ನಮಸ್ತೆ ಸ್ನೇಹಿತರೆ, ರಸ್ತೆ ಅಕ್ಕಪಕ್ಕ ಸಣ್ಣಪುಟ್ಟ ಅಂಗಡಿಗಳನ್ನು ಇಟ್ಟಿರುವುದು ನಾವು ನೋಡಿರುತ್ತೇವೆ ಅದರಲ್ಲಿ ಹೋಟೆಲ್ ಗಳು ಸಹ ಇರುತ್ತದೆ, ಆದರೆ ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ ಸಿಗುವ ಊಟದ ರುಚಿಗಿಂತ ರಸ್ತೆಯಲ್ಲಿ ಸಣ್ಣಪುಟ್ಟ ಅಂಗಡಿಯಲ್ಲಿ ಮಾರಾಟ ಮಾಡುವ ಊಟ ತುಂಬಾನೇ ರುಚಿ ಹಾಗು ಹೊಟ್ಟೆ ತುಂಬ ತಿನ್ನಬಹುದು, ಇವರ ಮನೆಯಲ್ಲಿ ಊಟವನ್ನು ತಯಾರು ಮಾಡಿ ರಸ್ತೆಯ ಪಕ್ಕದಲ್ಲಿ ಮಾರಾಟ ಮಾಡುತ್ತಿರುತ್ತಾರೆ.. ಆದರೆ ಇಲ್ಲೊಬ್ಬ ವಯಸ್ಸಾದ ಅಜ್ಜ ಕೇವಲ ಇಪ್ಪತ್ತು ರೂಪಾಯಿ ಕೊಟ್ಟರೆ ಸಾಕು ಹೊಟ್ಟೆ ತುಂಬಾ ಊಟ ನೀಡುತ್ತಿದ್ದಾರೆ.. ಹೌದು ವ್ಯಕ್ತಿ ಯಾರು ನೋಡೋಣ ಬನ್ನಿ.. ಈ ಹೋಟೆಲ್ ನ ಬಗ್ಗೆ ತನಿಖೆ ಮಾಡಲು ಬಂದ ಪೊಲೀಸರಿಗೆ ಒಂದು ಆಶ್ಚರ್ಯ ಕಾದಿತ್ತು, ಯಾಕೆಂದರೆ ಕೆಲವು ತಿಂಗಳುಗಳ ಹಿಂದೆ ಬಾಬಾಕ ಡಾಬಾ ಎನ್ನುವ ವಯಸ್ಸಾದ ಗಂಡ-ಹೆಂಡತಿಯ ವಿಡಿಯೋ ವೈರಲ್ ಆಗಿರುವುದನ್ನ ನೀವು ಸಹ ನೋಡಿರಬಹುದು..

ಇನ್ನು ಇವರಿಗೆ ಕೋರೋನ ಲಾಕ್ ಡೈನ್ ನಿಂದಾಗಿ ವ್ಯಾಪಾರ ತುಂಬಾ ಕಡಿಮೆಯಾಗಿದೆ ಎಂದು ವಿಡಿಯೋ ಕೂಡ ಯೂಟ್ಯೂಬ್ ನಲ್ಲಿ ವೈರಲ್ ಆಗಿತ್ತು.. ನಂತರ ಅವರ ಹೋಟೆಲ್ಗೆ ಹೋಗಿದ್ದ ಸಾವಿರಾರು ಜನ ಅವರಿಗೆ ಸಹಾಯ ಮಾಡುತ್ತಾರೆ, ಇನ್ನು ಇದೇ ರೀತಿ ಗುಜರಾತ್ನ ಮುರಬ್ಬ ನಗರದಲ್ಲಿ ಬಚ್ಚುದಾದ ಎಂಬ ಡಾಬಾ ಇತ್ತು, ಇನ್ನು ಮಾಲೀಕ ಬಚ್ಚುದಾದಾಗೆ 72 ವರ್ಷ ವಯಸ್ಸಾಗಿತ್ತು.. ಇವರ ಹೋಟೆಲ್ ಕೂಡ ತುಂಬಾನೇ ಚಿಕ್ಕದು ಇವರು ಪ್ರತಿದಿನ 150 ರಿಂದ 200 ಜನರಿಗೆ ಊಟವನ್ನು ನೀಡುತ್ತಾರೆ.. ಇವರು ಒಂದು ಪ್ಲೇಟ್ ಊಟಕ್ಕೆ 20 ರೂಪಾಯಿ ಪಡೆಯುತ್ತಿದ್ದರು, ಈ ಪ್ಲೇಟ್ ಒಳಗಡೆ ವಿಧವಿಧವಾದ ಸಾರು ಪಲ್ಯ ಮೂರು ರೊಟ್ಟಿ ಮತ್ತು ಅನ್ನವನ್ನು ಸಹಾ ನೀಡುತ್ತಿದ್ದರು, ಆದರೆ ಇವರು ಅಷ್ಟು ಊಟಕ್ಕೆ ಕೇವಲ 20 ರೂಪಾಯಿ ಮಾತ್ರ ಪಡೆಯುತ್ತಿದ್ದರು..

