Advertisements

ಚಿನ್ನದ ಅಂಗಡಿಯಲ್ಲಿ ಒಡವೆ ಕಳ್ಳತನವಾಯಿತು ಎಂದು ಅಜ್ಜಿ ಮೇಲೆ ಅನುಮಾನ ಪಟ್ಟ ಮ್ಯಾನೇಜರ್ ! ಬಳಿಕ ಅಲ್ಲಿ ನಡೆದಿದ್ದೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ದೊಡ್ಡ ದೊಡ್ಡ ಒಡವೆ ಅಂಗಡಿಗಳಿಗೆ‌ ಶ್ರೀಮಂತರೆ ಹೋಗಿ ಆಭರಣಗಳನ್ನು ಖರೀದಿ ಮಾಡುತ್ತಾರೆ, ಇನ್ನು ಒಡವೆಗಳ ಬೆಲೆ ಹೆಚ್ಚು ಇದ್ದಾಗ ಸಾಮಾನ್ಯ ಜನರು ಅದನ್ನು ಖರೀದಿ ಮಾಡುವುದು ದೂರದ ಮಾತಾಗಿರುತ್ತದೆ, ಅದೇರೀತಿ ರಾಜಮ್ಮ ಎನ್ನುವ ಮಹಿಳೆ ಮೊಮ್ಮಗಳ ಮದುವೆಗೆಂದು ಒಂದು ಒಡವೆ ಅಂಗಡಿಗೆ ಹೋಗುತ್ತಾರೆ. ಆದರೆ ಆ ಒಡವೆ ಅಂಗಡಿಯಲ್ಲಿ ನಡೆದ ಘಟನೆ ಪ್ರತಿಯೊಬ್ಬರಿಗೂ ನೀತಿ ಪಾಠವಾಗಿರುತ್ತದೆ.. ಅಷ್ಟಕ್ಕೂ ಆ ಒಡವೆ ಅಂಗಡಿಯಲ್ಲಿ ನಡೆದಿದ್ದು ಏನು ಗೊತ್ತಾ. ನೋಡೋಣ ಬನ್ನಿ.. ಹೌದು ಸ್ನೇಹಿತರೆ ಈ ಒಂದು ಘಟನೆ ನಡೆದಿರುವುದು ಕೊಯಮುತ್ತೂರಿನಲ್ಲಿ, ರಾಜಮ್ಮ ಎನ್ನುವ ಅಜ್ಜಿ ತನ್ನ ಮೊಮ್ಮಗಳ ಮದುವೆ ಸಂಭ್ರಮ ನಡೆಸುತ್ತಿದ್ದರು, ಇನ್ನು ಅದೇ ಸಮಯದಲ್ಲಿ ಮೊಮ್ಮಗಳ ಮದುವೆಗೆಂದು ಕೊಯಮುತ್ತೂರಿನ ಒಂದು ದೊಡ್ಡ ಚಿನ್ನದ ಅಂಗಡಿಗೆ ಒಡವೆ ಖರೀದಿಸಲು ರಾಜಮ್ಮ ಬೇಟಿ ನೀಡಿದರು..

[widget id=”custom_html-2″]

Advertisements
Advertisements

ಇನ್ನು ಇದರ ಜೊತೆಯಲ್ಲಿ ದೀಪಾವಳಿ ಹಬ್ಬ ಇರುವುದರಿಂದ, ಹಲವಾರು ಅಂಗಡಿಯಲ್ಲಿ ಮೇಕಿಂಗ್ ಮತ್ತು ವೇಸ್ಟೇಜ್ ಗಳಲ್ಲಿ 50% ಡಿಸ್ಕೌಂಟ್ ನೀಡುತ್ತಿದ್ದರು, ಆ ಸಮಯದಲ್ಲಿ ಒಂದು ಗ್ರಾಂ ಚಿನ್ನ ಕೊಂಡರೆ, ಒಂದು ಗ್ರಾಂ‌ ಬೆಳ್ಳಿ ಉಚಿತವಾಗಿ ನೀಡುತ್ತಿದ್ದರು, ಇದರ ಜೊತೆಗೆ ನೋ‌ ಮೇಕಿಂಗ್ ಚಾರ್ಜ್ ಮತ್ತು ನೋ‌ ವೇಸ್ಟೇಜ್ ಇರುವ ಕಾರಣ, ಅಂಗಡಿಗೆ ತುಂಬಾ ಗ್ರಾಹಕರು ಬಂದಿದ್ದರು, ಅಲ್ಲದೇ ಅಂಗಡಿಯಲ್ಲಿ ಪೂರ್ತಿಯಾಗಿ ಜನಸಾಗರವೇ ತುಂಬಿತ್ತು.. ‌ಆ ಸಮಯದಲ್ಲಿ ರಾಜಮ್ಮ‌ ತನ್ನ ಮೊಮ್ಮಗಳಿಗೆ ಒಂದು ನೆಕ್ಲೇಸ್ ನೋಡುತ್ತಿದ್ದರು.. ಸ್ವಲ್ಪ ಸಮಯ ಕಳೆಯುತ್ತಿದ್ದಂತೆ,‌ ಆ ಅಂಗಡಿಯಲ್ಲಿ ಒಂದು ಜೊತೆ ಓಲೆ ಕಾಣಿಸಲಿಲ್ಲ, ಇನ್ನು‌ ಆ ಓಲೆ ಬರೋಬ್ಬರಿ ಒಂದು ಲಕ್ಷ ಬೆಲೆ ಬಾಳುತ್ತಿತ್ತು, ತಕ್ಷಣವೇ ಅಂಗಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೂಡಲೇ ಅಂಗಡಿಯ ಎಲ್ಲಾ ಬಾಗಿಲನ್ನು ಮುಚ್ಚಿ ಪೋಲಿಸರನ್ನು ಕರೆಸಿಕೊಂಡರು..

