Advertisements

ಕರಾಟೆ ಕಿಂಗ್ ಶಂಕರ್ ನಾಗ್ ಅಭಿನಯದ ಗೀತಾ ಚಿತ್ರದ ನಟಿ ಪದ್ಮಾವತಿ ರಾವ್ ಈಗ ಹೇಗಿದ್ದಾರೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, 1981 ರಲ್ಲಿ ತೆರಕಂಡು ಕನ್ನಡ ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಗಳಿಸಿದ ಚಿತ್ರ ಗೀತಾ ಚಿತ್ರ ಈ ಚಿತ್ರವನ್ನ ಕನ್ನಡ ಚಿತ್ರರಂಗ ಎಂದಿಗೂ ಮರೆಯಲಾಗದ ಅದ್ಬುತ ನಟ ನಿರ್ದೇಶಕ ಕರಾಟೆ ಕಿಂಗ್ ಶಂಕರ್ ನಾಗ್ ನಟಿಸಿ ನಿರ್ದೇಶನ ಮಾಡಿದ್ದರು ಗೀತಾ ಸಿನಿಮಾದಲ್ಲಿನ ಕಥೆ ಮತ್ತು ಹಾಡುಗಳು ಅಂದಿನ ಯುವ ಪೀಳಿಗೆಯ ಹೃದಯ ಮುಟ್ಟಿತ್ತು.. ‌ ಇನ್ನೂ ಆ ಚಿತ್ರದಲ್ಲಿ ನಾಯಕಿಯಾಗಿ ನಟನೆ ಮಾಡಿದ್ದು ಪದ್ಮಾವತಿ ರಾವ್.. ನಟಿ ಪದ್ಮಾವತಿ ರಾವ್ ಅವರು ಬೇರೆ ಯಾರು ಅಲ್ಲ‌ ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗ್ ಅವರು ಸ್ವಂತ ತಂಗಿ.. ಹೌದು ಪದ್ಮಾವತಿ ಅವರು ಶಂಕರ್ ನಾಗ್ ಅವರ ಚೋಚಲ ಸಿನಿಮಾ ಒಂದು ಕಾಲದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ನಟನೆ ಮಾಡಿದ್ದರು ಶಂಕರ್ ನಾಗ್ ಅವರ ಗೀತಾ ಸಿನಿಮಾ ಕನ್ನಡ ಚಿತ್ರರಂಗದ ಬೆಳ್ಳಿ ಪರದೆಯ ಮೇಲೆ ಮಿಂಚು ಹರಿಸುತ್ತು.‌

Advertisements
Advertisements

ಗೀತಾ ಸಿನಿಮಾದಲ್ಲಿ ಶಂಕರ್ ನಾಗ್ ಹಾಗು ಪದ್ಮಾವತಿ ರಾವ್ ಅವರ ನಟನೆ ಸಿನಿಮಾ ನೋಡುವವರ ಕಣ್ಣಲ್ಲಿ ನೀರು ತರಿಸಿತ್ತು ನಟನಾಗಿ ನಿರ್ದೇಶಕನಾಗಿ ಶಂಕರ್ ನಾಗ್ ಅವರು ಈ ಚಿತ್ರದಲ್ಲಿ ನೂರಕ್ಕೆ ನೂರರಷ್ಟು ಅಂಕಗಳಿಸಿತ್ತು ಇನ್ನೂ ನಾಯಕಿಯಾಗಿ ನಟನೆ ಮಾಡಿದ್ದ ಪದ್ಮಾವತಿ ರಾವ್ ಅವರು ತಮ್ಮ ಪಾತ್ರಕ್ಕೆ ಜೀವ ತುಂಬಿ ಅದ್ಭುತವಾಗಿ ನಟನೆ ಮಾಡಿದ್ದರು.. ಶಂಕರ್ ನಾಗ್ ಮತ್ತು ಪದ್ಮಾವತಿ ರಾವ್ ಅವರ ಕೆಮಿಸ್ಟ್ರಿ ಸಕ್ಕತ್ ಫೇಮಸ್ ಆಗಿತ್ತು.. ಇನ್ನೂ ಗೀತಾ ಪಾತ್ರದಾರಿ ಪದ್ಮಾವತಿ ಅವರನ್ನ ಜನರು ಇಂದಿಗೂ ಮರೆತಿಲ್ಲ ಪದ್ಮಾವತಿ ರಾವ್ ಅವರು ಒಂದು ಕಾಲದಲ್ಲಿ ಮತ್ತು ಗೀತಾ ಚಿತ್ರದ ನಂತರ ಕನ್ನಡ ಚಿತ್ರಗಳಲ್ಲಿ ನಟನೆ ಮಾಡಿರಲಿಲ್ಲ ರಂಗಭೂಮಿಯ ಹಿನ್ನೆಲೆಯಿಂದ ಬಂದ ಪದ್ಮಾವತಿ ರಾವ್ ಅವರು ಹಲವಾರು ಹಿಂದಿ ಮತ್ತು ಮರಾಠಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ.‌. ಹಿಂದಿ ಹಾಗು ಮರಾಠಿ ಸಿನಿಮಾಗಳಲ್ಲಿ ಕೂಡ ಪದ್ಮಾವತಿ ಅವರು ನಟನೆ ಮಾಡಿದ್ದಾರೆ ಅಷ್ಟೇ ಅಲ್ಲದೆ ದುನಿಯಾ ವಿಜಯ್ ಅಭಿನಯದ ಮಾಲ್ಗುಡಿ ಡೇಸ್ ಸಿನಿಮಾದಲ್ಲಿ

