Advertisements

ಅಜ್ಜನ ಹಳೆ ಬಟ್ಟೆ ನೋಡಿ ಹೋಟೆಲ್ ಒಳಗೆ ಬಿಡಲಿಲ್ಲ ಈ ವಾಚ್ ಮ್ಯಾನ್.! ಅಷ್ಟಕ್ಕೂ ಈ ಹೋಟೆಲ್ ಒಳಗಡೆ ನಡೆದಿದ್ದೇನು ಗೊತ್ತಾ ..

News

ತಮಿಳುನಾಡಿನ ಕೊಯಿಮುತ್ತೂರು ನಲ್ಲಿ ಪೊನ್ನು ಸ್ವಾಮಿ ಎಂಬ ವ್ಯಕ್ತಿ ವಾಸಮಾಡುತ್ತಿದ್ದರು ಪೊನ್ನು ಸ್ವಾಮಿ ರವರಿಗೆ 66 ವರ್ಷ ವಯಸ್ಸಾಗಿತ್ತು ಇವರು ತಮ್ಮ ಸ್ವಂತ ಊರಿನಲ್ಲಿ ಸುಮಾರು 60 ಎಕರೆ ಜಮೀನಿನಲ್ಲಿ  ವ್ಯವಸಾಯ ಮಾಡುತ್ತ ತಮ್ಮ ಜೀವನ ನಡೆಸುತ್ತಿದ್ದರು.. ಇವರಿಗೆ ಯಾವುದೇ ಪೈಪೋಟಿ ಇಲ್ಲದೆ ತನ್ನ ಸ್ವಂತ ಊರಿನಲ್ಲಿಯೇ ಹತ್ತು ಬಾರಿ ಪಂಚಾಯತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.. ಪೊನ್ನು ಸ್ವಾಮಿಯವರು ತನ್ನ ಬಳಿ ಸಹಾಯ ಎಂದು ಬೇಡಿ ಬಂದವರನ್ನು ಹಾಗೆ ಕಳುಹಿಸದೆ ತಮ್ಮ ಕೈಲಾದ ಸಹಾಯವನ್ನು ಮಾಡಿ ಬರುತ್ತಿದ್ದರು.. ರಾಘವನ್ ಮತ್ತು ಭುವನೇಶ್ವರಿ ಎಂಬ ಇಬ್ಬರು ಮಕ್ಕಳಿದ್ದರೂ ಇವರ ಮಗ ಅಮೆರಿಕದಲ್ಲಿ ಸೆಟ್ಲ್ ಆಗಿದ್ದರು..

Advertisements
Advertisements

ಆದರೆ ಮಗ ತನ್ನ ತಂದೆಯನ್ನು ಅಮೆರಿಕಕ್ಕೆ ಬಾ ಎಂದರು ಕೂಡ, ಪೊನ್ನು ಸ್ವಾಮಿ ತನ್ನ ಸ್ವಂತ ಊರು ಹಾಗು ಭಾರತವನ್ನು ಬಿಟ್ಟು ನಾನು ಬರುವುದಿಲ್ಲ ಎನ್ನುತ್ತಿದ್ದರು ಆಗ ಪೊನ್ನು ಸ್ವಾಮಿ ನಮಗೆ ಅಮೆರಿಕಾದ ಸಂಸ್ಕೃತಿ ಅಲ್ಲಿನ ಸಂಪ್ರದಾಯ ನಮಗೆ ಅಡ್ಜಸ್ಟ್ ಆಗುವುದಿಲ್ಲ ನಾನು ಸತ್ತರೂ ಕೂಡ ನನ್ನ ಊರಿನಲ್ಲಿ ಸಾಯುತ್ತೇನೆ ನಾನು ಅಲ್ಲಿಗೆ ಬರುವುದಿಲ್ಲ ಎಂದು ತನ್ನ ಮಗನಿಗೆ ಕಡ್ಡಿ ತುಂಡಾಗುವ ರೀತಿ ಹಲವು ಬಾರಿ ಹೇಳಿದ್ದರು, ಇನ್ನು ಪೊನ್ನು ಸ್ವಾಮಿ ತನ್ನ ಮಗಳನ್ನು ಕೇರಳದ ದೊಡ್ಡ ಫೈವ್ ಸ್ಟಾರ್ ಹೋಟೆಲ್ ಮಾಲೀಕನಿಗೆ ಮದುವೆ ಮಾಡಿ ಕೊಟ್ಟಿದ್ದರು.. ನಂತರ ಮಗಳು ಭುವನೇಶ್ವರಿ ತನ್ನ ತಂದೆಗೆ ಫೋನ್ ಮಾಡಿ ನಾವು ಮತ್ತೊಂದು ಫೈವ್ ಸ್ಟಾರ್ ಹೋಟೆಲ್ ಬುಕ್ ಮಾಡಿದ್ದೇವೆ ನೀವು ಬರಬೇಕೆಂದು ಹೇಳುತ್ತಾರೆ ಆಗ ಪೊನ್ನು ಸ್ವಾಮಿ ತನ್ನ ಮುದ್ದು ಮಗಳು ಕರೆದಿದ್ದಾಳೆ ಎಂದು ಸತಿ ಪತಿ ಸಮೇತ ಕೇರಳಕ್ಕೆ ಬರುತ್ತಾರೆ..

