Advertisements

ಜೇಮ್ಸ್ ಸಿನಿಮಾದ ಇವೆಂಟ್! ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಚಿತ್ರತಂಡ.!

Cinema

ನಮಸ್ತೆ ಸ್ನೇಹಿತರೆ, ಪುನೀತ್ ರಾಜ್‍ಕುಮಾರ್ ಅವರ ನಟನೆಯ ಜೇಮ್ಸ್ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಕೊಂಡಿದೆ.. ಹೀರೋ ಆಗಿ ಪುನೀತ್ ರಾಜ್‍ಕುಮಾರ್ ಅವರು ನಟನೆ ಮಾಡಿದ‌ ಕೊನೆಯ ಸಿನಿಮಾ ಎನ್ನುವ ಕಾರಣಕ್ಕೆ ಜೇಮ್ಸ್ ಸಿನಿಮಾಕ್ಕೆ ಅಭಿಮಾನಿಗಳು ಭಾವನಾತ್ಮಕವಾಗಿ ಕನೆಕ್ಟ್ ಆಗಿದ್ದಾರೆ.. ಪುನೀತ್ ರಾಜ್‍ಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಮಾರ್ಚ್17‌ ರಂದು ಜೇಮ್ಸ್ ಸಿನಿಮಾ ಬಿಡುಗಡೆ ಆಗಲಿದೆ.. ರಾಜ್ಯದ ಶೇಕಡ 80 ರಷ್ಟು ಚಿತ್ರ ಮಂದಿರಗಳಲ್ಲಿ ಜೇಮ್ಸ್ ಪ್ರದರ್ಶನ ಆಗುತ್ತಿರುವುದು ವಿಶೇಷ.. ಈಗಾಗಿ ಕಲೆಕ್ಷನ್ ವಿಚಾರದಲ್ಲಿ ಈ ಸಿನಿಮಾ ಮತ್ತಾವುದೇ ಸಿನಿಮಾ ಮಾಡದ ದಾಖಲೆಯನ್ನ ಬರೆಯುವಂತಹ ಸೂಚನೆ ಸಿಕ್ಕಿದೆ.. ಇದಕ್ಕೂ ಮೊದಲು ಚಿತ್ರತಂಡ ಸಿನಿಮಾದ ಪ್ರೀ ರೀಲಿಸ್ ಇವೆಂಟ್ ಮಾಡುವುದಕ್ಕೆ ಎಲ್ಲಾ ರೀತಿಯಲ್ಲಿ ತಯಾರಿಯನ್ನ ಮಾಡಿಕೊಂಡಿದೆ..

Advertisements
Advertisements

ಮಾರ್ಚ್13 ಭಾನುವಾರ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ಈ ಕಾರ್ಯಕ್ರಮ ನಡೆಯಲಿದೆ.. ಪ್ಯಾಲೆಸ್ ಗ್ರೌಂಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ.. ಮುಖ್ಯ ಅಥಿತಿಯಾಗಿ ಪುನೀತ್ ರಾಜ್‍ಕುಮಾರ್ ಅವರ ಸಹೋದರ ಶಿವಣ್ಣ ಅವರು ಬರಲಿದ್ದಾರೆ.. ಇವರಲ್ಲದೆ ಅನೇಕ ಪ್ರಮುಖರು ಈ ಕಾರ್ಯಕ್ರಮಕ್ಕೆ ಆಗಮಿಸುವ ಸಾದ್ಯತೆ ಇದೇ..ಶ್ರೀ ಮುರಳಿ, ವಿಜಯ್ ರಾಜ್ಕುಮಾರ್ ಮೊದಲಾದವರು ಜೇಮ್ಸ್ ಸಿನಿಮಾದ ಫ್ರೀ ರೀಲಿಸ್ ಇವೆಂಟ್ ಗೆ‌ ಸಾಕ್ಷಿ ಅಗಲಿದ್ದಾರೆ.. ಇನ್ನು ಅಭಿಮಾನಿಗಳು ಕೂಡ ಈ ಕಾರ್ಯಕ್ರಮದ ಕಳೆಯನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ.. ಈ ಇವೆಂಟ್ ಓಪನ್ ಗ್ರೌಂಡ್ ನಲ್ಲಿ ನಡೆಯುತ್ತಿದ್ದೆ.. ಈಗಾಗಿ ಅಭಿಮಾನಿಗಳಿಗೆ ಯಾವುದೇ ಪಾಸ್ ಅಗತ್ಯ ಇಲ್ಲ ಅಂತ ಹೇಳಲಾಗಿದೆ.. ಈ ಕಾರಣಕ್ಕೆ ಇವೆಂಟ್ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇದೇ..