ಕೂಡ ನಟನೆ‌ ಮಾಡಿದ್ದಾರೆ.‌. ಇನ್ನೂ1997 ರಲ್ಲಿ ಬಾಲಿವುಡ್ ನಲ್ಲಿ ದೊಡ್ಡ ಯಶಸ್ಸು ಕಂಡ ಶಾರುಖಾನ್ ನಟನೆಯ ಪಾರ್ಡೆಸ್ ಸಿನಿಮಾದಲ್ಲಿ ಪದ್ಮಾವತಿ ಅವರು ನಟನೆ ಮಾಡಿದ್ದರು ನಂತರ ಬಾಲಿವುಡ್ ನಲ್ಲಿ ಇತ್ತೀಚಿನ ದಿನಗಳಲ್ಲಿ ತೆರೆಕಂಡ ಅಮಿತಾಭ್‌ ಬಚ್ಚನ್‌ ಹಾಗು ದೀಪಿಕಾ ಪಡುಕೋಣೆ ಅವರ ಪದ್ಮಾವತಿ ಚಿತ್ರದಲ್ಲಿ ನಟಿ ಪದ್ಮಾವತಿ ರಾವ್ ಅವರು ನಟನೆ ಮಾಡಿದ್ದರು.. 2020 ಜನವರಿ ಯಲ್ಲಿ ಬಾಲಿವುಡ್ ನಲ್ಲಿ ತೆರೆಕಂಡ ಅಜಯ್ ದೇವಗನ್ ಅವರ ತನ್ಹಾಜಿ ಎಂಬ ಚಿತ್ರದಲ್ಲಿ ಪದ್ಮಾವತಿ ರಾವ್ ಅವರು‌ ಮುಖ್ಯ ಪಾತ್ರದಲ್ಲಿ ನಟನೆ ಮಾಡಿದ್ದಾರೆ.. ಇನ್ನೂ ನಟಿ ಪದ್ಮಾವತಿ ರಾವ್ ಅವರ ಮತ್ತೊಂದು ಹೆಸರು ಅಕ್ಷತಾ ರಾವ್ ಇವರು ಕೇವಲ ಕನ್ನಡದಲ್ಲಿ ನಟನೆ ಮಾಡಿದ್ದು ಎರಡು ಚಿತ್ರಗಳು ಆದರೂ ಗೀತಾ ಪಾತ್ರದಾರಿ ಪದ್ಮಾವತಿ ಅವರನ್ನು ಕನ್ನಡದ ಪ್ರೇಕ್ಷಕರು ಇಂದಿಗೂ ನೆನಪಿಸಿಕೊಳ್ಳುತ್ತಾರೆ..