Advertisements

ರಾಧಿಕಾ ಪಂಡಿತ್ ಹುಟ್ಟು ಹಬ್ಬಕ್ಕೆ ಮಗಳು ಐರಾ ಕೊಟ್ಟ ಉಡುಗೊರೆ ಏನು ಗೊತ್ತಾ.! ಮಗಳು ಗಿಫ್ಟ್ ಗೆ ರಾಧಿಕಾ ಪಂಡಿತ್ ಫುಲ್ ಹ್ಯಾಪಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ನಟನೆ ಮಾಡುತ್ತಾ ಮದುವೆಯಾದ ನಟ ನಟಿಯರಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಕೂಡ ಒಬ್ಬರು.. ಇವರ ಈ ಜೋಡಿ ನೋಡಿದರೆ ಅಭಿಮಾನಿಗಳಿಗೆ ತುಂಬಾನೇ ಅಚ್ಚುಮೆಚ್ಚು.. ಇನ್ನು ನಿನ್ನೆ ತಾನೇ ಯಶ್ ತನ್ನ ಮುದ್ದಿನ ಮಡದಿ ನಟಿ ರಾಧಿಕಾ ಪಂಡಿತ್ ಹುಟ್ಟು ಹಬ್ಬವನ್ನು ಬಹಳ ಸಂಭ್ರಮದಿಂದ ಹಾಗು ವಿಶೇಷ ರೀತಿಯಲ್ಲಿ ಆಚರಿಸಿದ್ದಾರೆ, ಅಲ್ಲದೇ ಪ್ರತಿ ವರ್ಷ ಮಾಡುವ ಹಾಗೆಯೇ ಈ ವರ್ಷ ಕೂಡ ರಾಧಿಕಾ ಪಂಡಿತ್ ಅವರ ಹುಟ್ಟು ಹಬ್ಬವನ್ನು ಆಚರಣೆ ಮಾಡಬೇಕು ಎಂದು ಅಭಿಮಾನಿಗಳು ಕೂಡ ತುಂಬಾ ಕಾತುರದಿಂದ ಕಾಯುತ್ತಿದ್ದರು, ಆದರೆ ಕೋರೋನ ಕಾರಣದಿಂದ ಯಾರು ಸಹಾ ಮನೆಯ ಮುಂದೆ ಬರಬೇಡಿ, ನೀವು ಇರುವ ಜಾಗದಿಂದಲ್ಲೇ ನನಗೆ ಹಾರೈಸಿ ಎಂದು‌ ರಾಧಿಕಾ ಪಂಡಿತ್ ತಮ್ಮ ಅಭಿಮಾನಿಗಳಿ ಬಳಿ‌ ಕೇಳಿದ್ದಾರೆ..

[widget id=”custom_html-2″]

Advertisements
Advertisements

ಇನ್ನು‌ ರಾಧಿಕಾ ಹಾಗು ಯಶ್ ಮುದ್ದಿನ ಮಗಳು ಐರಾ ಅಮ್ಮನ ಹುಟ್ಟು ಹಬ್ಬಕ್ಕೆ ಕೊಟ್ಟ ಉಡುಗೊರೆ ಏನು ಗೊತ್ತಾ! ನೋಡೋಣ ಬನ್ನಿ.. ರಾಧಿಕಾ ಅವರು ಅಭಿಮಾನಿಗಳಿಗೆ ತನ್ನ ಹುಟ್ಟು ಹಬ್ಬದ ವಿಶೇಷತೆಯನ್ನ ತಿಳಿಸಿದ್ದಾರೆ, ಏನೆಂದರೆ ಪ್ರತಿ ವರ್ಷ ಬೇರೆ ಬೇರೆ ಊರುಗಳಿಂದ ಬಂದು ನನ್ನ ಹುಟ್ಟು ಹಬ್ಬವನ್ನು ಆಚರಣೆ ಮಾಡುತ್ತಿದ್ದಿರಾ, ಕಳೆದ ಎರಡು ವರ್ಷಗಳಿಂದ ಹುಟ್ಟು ಹಬ್ಬವನ್ನು ಆಚರಿಸಲು ಆಗುತ್ತಿಲ್ಲ.. ಕಾರಣ ಕೋರೋನ ಎಲ್ಲಾ ಕಡೆ ಇರುವುದರಿಂದ ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ.. ಅದಕ್ಕೆ ಯಾರು ಕೂಡ ಬೇಸರ ಮಾಡಿಕೊಳ್ಳಬೇಡಿ,‌ ಈ ವರ್ಷ ಕೂಡ ಯಾವುದೇ ಆಚರಣೆ ಇರುವುದಿಲ್ಲ ಅದಕ್ಕಾಗಿ ಮನೆಯ ಮುಂದೆ ಬರಬೇಡಿ, ನೀವು ಕಳಿಸುವಂತಹ ಮೆಸೇಜ್ ಅನ್ನು ನೋಡುತ್ತೇನೆ..

