Advertisements

ಇತ್ತೀಚಿನ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆದ ಈ ಹೆಣ್ಣು ಮಗಳು ನಿಜಕ್ಕೂ ಯಾರು! ಈ ಓದಿರೋದು ಏನು ಗೊತ್ತಾ?

Inspire

ನಮಸ್ತೆ ಸ್ನೇಹಿತರೆ, ಕಳೆದ ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹೆಣ್ಣು ಮಗಳೊಬ್ಬಳ ವಿಡಿಯೋ ಒಂದು ಸಕ್ಕತ್ ವೈರಸ್ ಆಗಿತ್ತು.. ಇನ್ನೂ‌ ಇದ್ದಕ್ಕೆ ಕಾರಣ ಆಕೆ ಆಡಿದ ಒಂದೊಂದು ಮಾತುಗಳು ಸಹ‌ ಪ್ರತಿಯೊಬ್ಬ ಸಾಮಾನ್ಯ ಜನರು ಅನುಭವಿಸುತ್ತಿರುವ ಕಷ್ಟಗಳ ಸರ ಮಾಲೆಯನ್ನು ಚಪ್ಪಲಿಗೆ ಸುತ್ತಿ ರಾಜಕೀಯ ಮುಂಖಡರಿಗೆ ಮುಖಕ್ಕೆ ಹೋಡೆದಂತೆ ಇತ್ತು.. ಅಷ್ಟಕ್ಕೂ ಈ ಮಹಿಳೆ ಯಾರು ಈಕೆ ಓದಿರೋದು ಏನು ಎನ್ನುವ ಕುತೂಹಲ ಎಲ್ಲರಿಗೂ ಇದೇ ಇತ್ತು ಇದಕ್ಕೆ ಉತ್ತರ ಇಲ್ಲಿದೆ ನೋಡಿ.. ಹೌದು ಈ ಮಹಿಳೆಯ ಹೆಸರು ಶಶಿರೇಖಾ ಮೈಸೂರಿನ ಜನತನಗರದ ನಿವಾಸಿ‌. ಶಶಿರೇಖಾ ಇಷ್ಟೊಂದು ಪ್ರಬುದ್ದರಾಗಿ ಮಾತಾನಾಡುತ್ತಿದ್ದಾರೆ ಬಹುಶಃ ಇವರು ತುಂಬಾ ಚನ್ನಾಗಿ ವಿದ್ಯಾಭ್ಯಾಸ ಪಡೆದುಕೊಂಡಿರಬಹುದು ಎಂದು ಅಂಟಿಕೊಂಡಿದ್ದರು

Advertisements
Advertisements

ಆದರೆ ಸಮಾಜದ ತಿಳುವಳಿಕೆ ಜ್ಞಾನ ಎಲ್ಲವೂ ಕೇವಲ ವಿದ್ಯಾಭ್ಯಾಸದಿಂದ ಮಾತ್ರ ಸಿಗುವುದಿಲ್ಲ ಎನ್ನುವುದಕ್ಕೆ ಶಶಿರೇಖಾ ಅವರು ಈಗ ದೊಡ್ಡ ಉದಾಹರಣೆ ಆಗಿದ್ದಾರೆ.. ಕಾರಣ ಈಕೆ ಓದಿದ್ದು ಕೇವಲ ಎಂಟನೇ ತರಗತಿ ಆದರೆ ಪ್ರಚಲಿತ ರಾಜಕೀಯ ವಿಚಾರಗಳನ್ನ ಜನರ ಕಷ್ಟಗಳನ್ನ ತಿಳಿದುಕೊಳ್ಳಲು ಓದಿಗಿಂತ ಜೀವನದ ಅನುಭವವೇ ಸಾಕು ಅಂತ ಹೇಳಿದ್ದಾರೆ.. ಹೌದು ಶಶಿರೇಖಾ ತನ್ನ ಬಗ್ಗೆ ಮಾಧ್ಯಮದವರ‌ ಜೊತೆ ಮಾತಾನಾಡಿದ್ದು ‘ನಾನು ಬಡ ಕುಟುಂಬದಿಂದ ಬಂದವಳು ಸರ್ ಹಾಗೆಯೇ ನನ್ನ ತಂದೆ ತಾಯಿ ಮನೆಯಿಂದ ಹೊರಟರೆ ಆರು ತಿಂಗಳು ಮನೆಗೆ ಬರುತ್ತಿರಲಿಲ್ಲ ಆಗ ನಾನು ಆಳುತ್ತಾ ಮನೆಯ‌ ಒಳಗಡೆ ಕುಳಿತುಕೊಂಡಿದ್ದೆ ಆಗ ಒಬ್ಬ ಶಿಕ್ಷಕಿ ನನ್ನನ್ನು ಕರೆದುಕೊಂಡು ಹೋಗಿ ಒಂದು ಶಾಲೆಗೆ ಸೇರಿಸಿದರು