ಬೇರೆ ಕಡೆ ಆದರೆ ಈ ರೀತಿಯ ಊಟಕ್ಕೆ ಕನಿಷ್ಠ 80 ರೂಪಾಯಿ ಆದರೂ ಪಡೆಯುತ್ತಾರೆ.. ಆದರೆ ಈ ತಾತ ಮಾತ್ರ ಕೇವಲ ಇಪ್ಪತ್ತು ರೂಪಾಯಿಗೆ ವಿಧದ ಊಟವನ್ನು ನೀಡುತ್ತಿದ್ದರು.. ಒಂದು ಪ್ಲೇಟಿಗೆ 20 ರೂಪಾಯಿ ಪಡೆಯುತ್ತಿದ್ದ ಈತನನ್ನು ಅಲ್ಲಿನ ಜನ ಆಶ್ಚರ್ಯಪಟ್ಟರು.. ಹಾಗೆಯೇ ಇದರ ಬಗ್ಗೆ ಅನುಮಾನ ಪಟ್ಟು ಈ ತಾತನನ್ನು ವಿಚಾರಿಸಿದರು.. ಇಷ್ಟೆಲ್ಲಾ ಊಟವನ್ನು ಕೇವಲ ಇಪ್ಪತ್ತು ರೂಪಾಯಿಗೆ ಯಾಕೆ ಕೊಡುತ್ತಿದ್ದೀರಾ ಎಂದು ಜನ ಆ ತಾತನನ್ನು ಕೇಳಿದರು.. ಆ ತಾತ ಅವರಿಗೆ ಈ ರೀತಿ ಉತ್ತರ ಕೊಟ್ಟರು ಅದೇನೆಂದರ, ಈ ಕೋ’ರೋನ ಬಂದ ಮೇಲೆ ಆ ದೇವರು ನಮಗೆ ತುಂಬಾನೇ ಪಾಠ ಕಲಿಸಿದ್ದಾನೆ ಜೀವನದಲ್ಲಿ ದುಡ್ಡು ಮುಖ್ಯ ಅಲ್ಲ ನಾವು ಹೋಗುವಾಗ ಏನನ್ನು ತೆಗೆದುಕೊಂಡು ಹೋಗುವುದಿಲ್ಲ,

ಅದರೆ ನನಗೆ ಊಟವನ್ನು ಉಚಿತವಾಗಿ ನೀಡಬೇಕು ಎನ್ನುವ ಆಸೆ ಇದೇ, ಆ ದೇವರು ನನಗೆ ಅಷ್ಟೊಂದು ಶಕ್ತಿ ಕೊಟ್ಟಿಲ್ಲ.. ನಾನು ಕೇವಲ ಅಡುಗೆಗೆ ಖರ್ಚಾಗುವ 20 ರೂಪಾಯಿ ಮಾತ್ರ ಪ್ರತಿಯೊಬ್ಬರಿಂದ ಪಡೆಯುತ್ತೇನೆ, ಇನ್ನು ಯಾರಿಗೆ 20 ರೂಪಾಯಿ ಕೊಡಲು ಆಗುವುದಿಲ್ಲವೋ, ಅವರಿಗೆ ನಾನು ಉಚಿತವಾಗಿ ನೀಡುತ್ತೇನೆ ಎಂದು ಈ ತಾತ ಹೇಳಿದರು.. ಜೀವನದಲ್ಲಿ ಹಣ ಮುಖ್ಯವಲ್ಲ ನಾವು ಮಾಡಿದ ಒಳ್ಳೆಯ ಕೆಲಸಗಳೇ ನಮ್ಮಗೆ ದೊಡ್ಡ ಆಸ್ತಿ ಎಂದು ತೋರಿಸಿ ಕೊಟ್ಟ, ಈ ತಾತನ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..