[widget id=”custom_html-2″]

ಸಾಧ್ಯವಾದಷ್ಟು ನಿಮಗೆ ಉತ್ತರ ಕೊಡುತ್ತೇನೆ, ಅಲ್ಲದೆ ನೀವು ತೋರಿಸುವ ಈ ಪ್ರೀತಿಗೆ ಸದಾಕಾಲವೂ ನಿಮಗೆ ನಾನು ಋಣಿಯಾಗಿರುತ್ತೇನೆ ಎಂದು ಅಭಿಮಾನಿಗಳಿಗೆ ರಾಧಿಕಾ ಪಂಡಿತ್ ಅವರು ತಿಳಿಸಿದ್ದಾರೆ.. ಇನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ರಾಧಿಕಾ ಪಂಡಿತ್ ಅವರಿಗೆ ಅಭಿಮಾನಿಗಳು ಹುಟ್ಟು ಹಬ್ಬದ ಶುಭಾಶಯವನ್ನ ತಿಳಿಸಿ ಅವರನ್ನು ಹಾರೈಸಿದ್ದಾರೆ.. ಇನ್ನು ತನ್ನ ಆಪ್ತ ಸ್ನೇಹಿತರ ಸಿಂಪಲ್ ಹಾಗಿ ಜೊತೆ ಸೇರಿಕೊಂಡು ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ, ಈ ಸಂದರ್ಭದಲ್ಲಿ ಮಗಳ ಐರಾ‌ ತಾಯಿಯ ಹುಟ್ಟು ಹಬ್ಬಕ್ಕೆ ಡ್ರಾಯಿಂಗ್ ಮಾಡಿರುವ ಪೋಟೋವನ್ನು ಉಡುಗೊರೆಯಾಗಿ ನೀಡಿದ್ದಾರೆ.. ಐರಾ ಡ್ರಾಯಿಂಗ್ ಮಾಡುವುದು ಎಂದರೆ ತುಂಬಾನೇ ಇಷ್ಟವಂತೆ,

ಇನ್ನು ಅಮ್ಮನಿಗೆ ಕೊಟ್ಟ ಡ್ರಾಯಿಂಗ್ ಉಡುಗೊರೆಯಲ್ಲಿ ಹುಟ್ಟು ಹಬ್ಬದ ಶುಭಾಶಯಗಳು ಎಂದು ಬರೆದು ಸರ್ ಪ್ರೈಸ್ ಆಗಿ ಉಡುಗೊರೆಯನ್ನ ನೀಡಿದ್ದಾಳೆ.. ಇನ್ನು ಪ್ರೀತಿಯ ಮಗಳು ಐರಾ ಕೊಟ್ಟ ಉಡುಗೊರೆ ನೋಡಿ ರಾಧಿಕಾ ಪಂಡಿತ್ ತುಂಬಾನೇ ಖುಷಿ ಪಟ್ಟಿದ್ದಾರೆ, ಅಲ್ಲದೇ ಈ ವರ್ಷ ನನ್ನ ಮಗಳು ಕೊಟ್ಟ ಹುಡುಗೊರೆ ನನಗೆ ತುಂಬಾನೇ ವಿಶೇಷ ಎಂದ ಹೇಳುವ ಮೂಲಕ ಮಗಳು ಐರಾಳನ್ನು ಪ್ರೀತಿಯಿಂದ ಮುದ್ದಾಡಿದ್ದಾರೆ. ಸ್ನೇಹಿತರೆ ತನ್ನ ಅಮ್ಮನಿಗೆ ಪ್ರೀತಿಯಿಂದ ಉಡುಗೊರೆ ಕೊಟ್ಟ ಐರಾ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..