ಈ ಬಗ್ಗೆ ಚಿತ್ರತಂಡದಿಂದ ಮತ್ತಷ್ಟು ಸ್ಪಷ್ಟ ಮಾಹಿತಿ ಸಿಗಬೇಕಾಗಿದೆ.. ಈ ಮೊದಲು ಪ್ರೀ ರೀಯಲ್ ಇವೆಂಟ್ ಬಗ್ಗೆ ವದಂತಿ ಒಂದು ಸುದ್ದಿ ಆಗಿತ್ತು.. ಚಿತ್ರತಂಡ ಮಾರ್ಚ್‌ 06 ರಂದು ಹೊಸ ಪೇಟೆಯಲ್ಲಿ ಭರ್ಜರಿ ಪ್ರೀ ರೀಯಲ್ ಇವೆಂಟ್ ನಡೆಸಲು ನಿರ್ಧಾರ ಮಾಡಿದ್ದಾರೆ ಅಂತ ಹೇಳಲಾಗಿತ್ತು.. ಈ ಒಂದು ಕಾರ್ಯಕ್ರಮಕ್ಕೆ ಜೂನಿಯರ್ NTR ಹಾಗು ಚಿರಂಜೀವಿ ಅಥಿತಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಲಾಗಿತ್ತು.. ಈ ಬಗ್ಗೆ ಚಿತ್ರತಂಡ ಸ್ಪಷ್ಟ ಮಾಹಿತಿಯನ್ನ ನೀಡಿದ್ದರು.. ಈಗ ಬೆಂಗಳೂರಿನಲ್ಲಿ ಜೇಮ್ಸ್ ಸಿನಿಮಾದ ಅದ್ದೂರಿ ಕಾರ್ಯಕ್ರಮ ನಡೆಯುತ್ತಿದ್ದೆ.. ಈ ಮೊದಲು ಜೇಮ್ಸ್ ಸಿನಿಮಾದ ಟೀಸರ್ ಅನ್ನ ಚಿತ್ರತಂಡ ಬಿಡುಗಡೆ ಮಾಡಿತ್ತು.. ಟೀಸರ್ ನಲ್ಲಿ ಪುನೀತ್ ಅವರು ಮಾಸ್ ಆಗಿ ಕಾಣಿಸಿಕೊಂಡಿದ್ದರು..

ಇದಾದ ಬಾಳಿಕ ಟ್ರೇಡ್‌ ಮಾರ್ಕ್ ಸಾಂಗ್ ರೀಲಿಸ್ ಮಾಡಲಾಗಿತ್ತು.. ಇದನ್ನ ನೋಡಿದ ಅಭಿಮಾನಿಗಳು ತುಂಬಾನೇ ಖುಷಿ ಪಟ್ಟಿದ್ರು.. ಇದಾದ ನಂತರ ಸಲಾಂ ಸೊಲ್ಜರ್ ಸಾಂಗ್‌ ಅನ್ನ ಚಿತ್ರತಂಡ ರೀಲಿಸ್ ಮಾಡಲಾಗಿತ್ತು.. ಈ‌ ಎರಡು ಸಾಂಗ್ ಈಗ ಯೂಟ್ಯೂಬ್ ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ.. ಈ ಎರಡು ಹಾಡುಗಳು ಕೂಡ ಯೂಟ್ಯೂಬ್ ನಲ್ಲಿ ಕೋಟ್ಯಾಂತರ ವೀಕ್ಷಣೆಯನ್ನ ಪಡೆದುಕೊಂಡಿದೆ.. ಈ ಎಲ್ಲಾ ಕಾರಣಕ್ಕೆ ಪುನೀತ್ ಸಿನಿಮಾ ಬಗ್ಗೆ ಸಾಕಷ್ಟು ನೀರಿಕ್ಷೆ ಮೂಡಿದೆ.. ವಿಶ್ವದಾದ್ಯಂತ 4000 ಸಾವಿರಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ..‌ ನೀವು ಕೂಡ ಜೇಮ್ಸ್ ಸಿನಿಮಾವನ್ನ ಮೊದಲ ಶೋ ನೋಡ್ರೀರಾ? ತಪ್ಪದೆ ಕಾಮೆಂಟ್ ಮಾಡಿ..