ಇನ್ನು ಕೇರಳಕ್ಕೆ ಬಂದ ಪೊನ್ನು ಸ್ವಾಮಿಗೆ ವಿಪರೀತವಾಗಿ ಹೊಟ್ಟೆ ಹಸಿವು ಆಗಿರುತ್ತದೆ ಆದರೆ ಪೊನ್ನು ಸ್ವಾಮಿಗೆ ತನ್ನ ಮಗಳ ಹೋಟೆಲ್ ಪಕ್ಕದಲ್ಲಿಯೇ ಇದೆ ಎಂದು ಅಲ್ಲಿಯೇ ಊಟ ಮಾಡೋಣ ಎಂದು ಹೋಟೆಲ್ ಬಳಿ ಹೋಗುತ್ತಾರೆ ಆದರೆ ಆ ಹೋಟೆಲ್ ವಾಚ್ ಮ್ಯಾನ್ ಪೊನ್ನು ಸ್ವಾಮಿಯ ಬಟ್ಟೆ ನೋಡಿ ಹಳ್ಳಿಜನ ಎಂದು ತಿಳಿದು ಅವರನ್ನು ಹೋಟೆಲ್ ಒಳಗಡೆ ಬಿಡಲಿಲ್ಲ ನಂತರ ಪೊನ್ನು ಸ್ವಾಮಿ ತಾವೇ ಹೋಟೆಲ್ ಬಾಗಿಲು ತೆಗೆದು ಒಳಕ್ಕೆ ಹೋಗುತ್ತಾರೆ.. ಹೋಟೆಲ್ ನಲ್ಲಿ ಊಟವನ್ನು ಆರ್ಡರ್ ಮಾಡುತ್ತಾರೆ ಆದರೆ ಹೋಟೆಲ್ ಸರ್ವರ್ಗಳು ಅವರನ್ನು ಸರಿಯಾಗಿ ಗಮನಿಸುತ್ತಿರಲಿಲ್ಲ.. ಆದರೆ ಒಬ್ಬ ಸರ್ವರ್ ಮಾತ್ರ ಒಂದು ನಿಮಿಷ ಕಾಯಿರಿ ತಾತ ಎಂದು ಹೇಳಿ ಒಳಗೆ ಹೋದವನು ಹೊರಗಡೆ ಬಂದಿರಲಿಲ್ಲ..

ಆದರೆ ತಾತ ಹೋಟೆಲ್ ಗೆ ಬಂದ ನಂತರ, ಬಂದ ಗ್ರಾಹಕರು ಆರ್ಡರ್ ಮಾಡಿದ ಊಟವೆಲ್ಲ ಮೊದಲೇ ಎಂದು ಬಿಟ್ಟಿತು.. ಇನ್ನು ಹೋಟೆಲ್‌ ಕೆಲಸಗಾರರು ಪೊನ್ನು ಸ್ವಾಮಿ ರವರನ್ನು ವಿಚಿತ್ರವಾಗಿ ನೋಡುತ್ತಿದ್ದರು ಆದರೆ ಪೊನ್ನು ಸ್ವಾಮಿಗೆ ತನ್ನ ಬಟ್ಟೆ ನೋಡಿ ಇವರಿಗೆ ಅಸಹ್ಯವಾಗಿದೆ ಎಂದು ಅಂದುಕೊಳ್ಳುತ್ತಾರೆ.. ಇನ್ನು ಅದೇ ಸಮಯಕ್ಕೆ ತನ್ನ ಮಗಳು ಭುವನೇಶ್ವರಿ ತಂದೆಗೆ ಫೋನ್ ಮಾಡಿ ಅಪ್ಪ ನೀವು ಎಲ್ಲಿದ್ದೀರಿ ಎಂದು ಕೇಳುತ್ತಾರೆ ಆಗ ಪೊನ್ನು ಸ್ವಾಮಿ ಹೋಟೆಲ್ ನಲ್ಲಿ ಜೋರಾಗಿ ತನ್ನ ಮಗಳೊಂದಿಗೆ ನಾನು ನಮ್ಮ ಹೋಟೆಲ್ ನಲ್ಲಿದ್ದೀನಿ ಇಲ್ಲಿ ಊಟ ತುಂಬಾನೇ ಚೆನ್ನಾಗಿದೆ ಎಂದು ಹೇಳುತ್ತಾರೆ.. ಈ ತಾತನ ಮಾತನ್ನು ಕೇಳಿದ ಅಲ್ಲಿನ ಜನರು ತುಂಬಾ ಆಶ್ಚರ್ಯಪಡುತ್ತಾರೆ ಆಗ ಅಲ್ಲಿನ ಕೆಲಸಗಾರರು ಭುವನೇಶ್ವರಿ ಹೆಸರು ಕೇಳಿದಾಗ ಇದು ನಮ್ಮ ಹೋಟೆಲ್ ನ ಮಾಲೀಕರ ಹೆಸರು ಎಂದು ತಿಳಿದು ತಾತನ ಬಳಿ ಅಲ್ಲಿನ ಕೆಲಸಗಾರರು ಓಡಿಬಂದು ತಾತನಿಗೆ ನಿಮಗೆ ಏನು ಬೇಕು ಎಂದು ಕೇಳುತ್ತಾರೆ.. ನಂತರ ತಾತನ ಬಳಿ ಹೋಗಿ ನೀವು ಯಾರು ಎಂದು ಕೇಳುತ್ತಾರೆ ಆಗ ತಾತ ನಾನು ಈ ಹೋಟೆಲ್ ನ ಮಾಲೀಕರಾದ ಭುವನೇಶ್ವರಿ ಅವರ ತಂದೆ ಎಂದು ಅಲ್ಲಿನವರಿಗೆ ತಿಳಿಸುತ್ತಾರೆ..

