನಾವು ತುಂಬಾ ಕಷ್ಟದಲ್ಲಿದ್ದೇವೆ ನಮಗೆ ಏನಾದರೂ ಸಹಾಯ ಮಾಡಿ ಎಂದು ಅಜ್ಜನ ಬಳಿ ಮಂಗಳಮುಖಿಯರು ಕೇಳಿದರು..

[widget id=”custom_html-2″]

ಆಗ ಕರುಣಾಕರನ್ ಹಣ ನೀಡಲೆಂದು ತನ್ನ ಜೇಬಿಗೆ ಕೈ ಹಾಕಿದಾಗ, ತನ್ನ ಜೇಬಿನಲ್ಲಿ ಪರ್ಸ್ ಇರಲಿಲ್ಲ, ಆದರೆ ಕರುಣಾಕರನ್ ಬಸ್ ಹತ್ತುವಾಗಲೇ ಯಾರೋ ಅವರ ಪ್ಯಾಂಟಿಗೆ ಕತ್ತರಿಯಾಗಿ ಪರ್ಸ್ ಕಳ್ಳತನ ಮಾಡಿದ್ದರು.. ಪರ್ಸ್ ಕಳೆದುಕೊಂಡ ಕರುಣಾಕರನ್ ಸ್ವಲ್ಪ ಸಮಯ ಆಳುತ್ತಿದ್ದ, ನಂತರ ಕರುಣಾಕರನ್ ಮಂಗಳಮುಖಿಯರಿಗೆ ಈ ರೀತಿ ಹೇಳುತ್ತಾನೆ.. ತಾಯಿ ನಾನು ಊರಿನಿಂದ ಬರುವಾಗ ನನ್ನ ಹಣವನ್ನು ಪರ್ಸ್ನಲ್ಲಿ ಇಟ್ಟಿದ್ದೆ, ಆದರೆ ಯಾರೋ ನನ್ನ ಪರ್ಸ್ ಅನ್ನ ಕಳ್ಳತನ ಮಾಡಿದ್ದಾರೆ, ಈಗ ನನಗೆ ಊರಿಗೆ ಹೋಗಲು ಸಹ ಹಣವಿಲ್ಲ ದಯವಿಟ್ಟು ನಿಮಗೆ ಹಣ ಕೊಡಲು ನನ್ನ ಬಳಿ ಇಲ್ಲ ಕ್ಷಮಿಸಿ ಎಂದು ಕರುಣಾಕರನ್ ಕೇಳುತ್ತಾನೆ.. ಆಗ ಬಸ್ ಕಂಡಕ್ಟರ್ ಗೆ ಅಜ್ಜ ಪರ್ಸ್ ಕಳೆದುಕೊಂಡ ವಿಷ ತಿಳಿಯುತ್ತದೆ, ಕಂಡಕ್ಟರ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರನ್ನೂ ಪರ್ಸ್ ಬಗ್ಗೆ ವಿಚಾರಿಸುತ್ತಾರೆ, ಆಗ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಪರ್ಸ್ ಬಗ್ಗೆ ನಮಗೆ ಗೊತ್ತಿಲ್ಲ ಎನ್ನುತ್ತಾರೆ..

[widget id=”custom_html-2″]

ಕರುಣಾಕರನ್ ಅಯ್ಯೋ ನಾನು ಕಷ್ಟಪಟ್ಟು ಸಂಪಾದನೆ ಮಾಡಿದ ಐದು ಸಾವಿರ ರೂಪಾಯಿಯನ್ನು ನನ್ನ ಪರ್ಸ್ ನಲ್ಲಿ ಇಟ್ಟಿದ್ದೆ.. ಈಗ ನಾನು ಚೆನ್ನೈನಲ್ಲಿ ಉಳಿದುಕೊಳ್ಳಲು ಹಾಗು ಖರ್ಚಿಗೆ ನಾನು ಏನು ಮಾಡಲಿ ಮತ್ತೆ ನಾನು ಊರಿಗೆ ಹೋಗಲು ನನ್ನ ಬಳಿ ಹಣ ಇಲ್ಲ ಈಗ ನಾನು ಏನು ಮಾಡಲಿ ಎಂದು ಕರುಣಾಕರನ್ ಆಳುತ್ತಿದ್ದರು.. ದುಃಖದಲ್ಲಿದ್ದ ಅಜ್ಜನನ್ನು ನೋಡಿದ ಮಂಗಳಮುಖಿಯರು ಅಜ್ಜ ನೀವು ಅಳಬೇಡಿ ನೀವು ಮತ್ತೆ ನಿಮ್ಮ ಊರಿಗೆ ಮರಳಿ ಹೋಗಲು ಎಷ್ಟು ಹಣ ಬೇಕೋ ಅಷ್ಟು ಹಣವನ್ನು ನಾವು ಕೊಡುತ್ತೇವೆ ಎಂದು ಹೇಳಿದರು, ಆಗ ಮಂಗಳಮುಖಿಯರು ತಾವು ಬೆಳಗ್ಗೆಯಿಂದ ಪಡೆದಿದ್ದ ಹಣವನ್ನೆಲ್ಲ,

ಲೆಕ್ಕ ಹಾಕಿ 2000 ರೂಪಾಯಿ ಯನ್ನು ಅಜ್ಜನಿಗೆ, ನೀವು ನಮ್ಮನ್ನು ನಿಮ್ಮ ಮಕ್ಕಳೆಂದು ತಿಳಿದು ಈ ಹಣವನ್ನು ತೆಗೆದುಕೊಳ್ಳಿ ಎಂದು ಹೇಳುತ್ತಾರೆ.. ಹಾಗ ಅಜ್ಜನಿಗೆ ಹಣಕೊಟ್ಟ ಮಂಗಳಮುಖಿಯರು ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಬಸ್ ನಿಂದ ಇಳಿದು ಹೋಗುತ್ತಾರೆ, ಆಗ ಕರುಣಾಕರನ್ ಕಷ್ಟ ಎಂದು ಬಂದಾಗ ಸಹಾಯ ಮಾಡಿದ ಮಂಗಳಮುಖಿಯರನ್ನು ನೋಡಿ ನಿಮಗೆ ಆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿ ಚೆನ್ನೈನಲ್ಲಿ ತನ್ನ ಕೆಲಸವನ್ನು ಮುಗಿಸಿ ಮರಳಿ ತಮ್ಮ ಊರಿಗೆ ಪ್ರಯಾಣಿಸಿದರು.. ಸ್ನೇಹಿತರೆ ಮಂಗಳಮುಖಿಯರು ಮಾಡಿದ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ..