Advertisements

ಜೇಮ್ಸ್ ಸಿನಿಮಾ ಟೀಸರ್ ಬಿಡುಗಡೆಯಲ್ಲಿ ದೊಡ್ಡ ಬದಲಾವಣೆ ಮಾಡಿದ ಚಿತ್ರ! ಎನಿದು ಬದಲಾವಣೆ? ಅಷ್ಟಕ್ಕೂ ಜೇಮ್ಸ್ ಟೀಸರ್ ಯಾವಾಗ ಬಿಡುಗಡೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ನಮಗೆಲ್ಲ ಗೊತ್ತಿರುವಂತೆ ಪುನೀತ್ ರಾಜ್‍ಕುಮಾರ್ ಅವರು ಕೊನೆಯ ಬಾರಿಗೆ ನಟನೆ ಮಾಡಿದ ಸಿನಿಮಾ ಜೇಮ್ಸ್ ಸಿನಿಮಾ.. ಈಗಾಗಲೇ ಈ ಸಿನಿಮಾದ ಪೂರ್ತಿ ಕೆಲಸ ಸಂಪೂರ್ಣವಾಗಿ ಮುಗಿದಿದ್ದು ಪೋಸ್ಟರ್ ಕೂಡ ಬಿಡುಗಡೆ ಆಗಿ ಅಭಿಮಾನಿಗಳು ಜೇಮ್ಸ್ ಸಿನಿಮಾದಲ್ಲಿ ಅಪ್ಪು ಅವರ ಹೊಸ ಲೂಕ್ ನೋಡಿ ತುಂಬಾನೇ ಸಂತೋಷ ಪಟ್ಟಿದ್ದಾರೆ.. ಇದೀಗ ಜೇಮ್ಸ್ ಸಿನಿಮಾ ಆಡಿಯೋವನ್ನ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ.. ಹೌದು ಅಪ್ಪು ಕೊನೆಯ ಅವರು ಕೊನೆಯ ಬಾರಿ ನಟನೆ ಮಾಡಿದ ಜೇಮ್ಸ್ ಸಿನಿಮಾ ಹಾಡುಗಳು ಮತ್ತು ಟೀಸರ್, ಬಹದ್ದೂರ್, ಭರ್ಜರಿ, ಹಾಗು ಭರಾಟೆ ಸಿನಿಮಾವನ್ನ ನಿರ್ದೇಶನ ಮಾಡಿದ್ದ ನಿರ್ದೇಶಕ ಚೇತನ್ ಕುಮಾರ್ ಅವರ ನಿರ್ದೇಶನದಲ್ಲಿ ಅದ್ಭುತವಾಗಿ ಮೂಡಿ ಬರುತ್ತಿರುವಂತಹ ಚಿತ್ರ ಆಗಿದ..