ಇನ್ನು ನನಗೆ ತುಂಬಾ ಹೊಟ್ಟೆ ಹಸಿವು ಆಗಿತ್ತು ಅದಕ್ಕಾಗಿ ಈ ಹೋಟೆಲ್ ಗೆ ಬಂದೆ ಎಂದು ಹೇಳುತ್ತಾರೆ ಆದರೆ ಪೊನ್ನು ಸ್ವಾಮಿ ತನ್ನ ಊಟ ಮುಗಿಸಿದ ನಂತರ ಊಟದ ಹಣವನ್ನು ಪಾವತಿ ಮಾಡಿ ಅಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಈ ರೀತಿ ಹೇಳುತ್ತಾರೆ ‘ನೋಡ್ರಪ್ಪ ತಮ್ಮಂದಿರ ಒಂದು ಮಾತು ಹೇಳುತ್ತೇನೆ ಬೇಜಾರು ಮಾಡ್ಕೋಬೇಡಿ ನೀವು ಇಲ್ಲಿ ಸಪ್ಲೇಯರ್ ಆಗಿ ಕೆಲಸ ಮಾಡುತ್ತಿದ್ದೀರಿ ಅಂತ ಬೇಸರ ಪಡಬೇಡಿ ನೀವು ಇಲ್ಲಿ ಕೆಲಸ ಮಾತ್ರ ಮಾಡುತ್ತಿಲ್ಲ ಪುಣ್ಯಾನೂ ಸಹ ಮಾಡುತ್ತಿದ್ದೀರಿ ಯಾಕೆಂದರೆ ಒಬ್ಬ ಮನುಷ್ಯನಿಗೆ ಹೆಣ್ಣು ಹೊನ್ನು ಎಷ್ಟೇ ಕೊಟ್ಟರೂ ಸಾಕಾಗುವುದಿಲ್ಲ ಆದರೆ ಸಾಕು ಅಂತ ಹೇಳುವುದು ಕೇವಲ ಊಟಕ್ಕೆ ಮಾತ್ರ ಊಟವನ್ನು ನೀವು ಒಳ್ಳೆಯ ಮನಸ್ಸಿನಿಂದ ಬಡಿಸಿ ಆದರೆ ಎಂದು ಕೂಡ ಮುಖ ನೋಡಿ ಬಟೇ ನೋಡಿ ಊಟ ಮಾಡಿಸಬೇಡಿ ಹಸಿವು ಎಲ್ಲರಿಗೂ ಒಂದೇ ಇನ್ನು ಮುಂದೆಯಾದರೂ ಒಳ್ಳೆಯ ತನದಿಂದ ಕೆಲಸ ಮಾಡಿ ಎಂದು ಹೇಳುತ್ತಾ ತಾತ ತನ್ನ ಟವಲನ್ನು ಹೆಗಲ ಮೇಲೆ ಹಾಕಿಕೊಂಡು ತನ್ನ ಮಗಳನ್ನು ನೋಡಲು ಅಲ್ಲಿಂದ ಹೊರಟು ಬಿಡುತ್ತಾರೆ.. ಗೆಳೆಯರೇ ಊಟ ಬಡಿಸುವಾಗ ವ್ಯಕ್ತಿಯ ಬಟ್ಟೆ ನೋಡಿ ಎಂದು ಊಟ ಮಾಡಿಸಬಾರದು ತನ್ನ ಒಳ್ಳೆಯ ಮನಸ್ಸಿನಿಂದ ಬಡಿಸಬೇಕು..