Advertisements

ಈ ರೈತ ನಾಟಿ ಮಾಡಲ್ಲ ಕಳೆ ತೆಗೆಯಲ್ಲ ಆದ್ರೂ ಇವರು ಬೆಳೆದ ಬೆಳೆ ಮಾತ್ರ ಸೂಪರ್.! ಇದು ಹೇಗೆ ಸಾಧ್ಯ ಇವರು ಬಳಸಿದ ಟೆಕ್ನಿಕ್ ಏನು ಗೊತ್ತಾ..

Kannada Mahiti

ನಮಸ್ತೆ ಸ್ನೇಹಿತರೆ, ಮನುಷ್ಯ ತನ್ನ ಆರಂಭದ ದಿನಗಳಲ್ಲಿ ದಟ್ಟವಾದ ಅರಣ್ಯಗಳಲ್ಲಿ‌ ಜೀವನ ಸಾಗಿಸುತ್ತಿದ್ದರು.. ಇನ್ನು ಅರಣ್ಯದಲ್ಲಿ ಸಿಗುವ ಹಣ್ಣುಗಳನ್ನು ತಿನ್ನುತ್ತಾ, ಸುಖ ಜೀವನ ನಡೆಸುತ್ತಿದ್ದ.. ಇನ್ನು ಅರಣ್ಯದಲ್ಲಿ ಬೆಳೆಯುವ ಮರಗಳನ್ನು ಯಾರು ಕೂಡ ಗೊಬ್ಬರ ಹಾಕಿ ಬೆಳೆಸುತ್ತಿರಲಿಲ್ಲ, ಆ ಮರಗಳು ಪ್ರಕೃತಿಯ ವಿಸ್ಮಯದಿಂದ ಸಹಜವಾಗಿ ಬೆಳೆಯುತ್ತವೆ.. ಆದರೆ ಸ್ವಯಂ ಕೃತಕವಾಗಿ ಬೆಳೆಯನ್ನು ಬೆಳೆಯಲು ವ್ಯವಸಾಯಕ್ಕೆ ಬಂದ ಮಾನವ ದವಸ ಧಾನ್ಯಗಳನ್ನು ಬೆಳೆದು ತನಗೆ ಎಷ್ಟು ಬೇಕೋ ಅಷ್ಟನ್ನು ತನ್ನ ಬಳಿ ಇಟ್ಟುಕೊಂಡು ಉಳಿದಿರುವುದನ್ನು ಬೇರೆಯವರಿಗೆ ಹಣ ಪಡೆದು ಮಾರಾಟ ಮಾಡುತ್ತಿದ್ದ, ನಂತರ ಮನುಷ್ಯನಿಗೆ ಈ ಹಣದ ಮೇಲೆ ಆಸೆ ಇನ್ನು ಹೆಚ್ಚಾಯಿತು, ವ್ಯವಸಾಯದಲ್ಲಿ ಹೆಚ್ಚು ಇಳುವರಿ ಬಂದರೆ ಹೆಚ್ಚು‌ ಹಣ ಸಿಗುತ್ತದೆ ಎಂಬ ದುರಾಸೆಯಿಂದ ತಾನು ಬೆಳೆಯುವ ಬೆಳೆಗೆ ವಿಷಕಾರಿ ಔಷಧೀ, ರಾಸಾಯನಿಕ ಗೊಬ್ಬರವನ್ನು, ಬಳಸಿ ನಾನಾ ರೀತಿಯ ರೋಗಗಳನ್ನು ಬರಲು ಕಾರಣವಾಯಿತು..

[widget id=”custom_html-2″]