Advertisements
Advertisements

ಈಗಾಗಲೇ ಈ‌ ಸಿನಿಮಾದ ಮೇಲೆ ಯಾರು ಊಹೆ ಮಾಡಲಾಗದಷ್ಟು ನಿರೀಕ್ಷೆ ಇದ್ದು ಈ ಚಿತ್ರದಲ್ಲಿ ಅಪ್ಪು ಅವರ ಪಾತ್ರಕ್ಕೆ ಶಿವಣ್ಣ ಅವರೆ ಡಬಿಂಗ್ ಮಾಡಿರುವುದಾಗಿ ಇತ್ತೀಚೆಗಷ್ಟೇ ಮಾದ್ಯಮದ ಮುಂದೆ ಸ್ವತಃ ಶಿವಣ್ಣ ಅವರೆ ತಿಳಿಸಿದ್ದಾರೆ.. ಇನ್ನು ಈ ಒಂದು ಚಿತ್ರವನ್ನ ಮಾರ್ಚ್ 17 ಕ್ಕೆ ಅಂದ್ರೆ ಅಪ್ಪು ಅವರ ಹುಟ್ಟು ಹಬ್ಬದ ಪ್ರಯುಕ್ತ ಆ ದಿನವೇ ಸಿನಿಮಾವನ್ನ ಬಿಡುಗಡೆ ಮಾಡಲಿದ್ದೆ ಚಿತ್ರತಂಡ.. ಇಷ್ಟೆಲ್ಲಾ ತಿಳಿದ ಮೇಲೆ ಎಲ್ಲರಿಗೂ ಕಾಡುವ ಪ್ರಶ್ನೆ ಏನೆಂದ್ರೆ, ಈ‌ ಚಿತ್ರದ ಟೀಸರ್ ಮತ್ತು ಟೈಲರ್, ಹಾಗು ಹಾಡುಗಳನ್ನ ಬಿಡುಗಡೆ ಮಾಡುವುದು ಯಾವಾಗ ಅಂತ.. ಇದುವರೆಗೂ ಕೇವಲ ಪೋಸ್ಟರ್ ನಿಂದಲೇ ಸದ್ದು ಮಾಡಿದ ಜೇಮ್ಸ್ ಚಿತ್ರತಂಡ ಈಗ ಹೊಸ ಬದಲಾವಣೆ ಜೊತೆ ಬರುತ್ತಿದೆ.. ಹೌದು ಸಿನಿಮಾ ಬಿಡುಗಡೆ ಇನ್ನು ಒಂದು ತಿಂಗಳು ಇರುವಾಗಲೇ ಇಷ್ಟೆಲ್ಲಾ ಬದಲಾವಣೆ ಜೊತೆಗೆ ಯಾವಾಗ ಬರ್ತಾರೆ ಅಂತ ನೀವು ಕಾಯುತ್ತಿರಬಹುದು.. ಹೌದು ಜೇಮ್ಸ್ ಚಿತ್ರದ ಒಂದು ಟೀಸರ್ ಅಥವಾ ಟ್ರೈಲರ್ ಇದೇ ಪೆಬ್ರವರಿ 11 ಮತ್ತು 12 ಕ್ಕೆ ಬಿಡುಗಡೆ ಮಾಡಲಿದ್ದಾರೆ ಜೇಮ್ಸ್ ಚಿತ್ರತಂಡ..

ಇಲ್ಲಿ ಕುತೂಹಲಕಾರಿ ವಿಚಾರ ಏನು ಅಂದ್ರೆ ಶಿವಣ್ಣ ಅವರ ವಾಯ್ಸ್ ಅಪ್ಪು ಅವರ ಪಾತ್ರಕ್ಕೆ ಯಾವ ಮಟ್ಟಕ್ಕೆ ಹೊಂದಾಣಿಕೆ ಆಗಲಿದೆ ಅಂತ ನೋಡೋದಕ್ಕೆ ಕಾತುರದಿಂದ ಕಾಯುತ್ತಿದ್ದಾರೆ ಅಭಿಮಾನಿಗಳು.. ಈ ಚಿತ್ರ ಐದು ಭಾಷೆಯಲ್ಲಿ ಬರ್ತಿರೋದಿಂದ ಒಂದೇ ಟೀಸರ್ ನಲ್ಲಿ ಪ್ರಮೋಟ್ ಮಾಡ್ತಾರಾ ಅಥವಾ ಬೇರೆ ಬೇರೆ ಭಾಷೆಗೆ ಅಂದ್ರೆ ಐದು ಭಾಷೆಯ ಟೀಸರ್‌ ಕೂಡ ಸಪರೇಟಾಗಿ ಬಿಡುಗಡೆ ಮಾಡ್ತಾರಾ ಅಂತ ಕಾದುನೋಡಬೇಕಾಗಿದೆ.. ಇಷ್ಟೇ ಅಲ್ಲದೇ ಮುಂದಿನ ವಾರ ಈ ಚಿತ್ರದ ಮೊದಲ ಹಾಡು “ಸಲಾಂ ಸೋಲ್ಜರ್ ಸಾಂಗ್” ಕೂಡ ರೀಲಿಸ್ ಆಗಲಿದೆ.. ಒಟ್ಟಿನಲ್ಲಿ ಅಪ್ಪು ಅಭಿನಯದ ಜೇಮ್ಸ್ ಚಿತ್ರಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಟೀಸರ್ ಹಾಗು ಸಾಂಗ್ ಮೂಲಕ ಅಪ್ಪು ಮತ್ತೊಮ್ಮೆ ಅಭಿಮಾನಿಗಳ ಮುಂದೆ ಬರಲಿದ್ದಾರೆ.. ನೀವು ಕೂಡ ಜೇಮ್ಸ್ ಚಿತ್ರಕ್ಕೆ ಕಾಯುತ್ತಿದ್ರೇ ಜೇಮ್ಸ್ ಅಂತ ಕಾಮೆಂಟ್ ಮಾಡಿ…