Advertisements

ರಾಧಾ ಕೃಷ್ಣ ಸೀರಿಯಲ್ ನಟಿ‌ ಮಲ್ಲಿಕಾ ಸಿಂಗ್ ಅವರು ನಿಜ ಜೀವನದಲ್ಲಿ ಹೇಗಿದ್ದಾರೆ! ಸಿರಿಯನ್ ಇವರು ಪಡೆಯುವ ಸಂಭಾವನೆ ಎಷ್ಟು ಗೊತ್ತಾದ?

Cinema

ನಮಸ್ತೆ ಸ್ನೇಹಿತರೆ, ಲಾಕ್ ಡೌನ್ ಸಮಯದಲ್ಲಿ ಧಾರಾವಾಹಿಯ ಚಿತ್ರೀಕರಣಗಳು ಸ್ಥಗಿತವಾದ ನಂತರ ವೀಕ್ಷಕರಿಗೆ ಮನರಂಜನೆ ನೀಡುವ ಸಲುವಾಗಿ ಹಿಂದಿ ಭಾಷೆಯ ಕೆಲವು ಧಾರಾವಾಹಿಗಳನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಆರಂಭಿಸಲಾಗಿತ್ತು. ಅಂತಹ ಧಾರಾವಾಹಿಗಳಲ್ಲಿ ವಿಶೇಷವಾಗಿ ರಾಧಾಕೃಷ್ಣ ಸೀರಿಯಲ್ ಕೂಡ ಒಂದು ಈಗ ಈ ಧಾರಾವಾಹಿ ಎಲ್ಲರ ಫೇವರೆಟ್ ಆಗಿದೆ.. ರಾಧೆ ಹಾಗೂ ಕೃಷ್ಣನ ಪಾತ್ರದಲ್ಲಿ ನಟಿಸಿರುವ ಕಲಾವಿದರು ಅದರಲ್ಲೂ ರಾಧೆ ಆಕೆಯ ಸೌಂದರ್ಯ ಮತ್ತು ಆಕೆಯ ಅತ್ಯದ್ಭುತವಾದ ಅಭಿನಯ ಎಲ್ಲವೂ ನಾಡಿನ ಜನರಿಗೆ ಬಹಳ ಪ್ರಿಯವಾಗಿದೆ ಮತ್ತು ಈ ರಾಧೆ ಪಾತ್ರದಲ್ಲಿ ನಟಿಸುತ್ತಿರುವ ಈ ಕಲಾವಿದೆ ತಮ್ಮ ನಿಜ ಜೀವನದಲ್ಲಿ ಹೇಗಿದ್ದಾರೆ. ಅಲ್ಲದೆ ಕನ್ನಡ ಭಾಷೆಯಲ್ಲಿ ಮೂಡಿಬರುತ್ತಿರುವ ರಾಧಾಕೃಷ್ಣ ಧಾರಾವಾಹಿಯ ರಾಧಾ ಪಾತ್ರ ದಾರಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

Advertisements
Advertisements

ಹೌದು ರಾಧಾಕೃಷ್ಣ ಧಾರಾವಾಹಿಯ ರಾಧಾ ಪಾತ್ರದಾರಿ ನಟಿಯ‌ ಹೆಸರು ಮಲ್ಲಿಕಾ ಸಿಂಗ್ ಅಂತ.‌. ಇವರು 15 ಸೆಪ್ಟೆಂಬರ್ 2000 ಇಸವಿಯಲ್ಲಿ ಜಮ್ಮು ಕಾಶ್ಮೀರದಲ್ಲಿ ಹುಟ್ಟಿ ಬೆಳೆದರು. ಈಗ‌ ಮಲ್ಲಿಕಾ ಅವರಿಗೆ 20 ವರ್ಷ‌ ವಯಸ್ಸಾಗಿದೆ.. ಇವರು ಮೊದಲು ನಟನೆ ಲೋಕದಲ್ಲಿ ಬಣ್ಣ ಹಚ್ಚಿದ ಧಾರಾವಾಹಿ ಎಂದರೆ ಅದು ರಾಧಾಕೃಷ್ಣ ಧಾರಾವಾಹಿ ಅಂತ ಹೇಳಬಹುದು.. ಈ ಧಾರಾವಾಹಿ 2018‌ರಲ್ಲಿ ತೆರೆಕಂಡ ಧಾರಾವಾಹಿಯಾಗಿದೆ. ಮಲ್ಲಿಕಾ ಸಿಂಗ್ ಅವರು ತಮ್ಮ‌ ಶಾಲೆಯ ದಿನಗಳನ್ನ ಸೆವೆನ್ ಸ್ಕ್ವೇರ್ ಅಕಾಡೆಮಿ ಸ್ಕೂಲ್ ನಲ್ಲಿ ಈಗ ಈವನಿಂಗ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಕಲಿಯುತ್ತಿದ್ದಾರೆ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದಾರೆ ನಟಿ ಮಲ್ಲಿಕಾ ಸಿಂಗ್ ಇವರು ಹತ್ತನೇ ತರಗತಿ ವಿದ್ಯಾಭ್ಯಾಸ ಪಡೆಯುತ್ತಿದ್ದಾಗ