[widget id=”custom_html-2″]

ಆದರೆ ಪೊಲೀಸರು ಬರುವ ಮುಂಚೆಯೇ ಆ ಅಂಗಡಿಯ ಮ್ಯಾನೇಜರ್ ನಾನಾಗೆ ಯಾಕೋ ಈ ವಯಸ್ಸಾದ ಅಜ್ಜಿಯ ಮೇಲೆ ಅನುಮಾನ ಬರುತ್ತಿದ್ದೆ ಎಂದು ಹೇಳಿ, ಎಲ್ಲರ ಮುಂದೆಯೇ ಆ ಅಜ್ಜಿಯನ್ನು ಚಕ್ ಮಾಡಿದರು.. ಆದರೆ ಆ ಅಜ್ಜಿಯ ಬಳಿ‌ ಏನು ಕೂಡ ಸಿಗಲಿಲ್ಲ, ನಂತರ ಆ ಅಂಗಡಿಗೆ ಪೋಲಿಸರು ಬಂದ ಮೇಲೆ ಸಿಸಿಟಿವಿ ಯನ್ನು ಪರಿಶೀಲನೆ ಮಾಡಿದಾಗ, ಟಿಪ್ ಟಾಪ್ ಆಗಿ ಅಂಗಡಿಗೆ ಬಂದಿದ್ದ ಇಬ್ಬರು ಆಂಟಿಯರು ಈ ಕಳ್ಳತನ ಕೆಲಸವನ್ನು ಮಾಡಿರುವುದು ತಿಳಿದು ಬಂದಿತು, ತಕ್ಷಣವೇ ಆ ಇಬ್ಬರು ಆಂಟಿಯರನ್ನು ಪೋಲಿಸರು ಅರೆಸ್ಟ್ ಮಾಡಿದರು, ಇನ್ನು ಆ ಅಂಗಡಿಗೆ ಕೇವಲ ಸಾಧಾರಣ ಸಿರೆಯನ್ನು ಹುಟ್ಟಿದ ಕಾರಣಕ್ಕಾಗಿ ಮೊಮ್ಮಗಳಿಗೆ ಒಡವೆ ಖರೀದಿ ಮಾಡಲು ಬಂದಿದ್ದ ರಾಜಮ್ಮನನ್ನು ಎಲ್ಲರ ಮುಂದೆ ಹವಾಮಾನ ಮಾಡಿದ ಅಂಗಡಿಯ ಮ್ಯಾನೇಜರ್ ರಾಜಮ್ಮನಿಗೆ ಕ್ಷಮೆ ಕೇಳಿದನ್ನು,

ಅದಕ್ಕೆ ಸ್ನೇಹಿತರೆ ಈ ಒಂದು ಘಟನೆಗೆ ದೊಡ್ಡವರು ಒಂದು ಗಾದೆ ಮಾತು ಹೇಳಿದ್ದಾರೆ, ಅದೇನೆಂದರೆ ‘ವ್ಯಕ್ತಿಯ ಮುಖ ಹಾಗು ಅವರ ಬಟ್ಟೆಯನ್ನು ನೋಡಿ ಅಳತೆ ಮಾಡಬಾರದು ಎಂದು’ ನಂತರ ರಾಜಮ್ಮ ಅಂಗಡಿಯ ಮ್ಯಾನೇಜರ್ ಗೆ ಏನು ಹೇಳದೆ ಹೋಗಲಿ ಬಿಡಪ್ಪ ಆಗಿದ್ದು ಆಗೋಗಿದೆ ತಿಳಿಯದೆ ಮಾಡಿದ ತಪ್ಪಿಗೆ ಏನು ತಾನೇ ಮಾಡಲು ಸಾಧ್ಯ ಎಂದು ಹೇಳಿ ಮಾಡದ ತಪ್ಪಿಗೆ ಅವಮಾನ ಮಾಡಿಸಿಕೊಂಡ, ಅಂಗಡಿಯಿಂದ ರಾಜಮ್ಮ ಹೊರಟು ಹೋದರು.. ಸ್ನೇಹಿತರೆ ಈ ರಾಜಮ್ಮ ಅಜ್ಜಿಗೆ ಒಡವೆ ಅಂಗಡಿಯ ಮ್ಯಾನೇಜರ್ ಮಾಡಿದ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..