Advertisements
Advertisements

ಇನ್ನು ದಾವಣಗೆರೆ ಜಿಲ್ಲೆಯ ಮಲ್ಲನಾಯಕನ ಹಳ್ಳಿಯಲ್ಲಿ ವಾಸವಿರುವ ಹೆಸರು ರಾಘವ್, ರಾಘವ್ ಅವರು ಎಂಬಿಎ ವಿದ್ಯಾಭ್ಯಾಸವನ್ನು ಮುಗಿಸಿದ ಬಳಿಕ ದೊಡ್ಡ ಕಂಪನಿಗಳಲ್ಲಿ ಒಳ್ಳೆಯ ಕೆಲಸ ಸಿಕ್ಕಿತು.. ಆದರೆ ಈ ಕೆಲಸಕ್ಕಿಂತ ವ್ಯಾವಸಾಯ ಮಾಡುವುದು ಅದಕ್ಕಿಂತ ನೂರು ಪಟ್ಟು ಲೇಸು ಎಂದು ಆಲೋಚನೆ ಮಾಡಿದ ರಾಘವ್, ಸಿಕ್ಕಿದ ಕೆಲಸವನ್ನು ಬಿಟ್ಟು ತನ್ನ ಮನೆಗೆ ವಾಪಸು ಬಂದು ನಾನು ವ್ಯವಸಾಯ ಮಾಡುತ್ತೇನೆ ಎಂದು ಕುಟುಂಬದವರ ಬಳಿ‌ ಕೇಳಿದರು.. ಇದಕ್ಕೆ ರಾಘವ್ ಅವರ ಪೋಷಕರು ಒಪ್ಪಿಗೆ ನೀಡಲಿಲ್ಲ, ವ್ಯವಸಾಯ ಮಾಡಬೇಕು ಎಂದು ಕಟು ನಿರ್ಧಾರ ಮಾಡಿದ ರಾಘವ್ ತನ್ನ ತಂದೆಯವರ ಬಿಳಿ ಇದ್ದ 21 ಎಕರೆ ಜಮೀನಿನಲ್ಲಿ ಸಹಜವಾಗಿ ಕೃಷಿ ಬೆಳೆ ಬೆಳೆಯಲು ಮುಂದಾದರು.. ಸ್ನೇಹಿತರೆ ಈ ಬೆಟ್ಟ ಗುಡ್ಡ ಕಾಡು ಪ್ರದೇಶಗಳಲ್ಲಿ ಬೆಳೆಯುವ ಬೆಳೆಗಳಿಗೆ ಯಾರು ನೀರು ಗೊಬ್ಬರ ತಾನೇ ಹಾಕುತ್ತಾರೆ. ‌

[widget id=”custom_html-2″]

ಅಂತಹ ಜಾಗದಲ್ಲಿ ಸಹಜವಾಗಿ ಬೆಳೆಯುವ ಗಿಡ ಮರಗಳಲ್ಲಿ ಸಿಗುವಂತಹ ಹಣ್ಣುಗಳು ಎಷ್ಟು ರುಚಿನ್ನೋ ಹಾಗೆಯೇ ಆ ಹಣ್ಣುಗಳು ಆರೋಗ್ಯಕ್ಕೆ ಅಷ್ಟೇ ಉತ್ತಮ ಕೂಡ ಹೌದು.. ಇನ್ನು ಈ ಒಂದು ವಿಧಾನವನ್ನು ಬಳಸಿಕೊಂಡ ರಾಘವ್ ತನ್ನ 21 ಎಕರೆ ಜಮೀನನ್ನು ಸಹಜ ವಾತಾವರಣದ ರೀತಿಯಲ್ಲಿಯೇ ಮಾಡಿ ಆ ಜಮೀನಿನಲ್ಲಿ ರುಚಿಕರವಾದ ಹಣ್ಣು ಹಂಪಲನ್ನು ಬೆಳೆಯಲು ಮುದ್ದಾದರು.. ಮೊದಲು ಭೂಮಿಯನ್ನು ಫಲವತ್ತತೆಯಾಗಿ ಮಾಡಿ, ಅನಂತರ ವಿವಿಧ ರೀತಿಯ ಹಣ್ಣಿನ ಬೀಜಗಳನ್ನು ತಾವೇ ಶೇಖರಣೆ ಮಾಡಿ ಕೊಂಡ ರಾಘವ್ ಅವರು, ಮಾವು ಸಪೋಟ, ದಾಳಿಂಬೆ, ಪಪ್ಪಾಯ, ಬಾಳೆಹಣ್ಣು, ಸೀತಾಫಲ, ಈಗೆ ಹಲವು ಹಣ್ಣಿನ ಬೀಜಗಳನ್ನು ತಮ್ಮ ಜಮೀನಿನಲ್ಲಿ ಹಾಕಿದರು.. ಅಷ್ಟೇ ಅಲ್ಲದೆ ಈ‌ ಗಿಡಗಳಿಗೆ ಯಾವುದೇ ರಾಸಾಯನಿಕ ಗೊಬ್ಬರವನ್ನು ಹಾಕದೆ, ಕಳೆ ಕೂಡ ತೆಗೆಯದೆ ಅವಷ್ಟಕ್ಕೆ ಸಹಜವಾಗಿ ಬೆಳೆಯುವಂತಹ ವಾತಾವರಣವನ್ನು ತಮ್ಮ ಜಮೀನಿನಲ್ಲಿ ರಾಘವ್ ಅವರು ಮಾಡಿದರು..