ಸೆಮಿಸ್ಟರ್ ರಜೆಗಾಗಿ ಮುಂಬೈನಲ್ಲಿ ಇರುವ ತಮ್ಮ‌ ಅಜ್ಜಿಯ ಊರಿಗೆ ಬಂದರು. ಮುಂಬೈಗೆ‌ ಬಂದ ನಂತರ ರಾಧಾಕೃಷ್ಣ ಧಾರಾವಾಹಿಯ ಆಡಿಶನ್ ನಡೆಯುತ್ತಿರುತ್ತದೆ.. ಇನ್ನೂ ಮಲ್ಲಿಕಾ ಅವರ ತಾಯಿ ರೂಬಿ ಸಿಂಗ್ ಅವರು ಕೂಡ ಕೋರಿಯೋ ಗ್ರಾಫರ್ ಅಲ್ಲದೆ ಕ್ಲಾಸಿಕಲ್ ಡ್ಯಾನ್ಸ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು ಅವರ ಒತ್ತಾಯದ ಮೇರೆಗೆ ಮಲ್ಲಿಕ ಸಿಂಗ್ ಅವರಿಗೆ ಧಾರಾವಾಹಿಯಲ್ಲಿ ಆಡಿಶನ್ ಕೊಡಲು ಹೇಳುತ್ತಾರೆ ಅದರಂತೆ 2016 ರಲ್ಲಿ ಮುಂಬೈನಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುವ ಸಮಯದಲ್ಲಿ ಆಡಿಶನ್ ಅನ್ನ ಪ್ರಾರಂಭ ಮಾಡಿದರು ಇದಾದ ಸತತ ಎರಡು ವರ್ಷಗಳ ಕಾಲ ಕಾದು ಕುಳಿತಿದ್ದ ಮಲ್ಲಿಕಾ ಸಿಂಗ್ ಅನಂತರ ಮುಂಬೈಗೆ ಬಂದು ತಮ್ಮ‌ ಪಿಯುಸಿ ವಿದ್ಯಾಭ್ಯಾಸವನ್ನು ಮುಂದುವರೆಸಿದರು ಆಗ ಆಡಿಶನ್ ನಿಂದಾಗಿ ಯಾವುದೇ ರೀತಿಯ ರೆಸ್ಪಾನ್ಸ್ ಸಿಕ್ಕರಲಿಲ್ಲ.‌.

ಕೊನೆಗೆ ಇವರಿಗೆ‌ 2018 ರಲ್ಲಿ ರಾಧಾಕೃಷ್ಣ ಧಾರಾವಾಹಿಯ ಪ್ರೊಡ್ಯೂಸರ್ ಆದ ಸಿದ್ದಾರ್ಥ್ ಕುಮಾರ್ ಅವರು ಮಲ್ಲಿಕಾ ಸಿಂಗ್ ಅವರಿಗೆ ಕರೆ ಮಾಡಿ ಆಡಿಶನ್ ನಲ್ಲಿ ನೀವು ಆಯ್ಕೆ ಆಗಿದ್ದೀರಾ ಎಂದು ತಿಳಿಸಿದರು.. ಇನ್ನೂ ಮಲ್ಲಿಕ ಅವರ ಮೂಲ ಭಾಷೆ ಉರ್ದು ಆಗಿದ್ದರು ಇವರು ಹಿಂದಿಯಲ್ಲಿ ತುಂಬಾ ಸ್ಪಷ್ಟವಾಗಿ ಮಾತನಾಡುತ್ತಾರೆ.. ಇನ್ನೂ ಧಾರಾವಾಹಿಯಲ್ಲಿ ಒಂದು ಎಪಿಸೋಡ್ ಗೆ ಇವರು ಪಡೆಯುವ ಸಂಭಾವನೆ ರೂ ೫೦೦೦೦ ರೂಪಾಯಿಗಳು ಮತ್ತು ಇವರ ಒಟ್ಟುಮೊತ್ತ ಆಸ್ತಿ ಸರಿ ಸುಮಾರು ೫ ರಿಂದ ೬ ಕೋಟಿ ಆಸ್ತಿ ಹೊಂದಿದ್ದಾರೆ ಎಂದು ಹೇಳಲಾಗಿದೆ.. ಇನ್ನು ಮಲ್ಲಿಕಾ ಸಿಂಗ್ ಅವರು ಕನ್ನಡದ ರಾಧಾಕೃಷ್ಣ ಸೀರಿಯಲ್ ನ ಮೂಲಕ ಭಾರತೀಯ ಕಿರುತೆರೆ ಲೋಕದ ಕನಸಿನ ರಾಣಿ ಕೂಡ ಆಗಿದ್ದಾರೆ.. ನಟಿ‌ ಮಲ್ಲಿಕ ಸಿಂಗ್ ಅವರ ನಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..