Advertisements

ಅಪ್ಪು ಇಲ್ಲದ ಮೊದಲ ಹುಟ್ಟು ಹಬ್ಬವನ್ನ ಹೇಗೆ ಆಚರಿಸಬೇಕು ಅಂತ ಹೇಳಿ ಕೊಟ್ಟ ರಾಘಣ್ಣ! ನೋಡಿ…

Cinema

ನಮಸ್ತೆ ಸ್ನೇಹಿತರೆ, ಅಭಿಮಾನಿಗಳ ಅಚ್ಚುಮೆಚ್ಚಿನ ನಟ ಪುನೀತ್ ರಾಜ್‍ಕುಮಾರ್ ಅವರು ದೈವಾದಿನರಾಗಿ ಮೂರು ತಿಂಗಳು ಕಳೆದಿದ್ದೆ..‌ಈ ಒಂದು ಸಂಧರ್ಭದಲ್ಲಿ ಅವರ ಇಡೀ‌ ಕುಟುಂಬದವರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.. ಪುನೀತ್ ರಾಜ್‍ಕುಮಾರ್ ಅವರ ಸಮಾಧಿಗೆ ಬಳಿ ಬಂದು ಅವರಿಗೆ ಅಂತಿಮವಾಗಿ ನಮನವನ್ನ ಸಲ್ಲಿಸಲು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ದೂರದ ಊರುಗಳಿಂದ ಬೆಂಗಳೂರಿಗೆ ಬರುತ್ತಾ ಇದ್ದಾರೆ.. ಇನ್ನು ಪುನೀತ್ ರಾಜ್‍ಕುಮಾರ್ ಅವರು ಹುಟ್ಟಿದ ದಿನ ಇನ್ನೂ ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಅವರ ಹುಟ್ಟು ಹಬ್ಬವನ್ನ ಹೇಗೆ ಆಚರಣೆ ಮಾಡಬೇಕು ಎಂಬ ದೊಡ್ಡ ಪ್ರಶ್ನೆ ಎಲ್ಲರ ಮನದಲ್ಲೂ ಇದೇ..

Advertisements
Advertisements

ಅದಕ್ಕೆ ರಾಘವೇಂದ್ರ ರಾಜ್ ಕುಮಾರ್ ಅವರು ಉತ್ತರವನ್ನ ನೀಡಿದ್ದಾರೆ.. ಪ್ರತಿಯೊಬ್ಬ ಅಪ್ಪು ಅಭಿಮಾನಿಗಳು ಕೂಡ ಒಂದೊಂದು ಗಿಡಗಳನ್ನ ನೆಡುವ ಮೂಲಕ ಅಪ್ಪು ಹುಟ್ಟು ಹಬ್ಬವನ್ನ ಆಚರಣೆ ಮಾಡಬೇಕು ಅದರಿಂದ ಪರಿಸರಕ್ಕೆ ನಮ್ಮ ಪರಿಸರಕ್ಕೆ ಕೊಡುಗೆಯನ್ನ ನೀಡಬೇಕು ಎಂದು ರಾಘಣ್ಣ ಅವರು ಮಾದ್ಯಮದ ಮೂಲಕ ಎಲ್ಲಾ ಅಪ್ಪು ಅಭಿಮಾನಿಗಳಲ್ಲಿ ರಾಘಣ್ಣ ಮನವಿಯನ್ನ ಮಾಡಿದ್ದಾರೆ.. ಅದರ ಮೊದಲ ಹೆಜ್ಜೆ ಎಂಬಂತೆ ಇಂದು ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ಅವರು ಸುಮಾರು 500 ಸಸಿಗಳನ್ನ ಅಪ್ಪು ಸಮಾಧಿ ಬಳಿ ಬರುತ್ತಿದೆ ಜನರಿಗೆ ಅಪ್ಪು ನೆನಪಿಗಾಗಿ ನೀಡಿದ್ದಾರೆ.. ಪುನೀತ್ ರಾಜ್ ಅವರು ತಮ್ಮ‌ ಕಣ್ಣುಗಳನ್ನ ನೀಡಿದ್ದರಿಂದ ಈಗಾಗಲೇ ನೇತ್ರ ದಾನ ಹಾಗು ನೇತ್ರವನ್ನ ಯಾಕೆ ದಾನವಾಗಿ ನೀಡಬೇಕು ಎನ್ನುವ ವಿಚಾರ ಬಗ್ಗೆ ಜಾಗೃತಿ ಮುಡಿದೆ..

ಅದೇರೀತಿ ಪರಿಸರದ ಕಾಳಜಿ ಬಗ್ಗೆಯೂ ಕೂಡ ಸಂದೇಶ ಸಾರುವಂತೆ ಆಗಲಿ ಎಂದು ರಾಘವೇಂದ್ರ ರಾಜ್ ಕುಮಾರ್ ಅವರು ಹೇಳಿದ್ದಾರೆ.. ಪುನೀತ್ ರಾಜ್‍ಕುಮಾರ್ ಅವರು ದೈಹಿಕವಾಗಿ ಮಾತ್ರವೇ ನಮ್ಮಿಂದ ದೂರ ಆಗಿದ್ದಾರೆ ಎಂದು ಹೇಳಬಹುದು ಯಾಕೆಂದ್ರೆ ಅವರು ಅಭಿಮಾನಿಗಳ ಮನಸಿನಲ್ಲಿ ಎಂದೆಂದಿಗೂ ಅಜರಾಮರ.. ನಾವು ನೀವು ತುಂಬಾನೇ ಇಷ್ಟ ಪಡುವ ನಟನ ಹುಟ್ಟು ಹಬ್ಬದ ದಿನ ಸಸಿಗಳನ್ನ ನೆಡುವ ಮೂಲಕ ಪುನೀತ್ ರಾಜ್‍ಕುಮಾರ್ ಅವರ ಹುಟ್ಟು ಹಬ್ಬವನ್ನ ಆಚರಣೆ ಮಾಡೋಣ.. ಇದರ ಬಗ್ಗೆ ನಿಮ್ಮ ಅನಿಸಿಕೆ ತಪ್ಪದೆ ಕಾಮೆಂಟ್ ಮಾಡಿ ಮತ್ತೊಬ್ಬರಿಗೆ ಶೇರ್ ಮಾಡಿ… ಧನ್ಯವಾದಗಳು..