[widget id=”custom_html-2″]

ಈಗ ಆ ಗಿಡ ಮರಗಳು ಬೆಳೆದು ನಿಂತು ರುಚಿಕರವಾದ ಆರೋಗ್ಯರವಾದ ಹಣ್ಣು ಹಂಪಲನ್ನು ಕೊಡುತ್ತಿವೆ, ಇನ್ನು‌ ಮಾರುಕಟ್ಟೆಯಲ್ಲಿ ಎಲ್ಲಾ ಕಡೆ ಹುಡುಕಿದರು, ರಾಘವ್ ಅವರು ಬೆಳೆದ ಹಣ್ಣುಗಳ ರುಚಿ ಎಲ್ಲೂ ಸಿಗಲ್ಲ.. ಇನ್ನು ರಾಘವ್ ಅವರು ಭತ್ತ ಬೆಳೆಯುವ ವಿಧಾನ ಕೇಳಿದರೆ ನಿಮಗೂ ಆಶ್ಚರ್ಯವಾಗುತ್ತದೆ, ಹೊಲದಲ್ಲಿ ನಾಟಿ ಮಾಡದೆ, ಯಾವುದೇ ಗೊಬ್ಬರ ಹಾಕದೆ, ಅದರಲ್ಲಿ ಕಳೆ ಕೂಡ ತೆಗೆಯದೆ ಬರಿ ಕೈಯಿಂದ ಬೀಸಾಡಿದ ಭತ್ತ ಆರು ಅಡಿ ಎತ್ತರ ಬೆಳೆದಿತ್ತು.. ಅದರಲ್ಲಿ ಇರುವ ಭತ್ತದ ತೆನೆಯನ್ನು ನೋಡಿದ ಸುತ್ತ ಮುತ್ತ ಇರುವ ರೈತರು ಬಾಯಿಯ ಮೇಲೆ ಬೆರಳು ಇಟ್ಟುಕೊಂಡು, ನಮಗೂ ಕೂಡ ಸ್ವಲ್ಪ ಭತ್ತದ ಬಿಜ ಕೊಡಿ ಎಂದು ರಾಘವ್ ಅವರು ಬಳಿ ಕೇಳುತ್ತಿದ್ದಾರೆ,

ಇನ್ನು ರಾಘವ್ ವಾಸವಿರುವ ತಮ್ಮ ತೋಟದ ಮನೆಯನ್ನು ಕೇವಲ ಮಣ್ಣಿನಿಂದ ಕಟ್ಟಿದ ರಾಘವ್ ಅವರು ಮನೆಯಲ್ಲಿ ನೋ ಟಿವಿ, ನೋ ವಾಷಿಂಗ್ ಮಷೀನ್, ನೋ ಫ್ರಿಡ್ಜ್, ಎನ್ನುವ ಪಾಲಿಸಿಯನ್ನು ಅನುಸರಿಸುತ್ತಿದ್ದಾರೆ..ಈಗೆ ಸಹಜ ಕೃಷಿಯಿಂದ ಬೆಳೆದ ಬೆಳೆಯಿಂದ ಯಾವುದೇ ಅನಾರೋಗ್ಯಕ್ಕೆ ತುತ್ತಾಗದೆ ತನ್ನ ತಂದೆ ತಾಯಿ ಹೆಂಡತಿ ಮಕ್ಕಳೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ ರಾಘವ್ ಅವರು, ಮನುಷ್ಯ ತಿನ್ನುವ ಆಹಾರ ಪದಾರ್ಥವನ್ನು ಸಹಜವಾಗಿ ಬೆಳೆದರೆ ಆರೋಗ್ಯಕರ ಎಷ್ಟು ಉತ್ತಮ ಅಲ್ವಾ, ಸ್ನೇಹಿತರೆ ಸಹಜವಾಗಿ ಬೆಳೆಯುವ ಕೃಷಿಯ ಬಗ್ಗೆ ನಿಂದ ಅನಿಸುತ್ತದೆ ತಿಳಿಸಿ..

Leave a Reply

Your email address will not be published. Required fields are marked *