Advertisements

ಕೊನೆಗೂ ನೆರವೇರಿತು ಅಪ್ಪು ಕಂಡಿದ್ದ ಕನಸು.! ಗೊತ್ತಾದ್ರೆ ನಿಜಕ್ಕೂ ನೀವು ಕೂಡ ಖುಷಿ ಪಡ್ತೀರಾ…

Cinema

ನಮಸ್ತೆ ಸ್ನೇಹಿತರೆ, ಡಾ ರಾಜ್‍ಕುಮಾರ್ ಮತ್ತು ಪಾರ್ವತಮ್ಮ ಆಸೆಯಂತೆ ಪ್ರಾರಂಭವಾದದ್ದು ಶಕ್ತಿಧಾಮ ಸಾವಿರಾರು ಮಹಿಳೆಯರಿಗೆ ಆಶ್ರಯ ನೀಡಿ ಅವರನ್ನ ಸಮಾಜದಲ್ಲಿ ಸಶಕ್ತರನ್ನಾಗಿ ಮಾಡಿದೆ ಈ ಶಕ್ತಿಧಾಮ.. ಇಂತಹಾ ಶಕ್ತಿಧಾಮದ ಹೆಣ್ಣು ಮಕ್ಕಳಿಗಾಗಿ ಒಂದು ಶಾಲೆಯನ್ನ ಆರಂಭ ಮಾಡಬೇಕು ಎಂಬುದನ್ನ ಪವರ್‌ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಕನಸಾಗಿತ್ತು.. ಆ ಕನಸನ್ನ ನನಸ್ಸು ಮಾಡಲು ಮಾಡುವಂತಹ ಆದಿಯಲ್ಲಿ ಇರುವಾಗಲೇ ಅವರು ನಮ್ಮನೆಲ್ಲ ಬಿಟ್ಟು ಆಗಲಿದರು.. ಆದ್ರೆ ಇದೀಗ ಪುನೀತ್ ರಾಜ್‍ಕುಮಾರ್ ಅವರು ಕಂಡಿದ್ದ ಕನಸು ನನಸ್ಸು ಆಗಿದೆ.. ಹೌದು ಈ ವರ್ಷ ಮೈಸೂರಿನಲ್ಲಿ ಇರುವಂತಹ ಶಕ್ತಿಧಾಮದಲ್ಲಿ ಶಾಲೆ ಒಂದು ನಿರ್ಮಾಣ ಆಗಲಿದೆ.. ಇತ್ತೀಚಿಗೆ ಜೇಮ್ಸ್ ಪತ್ರಿಕ ಗೋಷ್ಟಿ ಮೇಲೆ ಮಾದ್ಯಮಗಳ ಜೊತೆಗೆ ಈ ಬಗ್ಗೆ ಮಾಹಿತಿ ಹಂಚಿಕೊಂಡ ಶಿವರಾಜ್ ಕುಮಾರ್ ಅವರು ಈ ವರ್ಷದಿಂದಲ್ಲೇ ಶಕ್ತಿಧಾಮದಲ್ಲಿ ಶಾಲೆ ಆರಂಭ ಆಗಲಿದೆ..