ಆದರೆ ದಿನಗಳು ಕಳೆದಂತೆ ಶಾಲೆಗೆ ಹಣ ಕಟ್ಟಲು ಆಗದೆ ಸರ್ಕಾರಿ ಶಾಲೆಗೆ‌ ಸೇರಿಕೊಳ್ಳಲು ನಮ್ಮ ಅಮ್ಮ ತಯಾರಾದರು ಆದರೆ ನನ್ನ ಮಾರ್ಕ್ಸ್ ಕಾರ್ಡ್ ನಲ್ಲಿ ನಾನು ತೆಗೆದುಕೊಂಡಿದ್ದ ಅಂಕಗಳನ್ನು ನೋಡಿ ನಾಗರಾಜ್ ಮಾಸ್ಟರ್ ಒಬ್ಬರು ನನಗೆ ಪೀಸ್‌ ಕಟ್ಟಿ ಓದಿಸಿದ್ದರು.. ಆದರೆ ಎಂಟನೇ ತರಗತಿಯ ವರೆಗೆ ಮಾತ್ರ ನಾನು ಓದಲು ಸಾದ್ಯಾವಾಯಿತ್ತು ಎಂದಿದ್ದರು..‌ ಇನ್ನೂ ಶಶಿರೇಖಾ ಅವರಿಗೆ ಮದುವೆಯಾಗಿದ್ದು ಇವರ ಮಗಳು ಧೃತಿ ಅಂತ. ನಾನು ನನ್ನ ಮಗಳನ್ನ ಒಬ್ಬ ಜಿಲ್ಲಾಧಿಕಾರಿ ಮಾಡಬೇಕು ಎನ್ನುವ ಕನಸಿದೆ ನನ್ನ ಗಂಡನ ಆಸೆ ಕೂಡ ಇದೇ ಎಂದು ಶಶಿರೆಖಾ ವೀಡಿಯೋದಲ್ಲಿ ಹೇಳಿದರು ಅಷ್ಟೇ ಅಲ್ಲದೆ ರೋಹಿಣಿ ಸಿಂಧೂರಿ ಅವರನ್ನ ನೋಡಿ ನನ್ನ ಮಗಳು ಡಿಸಿ ಆಗಬೇಕು ಎಂದು ನನ್ನ ಗಂಡ ಹೇಳುತ್ತಿರುತ್ತಾರೆ ನಾನು ನನ್ನ ಮಗಳನ್ನ ಡಿಸಿ ಮಾಡುತ್ತೇನೆ

ಅಂದಮೇಲೆ ನನ್ನ ಮಗಳಿಗೆ ಮತ್ತೆ ನಾಮಕರಣ ಮಾಡುತೇನೇ ಸರ್ ಧೃತಿ ಜೂನಿಯರ್ ರೋಹಿಣಿ ಸಿಂಧೂರಿ ಅಂತ ಮಾಧ್ಯಮದ ಮೂಲಕ ತಿಳಿಸಿದರು ನಾವು ಬೆಳೆಯಬೇಕು ಎಂದಾಗ ಕಾಲು ಎಳೆಯುವವರು ತುಂಬಾ ಜನ ಇದೆ ಇರುತ್ತಾರೆ.. ನನಗೆ ಕಷ್ಟ ಆದರೂ ಪರವಾಗಿಲ್ಲ ನನ್ನ ಮಗಳಿಗೆ ಮುಂದೆ ತೊಂದರೆ ಅದರೂ ಪರವಾಗಿಲ್ಲ ಅವಳನ್ನ ನಾನು ನ್ಯಾಯಾವಾದ ರೀತಿಯಲ್ಲಿ ಸೇವೆ ಮಾಡುವಂತೆ ಮಾಡುತ್ತೇನೆ ಎಂದು ತುಂಬಾ ನೋವಿನಿಂದ ಶಶಿರೇಖಾ ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.. ಒಟ್ಟಿನಲ್ಲಿ ಜನರು ಅನುಭವಿಸುತ್ತಿರುವ ಕಷ್ಟಗಳು ಮಾತಿನ ಮೂಲಕ ಜನರ ಬಾಯಿಗಿಂತ ಯಾವುದೇ ಅಂಜಿಕೆ ಇಲ್ಲಿದೆ ಹೋರ ಬಂದರೆ ಏನಾಗಬಹುದು ಎನ್ನುವುದಕ್ಕೆ ಈ ಮಹಿಳೆ ಉದಾಹರಣೆ ಅಂತ ಹೇಳಬಹುದು..