Advertisements

ಬಿಗ್ ಬಾಸ್ ಫಿನಾಲೆಯಲ್ಲಿ ದೊಡ್ಡ ಬದಲಾವಣೆ! ಫಿನಾಲೆಯಿಂದ ಹೊರಬಂದ ಪ್ರಶಾಂತ್ & ದಿವ್ಯ ಉರುಡುಗ ಇವರು ಪಡೆದ ಸಂಭಾವನೆ ಎಷ್ಟು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ರಾಮನಗರದ ಬುಡದಿ ಬಳಿ ಇರುವ ಇನ್ನೋವೇಟಿವ್ ಫಿಲ್ಮ್‌ಸಿಟಿ ಯಲ್ಲಿ ನಿರ್ಮಾಣ ವಾಗಿರುವ ಅದ್ದೂರಿ ವೇದಿಕೆಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್8 ರ ಗ್ರಾಂಡ್ ಫಿನಾಲೆ ಅದ್ದೂರಿಯಾಗಿ ಆರಂಭ ಕೊಂಡಿದ್ದು ಈ ಬಿಗ್ ಬಾಸ್ ಸೀಸನ್8 ರ ಯಾರು ಅನ್ನೊದು ಭಾನುವಾರ ಅಂದ್ರೆ ನಾಳೆ ರಾತ್ರಿ ಬಹಿರಂಗವಾಗಲಿದೆ ಇನ್ನೂ ಸಂಜೆ ಆರು ಗಂಟೆಯಿಂದ ಗ್ರಾಂಡ್ ಫಿನಾಲೆ ಶುರುವಾಗಿದ್ದು ನಾಳೆ ಸಂಜೆ 6 ಗಂಟೆಗೆ ಫಿನಾಲೆಯ ಎರಡನೇ ಭಾಗ ಶುರುವಾಗಲ್ಲಿದ್ದು ರಾತ್ರಿ 11 ಗಂಟೆಯ ವರೆಗೆ ಫಿನಾಲೆಯ ಎಪಿಸೋಡ್ ನಡೆಯಲಿದೆ.. ‌ಆದರೆ ಈಗಾಗಲೇ ಮನೆಯಿಂದ ಇಬ್ಬರು ಸ್ಪರ್ಧಿಗಳು ಹೊರಗೆ ಬಂದಿದ್ದಾರೆ ಅಂತ ಹೇಳಲಾಗುತ್ತಿದೆ ಹಾಗಾದರೆ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಇಬ್ಬರು ಸ್ಪರ್ಧಿಗಳು ಯಾರು

Advertisements
Advertisements

ಮತ್ತು ಅವರಿಗೆ ಬಿಗ್ ಬಾಸ್ ಮನೆಯ ಇಷ್ಟು ದಿನದ ಜರ್ನಿಗೆ ಸಿಕ್ಕ ಸಂಭಾವನೆ ಎಷ್ಟು ಅಂತ ನೋಡೋಣ ಬನ್ನಿ‌.. ಈ ಬಾರಿ ಬಿಗ್ ಬಾಸ್ ಸೀಸನ್ 8ರ ಬಿಗ್ ಪಿ ಮನೆಗೆ ಮೂವರು ವೈಲ್ಡ್ ಕಾರ್ಟ್ ಸ್ಪರ್ಧಿಗಳು ಸೇರಿದಂತೆ ಒಟ್ಟು ಇಪ್ಪತ್ತು ಜನರು ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು ಆದರೆ ಫಿನಾಲೆಯ ವಾರವಾಗಿದ್ದ ಇಂದು ಅಂತಿಮವಾಗಿ ಅರವಿಂದ್ ಕೆ.ಪಿ ಮಂಜು ಪಾವಗಡ ದಿವ್ಯ ಉರುಡುಗ, ಪ್ರಶಾಂತ್ ಸಂಭರ್ಗಿ, ಮತ್ತು ವೈಷ್ಣವಿ ಗೌಡ ಬಿಗ್ ಬಾಸ್ ಫಿನಾಲೆಯ ಟಾಪ್ ಐದು ಸ್ಪರ್ಧಿಗಳಾಗಿ ಆಯ್ಕೆಯಾಗಿದ್ದರು.. ಆದರೆ ಈ ಐದು ಜನರ ಪೈಕಿ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ‌ ವೈರಲ್ ಆದ ಸುದ್ದಿಯ ಪ್ರಕಾರ ಪ್ರಶಾಂತ್ ಸಂಭರ್ಗಿ ಮತ್ತು ದಿವ್ಯ ಉರುಡುಗ ಬಿಗ್ ಬಾಸ್ ಮನೆಯಿಂದ ಎಲಿಮಿನೇಷನ್ ಆಗಿ ಹೊರಗಡೆ ಬಂದಿದ್ದಾರೆ ಅಂತ ಹೇಳಲಾಗಿದೆ..

ಸದ್ಯಕ್ಕೆ ಮನೆಯಿಂದ ಹೊರಗೆ ಬಂದಿರುವ ದಿವ್ಯ ಉರುಡುಗ ಮತ್ತು ಪ್ರಶಾಂತ್ ಸಂಭರ್ಗಿ ಅವರು ಈಗಾಗಲೇ 17 ವಾರಗಳನ್ನ ಪೂರೈಸಿದ್ದು 17 ವಾರಕ್ಕೆ ಇವರಿಗೆ ಸಿಕ್ಕ ಸಂಭಾವನೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ. ಹೌದು ನಟಿ ದಿವ್ಯ ಉರುಡುಗ ಅವರಿಗೆ ಒಂದು ವಾರಕ್ಕೆ 35 ಸಾವಿರದಂತೆ ಒಟ್ಟು 17 ವಾರಕ್ಕೆ 5 ಲಕ್ಷದ 95 ಸಾವಿರ ರೂಪಾಯಿ ಸಂಭಾವನೆ ರೂಪದಲ್ಲಿ ದಿವ್ಯ ಉರುಡುಗ ಅವರ‌ ಕೈ ಸೇರಿದೆ.. ಇನ್ನೂ ಉದ್ಯಮಿ ಹಾಗು ಪತ್ರಕರ್ತ ಪ್ರಶಾಂತ್ ಸಂಭರ್ಗಿ ಅವರಿಗೆ ಒಂದು ವಾರಕ್ಕೆ ‌ 30 ಸಾವಿರದಂತೆ ಒಟ್ಟು 17 ವಾರಕ್ಕೆ 5 ಲಕ್ಷದ 10 ಸಾವಿರ ರೂಪಾಯಿ ಹಣವನ್ನ ಸಂಭಾವನೆ ರೂಪದಲ್ಲಿ ಸಿಕ್ಕಿದೆ.. ನಿಮ್ಮ ಪ್ರಕಾರ ಯಾರು ಬಿಗ್ ಬಾಸ್ ನಲ್ಲಿ ವಿನರ್ ಆಗಬೇಕು?