Advertisements
Advertisements

ಸದ್ಯಕ್ಕೆ 160 ಮಕ್ಕಳು ಅಲ್ಲಿ ಇದ್ದಾರೆ.. ಆ ಸಂಖ್ಯೆ ಈಗ 200 ದಾಟಲಿದೆ.. ಒಂದರಿಂದ ಎಂಟನೇ ತರಗತಿಯವರೆಗೆ ಶಾಲೆ ಆರಂಭ ಆಗಲಿದೆ.. ಅದಕ್ಕಾಗಿ ಬೇಕಾದಂತಹ ಕಟ್ಟಡ ನಿರ್ಮಾಣದ ಕೆಲಸ ಆರಂಭ ಅಗಲಿದೆ.. ಒಂದೇ ವರ್ಷದಲ್ಲಿ ಆದರ ಕಾರ್ಯಗಳು ಪೂರ್ತಿ ಆಗಲಿದೆ.. ಶಕ್ತಿಧಾಮದ ಸಂಪೂರ್ಣ ಉಸ್ತುವಾರಿಯನ್ನ ಗೀತಾ ಶಿವರಾಜ್ ಕುಮಾರ್ ಅವರು ನೋಡಿಕೊಳ್ಳುತ್ತಿದ್ದಾರೆ ಎಂದು ಶಿವಣ್ಣ ಹೇಳಿದ್ದರು.. ಸದ್ಯಕ್ಕೆ ಅಲ್ಲಿರುವ ಮಕ್ಕಳು ಮೈಸೂರಿನ ವಿವಿಧ ಶಾಲೆಗಳಲ್ಲಿ ವಿದ್ಯಾಭ್ಯಾಸ ಕಲಿಯುತ್ತಿದ್ದಾರೆ.. ಇನ್ನು ಮುಂದೆ ಶಕ್ತಿ ಧಾಮದಲ್ಲೇ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸ ನಡೆಯಲಿದೆ.. ಪಾರ್ವತಮ್ಮ ರಾಜ್‍ಕುಮಾರ್ ಅವರು ಅನಾಥ ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ ಎಂದು 1997 ರಲ್ಲಿ ಈ ಶಕ್ತಿಧಾಮ ನಿರ್ಮಾಣ ಮಾಡಿದರು.. ಇದೀಗ ಶಕ್ತಿಧಾಮ 25 ವರ್ಷ ತುಂಬಿದ್ದು ಇದೇ ಸಮಯದಲ್ಲಿ ಶಾಲೆಯು ಆರಂಭ ಆಗುತ್ತಿರುವುದು ಸಂತಸ ವಿಚಾರ ಆಗಿದೆ.. ಶಾಲೆಯ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಕೂಡ ಸಿಕ್ಕಿದೆ..

ಪುನೀತ್ ಅವರು ಸಾಕಷ್ಟು ಧನ ಸಹಾಯ ಮಾಡಿದ್ದರು.. ತಮ್ಮ ಸಂಭಾವನೆ ಒಂದಷ್ಟು ಭಾಗವನ್ನ ಶಕ್ತಿಧಾಮಕ್ಕೆ ನೀಡುತ್ತಿದ್ದರು.. ಶಾಲೆ ಆರಂಭವಾದ ಮೇಲೆ ಶಕ್ತಿಧಾಮದ ಮಕ್ಕಳ ಜೊತೆಗೆ ಹೊರಗಿನ ಮಕ್ಕಳಿಗೂ ದಾಖಲಾತಿ ನೀಡುವ ಕುರಿತು ಚಿಂತನೆ ನಡೆಸಲಾಗಿದೆ.. ಇತ್ತೀಚೆಗಷ್ಟೇ ಶಕ್ತಿ ಧಾಮದ ಮಕ್ಕಳ ಜೊತೆಗೆ ಶಿವರಾಜ್ ಕುಮಾರ್ ದಂಪತಿಗಳು ಸಾಕಷ್ಟು ಸಮಯವನ್ನ ಕಳೆದಿದ್ದರು, ಮೈಸೂರಿನಿಂದ ಮಕ್ಕಳನ್ನ ಬೆಂಗಳೂರಿಗೆ ಕರೆಸಿಕೊಂಡು ಮೂರು ದಿನ ಎಲ್ಲರಿಗೂ ಇಲ್ಲಿಯೇ ಉಳಿಯಲು ವ್ಯವಸ್ಥೆ ಮಾಡಿದರು.. ನಂದಿ ಬೆಟ್ಟಕ್ಕೂ ಕೂಡ ಶಿವರಾಜ್ ಕುಮಾರ್ ದಂಪತಿ ಮಕ್ಕಳನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು.. ಅಲ್ಲದೆ ಕಂಠೀರವ ಸ್ಟೂಡಿಯೋಗೆ‌ ಮಕ್ಕಳು ಬೇಟಿ ನೀಡಿ ಪುನೀತ್ ರಾಜ್‍ಕುಮಾರ್ ಅವರ ಸ’ಮಾಧಿಯ ಅಂ’ತಿಮ ದರ್ಶನವನ್ನ ಪಡೆದಿದ್ದರು.. ಸ್ನೇಹಿತರೆ ಅಪ್ಪು ಅವರ ಈ ಸಮಜಾಮುಖಿ ಕೆಲಸಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ..